Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2024 Schedule: 2ನೇ ವೇಳಾಪಟ್ಟಿಯಲ್ಲಿ ಆರ್‌ಸಿಬಿ ಪಂದ್ಯದ ಸಂಪೂರ್ಣ ವಿವರ: ಬೆಂಗಳೂರಿನಲ್ಲಿ ನಡೆಯುವುದು ಎಷ್ಟು ಪಂದ್ಯ?

ಲೋಕಸಭಾ ಚುನಾವಣೆ ಹಿನ್ನೆಲೆ ಐಪಿಎಲ್‌ 2024ರ ಮೊದಲ ವೇಳಾಪಟ್ಟಿಯನ್ನು ಮಾತ್ರ ಬಿಡುಗಡೆ ಮಾಡಲಾಗಿತ್ತು. ಈಗ ಎರಡನೇ ಹಂತದ ವೇಳಾ ಪಟ್ಟಿಯನ್ನು ಸಹ ಬಿಡುಗಡೆ ಮಾಡಲಾಗಿದೆ. ಈ ವೇಳಾ ಪಟ್ಟಿಯ ಪ್ರಕಾರ ಮೊದಲ ಕ್ವಾಲಿಫೈಯರ್ ಹಾಗೂ ಎಲಿಮಿನೇಟರ್‌ ಪಂದ್ಯ ಅಹ್ಮದಾಬಾದ್‌ನಲ್ಲಿ ನಡೆಯಲಿದೆ. ಕ್ವಾಲಿಫೈಯರ್-2 ಹಾಗೂ ಫೈನಲ್‌ ಪಂದ್ಯಕ್ಕೆ ಚೆನ್ನೈನ ಎಂ.ಚಿದಂಬರಂ ಸ್ಟೇಡಿಯಂ ಸಾಕ್ಷಿಯಾಗಲಿದೆ.

ಈಗಾಗಲೇ ಟೂರ್ನಿಯು ಆರಂಭವಾಗಿದ್ದು, ರೋಚಕತೆ ಹುಟ್ಟಿಸಿದೆ. ದೇಶದಲ್ಲಿ ಏಳು ಹಂತದಲ್ಲಿ ಚುನಾವಣೆಗಳು ನಡೆಯುತ್ತಿದ್ದು, ಇದನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ಈ ವೇಳಾ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯ ಪ್ರಕಾರ ಆರ್‌ಸಿಬಿ ಯ ಪಂದ್ಯಗಳು ಯಾವಗ ನಡೆಯುತ್ತವೆ ಎಂಬ ಬಗ್ಗೆ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

IPL 2024 Schedule Full details of RCB match in 2nd schedule How many matches will be played in Bengaluru

ಬೆಂಗಳೂರಿನಲ್ಲಿ ನಡೆಯುವ ಪಂದ್ಯಗಳು ಎಷ್ಟು?

ಬೆಂಗಳೂರಿನ ಎಂ ಚಿನ್ನಾಸ್ವಾಮಿ ಅಂಗಳದಲ್ಲಿ ಎರಡನೇ ವೇಳಾ ಪಟ್ಟಿಯ ಪ್ರಕಾರ ಇನ್ನು ನಾಲ್ಕು ಪಂದ್ಯಗಳು ನಡೆಯಲಿವೆ. ಏಪ್ರಿಲ್‌ 15 ರಂದು ಆರ್‌ಸಿಬಿ, ಎಸ್‌ಆರ್‌ಎಚ್‌ ವಿರುದ್ಧ ಕಾದಾಟ ನಡೆಸಲಿದೆ. ಈ ಪಂದ್ಯ ರಾತ್ರಿ 7.30ಕ್ಕೆ ನಡೆಯಲಿದೆ. ಇದಾದ ಬಳಿಕ 19 ದಿನಗಳ ಕಾಲ ಬೆಂಗಳೂರಿನಲ್ಲಿ ಪಂದ್ಯಗಳು ಇರುವುದಿಲ್ಲ.

ಆ ಬಳಿಕ ಮೇ 4 ರಂದು ಆರ್‌ಸಿಬಿ, ಮಾಜಿ ಚಾಂಪಿಯನ್‌ ಗುಜರಾತ್‌ ಜೈಂಟ್ಸ್ ತಂಡದ ಸವಾಲು ಎದುರಿಸಲಿದೆ. ಈ ಪಂದ್ಯವೂ ಸಹ ರಾತ್ರಿ 7.30ಕ್ಕೆ ನಡೆಯಲಿದೆ. ಇನ್ನು ಮೇ 12 ರಂದು ಬೆಂಗಳೂರು ತಂಡ, ಡೆಲ್ಲಿ ವಿರುದ್ಧ ಹೋರಾಟ ನಡೆಸಲಿದೆ. ಬೆಂಗಳೂರಿನಲ್ಲಿ ಲೀಗ್‌ ಹಂತದ ಕೊನೆಯ ಪಂದ್ಯ ಮೇ 18 ರಂದು ನಡೆಯಲಿದ್ದು, ಆರ್‌ಸಿಬಿ ಹಾಗೂ ಚೆನ್ನೈ ತಂಡಗಳು ಹೋರಾಟ ನಡೆಸಲಿವೆ. ಈ ಎರಡೂ ಪಂದ್ಯಗಳು ಸಹ ರಾತ್ರಿ ನಡೆಯಲಿವೆ.

IPL 2024 Schedule Full details of RCB match in 2nd schedule How many matches will be played in Bengaluru

ಆರ್‌ಸಿಬಿ ತಂಡದ ವೇಳಾಪಟ್ಟಿ

ಆರ್‌ಸಿಬಿ ಏಪ್ರಿಲ್‌ 11 ರಂದು ಮುಂಬೈ ವಿರುದ್ಧ ವಾಂಖೇಡೆಯಲ್ಲಿ ಕಾದಾಟ ನಡೆಸಲಿದೆ. ಕೋಲ್ಕತ್ತಾದ ಈಡನ್‌ ಗಾರ್ಡನ್‌ ಅಂಗಳದಲ್ಲಿ ಏಪ್ರಿಲ್‌ 21ರಂದು ಕೆಕೆಆರ್‌ ವಿರುದ್ಧ ಆರ್‌ಸಿಬಿ ಸೆಣಸು ನಡೆಸಲಿದ್ದು, ಈ ಪಂದ್ಯ ಮಧ್ಯಾಹ್ನ 3.30ಕ್ಕೆ ಆರಂಭವಾಗಲಿದೆ.

ಉಳಿದಂತೆ ಮುತ್ತಿನಗರಿಯಲ್ಲಿ ಎಸ್‌ಆರ್‌ಎಚ್‌ ವಿರುದ್ಧ ಆರ್‌ಸಿಬಿ ಏಪ್ರಿಲ್‌ 25 ರಂದು ಅಖಾಡ ಪ್ರವೇಶಿಸಲಿದೆ. ಅಲ್ಲದೆ ಏಪ್ರಿಲ್‌ 28 ರಂದು ಬೆಂಗಳೂರು ತಂಡ ಅಹಮದಾಬಾದ್‌ನಲ್ಲಿ ಗುಜರಾತ್ ಟೈಟನ್ಸ್ ತಂಡದ ಸವಾಲು ಎದುರಿಸಲಿದೆ. ಧರ್ಮಶಾಲಾದಲ್ಲಿ ಪಂಜಾಬ್‌ ಕಿಂಗ್ಸ್‌ ವಿರುದ್ಧ ರಾಯಲ್ ಚಾಲೆಂಜರ್ಸ್‌ ತಂಡ ಮೇ 9 ರಂದು ಸೆಣಸಾಡಲಿದೆ.

ಆರ್‌ಸಿಬಿ ಉಳಿದ ಪಂದ್ಯಗಳ ವೇಳಾಪಟ್ಟಿ

ಕ್ರಮ
ಸಂಖ್ಯೆ
ದಿನಾಂಕ ವಿರುದ್ಧ ಸ್ಥಳ ಸಮಯ
1 ಏ.11 ಎಂಐ ಮುಂಬೈ
ರಾ.7.30ಕ್ಕೆ
2 ಏ.15 ಎಸ್‌ಆರ್‌ಎಚ್‌ ಬೆಂಗಳೂರು
ರಾ.7.30ಕ್ಕೆ
3 ಏ.21 ಕೆಕೆಆರ್‌ ಕೋಲ್ಕತ್ತಾ ಮ.3.30ಕ್ಕೆ
4 ಏ.25 ಎಸ್‌ಆರ್‌ಎಚ್‌ ಹೈದರಾಬಾದ್‌
ರಾ.7.30ಕ್ಕೆ
5 ಏ.28 ಜಿಟಿ ಅಹಮದಾಬಾದ್ ಮ.3.30ಕ್ಕೆ
6 ಮೇ 4 ಜಿಟಿ ಬೆಂಗಳೂರು
ರಾ.7.30ಕ್ಕೆ
7 ಮೇ 9 ಪಂಜಾಬ್ ಧರ್ಮಶಾಲಾ
ರಾ.7.30ಕ್ಕೆ
8 ಮೇ 12 ಡೆಲ್ಲಿ ಬೆಂಗಳೂರು
ರಾ.7.30ಕ್ಕೆ
9 ಮೇ 18 ಸಿಎಸ್‌ಕೆ ಬೆಂಗಳೂರು
ರಾ.7.30ಕ್ಕೆ

Story first published: Monday, March 25, 2024, 18:39 [IST]
Other articles published on Mar 25, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+