Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2024: ಬಹು ವರ್ಷಗಳ ಬೌಲಿಂಗ್ ಕೋಚ್ ಪಾತ್ರದ ನಂತರ 'ಮುಂಬೈ ಇಂಡಿಯನ್ಸ್' ಶರ್ಟ್ ಕಳಚಿದ ಶೇನ್ ಬಾಂಡ್!

ಸುಮಾರು 9 ವರ್ಷಗಳ ಸುದೀರ್ಘ ಒಡನಾಟದ ನಂತರ, ನ್ಯೂಜಿಲೆಂಡ್‌ನ ಮಾಜಿ ವೇಗದ ಬೌಲರ್‌ ಹಾಗೂ ಯಶಸ್ವಿ ಬೌಲಿಂಗ್ ಕೋಚ್ ಶೇನ್ ಬಾಂಡ್ ಅವರಿಂದ ಬೇರ್ಪಟ್ಟಿರುವುದಾಗಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಬುಧವಾರ, ಅಕ್ಟೋಬರ್ 18ರಂದು ಘೋಷಿಸಿದೆ.

ಶೇನ್ ಬಾಂಡ್ 2015ರಲ್ಲಿ 5 ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಚಾಂಪಿಯನ್ ತಂಡದೊಂದಿಗೆ ಕೆಲಸ ಮಾಡಲು ಪ್ರಾರಂಭಿಸಿದರು ಮತ್ತು ಮುಂಬೈ ಇಂಡಿಯನ್ಸ್ ತಂಡದಲ್ಲಿ ಬೌಲಿಂಗ್ ಪ್ರತಿಭೆಗಳನ್ನು ಅಭಿವೃದ್ಧಿಪಡಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದರು.

ಇಂಟರ್‌ನ್ಯಾಷನಲ್ ಲೀಗ್ (ILT20) ಉದ್ಘಾಟನಾ ಆವೃತ್ತಿಯಲ್ಲಿ MI ಎಮಿರೇಟ್ಸ್‌ನ ಮುಖ್ಯ ಕೋಚ್ ಆಗಿಯೂ ಶೇನ್ ಬಾಂಡ್ ಕೆಲಸ ಮಾಡಿದ್ದರು.

ipl-2024-shane-bond

2024ರ ಐಪಿಎಲ್‌ಗೆ ಆಗಸ್ಟ್‌ನಲ್ಲಿ ಬೌಲಿಂಗ್ ಕೋಚ್ ಆಗಿ ಶ್ರೀಲಂಕಾ ಮಾಜಿ ವೇಗಿ ಲಸಿತ್ ಮಾಲಿಂಗ ಅವರನ್ನು ನೇಮಿಸಿದ ನಂತರ, ಮುಂಬೈ ಇಂಡಿಯನ್ಸ್ ಈ ನಿರ್ಧಾರ ತೆಗೆದುಕೊಂಡಿದೆ. 2021ರಲ್ಲಿ ನಿವೃತ್ತರಾದ ಲಸಿತ್ ಮಾಲಿಂಗ, ತಮ್ಮ ಮೂಲ ತಂಡಕ್ಕೆ ಮರಳುವ ಮೊದಲು ಐಪಿಎಲ್ 2023ರವರೆಗೆ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಬೌಲಿಂಗ್ ಕೋಚ್ ಆಗಿದ್ದರು.

ಮುಂಬೈ ಇಂಡಿಯನ್ಸ್‌ನಲ್ಲಿ ತಮ್ಮ ಯಶಸ್ವಿ ಅಧಿಕಾರಾವಧಿಯಲ್ಲಿ ಲೆಜೆಂಡ್ ಶೇನ್ ಬಾಂಡ್ ಅವರು ಮಹೇಲಾ ಜಯವರ್ಧನೆ ಮತ್ತು ಮಾರ್ಕ್ ಬೌಚರ್ ಅವರಂತಹ ದಿಗ್ಗಜರ ಜೊತೆ ಕೆಲಸ ಮಾಡಿದ್ದಾರೆ.

ಶೇನ್ ಬಾಂಡ್ 2015ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ಬೌಲಿಂಗ್ ಕೋಚ್ ಆಗಿ ಅಧಿಕಾರ ವಹಿಸಿಕೊಂಡರು. 2015, 2017, 2019 ಮತ್ತು 2020ರಲ್ಲಿ ಮುಂಬೈ ಇಂಡಿಯನ್ಸ್‌ ಟ್ರೋಫಿ ಗೆಲುವಿನಲ್ಲಿ ಭಾಗಿಯಾಗಿ ಫ್ರಾಂಚೈಸಿ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಮತ್ತು ಪ್ರಸಿದ್ಧ ಕೋಚ್‌ಗಳಲ್ಲಿ ಒಬ್ಬರಾದರು.

"2015ರಲ್ಲಿ ಪ್ರಾರಂಭವಾದ ಶೇನ್ ಬಾಂಡ್ ಅವರ ಯಶಸ್ವಿ ಅಧಿಕಾರಾವಧಿಯು ತಂಡದೊಂದಿಗೆ 9 ವರ್ಷಗಳ ಅವಧಿಯ ನಂತರ ಕೊನೆಗೊಂಡಿದೆ ಎಂದು ಮುಂಬೈ ಇಂಡಿಯನ್ಸ್ ಘೋಷಿಸುತ್ತದೆ," ಎಂದು ಫ್ರಾಂಚೈಸಿ ತಮ್ಮ ಹೇಳಿಕೆಯಲ್ಲಿ ತಿಳಿಸಿದೆ.

ನ್ಯೂಜಿಲೆಂಡ್ ಪರ 18 ಟೆಸ್ಟ್, 82 ಏಕದಿನ ಮತ್ತು 20 ಟಿ20 ಪಂದ್ಯಗಳನ್ನು ಆಡಿರುವ ಶೇನ್ ಬಾಂಡ್, ಮುಂಬೈ ಇಂಡಿಯನ್ಸ್‌ನಲ್ಲಿ ಯುವ ಪ್ರತಿಭೆಗಳು ಹೊರಹೊಮ್ಮಲು ಸಹಾಯ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಮುಂಬೈ ಇಂಡಿಯನ್ಸ್ ತಂಡದಿಂದ ಅಂತರಾಷ್ಟ್ರೀಯ ಗಮನ ಸೆಳೆದಿರುವ ಜಸ್ಪ್ರೀತ್ ಬುಮ್ರಾ ಅವರು ತಮ್ಮ ವೇಗದ ಬೌಲಿಂಗ್ ವೃತ್ತಿಜೀವನದ ಆರಂಭಿಕ ಹಂತಗಳನ್ನು ರೂಪಿಸಲು ಶೇನ್ ಬಾಂಡ್‌ಗೆ ಮನ್ನಣೆ ನೀಡಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡದ ಮ್ಯಾನೇಜ್‌ಮೆಂಟ್ ಮತ್ತು ಅಭಿಮಾನಿಗಳಿಗೆ ಶೇನ್ ಬಾಂಡ್ ತಮ್ಮ ವಿದಾಯದ ಟಿಪ್ಪಣಿಯಲ್ಲಿ ಧನ್ಯವಾದ ತಿಳಿಸಿದ್ದಾರೆ.

ipl-2024-shane-bond

"ಕಳೆದ ಒಂಬತ್ತು ಸೀಸನ್‌ಗಳಲ್ಲಿ ಮುಂಬೈ ಇಂಡಿಯನ್ಸ್ ಒನ್ ಫ್ಯಾಮಿಲಿಯ ಭಾಗವಾಗಿರುವ ಅವಕಾಶಕ್ಕಾಗಿ ನಾನು ಅಂಬಾನಿ ಕುಟುಂಬಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ. ಇದು ಮೈದಾನದ ಒಳಗೆ ಮತ್ತು ಹೊರಗೆ ಹಲವಾರು ಉತ್ತಮ ನೆನಪುಗಳೊಂದಿಗೆ ನಂಬಲಾಗದ ಅನುಭವವಾಗಿದೆ".

"ಆಟಗಾರರು ಮತ್ತು ಸಿಬ್ಬಂದಿಗಳೆರಡರಲ್ಲೂ ಅನೇಕ ಶ್ರೇಷ್ಠ ವ್ಯಕ್ತಿಗಳೊಂದಿಗೆ ಕೆಲಸ ಮಾಡಲು ಮತ್ತು ಬಲವಾದ ಸಂಬಂಧವನ್ನು ಹೊಂದಲು ನಾನು ಸಾಕಷ್ಟು ಅದೃಷ್ಟಶಾಲಿಯಾಗಿದ್ದೇನೆ. ನಾನು ಅವರೆಲ್ಲರನ್ನೂ ಮಿಸ್ ಮಾಡಿಕೊಳ್ಳುತ್ತೇನೆ ಮತ್ತು ಭವಿಷ್ಯಕ್ಕಾಗಿ ಅವರಿಗೆ ಶುಭ ಹಾರೈಸುತ್ತೇನೆ. ಅಂತಿಮವಾಗಿ ಅವರ ಬೆಂಬಲಕ್ಕಾಗಿ ಮುಂಬೈ ಇಂಡಿಯನ್ಸ್ ಪಲ್ಟನ್‌ಗೆ ಧನ್ಯವಾದಗಳು," ಎಂದು ಬರೆದಿದ್ದಾರೆ.

ಇದಕ್ಕೆ ಮುಂಬೈ ಇಂಡಿಯನ್ಸ್ ಪ್ರತಿಕ್ರಿಯಿಸಿ, "ತಂಡದ ಮ್ಯಾನೇಜ್‌ಮೆಂಟ್, ಆಟಗಾರರು ಮತ್ತು ಸಿಬ್ಬಂದಿ ಶೇನ್ ಬಾಂಡ್ ಅವರ ಬಲವಾದ ಕೆಲಸದ ನೀತಿಗಾಗಿ ಮತ್ತು ಒಂದು ಕುಟುಂಬದ ಭಾಗವಾಗಿರುವ ಎಲ್ಲರಿಗೂ ಸ್ನೇಹಿತರಾಗಿದ್ದಕ್ಕೆ ಧನ್ಯವಾದಗಳನ್ನು ಅರ್ಪಿಸಲು ಬಯಸುತ್ತಾರೆ," ಎಂದು ತಿಳಿಸಿದೆ.

ಮುಂಬೈ ಇಂಡಿಯನ್ಸ್ ಕೊನೆಯ ಬಾರಿಗೆ 2020ರಲ್ಲಿ ಐಪಿಎಲ್ ಟ್ರೋಫಿಯನ್ನು ಗೆದ್ದುಕೊಂಡಿತ್ತು. ನಂತರ ತಂಡವು ಸತತ ಎರಡು ಸೀಸನ್‌ಗಳಲ್ಲಿ ಪ್ಲೇಆಫ್‌ಗಳನ್ನು ತಪ್ಪಿಸಿಕೊಂಡರು. ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ 2023ರಲ್ಲಿ ಪ್ಲೇಆಫ್ ತಲುಪಿದರೂ, ಫೈನಲ್‌ಗೇರುವಲ್ಲಿ ವಿಫಲವಾಗಿತ್ತು.

Story first published: Wednesday, October 18, 2023, 13:13 [IST]
Other articles published on Oct 18, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+