IPL 2024: RCB ವಿರುದ್ಧ ಪಂದ್ಯಕ್ಕೆ KKRನ ಆಡುವ 11ರ ಬಳಗ ಮರೆತ ಶ್ರೇಯಸ್ ಅಯ್ಯರ್
ಶುಕ್ರವಾರ, ಮಾರ್ಚ್ 29ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 10ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡಗಳು ಮುಖಾಮುಖಿಯಾದವು.
ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್ ಟಾಸ್ ಗೆದ್ದು ಬಲಿಷ್ಠ ಲೈನ್-ಅಪ್ ಹೊಂದಿರುವ ಆರ್‌ಸಿಬಿ ತಂಡವನ್ನು ಅವರ ತವರಿನ ಅಂಗಳದಲ್ಲಿ ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು.

ಆದಾಗ್ಯೂ, ಟಾಸ್ ವೇಳೆ ಪ್ರೇಕ್ಷಕರ ಗಮನ ಸೆಳೆದದ್ದು ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್ ಆರ್‌ಸಿಬಿ ವಿರುದ್ಧದ ಪಂದ್ಯಕ್ಕಾಗಿ ತಮ್ಮ ಆಡುವ 11ರ ಬಳಗವನ್ನೇ ಮರೆತು ಬಂದ ಘಟನೆ ನಡೆಯಿತು.
ಕಾಮೆಂಟೇಟರ್ ರವಿಶಾಸ್ತ್ರಿ ಅವರು ಕೆಕೆಆರ್ ತಂಡದ ಆಡುವ ಸಂಯೋಜನೆಯ ಬಗ್ಗೆ ಕೇಳಿದಾಗ, ಶ್ರೇಯಸ್ ಅಯ್ಯರ್ ಆಟಗಾರರ ಬದಲಾವಣೆಗಳನ್ನು ನೆನಪಿಸಿಕೊಳ್ಳಲು ವಿಫಲರಾದರು ಮತ್ತು ಸ್ವಲ್ಪ ವಿರಾಮದ ನಂತರ, ಅನುಕುಲ್ ರಾಯ್ ಅವರನ್ನು ಆಡುವ 11ರ ಬಳಗಕ್ಕೆ ಕರೆತರಲಾಗಿದೆ ಎಂದು ಬಹಿರಂಗಪಡಿಸಿದರು.
ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಎರಡು ತಂಡದ ಹಾಳೆಗಳ ತೋರಿಸುವ ಮೂಲಕ ಗೊಂದಲದಿಂದ ಹೊರಬಂದಂತೆ ತೋರುತ್ತಿತ್ತು.
"ನಾವು ವರ್ತಮಾನದಲ್ಲಿ ಉಳಿಯುವುದು ಮುಖ್ಯ. ಆರಂಭದಲ್ಲೇ ಲಾಭ ಮಾಡಿಕೊಳ್ಳುವಂತೆ ನೋಡಿಕೊಳ್ಳಬೇಕು. ಬೌಲಿಂಗ್ ವಿಭಾಗಕ್ಕೆ ಅನುಕುಲ್ ರಾಯ್ ಬರಲಿದ್ದಾನೆ. ನಾನು ನಿಜವಾಗಿಯೂ ಗೊಂದಲಕ್ಕೊಳಗಾಗಿದ್ದೇನೆ. ನನಗೆ ಎರಡು ತಂಡಗಳನ್ನು ನೀಡಲಾಗಿದೆ," ಎಂದು ಟಾಸ್‌ನಲ್ಲಿ ಶ್ರೇಯಸ್ ಅಯ್ಯರ್ ಹೇಳಿದರು.
ಆಡುವ 11ರ ಬಳಗದ ಬಗ್ಗೆ ಶ್ರೇಯಸ್ ಅಯ್ಯರ್ ಗೊಂದಲಕ್ಕೊಳಗಾಗಿದ್ದು ಏಕೆ?
ಈ ಆಧುನಿಕ ಐಪಿಎಲ್ ಯುಗದಲ್ಲಿ ಶ್ರೇಯಸ್ ಅಯ್ಯರ್ ಅವರ ಗೊಂದಲ ಸರಿಯಾಗಿದೆ. ಪಂದ್ಯಾವಳಿಯಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಅನ್ನು ಪರಿಚಯಿಸಿದ ನಂತರ, ತಂಡಗಳು ಟಾಸ್ ನಂತರ ತಮ್ಮ ತಂಡವನ್ನು ಘೋಷಿಸಲು ಅನುಮತಿಸಲಾಗುತ್ತದೆ.
ಅದೇ ರೀತಿ ತಂಡಗಳ ನಾಯಕರು ಸಾಮಾನ್ಯವಾಗಿ ಬೌಲಿಂಗ್ ಅಥವಾ ಬ್ಯಾಟಿಂಗ್ ಆಯ್ಕೆಯನ್ನು ಅವಲಂಬಿಸಿ ಎರಡು ಪರ್ಯಾಯ ತಂಡದ ಹಾಳೆಗಳನ್ನು ಹೊಂದಿರುತ್ತಾರೆ.
ಕೆಕೆಆರ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಕೂಡ ಅದೇ ರೀತಿ ಎರಡು ತಂಡದ ಹಾಳೆಗಳನ್ನು ಹೊಂದಿದ್ದರು ಮತ್ತು ಟಾಸ್ ನಂತರದ ಕ್ಷಣದಲ್ಲಿ ಅವರ ತಲೆಯಲ್ಲಿ ಯಾವ ತಂಡವನ್ನು ಘೋಷಿಸಬೇಕು ಎಂಬುದರ ಬಗ್ಗೆ ಗೊಂದಲಕ್ಕೆ ಒಳಗಾದರು.
ಆರ್‌ಸಿಬಿ vs ಕೆಕೆಆರ್ ಆಡುವ 11ರ ಬಳಗ
ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ಕ್ಯಾಮೆರಾನ್ ಗ್ರೀನ್, ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಅನುಜ್ ರಾವತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್, ಅಲ್ಜಾರಿ ಜೋಸೆಫ್, ಮಯಾಂಕ್ ಡಾಗರ್, ಮೊಹಮ್ಮದ್ ಸಿರಾಜ್, ಯಶ್ ದಯಾಳ್.
ಕೋಲ್ಕತ್ತಾ ನೈಟ್ ರೈಡರ್ಸ್: ಫಿಲ್ ಸಾಲ್ಟ್ (ವಿಕೆಟ್ ಕೀಪರ್), ಸುನಿಲ್ ನರೈನ್, ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್ (ನಾಯಕ), ನಿತೀಶ್ ರಾಣಾ, ರಿಂಕು ಸಿಂಗ್, ಆಂಡ್ರೆ ರಸೆಲ್, ಮಿಚೆಲ್ ಸ್ಟಾರ್ಕ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ರಮಣ್‌ದೀಪ್ ಸಿಂಗ್, ಅನುಕೂಲ್ ರಾಯ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications