IPL 2024: ಐಪಿಎಲ್‌ನಲ್ಲಿ ನಾಯಕನಾಗಿ ಗೌತಮ್ ಗಂಭೀರ್ ದಾಖಲೆ ಹಿಂದಿಕ್ಕಿದ ಶ್ರೇಯಸ್ ಅಯ್ಯರ್
ಬುಧವಾರ, ಮೇ 16ರಂದು ಗುವಾಹಟಿಯಲ್ಲಿ ನಡೆದ ಐಪಿಎಲ್ 2024ರ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು ರಾಜಸ್ಥಾನ್ ರಾಯಲ್ಸ್ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿದ ನಂತರ, ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡ ಬೃಹತ್ ದಾಖಲೆ ಸಾಧಿಸಿದರು.
ಇತ್ತೀಚಿನ ಫಲಿತಾಂಶದ ಹೊರತಾಗಿಯೂ, ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ ರಾಯಲ್ಸ್ ಮತ್ತು ಶ್ರೇಯಸ್ ಅಯ್ಯರ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡಗಳೆರಡು ಐಪಿಎಲ್ 2024ರ ಪ್ಲೇಆಫ್‌ಗೆ ಅರ್ಹತೆ ಪಡೆದಿವೆ.

ಕೆಕೆಆರ್ ಪರ ನಾಯಕನಾಗಿ ಬೃಹತ್ ಸಾಧನೆ ಮಾಡಿದ ಶ್ರೇಯಸ್ ಅಯ್ಯರ್
ಪಂಜಾಬ್ ಕಿಂಗ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡದ ಸೋಲು ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಐಪಿಎಲ್ 2024ರ ಲೀಗ್ ಹಂತವನ್ನು 10-ತಂಡಗಳ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಪೂರ್ಣಗೊಳಿಸುವುದನ್ನು ಖಚಿತಪಡಿಸಿತು.
ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಕೆಕೆಆರ್ ಫ್ರಾಂಚೈಸಿ ಈಗಾಗಲೇ ಆಡಿದ 12 ಪಂದ್ಯಗಳಿಂದ 9 ಗೆಲುವುಗಳನ್ನು ಪಡೆದುಕೊಂಡಿದೆ ಮತ್ತು ಪ್ರಸ್ತುತ ನಾಲ್ಕು ಪಂದ್ಯಗಳ ಸತತ ಗೆಲುವಿನ ಸರಣಿಯಲ್ಲಿದೆ.
ಐಪಿಎಲ್ 2024ರ ಅಂಕಪಟ್ಟಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್‌ನ ಅತ್ಯುತ್ತಮ ಫಲಿತಾಂಶದ ಮೂಲಕ, ಶ್ರೇಯಸ್ ಅಯ್ಯರ್ ಐಪಿಎಲ್ ಋತುವಿನ ಲೀಗ್ ಹಂತದಲ್ಲಿ ತನ್ನ ತಂಡವನ್ನು ನಂಬರ್ 1 ಸ್ಥಾನಕ್ಕೆ ಮುನ್ನಡೆಸಿದ ಫ್ರಾಂಚೈಸಿ ಇತಿಹಾಸದಲ್ಲಿ ಮೊದಲ ನಾಯಕ ಎನಿಸಿದರು.

ಈ ಹಿಂದೆ ಗೌತಮ್ ಗಂಭೀರ್ ನಾಯಕತ್ವದಲ್ಲಿ ಕೆಕೆಆರ್ ತಂಡ ಎರಡು ಪ್ರತ್ಯೇಕ ಸಂದರ್ಭಗಳಲ್ಲಿ (2012 ಮತ್ತು 2014) ಅಂಕಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಗಳಿಸಿದ್ದು, ಅತ್ಯುತ್ತಮ ಸಾಧನೆಯಾಗಿತ್ತು. ಇದೀಗ ಗೌತಮ್ ಗಂಭೀರ್ ಅವರ ನಾಯಕನ ಸಾಧನೆಯನ್ನು ಶ್ರೇಯಸ್ ಅಯ್ಯರ್ ಹಿಂದಿಕ್ಕಿದರು.
ಕುತೂಹಲಕಾರಿಯಾಗಿ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಎರಡು ಬಾರಿ ಐಪಿಎಲ್ ವಿಜೇತ ನಾಯಕನ ದಾಖಲೆ ಹೊಂದಿರುವ ಗೌತಮ್ ಗಂಭೀರ್ ಅವರನ್ನು 2024ರ ಐಪಿಎಲ್‌ಗಾಗಿ ತಂಡದ ಮೆಂಟರ್ ಆಗಿ ಟೀಮ್ ಮ್ಯಾನೇಜ್‌ಮೆಂಟ್ ಸದ್ಯ ನಡೆಯುತ್ತಿರುವ ಪಂದ್ಯಾವಳಿಗೆ ಕೆಲವೇ ತಿಂಗಳುಗಳ ಮುನ್ನ ನೇಮಿಸಿತು.
ಕೆಕೆಆರ್ ತಂಡ ಇತ್ತೀಚಿಗೆ ಈಡನ್ ಗಾರ್ಡನ್ಸ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು 18 ರನ್‌ಗಳ ಅಂತರದಿಂದ ಸೋಲಿಸುವ ಮೂಲಕ ಐಪಿಎಲ್ 2024ರ ಪ್ಲೇಆಫ್‌ಗೆ ಅರ್ಹತೆ ಗಳಿಸಿತು. ನಂತರ ಗುಜರಾತ್ ಟೈಟನ್ಸ್ ವಿರುದ್ಧದ ಕೆಕೆಆರ್ ಪಂದ್ಯವು ಅಹಮದಾಬಾದ್‌ನಲ್ಲಿ ನಿರಂತರ ಮಳೆಯಿಂದಾಗಿ ರದ್ದುಗೊಂಡಿತು.
ಮೇ 19ರಂದು ನಡೆಯಲಿರುವ ಪ್ರಸಕ್ತ ಐಪಿಎಲ್ ಲೀಗ್ ಹಂತದ ಅಂತಿಮ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವದ ಕೆಕೆಆರ್ ತಂಡ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ. ಬಹು ನಿರೀಕ್ಷಿತ ಪಂದ್ಯವು ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications