IPL 2024: ಶುಭ್‌ಮನ್ ಗಿಲ್ ಆತಂಕ ಹೆಚ್ಚಿಸದ ಸ್ಟಾರ್ ಪ್ಲೇಯರ್ ಗಾಯ: ಕಾಡಲಿದೆ ಸ್ಟಾರ್ ಪ್ಲೇಯರ್ ಅನುಪಸ್ಥಿತಿ?
ಐಪಿಎಲ್ 2024ಕ್ಕೆ ದಿನಗಣನೆ ಆರಂಭವಾಗಿದೆ. ಈ ಶ್ರೀಮಂತ ಲೀಗ್‌ಗಾಗಿ ಭರ್ಜರಿ ತಯಾರಿ ನಡೆಸಿವೆ. ಹಲವು ತಂಡಗಳು ಚಾಂಪಿಯನ್ ಪಟ್ಟದ ಮೇಲೆ ಕಣ್ಣು ನೆಟ್ಟಿವೆ. ಇನ್ನು ಕೆಲವು ತಂಡಗಳಿಗೆ ಐಪಿಎಲ್ ಆರಂಭಕ್ಕೂ ಮುನ್ನವೇ ಪೆಟ್ಟು ಬಿದ್ದಿದೆ. ಆಟಗಾರರ ಗಾಯ ತಂಡಗಳಿಗೆ ಬಹುವಾಗಿ ಕಾಡಿದೆ. ಇದೇ ಪರಿಸ್ಥಿತಿ ಸದ್ಯ ಗುಜರಾತ್ ಜೈಂಟ್ಸ್ ನೂತನ ನಾಯಕ ಶುಭ್‌ಮನ್ ಗಿಲ್ ಚಿಂತೆಯನ್ನು ಹೆಚ್ಚಿಸಿವೆ.
ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಅಬ್ಬರದ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿರುವ ಸ್ಟಾರ್ ಸ್ಪಿನ್ ಬೌಲರ್ ಈಗ ಗಾಯಕ್ಕೆ ತುತ್ತಾಗಿದ್ದಾರೆ. ಹೀಗಾಗಿ ಇವರು ಪಾಕಿಸ್ತಾನ್ ಸೂಪರ್ ಲೀಗ್‌ನ ಮುಂಬರುವ ಸೀಸನ್‌ನಿಂದಲೂ ತಮ್ಮ ಹೆಸರನ್ನು ಹಿಂಪಡೆದಿದ್ದಾರೆ. ಈ ಪ್ಲೇಯರ್ ತನ್ನ ಜಾದೂ ಸ್ಪಿನ್ ಬೌಲಿಂಗ್‌ನಿಂದಲೇ ವಿಶ್ವದ ಚಿತ್ತ ಕದ್ದ ಪ್ಲೇಯರ್ ರಾಶೀದ್ ಖಾನ್.

ರಶೀದ್ ಖಾನ್ ಶಸ್ತ್ರಚಿಕಿತ್ಸೆಯ ನಂತರ ಪುನರ್ವಸತಿಗೆ ಒಳಗಾಗುತ್ತಿದ್ದಾರೆ. ರಶೀದ್ ಖಾನ್ ಗಾಯದಿಂದಾಗಿ ಐಪಿಎಲ್ ತಂಡ ಗುಜರಾತ್ ಟೈಟಾನ್ಸ್‌ನ ಆತಂಕ ಹೆಚ್ಚಿದೆ. ರಶೀದ್ ಖಾನ್ ಐಪಿಎಲ್ ತನಕ ಫಿಟ್ ಆಗುತ್ತಾರಾ ಎಂಬುದು ಈಗ ದೊಡ್ಡ ಪ್ರಶ್ನೆ. ರಶೀದ್ ಖಾನ್ ಈ ಋತುವಿನಲ್ಲಿ ಆಡುತ್ತಾರೆಯೇ? ಕಳೆದ ವರ್ಷ ನವೆಂಬರ್‌ನಲ್ಲಿ ರಶೀದ್ ಖಾನ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದರ ನಂತರ ಅವರು ಶೀಘ್ರದಲ್ಲೇ ಪುನರಾಗಮನ ಮಾಡಬಹುದು ಎಂದು ನಂಬಲಾಗಿತ್ತು. ಆದರೆ ಅವರು ಭಾರತ ವಿರುದ್ಧ 3 ಟಿ20 ಸರಣಿಯಲ್ಲಿ ಆಡಲು ಸಾಧ್ಯವಾಗಲಿಲ್ಲ.
ಅಫ್ಘಾನಿಸ್ತಾನದ ಕೋಚ್ ಹೇಳಿದ್ದೇನು?
ಅಫ್ಘಾನಿಸ್ತಾನದ ಕೋಚ್ ಜೊನಾಥನ್ ಟ್ರಾಟ್ ರಶೀದ್ ಖಾನ್ ಮೈದಾನಕ್ಕೆ ಮರಳಲು ಸಂಬಂಧಿಸಿದಂತೆ ನಾವು ಆತುರವಾಗಿಲ್ಲ ಎಂದು ಹೇಳಿದ್ದಾರೆ. ಅವರು ನಮ್ಮ ತಂಡದ ದೊಡ್ಡ ಆಟಗಾರ. ರಶೀದ್ ಖಾನ್ ಸಂಪೂರ್ಣವಾಗಿ ಫಿಟ್ ಆಗಿದ್ದಾರೆ ಎಂದು ನಾವು ಮೊದಲು ಭರವಸೆ ನೀಡಲು ಬಯಸುತ್ತೇವೆ. ಇದರಿಂದ ಮುಂದಿನ ದಿನಗಳಲ್ಲಿ ಅಂತಹ ಗಾಯಗಳನ್ನು ತಪ್ಪಿಸಬಹುದು. ರಾಶೀದ್ ಫಿಟ್ ಆದ ಕೂಡಲೇ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದಾಗ್ಯೂ, ಇದಕ್ಕೂ ಮುನ್ನ ರಶೀದ್ ಖಾನ್ ಅವರ ಗಾಯ ಚೇತರಿಕೆಯ ಹಂತದಲ್ಲಿದೆ ಎಂಬುದನ್ನು ತಿಳಿಯಲು ವೈದ್ಯರನ್ನು ಭೇಟಿ ಮಾಡಲು ಬಯಸಿದ್ದಾರೆ. ಅವರು ಶೀಘ್ರದಲ್ಲೇ ಮೈದಾನಕ್ಕೆ ಮರಳಬಹುದು ಎಂದು ತಿಳಿಸಿದ್ದಾರೆ.

ಗುಜರಾತ್ ಟೈಟಾನ್ಸ್ ಸಂಕಷ್ಟ!
ಐಪಿಎಲ್‌ನಲ್ಲಿ ರಶೀದ್ ಖಾನ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಸದ್ಯ ರಶೀದ್ ಖಾನ್ ಗುಜರಾತ್ ಟೈಟಾನ್ಸ್‌ನ ಭಾಗವಾಗಿದ್ದಾರೆ. ಒಂದು ವೇಳೆ ರಶೀದ್ ಖಾನ್ ಐಪಿಎಲ್ ತನಕ ಫಿಟ್ ಆಗದೇ ಇದ್ದರೆ ಅದು ಗುಜರಾತ್ ಟೈಟಾನ್ಸ್ ಗೆ ದೊಡ್ಡ ಹೊಡೆತ ಎಂದು ಪರಿಗಣಿಸಲಾಗುವುದು. ಇತ್ತೀಚೆಗೆ ಹರಾಜಿನ ಮೊದಲು, ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್‌ನ ಭಾಗವಾಗಿದ್ದರು. ಮುಂಬೈ ಇಂಡಿಯನ್ಸ್ ಹಾರ್ದಿಕ್ ಪಾಂಡ್ಯ ಅವರನ್ನು ಗುಜರಾತ್ ಟೈಟಾನ್ಸ್‌ಗೆ ಟ್ರೇಡ್ ಮಾಡಿದೆ. ಇದಾದ ನಂತರ ಶುಭಮನ್ ಗಿಲ್ ಅವರನ್ನು ನಾಯಕರನ್ನಾಗಿ ಮಾಡಲಾಯಿತು. ಆದರೆ ಈಗ ರಶೀದ್ ಖಾನ್ ಆಡಲು ಸಾಧ್ಯವಾಗದೇ ಹೋದರೆ ಗುಜರಾತ್ ಟೈಟಾನ್ಸ್ ಸಮಸ್ಯೆ ಹೆಚ್ಚಾಗುವುದು ಖಚಿತ.
ಐಪಿಎಲ್‌ನಲ್ಲಿ ರಶೀದ್ ಪ್ರದರ್ಶನ
ರಶೀದ್ ಖಾನ್ 2017ರಲ್ಲಿ ಚೊಚ್ಚಲ ಬಾರಿಗೆ ಐಪಿಎಲ್ ಆಡಿದರು. ಅಲ್ಲಿಂದ ಇಲ್ಲಿಯವರೆಗೆ ರಶೀದ್ ಒಟ್ಟು 109 ಪಂದ್ಯಗಳನ್ನು ಆಡಿದ್ದು 139 ವಿಕೆಟ್ ಕಬಳಿಸಿದ್ದಾರೆ. ಕಳೆದ ಎರಡು ಋತುವಿನಲ್ಲಿ ಸ್ಥಿರ ಪ್ರದರ್ಶನ ನೀಡಿರುವ ರಶೀದ್ ಖಾನ್ ಗುಜರಾತ್ ತಂಡದ ಗೆಲುವಿನಲ್ಲಿ ಮಿಂಚಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications