IPL 2024: ಐಪಿಎಲ್‌ನಲ್ಲಿ ಗರಿಷ್ಠ ವಿಕೆಟ್ ಪಡೆದವರ ಪಟ್ಟಿಯಲ್ಲಿ ಸ್ಪಿನ್ ಬೌಲರ್ಸ್ ಪ್ರಾಬಲ್ಯ: RCB ಬೌಲರ್‌ಗೆ ಇದೆಯಾ ಸ್ಥಾನ
ಐಪಿಎಲ್ ಅಂದರೆ ಅದು ಬ್ಯಾಟರ್‌ಗಳ ಆಟ ಎಂದು ಕೊಂಡವರೇ ಹೆಚ್ಚು ಆದರೆ, ಈ ಕ್ರೀಡೆಯಲ್ಲಿ ಬೌಲರ್‌ಗಳ ಕಮಾಲ್ ಪ್ರದರ್ಶನ ನೀಡಿದ್ದಾರೆ. ಅಲ್ಲದೆ ಸಿಕ್ಕ ಅವಕಾಶದಲ್ಲಿ ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಮಿಂಚಿದ್ದಾರೆ. ಹೊಡಿ ಬಡಿ ಆಟದಲ್ಲಿ ಬೌಲರ್‌ಗಳ ಮೇಲೆ ಎಲ್ಲರ ಕಣ್ಣು ನೆಟ್ಟಿರುತ್ತದೆ. ಆತ ಒಂದೇ ಒಂದು ತಪ್ಪು ಮಾಡಿದರೂ ಬ್ಯಾಟರ್ ಕಾದು ದಂಡಿಸುತ್ತಾನೆ.
ಐಪಿಎಲ್‌ನಲ್ಲಿ ಬೌಲರ್‌ಗಳ ಮೇಲೆ ಹೆಚ್ಚಿನ ಜವಾಬ್ದಾರಿಯು ಇರುತ್ತದೆ. ಪವರ್ ಪ್ಲೇ ಹಾಗೂ ಡೆತ್ ಓವರ್‌ಗಳ ಒತ್ತಡವನ್ನು ಮೆಟ್ಟಿನಿಂತು ಬೌಲಿಂಗ್ ಮಾಡಿ ವಿಕೆಟ್ ಕಬಳಿಸ ಬೇಕು. ಅಂದಾಗ ಮಾತ್ರ ಅಭಿಮಾನಿಗಳು ಇವರಿಗೆ ತಮ್ಮ ಮನಸ್ಸಿನಲ್ಲಿ ಶಾಶ್ವತ ಸ್ಥಾನವನ್ನು ನೀಡುತ್ತಾರೆ. ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್‌ನಲ್ಲಿ ಅತಿ ಹೆಚ್ಚು ಬೌಲರ್‌ಗಳ ಪಟ್ಟಿಯನ್ನು ನೋಡುತ್ತಾ ಹೋದರೆ, ಸ್ಪಿನ್ ಬೌಲರ್‌ಗಳದ್ದೇ ಪ್ರಾಭಲ್ಯ ಎದ್ದು ಕಾಣುತ್ತದೆ. ಅದರಲ್ಲೂ ಟಾಪ್ ಐದರಲ್ಲಿ ನಾಲ್ಕು ಜನ ಭಾರತೀಯ ಆಟಗಾರರೇ ಇದ್ದಾರೆ.

ಚಹಾಲ್‌ಗೆ ಅಗ್ರ ಸ್ಥಾನ
ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಕಾಣಿಸಿಕೊಳ್ಳು ಬೌಲರ್ ಆರ್‌ಸಿಬಿಯ ಮಾಜಿ ಬೌಲರ್ ಯಜುವೇಂದ್ರ ಚಹಾಲ್. ಆರ್‌ಸಿಬಿ ಮುಂಬೈ ಇಂಡಿಯನ್ಸ್ ಹಾಗೂ ಈಗ ರಾಜಸ್ಥಾನ ರಾಯಲ್ಸ್ ಪರ ಆಡುತ್ತಿರುವ ಚಹಾಲ್ ಆಡಿರುವ 145 ಪಂದ್ಯಗಳಲ್ಲಿ 187 ವಿಕೆಟ್ ಕಬಳಿಸಿದ್ದಾರೆ. ಇದರಲ್ಲಿ ನಾಲ್ಕು ಬಾರಿ 6 ವಿಕೆಟ್ ಪಡೆದರೆ, ಒಂದು ಬಾರಿ ಐದು ವಿಕೆಟ್ ಪಡೆದು ಬೀಗಿದ್ದಾರೆ.

ಬ್ರಾವೋ ಮಿಂಚು
ಗರಿಷ್ಠ ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಎದ್ದು ಕಾಣುವ ಇನ್ನೊಂದು ಹೆಸರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಡ್ವೇನ್ ಬ್ರಾವೋ. ಇವರು ಸಿಎಸ್‌ಕೆ, ಗುಜರಾತ್ ಲಯನ್ಸ್ ಹಾಗೂ ಮುಂಬೈ ಇಂಡಿಯನ್ಸ್ ಜೆರ್ಸಿ ತೊಟ್ಟಿದ್ದಾರೆ. ಈ ವೇಳೆ 161 ಪಂದ್ಯಗಳನ್ನು ಆಡಿರುವ ವಿಂಡೀಸ್ ಪ್ಲೇಯರ್ 183 ವಿಕೆಟ್ ಪಡೆಯುವುದರೊಂದಿಗೆ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ಪಿಯುಷ್ ಚಾವ್ಲಾ
ತಮ್ಮ ಕಮಾಲ್ ಸ್ಪಿನ್ ಬೌಲಿಂಗ್ ಮೂಲಕ ಎದುರಾಳಿಗಳ ನಿದ್ದೆ ಗೆಡಿಸಿರುವ ಬೌಲರ್ ಪಿಯುಷ್ ಚಾವ್ಲಾ. ಇವರು ಆಡಿದ 181 ಪಂದ್ಯಗಳಲ್ಲಿ 179 ವಿಕೆಟ್ ಪಡೆದಿದ್ದಾರೆ. ಇವರ ಸರಾಸರಿ 26.79 ಆಗಿದೆ. ಈ ವೇಳೆ ಇವರು 2 ಬಾರಿ ನಾಲ್ಕು ವಿಕೆಟ್ ಪಡೆದು ಬೀಗಿದ್ದಾರೆ.
ಅಮಿತ್ ಮಿಶ್ರಾ
ಟೀಮ್ ಇಂಡಿಯಾದ ಬೌಲರ್ ಅಮಿತ್ ಮಿಶ್ರಾ ಐಪಿಎಲ್ ಪಂದ್ಯಗಳಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ಇವರು ಆಡಿದ 161 ಪಂದ್ಯಗಳಲ್ಲಿ 173 ವಿಕೆಟ್ ಪಡೆದಿದ್ದಾರೆ. ಅಲ್ಲದೆ ನಾಲ್ಕು ಬಾರಿ ನಾಲ್ಕು ವಿಕೆಟ್ ಸಾಧನೆ ಮಾಡಿದರೆ, ಒಂದು ಬಾರಿ ಐದು ವಿಕೆಟ್ ಪಡೆದು ಬೀಗಿದ್ದಾರೆ.

ಕೇರಂ ಬೌಲ್ ಸ್ಪೇಷಲಿಸ್ಟ್ ಅಬ್ಬರ
ಚೆನ್ನೈ ಸೂಪರ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್, ಪಂಜಾಬ್ ಕಿಂಗ್ಸ್, ಪುಣೆ ತಂಡದ ಪರ ಆಡಿರುವ ಸ್ಪಿನ್ ಮಾಂತ್ರಿಕ ಅಶ್ವಿನ್.. ಸದ್ಯ ರಾಜಸ್ಥಾನ ರಾಯಲ್ಸ್ ತಂಡದ ಪರ ಬೌಲಿಂಗ್ ಮಾಡುತ್ತಿದ್ದಾರೆ. ಇವರು 161 ಪಂದ್ಯಗಳಲ್ಲಿ 173 ವಿಕೆಟ್ ಪಡೆದು ಬೀಗಿದ್ದಾರೆ.
ಉಳಿದಂತೆ ಐದರಿಂದ ಹತ್ತರ ಒಳಗಿನ ಬೌಲರ್‌ಗಳ ಪಟ್ಟಿಯನ್ನು ಗಮನಿಸಿದರೆ, ಆರನೇ ಸ್ಥಾನದಲ್ಲಿ ಲಸಿತ್ ಮಲಿಂಗ್, ಏಳನೇ ಸ್ಥಾನದಲ್ಲಿ ಭುವನೇಶ್ವರ್ ಕುಮಾರ್, ಎಂಟನೇ ಸ್ಥಾನದಲ್ಲಿ ಸುನಿಲ್ ನರೈನ್, ಒಂಬತ್ತನೇ ಸ್ಥಾನದಲ್ಲಿ ರವೀಂದ್ರ ಜಡೇಜಾ, ಹತ್ತನೇ ಸ್ಥಾನದಲ್ಲಿ ಹರ್ಭಜನ್ ಸಿಂಗ್ ಸ್ಥಾನ ಪಡೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications