IPL 2024: ಎಸ್‌ಆರ್‌ಎಚ್ ತಂಡ ಚಾಂಪಿಯನ್ ಫಿಕ್ಸ್: ಹೈದರಾಬಾದ್ ಬಳಿ ಇದ್ದಾರೆ ಲಕ್ಕಿ ಮ್ಯಾನ್
ಐಪಿಎಲ್ 2024ಕ್ಕೆ ಭರ್ಜರಿ ಸಿದ್ಧತೆಗಳು ಆರಂಭವಾಗಿವೆ. ಎಲ್ಲ ತಂಡಗಳು ತಮ್ಮ ತಮ್ಮ ತಂಡಗಳನ್ನು ಸಮತೋಲನ ಮಾಡುವ ದೃಷ್ಟಿಯಿಂದ, ದುಬೈನಲ್ಲಿ ನಡೆದ ಹರಾಜಿನಲ್ಲಿ ಆಟಗಾರರನ್ನು ಆಯ್ಕೆ ಮಾಡಿದೆ. ಡಿಸೆಂಬರ್ 19 ರಂದು ದುಬೈನಲ್ಲಿ ಹರಾಜಿನಲ್ಲಿ ಸನ್ ರೈಸರ್ಸ್ ಹೈದರಾಬಾದ್ ಸಹ ತನ್ನ ತಂಡಕ್ಕೆ ಒಬ್ಬ ಸ್ಟಾರ್ ಆಟಗಾರನನ್ನು ಬರ ಮಾಡಿಕೊಂಡಿದೆ.
ಅಷ್ಟಕ್ಕೂ ಎಸ್‌ಆರ್‌ಎಚ್ ತಂಡಕ್ಕೆ ಸೇರಿದ ಸ್ಟಾರ್ ಆಟಗಾರ ನಿಜಕ್ಕೂ ಲಕ್ಕಿ ಮ್ಯಾನ್. ಈ ಮನುಷ್ಯ ಮುಟ್ಟಿದೆಲ್ಲವೂ ಚಿನ್ನ. ಕಳೆದ ವರ್ಷವಂತೂ ಈ ಸ್ಟಾರ್ ಆಟಗಾರನ ಪಾಲಿಗೆ ಅದೃಷ್ಟದ ವರ್ಷ. ತಮ್ಮ ತಂಡ ಇವರ ಮೇಲೆ ಇಟ್ಟಿದ್ದಕ್ಕಿಂತಲೂ ಹೆಚ್ಚಿನ ಫಲಿತಾಂಶ ನೀಡಿದ ಆಟಗಾರ. ತನಗೆ ಮ್ಯಾನೇಜ್ಮೆಂಟ್ ನೀಡಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಎಲ್ಲರ ಚಿತ್ತ ಕದ್ದ ಪ್ಲೇಯರ್.

ಈ ಪ್ಲೇಯರ್ ಆಗಮನದಿಂದ ನಿಶ್ಚಿತವಾಗಿಯೂ ಎಸ್‌ಆರ್‌ಎಚ್ ತಂಡದಲ್ಲಿ ಮಂದಹಾಸ ಮೂಡಿದೆ. ಅಬ್ಬಾ ಇಷ್ಟು ಹಣವನ್ನು ನೀಡಿ ಈ ಪ್ಲೇಯರ್ ಖರೀದಿಸಿದ್ವಾ ಅನ್ನೋ ಬೇಸರ ಮೂಡದಂತೆ ಈ ಪ್ಲೇಯರ್ ಪ್ರದರ್ಶನ ನೀಡಿದ್ದಾರೆ. ಈ ಪ್ಲೇಯರ್ ಬೇರೆ ಯಾರೂ ಅಲ್ಲ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್..
ಮೈದಾನದಲ್ಲಿ ಆರು ಅಡಿ ನಾಲ್ಕು ಇಂಚು ಇರುವ ವ್ಯಕ್ತಿ ಚೆಂಡನ್ನು ಹಿಡಿದು, ರನ್ ಅಪ್ ಆರಂಭಿಸಿದರೆ ಮುಗಿದೇ ಹೋಯಿತು. ಎಲ್ಲ ಬ್ಯಾಟರ್‌ಗಳಲ್ಲಿ ನಡುಕ. ಇವರ ಬಿಗುವಿನ ದಾಳಿಯನ್ನು ಎದುರಿಸುವುದು ಹೇಗೆಪ್ಪಾ ಎನ್ನುವ ಭಯ. ಬೆಂಕಿಯಂತೆ ವೇಗವಾಗಿ ಚೆಂಡನ್ನು ಎಸೆಯುತ್ತಿದ್ದ ಪ್ಯಾಟ್‌ಗೆ ಕ್ರಿಕೆಟ್ ಆಸ್ಟ್ರೇಲಿಯಾ ನಾಯಕನ ಜವಾಬ್ದಾರಿ ನೀಡಿತು. ತನಗೆ ನೀಡಿದ ಅವಕಾಶವನ್ನು ಅಚ್ಚುಕಟ್ಟಾಗಿ ಬಳಸಿಕೊಂಡು ಯಶಸ್ಸಿನ ಮಹಲ್ ಕಟ್ಟಿದ ಆಟಗಾರ.

2023 ಮುಟ್ಟಿದೆಲ್ಲವೂ ಚಿನ್ನ
ನಿಶ್ಚಿತವಾಗಿಯೂ 2023 ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಪಾಲಿಗೆ ಸೂವರ್ಣ ವರ್ಷ.. ಈ ವರ್ಷದಲ್ಲಿ ಅವರು ಮುಟ್ಟಿದೆಲ್ಲವೂ ಚಿನ್ನ. ಈ ವರ್ಷದ ಆರಂಭದಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್‌ನಲ್ಲಿ ಭಾರತದ ವಿರುದ್ಧ ಅಮೋಘ ಪ್ರದರ್ಶನ ನೀಡಿದರು. ಫೈನಲ್ ಪಂದ್ಯದಲ್ಲಿ ಭಾರತವೇ ಗೆಲ್ಲುವ ಫೆವರೀಟ್ ಎಂದ ಅಂದಾಜಿಸಲಾಗಿತ್ತು. ಆದರೆ ಎಲ್ಲರ ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಿದ ಆಸೀಸ್ ಅಬ್ಬರಿಸಿತು. ಅಲ್ಲದೆ ವಿಶ್ವ ಟೆಸ್ಟ್ ಚಾಂಪಿಯನ್ ಮುಕುಟವನ್ನು ತನ್ನದಾಗಿಸಿಕೊಂಡಿತು.
ಭಾರತದಲ್ಲಿ ನಡೆದ ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾದ ಆಸೀಸ್ ಟೀಕೆಗೆ ಗುರಿಯಾಯಿತು. ಈ ವೇಳೆ ಪ್ಯಾಟ್ ನಾಯಕತ್ವದ ಬಗ್ಗೆ ಪ್ರಶ್ನೆ ಎದ್ದವು. ಆದರೆ ಲೀಗ್ ಹಂತದಲ್ಲಿ ಸ್ಥಿರ ಪ್ರದರ್ಶನ ನೀಡಿ ಸೆಮಿಫೈನಲ್‌ನಲ್ಲಿ ಅಬ್ಬರಿಸಿ, ಫೈನಲ್‌ನಲ್ಲಿ ಭಾರತದ ವಿರುದ್ಧ ಆರ್ಭಟಿಸಿದಾಗ ಟೀಕಾಕಾರರೇ ಹೂಮಳೆಯನ್ನು ಸುರಿಸಿದರು.

ಪಾಕ್ ವಿರುದ್ಧ ಕಮಿನ್ಸ್ ಮಿಂಚು
ಈಗ ತವರಿನಲ್ಲಿ ನಡೆದ ಪಾಕ್ ವಿರುದ್ಧದ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿರುವ ಪ್ಯಾಟ್ ಕಮಿನ್ಸ್ ಐಪಿಎಲ್‌ಗೆ ತಾನು ತಯಾರಿರುವುದಾಗಿ ತಿಳಿಸಿದ್ದಾರೆ. ಆಡಿದ ಮೂರು ಪಂದ್ಯಗಳ ಆರು ಇನ್ನಿಂಗ್ಸ್‌ನಲ್ಲಿ 12ರ ಸರಾಸರಿಯಂತೆ 19 ವಿಕೆಟ್ ಪಡೆದಿರುವ ಕಮಿನ್ಸ್ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಗೆದ್ದು ಬೀಗಿದರು. ಈ ಮೂಲಕ ತಮ್ಮ ಭರ್ಜರಿ ಪ್ರದರ್ಶನವನ್ನು ಭಾರತದಲ್ಲಿ ನೀಡುವುದಾಗಿ ಸಾರಿ ಹೇಳಿದ್ದಾರೆ.
ಅಲ್ಲದೆ ಪ್ಯಾಟ್ ಕಮಿನ್ಸ್‌ಗೆ ಭಾರತದ ಪಿಚ್‌ಗಳ ಮರ್ಮ ಅರಿತಿದೆ. ಅಲ್ಲದೆ ಲಕ್ಕಿ ಮ್ಯಾನ್ ಎಂದೇ ಕರಿಸಿಕೊಳ್ಳುವ ಆಸೀಸ್ ಕ್ಯಾಪ್ಟನ್ ಸನ್ ರೈಸರ್ಸ್ ಹೈದರಾಬಾದ್ ಕ್ಯಾಂಪ್‌ನಲ್ಲಿರುವುದು ತಂಡಕ್ಕೆ ಮತ್ತೊಮ್ಮೆ ಐಪಿಎಲ್ ಚಾಂಪಿಯನ್ ಆಗುವ ಆಸೆಯನ್ನು ಚಿಗುರಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications