ಬುಧವಾರ, ಮೇ 8ರಂದು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 57ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ನೀಡಿದ್ದ 166 ರನ್‌ಗಳ ಗುರಿಯನ್ನು ಸನ್ ರೈಸರ್ಸ್ ಹೈದರಾಬಾದ್ ತಂಡ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಸ್ಫೋಟಕ ಅರ್ಧಶತಕಗಳ ನೆರವಿನಿಂದ 10 ವಿಕೆಟ್‌ಗಳ ಅಂತರದಿಂದ ಗೆದ್ದು ಬೀಗಿತು.
ಟ್ರಾವಿಸ್ ಹೆಡ್ ಅವರ 30 ಎಸೆತಗಳಲ್ಲಿ 8 ಬೌಂಡರಿ ಹಾಗೂ 8 ಸಿಕ್ಸರ್‌ಗಳ ಸಮೇತ ಅಜೇಯ 89 ರನ್ ಗಳಿಸಿದರೆ, ಅಭಿಷೇಕ್ ಶರ್ಮಾ 28 ಎಸೆತಗಳಲ್ಲಿ 8 ಬೌಂಡರಿ ಹಾಗೂ 6 ಸಿಕ್ಸರ್‌ಗಳ ಮೂಲಕ ಅಜೇಯ 75 ರನ್‌ಗಳ ನೆರವಿನಿಂದ ಸನ್ ರೈಸರ್ಸ್ ಹೈದರಾಬಾದ್ 9.4 ಓವರ್‌ಗಳಲ್ಲಿ ಗೆಲುವಿನ ನಗೆ ಬೀರಿತು.

ಈ ಮೂಲಕ ಸನ್‌ರೈಸರ್ಸ್ ಹೈದರಾಬಾದ್ ತಂಡವು ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು 10 ವಿಕೆಟ್‌ಗಳು ಮತ್ತು 10.2 ಓವರ್‌ಗಳಿಂದ ಸೋಲಿಸಿದ ನಂತರ, ಐದು ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ಐಪಿಎಲ್ 2024ರ ಪ್ಲೇಆಫ್ ರೇಸ್‌ನಿಂದ ಹೊರಬಿದ್ದ ಮೊದಲ ತಂಡವೆನಿಸಿತು.
ಹೈದರಾಬಾದ್‌ನಲ್ಲಿ ಎಸ್‌ಆರ್‌ಹೆಚ್ ತಂಡದ ಗೆಲುವು 14 ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೆ ಏರಿತು. ಅಗ್ರ ಎರಡು ಸ್ಥಾನಗಳಲ್ಲಿರುವ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಲಾ 16 ಅಂಕಗಳನ್ನು ಹೊಂದಿದೆ.
ಮೇ 14ರಂದು ಎಲ್‌ಎಸ್‌ಜಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಪರಸ್ಪರ ಸೆಣಸಾಡುವುದರಿಂದ, ಆ ತಂಡಗಳಲ್ಲಿ ಒಂದು ತಂಡ ಕನಿಷ್ಠ 13 ಅಂಕಗಳನ್ನು ಪಡೆಯುತ್ತದೆ. ಮುಂಬೈ ಇಂಡಿಯನ್ಸ್ ತಮ್ಮ ಉಳಿದ ಎರಡು ಲೀಗ್ ಪಂದ್ಯಗಳನ್ನು ಗೆದ್ದರೆ ಗರಿಷ್ಠ 12 ಅಂಕಗಳಾಗಬಹುದು. ಹೀಗಾಗಿ ಮುಂಬೈ ಇಂಡಿಯನ್ಸ್ ತಂಡ ಅಧಿಕೃತವಾಗಿ ಅಗ್ರ 4ರಿಂದ ಹೊರಗೆ ಹಾಕುತ್ತದೆ.

ಮುಂಬೈ ಇಂಡಿಯನ್ಸ್ ತನ್ನ ಹೊಸ ನಾಯಕ ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ಐಪಿಎಲ್ 2024ರ ಅವೃತ್ತಿಯನ್ನು ಸತತ ಮೂರು ಸತತ ಸೋಲುಗಳೊಂದಿಗೆ ಕಳಪೆಯಾಗಿ ಪ್ರಾರಂಭಿಸಿತು.
ನಂತರದ ತಮ್ಮ ನಾಲ್ಕು ಪಂದ್ಯಗಳಲ್ಲಿ ಮೂರನ್ನು ಗೆದ್ದರೂ, ಆ ಬಳಿಕ ಸತತ ನಾಲ್ಕು ಸೋಲುಗಳ ಮತ್ತೊಂದು ಸರಣಿಯು ಮುಂಬೈ ಇಂಡಿಯನ್ಸ್‌ನ ಪ್ಲೇಆಫ್ ಕನಸುಗಳನ್ನು ತೀವ್ರವಾಗಿ ಹಾನಿಗೊಳಿಸಿತು.
ಜಸ್ಪ್ರೀತ್ ಬುಮ್ರಾ 12 ಪಂದ್ಯಗಳ ನಂತರ 18 ವಿಕೆಟ್‌ಗಳು ಮತ್ತು 6.20ರ ಎಕಾನಮಿ ದರದೊಂದಿಗೆ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಮುಂಬೈ ಇಂಡಿಯನ್ಸ್‌ನ ಇತರ ಯಾವುದೇ ಬೌಲರ್‌ಗಳು ಕಡಿಮೆ ಎಕಾನಮಿ ದರವನ್ನು ಹೊಂದಿಲ್ಲ ಮತ್ತು ಅವರ ಬ್ಯಾಟರ್‌ಗಳು ಕಳಪೆ ಪ್ರದರ್ಶನ ನೀಡಿದ್ದಾರೆ. 12 ಇನ್ನಿಂಗ್ಸ್‌ಗಳ ನಂತರ ಯಾರೂ 400 ರನ್‌ಗಳಿಗಿಂತ ಹೆಚ್ಚು ರನ್ ಗಳಿಸಲಿಲ್ಲ.

ತಿಲಕ್ ವರ್ಮಾ 42.66ರ ಸರಾಸರಿಯಲ್ಲಿ 384 ರನ್ ಗಳಿಸಿ ಮುಂಬೈ ಇಂಡಿಯನ್ಸ್‌ನ ಗರಿಷ್ಠ ಸ್ಕೋರರ್ ಆಗಿದ್ದು, ಸೂರ್ಯಕುಮಾರ್ ಯಾದವ್ ಒಂಬತ್ತು ಇನ್ನಿಂಗ್ಸ್‌ಗಳಲ್ಲಿ 334 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮಾ 12 ಇನ್ನಿಂಗ್ಸ್‌ಗಳಲ್ಲಿ 330 ರನ್ ಗಳಿಸಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡದ ಈ ಆರಂಭಿಕ ಹೊರಬೀಳುವಿಕೆ, 2019 ಮತ್ತು 2020ರಲ್ಲಿ ನಾಲ್ಕನೇ ಮತ್ತು ಐದನೇ ಟ್ರೋಫಿಗಳನ್ನು ಗೆದ್ದಿರುವ ಮುಂಬೈ ಇಂಡಿಯನ್ಸ್ ತಂಡದ ಆರನೇ ಐಪಿಎಲ್ ಪ್ರಶಸ್ತಿಗಾಗಿ ಕಾಯುವಿಕೆ ಮುಂದುವರಿಯುತ್ತದೆ.
2023ರಲ್ಲಿ ಗುಜರಾತ್ ಟೈಟನ್ಸ್‌ನಿಂದ ಕ್ವಾಲಿಫೈಯರ್ 2ರಲ್ಲಿ ಸೋತು ಹೊರಬಿದ್ದಿತ್ತು. ಕಳೆದ ನಾಲ್ಕು ಆವೃತ್ತಿಗಳಲ್ಲಿ ಮುಂಬೈ ಇಂಡಿಯನ್ಸ್ ಒಮ್ಮೆ ಮಾತ್ರ ಪ್ಲೇಆಫ್ ತಲುಪಿದೆ.