IPL 2024; ಸೂಪರ್ ಜೈಂಟ್ಸ್ ಪ್ಲೇಯರ್ ಆಟಕ್ಕೆ ಕುಣಿದ SRH ಫ್ಯಾನ್ಸ್
ಐಪಿಎಲ್ 2024ಕ್ಕೆ ದಿನಗಣನೆ ಆರಂಭವಾಗಿದೆ. ಆಟಗಾರರು ಹಾಗೂ ಫ್ರಾಂಚೈಸಿಗಳು ವಿಶ್ವದ ಶ್ರೀಮಂತ ಲೀಗ್‌ನ್ನು ಎದುರು ನೋಡುತ್ತಿದ್ದಾರೆ. ಈಗಾಗಲೇ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ಪಂಜಾಬ್ ಕಿಂಗ್ಸ್ ನಾಯಕ ಶಿಖರ್ ಧವನ್ ಅಭ್ಯಾಸ ಆರಂಭಿಸಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಎಲ್ಲ ತಂಡಗಳು ಅಭ್ಯಾಸ ಆರಂಭಿಸುತ್ತವೆ. ಐಪಿಎಲ್ ಮುಕುಟವನ್ನು ಪಡೆಯಲು ಆಟಗಾರರು ಬೆವರು ಹರಿಸುತ್ತಿದ್ದಾರೆ.
2016ರಿಂದ ಪ್ರಶಸ್ತಿ ಗೆಲುವಿನ ಬರವನ್ನು ಅನುಭವಿಸುತ್ತಿರುವ ಎಸ್‌ಆರ್‌ಎಚ್ ಈ ಬಾರಿ ಎರಡನೇ ಬಾರಿ ಕಪ್ ಎತ್ತುವ ಕನಸು ಕಾಣುತ್ತಿದೆ. ತಂಡದಲ್ಲಿ ಸ್ಟಾರ್ ಆಟಗಾರರ ಗೊಂಚಲೇ ಇದೆ. ಐಪಿಎಲ್ ಆರಂಭಕ್ಕೂ ಮುನ್ನವೇ ಈ ಬಾರಿ ಸನ್ ರೈಸರ್ಸ್ ಹೈದರಾಬಾದ್ ತಂಡ ಪ್ರಶಸ್ತಿ ಗೆಲ್ಲಲಿದೆ ಎಂಬ ನಂಬಿಕೆ ಹುಟ್ಟಿದೆ. ಇದಕ್ಕೆ ಕಾರಣ ಸ್ಟಾರ್ ಪ್ಲೇಯರ್ ಮೈದಾನದಲ್ಲಿ ಅಬ್ಬರಿಸುತ್ತಿರುವ ರೀತಿ.

ದಕ್ಷಿಣ ಆಫ್ರಿಕಾ ಕ್ರಿಕೆಟ್ ಲೀಗ್‌ನಲ್ಲಿ ಸನ್‌ರೈಸರ್ಸ್ ತಂಡದ ಪ್ಲೇಯರ್ ಅಬ್ಬರಿಸಿದ್ದಾರೆ. ಹೆನ್ರಿಕ್ ಕ್ಲಾಸೆನ್, ಗುರುವಾರ ದಕ್ಷಿಣ ಆಫ್ರಿಕಾ ಕ್ರಿಕೆಟ್ ಲೀಗ್‌ನ ಎಲಿಮಿನೇಟರ್ ಪಂದ್ಯದಲ್ಲಿ ಆರ್ಭಟಿಸಿದ್ದಾರೆ. ಕ್ಲಾಸೆನ್ ತಮ್ಮ ಬ್ಯಾಟ್‌ನಿಂದ ಬಿರುಗಾಳಿ ಸೃಷ್ಟಿಸಿದ್ದಾರೆ. ಅವರು ಕೇವಲ 30 ಎಸೆತಗಳಲ್ಲಿ 3 ಬೌಂಡರಿಗಳು ಮತ್ತು 7 ಆಗಸದೆತ್ತರದ ಸಿಕ್ಸರ್‌ಗಳನ್ನು ಹೊಡೆಯುವ ಮೂಲಕ 70 ರನ್‌ಗಳ ಇನಿಂಗ್ಸ್ ಕಟ್ಟಿದರು. ಇವರ ಈ ಅಮೋಘ ಇನಿಂಗ್ಸ್ ನೆರವಿನಿಂದ ಅವರ ತಂಡ ಡರ್ಬನ್ ಸೂಪರ್ ಜೈಂಟ್ಸ್ 69 ರನ್ ಗೆಲ್ಲುವ ದಾಖಲಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.

ಡರ್ಬನ್ ಸೂಪರ್ ಜೈಂಟ್ಸ್ ಮತ್ತು ಸನ್ ರೈಸರ್ಸ್ ನಡುವೆ ಪ್ರಶಸ್ತಿ ಸುತ್ತಿನ ಕಾದಾಟ ನಡೆಯಲಿದೆ. ಎಸ್‌ಎಟಿ20 ಕ್ರಿಕೆಟ್ ಲೀಗ್‌ನ ಫೈನಲ್‌ನಲ್ಲಿ ಇಬ್ಬರೂ ಮುಖಾಮುಖಿಯಾಗಿದ್ದಾರೆ. ಗುರುವಾರ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ಈಸ್ಟರ್ನ್ ಗೆಲುವು ದಾಖಲಿಸಿತು. ಡರ್ಬನ್ ಸೂಪರ್ ಜೈಂಟ್ಸ್ ಫೈನಲ್‌ನಲ್ಲಿ ತಮ್ಮ ಸ್ಥಾನವನ್ನು ಖಚಿತಪಡಿಸಿದೆ. ಇದೀಗ ಸನ್‌ರೈಸರ್ಸ್ ಮತ್ತು ಸೂಪರ್ ಜೈಂಟ್ಸ್ ತಂಡಗಳು ಪ್ರಶಸ್ತಿಯಿಂದ ಕೇವಲ ಒಂದು ಹೆಜ್ಜೆ ದೂರದಲ್ಲಿವೆ. ಸೆಮಿಫೈನಲ್‌ನಲ್ಲಿ ಹೆನ್ರಿಚ್ ಕ್ಲಾಸೆನ್ ತನ್ನ ಬ್ಯಾಟ್‌ನಿಂದ ಬಿರುಗಾಳಿ ಎಬ್ಬಿಸಿದ ರೀತಿ. ಅವರು ತಮ್ಮ ಅದೇ ಫಾರ್ಮ್ ಅನ್ನು ಫೈನಲ್‌ನಲ್ಲಿ ತೋರಿಸಲು ಮತ್ತು ತಮ್ಮ ತಂಡವನ್ನು ಮೊದಲ ಬಾರಿಗೆ ದಕ್ಷಿಣ ಆಫ್ರಿಕಾದ T20 ಕ್ರಿಕೆಟ್ ಲೀಗ್‌ನ ಚಾಂಪಿಯನ್ ಮಾಡಲು ಪಣ ತೊಟ್ಟಂತೆ ಕಾಣುತ್ತಿದೆ.

ಸನ್ ಬಲ ತುಂಬಲಿದ್ದಾರೆ ಪ್ಲೇಯರ್
ಎಸ್‌ಎಟಿ20 ಕ್ರಿಕೆಟ್ ಲೀಗ್‌ನ ಎಲಿಮಿನೇಟರ್ ಪಂದ್ಯದಲ್ಲಿ ಹೆನ್ರಿಚ್ ಕ್ಲಾಸೆನ್ ಆಡಿದ ಈ ಬಿರುಸಿನ ಇನ್ನಿಂಗ್ಸ್ ನೋಡಿದ ಭಾರತದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಈ ಬಾರಿ ಸನ್‌ರೈಸರ್ಸ್ ತಂಡ 8 ವರ್ಷದ ಪ್ರಶಸ್ತಿ ಗೆಲುವಿನ ಬರವನ್ನು ನೀಗಿಸಿಕೊಳ್ಳಬಹುದು ಎಂದು ಅಭಿಮಾನಿಗಳು ಲೆಕ್ಕಾಚಾರ ಆರಂಭಿಸಿದ್ದಾರೆ. ಗುರುವಾರ, ಕ್ಲಾಸೇನ್ SAT20 ಲೀಗ್‌ನ ಎಲಿಮಿನೇಟರ್ ಪಂದ್ಯದಲ್ಲಿ ಜೋಬರ್ಗ್ ಸೂಪರ್ ಕಿಂಗ್ಸ್‌ನ ಪ್ರತಿಯೊಬ್ಬ ಬೌಲರ್‌ನ ಮನ ಬಂದಂತೆ ಥಳಿಸಿದರು. ಕ್ಲಾಸೆನ್ ಮೈದಾನದ ಸುತ್ತಲೂ ಅದ್ಭುತ ಹೊಡೆತಗಳನ್ನು ಹೊಡೆದರು. ಇವರ ಅಮೋಘ ಬ್ಯಾಟಿಂಗ್ ನೆರವಿನಿಂದ ಸೂಪರ್ ಜೈಂಟ್ಸ್ ಜೈಂಟ್ಸ್ 211 ರನ್ ಗಳಿಸಿತು. ಕಳೆದ ಐಪಿಎಲ್‌ನಲ್ಲೂ ಕ್ಲಾಸೆನ್ ತಮ್ಮ ಬ್ಯಾಟ್‌ನ ಮ್ಯಾಜಿಕ್ ತೋರಿಸಿದ್ದರು. ಕಳೆದ ಐಪಿಎಲ್‌ನಲ್ಲಿ ಅವರು ಸ್ಫೋಟಕ ಶತಕ ಬಾರಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications