ಐಪಿಎಲ್ 2024ಕ್ಕೆ ದಿನಗಣನೆ ಆರಂಭವಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ತಂಡಗಳು ಮೈದಾನದಲ್ಲಿ ಅಭ್ಯಾಸ ನಡೆಸಲಿವೆ. ಈಗಾಗಲೇ ಪಂಜಾಬ್ ಕಿಂಗ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಆಯ್ದ ಆಟಗಾರರು ಮೈದಾನದಲ್ಲಿ ಬೆವರು ಹರಿಸುತ್ತಿದ್ದಾರೆ. ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದ ಆಟಗಾರರು ತಮ್ಮ ತಂಡದ ಪರ ಅಬ್ಬರದ ಪ್ರದರ್ಶನ ನೀಡಿ ತಾವಾಡುವ ಫ್ರಾಂಚೈಸಿ ಮುಖದಲ್ಲಿ ಮಂದಹಾಸ ಮೂಡಿಸಿದ್ದಾರೆ.
ಈ ಬಾರಿ ಎಸ್‌ಆರ್‌ಎಚ್ ತಂಡದ ಸಂಯೋಜನೆಯನ್ನು ನೋಡಿದರೆ ಸಖತ್ ಆಗಿದೆ ಎಂದು ತೋರುತ್ತದೆ. ಆಡುವ ಹನ್ನೋಂದು ಆಟಗಾರರಲ್ಲಿ ಅರ್ಧಕ್ಕೂ ಹೆಚ್ಚು ಆಟಗಾರರು ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ನಾಯಕ ಐಡೇನ್ ಮಾರ್ಕ್ರಾಮ್ ಉತ್ತಮವಾಗಿ ತಮ್ಮ ನಾಯಕತ್ವ ಗುಣಗಳನ್ನು ಎಸ್‌ಎಟಿ20 ಲೀಗ್‌ನಲ್ಲಿ ತೋರಿಸಿದ್ದಾರೆ. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಹ್ಯಾನ್ರಿಚ್ ಕ್ಲಾಸೇನ್ ಸ್ಪೋಟಿಸಲು ಸಜ್ಜಾಗಿದ್ದಾರೆ. ಇವರಂತೆ ದ್ವೀಪ ರಾಷ್ಟ್ರದಲ್ಲಿ ಸನ್‌ರೈಸರ್ಸ್ ತಂಡದ ಆಲ್‌ರೌಂಡರ್ ಅಮೋಘ ಪ್ರದರ್ಶನ ನೀಡಿದ್ದಾರೆ.

ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ನಡುವಿನ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಶ್ರೀಲಂಕಾ ತಂಡ ಗೆಲುವು ಸಾಧಿಸಿದೆ. ಪಲ್ಲಿಕೆಲೆಯಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡ 308 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಇಡೀ ಅಫ್ಘಾನಿಸ್ತಾನ ತಂಡ 153 ರನ್‌ಗಳಿಗೆ ಕುಸಿದಿತ್ತು. ಆದರೆ, ಅಫ್ಘಾನಿಸ್ತಾನ ತಂಡ ರನ್ ಚೇಸ್ ಮಾಡಲು ಕಣಕ್ಕೆ ಇಳಿದಾಗ, ಉತ್ಸಾಹ ತುಂಬಿತ್ತು. ಇವರ ಉತ್ಸಾಹಕ್ಕೆ ಬ್ರೇಕ್ ಹಾಕಿದ್ದೇ ಆತಿಥೇಯ ಸ್ಪಿನ್ ಬೌಲರ್ ವನಿಂದು ಹಸರಂಗಾ.
ವನಿಂದು ಹಸರಂಗಾ ಕೇವಲ 25 ರನ್‌ಗಳ ಅಂತರದಲ್ಲಿ 9 ಅಫ್ಘಾನಿಸ್ತಾನ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್‌ಗೆ ಮರಳಿದರು. 309 ರನ್ ಗಳ ಗುರಿ ಬೆನ್ನತ್ತಿದ ಅಫ್ಘಾನಿಸ್ತಾನ ತಂಡಕ್ಕೆ 31 ರನ್ ಗಳಿದ್ದಾಗ ರಹಮಾನುಲ್ಲಾ ಗುರ್ಬಾಜ್ (8 ರನ್) ರೂಪದಲ್ಲಿ ಮೊದಲ ಹೊಡೆತ ಬಿತ್ತು. ಆದಾಗ್ಯೂ, ಇಬ್ರಾಹಿಂ ಝದ್ರಾನ್ ಮತ್ತು ರಹಮತ್ ಷಾ ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಹೊತ್ತುಕೊಂಡರು. ಇವರಿಬ್ಬರೂ ತಂಡದ ಸ್ಕೋರ್ ಅನ್ನು 100 ಗಡಿ ದಾಟಿಸಿದರು. ಇವರಿಬ್ಬರ ಬ್ಯಾಟಿಂಗ್ ನೋಡಿದ ಅಫ್ಘಾನಿಸ್ತಾನ ಈ ಪಂದ್ಯವನ್ನು ಸುಲಭವಾಗಿ ಗೆಲ್ಲುತ್ತದೆ ಎಂದು ಲೆಕ್ಕಾಚಾರ ಹಾಕಿಕೊಂಡಿತ್ತು. ಆದರೆ ನಂತರ ಶ್ರೀಲಂಕಾದ ಸ್ಟಾರ್ ಸ್ಪಿನ್ನರ್ ವನಿಂದು ಹಸರಂಗ ಕೈಗೆ ಬೌಲ್ ಪಡೆದರು.

ಅಫ್ಘಾನ್ ತಂಡದ ಮೊತ್ತ 128 ರನ್ ಗಳಿಸಿದ್ದಾಗ ಇಬ್ರಾಹಿಂ ಜದ್ರಾನ್ (54 ರನ್) ಅವರನ್ನು ಅಸಿತ ಫೆರ್ನಾಂಡೋ ಔಟ್ ಮಾಡಿದರು. ಇದಾದ ಬಳಿಕ ಹಸರಂಗ ತನ್ನ ಚೆಂಡಿನ ಜಾದೂ ಆರಂಭಿಸಿದರು. ಇದಾದ ಬಳಿಕ ಭರವಸೆ ಮೂಡಿಸಿದ್ದ ರಹಮತ್ ಶಾ 63 ರನ್ ಬಾರಿಸಿ ಪೆವಿಲಿಯನ್ ಹಾದಿ ತೋರಿಸಿದರು. ಹಸರಂಗ ಇಲ್ಲಿಗೆ ನಿಲ್ಲಲಿಲ್ಲ, ಅಫ್ಘಾನ್ ನಾಯಕ ಹಸ್ಮತುಲ್ಲಾ ಶಾಹಿದಿ (9 ರನ್), ಮೊಹಮ್ಮದ್ ನಬಿ (1 ರನ್) ಮತ್ತು ಗುಲ್ಬಾದಿನ್ ನೈಬ್ (0 ರನ್) ಅವರನ್ನೂ ಬೇಗನೆ ಕಟ್ಟಿ ಹಾಕಿದರು.
ವನಿಂದು ಹಸರಂಗ ಚೆಂಡಿನಲ್ಲಿ ಮ್ಯಾಜಿಕ್ ಮಾಡುತ್ತಿರುವುದನ್ನು ಕಂಡು ಶ್ರೀಲಂಕಾ ತಂಡದ ಇತರ ಬೌಲರ್ ಗಳೂ ಉತ್ಸಾಹಗೊಂಡರು. ಇದಾದ ಬಳಿಕ ಒಬ್ಬರ ಹಿಂದೆ ಒಬ್ಬರಂತೆ ಅಫ್ಘಾನ್ ಬ್ಯಾಟ್ಸ್ ಮನ್ ಗಳನ್ನು ಪೆವಿಲಿಯನ್ ಗೆ ಕಳುಹಿಸುವ ಕೆಲಸವನ್ನೂ ಆರಂಭಿಸಿದರು. ಶ್ರೀಲಂಕಾ ತಂಡದ ಈ ಅದ್ಭುತ ಬೌಲಿಂಗ್ ನಿಂದಾಗಿ ಅಫ್ಘಾನಿಸ್ತಾನದ ಕೊನೆಯ 9 ಬ್ಯಾಟ್ಸ್ ಮನ್ ಗಳು ಕೇವಲ 25 ರನ್ ಸೇರಿಸಲಷ್ಟೇ ಶಕ್ತರಾದರು. ಹಸರಂಗ ಅದ್ಬುತವಾಗಿ ಬೌಲಿಂಗ್ ಮಾಡಿ 6.5 ಓವರ್ ಗಳಲ್ಲಿ 27 ರನ್ ನೀಡಿ 4 ವಿಕೆಟ್ ಪಡೆದರು.