IPL 2024: RCB ಪರ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಸ್ಟಾರ್ ಪ್ಲೇಯರ್ಸ್
ಈ ಬಾರಿಯ ಐಪಿಎಲ್‌ನಲ್ಲಿ ಬಹಳಷ್ಟು ಬದಲಾವಣೆಗಳು ಕಾಣ ಸಿಗಲಿವೆ. ಕ್ರಿಕೆಟ್‌ನಲ್ಲಿ ಏನೆಲ್ಲಾ ಬದಲಾದರೂ ಸಹ ಬದಲಾಗದ ಒಂದು ವಿಷಯ ಅಂದರೆ ಅದುವೇ ಫ್ಯಾನ್ಸ್ ಜೋಶ್.. ಇಂದು ಸಹ ಆರ್‌ಸಿಬಿ ತಂಡದ ಪರ ಫ್ಯಾನ್ಸ್ ಹುಚ್ಚೆದ್ದು ಕುಣಿಯುತ್ತಾರೆ. ಆರ್‌ಸಿಬಿ ತಂಡದ ಅಭಿಮಾನಿಗಳಿಗೆ ಈ ಟೀಮ್ ಹಾಗೂ ಆಟಗಾರರು ಬರೀ ಆಟದಂತೆ ನೋಡದೆ ಭಾವನಾತ್ವಕ ಸ್ಥಾನವನ್ನು ನೀಡಿದ್ದಾರೆ. ಹಾಗಿದ್ದರೆ ಅಭಿಮಾನಿಗಳ ಮನದಲ್ಲಿ ಶಾಶ್ವತ ಸ್ಥಾನ ಪಡೆದಿರುವ ಆರ್‌ಸಿಬಿ ಪ್ಲೇಯರ್ಸ್ ಆಟದ ಮೇಲೆ ಒಂದು ಘಲಕ ಇಲ್ಲಿದೆ.
ಐಪಿಎಲ್ ಅಂದರೆ ಅಲ್ಲಿ ಬ್ಯಾಟರ್‌ಗಳ ದರ್ಬಾರ್ ಜೋರಾಗಿರುತ್ತದೆ. ಈ ಚುಟುಕು ಕ್ರಿಕೆಟ್‌ನಲ್ಲಿ ಆರ್‌ಸಿಬಿ ತಂಡದ ಬ್ಯಾಟರ್‌ಗಳು ಸಹ ಧಮಾಕೆದಾರ್ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡಕ್ಕೆ ನೆರವಾಗಿದ್ದಾರೆ. ಅದರಲ್ಲಿ ಪ್ರಮಖ ಆಟಗಾರರು ತಮ್ಮ ಸಿಕ್ಸರ್‌ಗಳಿಂದಲೇ ಹೆಸರುವಾಸಿ. ಆರ್‌ಸಿಬಿ ಪರ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಹಲವು ಸ್ಟಾರ್ ಆಟಗಾರರು ಇದ್ದಾರೆ.

ಕ್ರಿಸ್ ಗೇಲ್
ಆರ್‌ಸಿಬಿ ತಂಡದ ಪರ ಸಿಕ್ಸರ್‌ಗಳ ಬಗ್ಗೆ ಮಾತನಾಡುವುದಾದರೆ, ಯುನಿವರ್ಸಲ್ ಬಾಸ್ ಕ್ರಿಸ್ ಗೇಲ್ ಹೆಸರನ್ನು ಮರೆಯಲು ಸಾಧ್ಯವೇ ಇಲ್ಲ. ಹಲವು ಪಂದ್ಯಗಳಲ್ಲಿ ತಮ್ಮ ಸುನಾಮಿ ಬ್ಯಾಟಿಂಗ್‌ನಿಂದಲೇ ಗೆಲವು ತಂದುಕೊಟ್ಟ ಆಟಗಾರ. ಇವರು ಐಪಿಎಲ್‌ನಲ್ಲಿ 142 ಪಂದ್ಯಗಳನ್ನು ಆಡಿದ್ದು 357 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಇವರು 2021 ಋತುವಿನಲ್ಲಿ 59 ಸಿಕ್ಸರ್ ಬಾರಿಸಿ ಅಬ್ಬರಿಸಿದ್ದರು.
ಕ್ರಿಸ್ ಗೇಲ್ 2013ರಲ್ಲಿ ಚಿನ್ನಸ್ವಾಮಿ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಪುಣೆ ವಾರಿಯರ್ಸ್ ವಿರುದ್ಧ ಅಬ್ಬರದ ಆಟವನ್ನು ಆಡಿ ಮನ ಸೆಳೆದಿದ್ದರು. ಅಲ್ಲದೆ ಆ ಒಂದೇ ಇನಿಂಗ್ಸ್‌ನಲ್ಲಿ ಗೇಲ್ 17 ಸಿಕ್ಸರ್ ಸಿಡಿಸಿದ್ದಾರೆ.

ಎಬಿಡಿ
ಕ್ರಿಸ್ ಗೇಲ್ ಆದ ಮೇಲೆ ಈ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಇನ್ನೊಂದು ಹೆಸರು, ದಕ್ಷಿಣ ಆಪ್ರಿಕಾದ ಸ್ಟಾರ್ ಆಟಗಾರ ಎಬಿ ಡಿವಿಲಿಯರ್ಸ್. ಮಿಸ್ಟರ್ 360 ಡಿಗ್ರಿ ಎಂದೇ ಖ್ಯಾತಿ ಪಡೆದಿರುವ ಇವರು ತಮ್ಮ ಮುಗಿಲೆತ್ತರದ ಸಿಕ್ಸರ್‌ಗೂ ಹೆಸರುವಾಸಿ. ಇವರು ಐಪಿಎಲ್‌ನಲ್ಲಿ 184 ಪಂದ್ಯಗಳಲ್ಲಿ 251 ಸಿಕ್ಸರ್ ಸಿಡಿಸಿದ್ದಾರೆ. ಗುಜರಾತ್ ಲಯನ್ಸ್ ವಿರುದ್ಧ 2012ರಲ್ಲಿ ನಡೆದ ಒಂದೇ ಪಂದ್ಯದಲ್ಲಿ ಎಬಿಡಿ ಬರೋಬ್ಬರಿ 12 ಸಿಕ್ಸರ್ ಬಾರಿಸಿದ್ದಾರೆ.
ವಿರಾಟ್ ಕೊಹ್ಲಿ
ಈ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಮೂರನೇ ಹೆಸರು ವಿರಾಟ್ ಕೊಹ್ಲಿ. ಇವರು ಸಹ ಐಪಿಎಲ್‌ನಲ್ಲಿ ಸಿಕ್ಸರ್‌ಗಳನ್ನು ಬಾರಿಸಿ ಅಭಿಮಾನಿಗಳನ್ನು ರಂಜಿಸಿದ್ದಾರೆ. ವಿರಾಟ್ 237 ಪಂದ್ಯಗಳಲ್ಲಿ 234 ಸಿಕ್ಸರ್ ದಾಖಲಿಸಿದ್ದಾರೆ.

ಗ್ಲೇನ್ ಮ್ಯಾಕ್ಸ್‌ವೆಲ್
ಗ್ಲೇನ್ ಮ್ಯಾಕ್ಸ್‌ವೆಲ್ ಆಟ ಎಂತಹದ್ದು ಎಂದು ಇತ್ತೀಚಿಗೆ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ ನೋಡಿದವರಿಗೆ ತಿಳಿದಿರುತ್ತದೆ. ಏಕಾಂಗಿಯಾಗಿ ಪಂದ್ಯವನ್ನು ಗೆಲ್ಲಿಸಿಕೊಡುವ ಕ್ಷಮತೆಯನ್ನು ಹೊಂದಿದ ಪ್ಲೇಯರ್. ಇವರು ಅಂಗಳದಲ್ಲಿ ತಳವೂರಿ ನಿಂತರೇ ಬೌಂಡರಿ ಸಿಕ್ಸರ್‌ಗಳ ಸುರಿಮಳೆ ಸುರಿಯುತ್ತದೆ. ಇವರು ಸಹ ಆರ್‌ಸಿಬಿ ಪರ ಮಿಡ್ಲ್ ಆರ್ಡರ್‌ನಲ್ಲಿ ಬ್ಯಾಟ್ ಮಾಡುವ ಆಟಗಾರ. ಇವರು ಆಡಿದ 42 ಪಂದ್ಯಗಳಲ್ಲಿ 67 ಸಿಕ್ಸರ್ ಸಿಡಿಸಿ ತಮ್ಮ ಕ್ಷಮತೆಯನ್ನು ಸಾಬೀತು ಪಡಿಸಿದ್ದಾರೆ.

ಫಾಫ್ ಡುಪ್ಲೇಸಿಸ್
ಸದ್ಯ ಆರ್‌ಸಿಬಿ ತಂಡದ ನಾಯಕ ಫಾಫ್ ಡುಪ್ಲೇಸಿಸ್ ಸಹ ಸಿಕ್ಸರ್‌ಗಳ ವಿಚಾರದಲ್ಲಿ ಹಿಂದೆ ಬೀಳುವ ಆಟಗಾರನಲ್ಲ. ಇವರು ಆರ್‌ಸಿಬಿ ಪರ ಆಡಿದ 30 ಪಂದ್ಯಗಳಲ್ಲಿ 49 ಸಿಕ್ಸರ್ ಸಿಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications