ಐಪಿಎಲ್ ಟೂರ್ನಿಗೆ ದಿನಗಣನೆ ಆರಂಭವಾಗಿದೆ. ಹಲವು ತಂಡಗಳು ಈ ಟೂರ್ನಿಗೆ ಈಗಿನಿಂದಲೇ ಕಸರತ್ತು ನಡೆಸಿವೆ. ಆರ್‌ಸಿಬಿ ಸಹ ಚೊಚ್ಚಲ ಕಪ್ ಗೆಲುವಿನ ಅಭಿಯಾನವನ್ನು ಆರಂಭಿಸಲು ಎದುರು ನೋಡುತ್ತಿದೆ. ಈ ಬಾರಿ ತಂಡ ಮೊದಲಿಗಿಂತಲೂ ಸ್ಟ್ರಾಂಗ್ ಆಗಿ ಕಾಣಿಸಿಕೊಳ್ಳುತ್ತಿದೆ. ಆದರೆಈ ಒಬ್ಬ ಪ್ಲೇಯರ್‌ನನ್ನು ತಂಡಕ್ಕೆ ಸೇರಿಸಿಕೊಳ್ಳಲು ಆರ್‌ಸಿಬಿ ಪ್ಲ್ಯಾನ್ ಮಾಡಿಕೊಂಡಿದೆ.
ಐಪಿಎಲ್ ಹರಾಜಿನಲ್ಲಿ ಅನ್‌ಸೋಲ್ಡ್ ಆಗಿ ಉಳಿದಿರುವ ಸ್ಟಾರ್ ಆಟಗಾರ, ದೇಶೀಯ ಹಾಗೂ ರಾಷ್ಟ್ರೀಯ ತಂಡದ ಪರ ಸ್ಥಿರ ಪ್ರದರ್ಶನ ನೀಡಿದ್ದಾರೆ. ಅಲ್ಲದೆ ತಮ್ಮ ಐಪಿಎಲ್‌ನಲ್ಲಿ ಯಾವುದೇ ಮಾಲೀಕ ಖರೀದಿಸದಕ್ಕೆ ಅಂಗಳದಿಂದಲೇ ಉತ್ತರ ನೀಡಿದ್ದಾರೆ. ಈ ಯುವ ಆಟಗಾರನ ಆಟದ ಶೈಲಿಯನ್ನು ಕಂಡು ಈಗ ಎಲ್ಲ ಫ್ರಾಂಚೈಸಿಗಳು ಕೈ ಕೈ ಹಿಚಿಕೊಳ್ಳುವಂತೆ ಆಗಿದೆ.

ಹಾಗಿದ್ದರೆ ಆ ಆಟಗಾರ ಯಾರು? ಏತಕ್ಕಾಗಿ ಅವನಿಗೆ ಇಷ್ಟು ಬಿಲ್ಡ್ ಏಕೆ ಅನಿಸಬಹುದು. ಆದರೆ ಒಮ್ಮೆ ಹರಾಜಿನ ಅಂಗಳದಿಂದ ಹೊರ ಹೋಗಿ ತನ್ನ ಸಾಮರ್ಥ್ಯವನ್ನು ಪ್ರೂವ್ ಮಾಡಿ ಎಲ್ಲರ ನಿರ್ಧಾರ ತಪ್ಪು ಎಂದು ಸಾಬೀತು ಪಡಿಸಿದ ಆಟಗಾರನೇ ಸದ್ಯ ಟೀಮ್ ಇಂಡಿಯಾದಲ್ಲಿ ಸನೆಷನ್ ಕ್ರಿಯೇಟ್ ಮಾಡಿರುವ ಸರ್ಫರಾಜ್ ಖಾನ್..
ಭಾರತ ಮತ್ತು ಇಂಗ್ಲೆಂಡ್ ನಡುವೆ ಟೆಸ್ಟ್ ಸರಣಿಯ ಮೂರನೇ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಸರ್ಫರಾಜ್ ಖಾನ್ ಟೀಂ ಇಂಡಿಯಾಕ್ಕೆ ಪದಾರ್ಪಣೆ ಮಾಡಿದ್ದಾರೆ. ಸರ್ಫರಾಜ್ ತನ್ನ ಚೊಚ್ಚಲ ಪಂದ್ಯದಲ್ಲಿ ಅದ್ಭುತವಾಗಿ ಬ್ಯಾಟಿಂಗ್ ಮಾಡುವ ಮೂಲಕ ಎಲ್ಲರನ್ನು ಆಕರ್ಷಿಸಿದರು ಮತ್ತು ಅವರು 62 ರನ್‌ಗಳ ಬಿರುಸಿನ ಇನ್ನಿಂಗ್ಸ್ ಆಡಿದರು.
ಸಾಕಷ್ಟು ಕಠಿಣ ಪರಿಶ್ರಮ ಮತ್ತು ಸುದೀರ್ಘ ಕಾಯುವಿಕೆಯ ನಂತರ, ಸರ್ಫರಾಜ್ ಖಾನ್ ಅವರು ರೋಹಿತ್ ಶರ್ಮಾ ನಾಯಕತ್ವದಲ್ಲಿ ಆಡಲು ಅವಕಾಶ ಪಡೆದರು. ಸಿಕ್ಕ ಅವಕಾಶದಲ್ಲಿ ತಮ್ಮ ಶಕ್ತಿಯನ್ನು ತೋರಿಸಲು ಪ್ರಾರಂಭಿಸಿದರು. ಸರ್ಫರಾಜ್ ಖಾನ್ ಅವರ ವೇಗದ ಬ್ಯಾಟಿಂಗ್ ನೋಡಿ ಎಲ್ಲರೂ ಅಚ್ಚರಿಗೊಂಡಿದ್ದಾರೆ. ಈ ಪಂದ್ಯದಲ್ಲಿ ಅಮೋಘ ಫಾರ್ಮ್ ನಲ್ಲಿದ್ದ ಅವರು ಸುಲಭವಾಗಿ ಶತಕ ಬಾರಿಸಬಹುದಿತ್ತು ಆದರೆ ಜಡೇಜಾ ಅವರ ತಪ್ಪಿನಿಂದಾಗಿ ರನೌಟ್ ಗೆ ಬಲಿಯಾದರು.

ಈ ಪಂದ್ಯ ಸರ್ಫರಾಜ್ ಖಾನ್ ಅವರ ಕನಸಿನ ಚೊಚ್ಚಲ ಪಂದ್ಯಕ್ಕಿಂತ ಕಡಿಮೆ ಇರಲಿಲ್ಲ. ತಂದೆಯ ಮುಂದೆ ತನ್ನ ಕನಸನ್ನು ನನಸು ಮಾಡುವ ಮೂಲಕ ಇಡೀ ಕುಟುಂಬ ಹೆಮ್ಮೆ ಪಡುವಂತೆ ಮಾಡಿದರು. ಈ ವರ್ಷದ ಐಪಿಎಲ್‌ಗಾಗಿ ಯಾವುದೇ ತಂಡದ ಸರ್ಫರಾಜ್ ಖಾನ್ ಅವರನ್ನು ಖರೀದಿಸುವ ಗೋಜಿಗೆ ಹೋಗಿರಲಿಲ್ಲ. ಐಪಿಎಲ್ 2024 ರ ಹರಾಜಿನ ಸಮಯದಲ್ಲಿ ಸರ್ಫರಾಜ್ ಖಾನ್ ಅತ್ಯಂತ ಕಡಿಮೆ ಮೂಲ ಬೆಲೆಗೆ ಅಖಾಡ ಪ್ರವೇಶಿಸಿದರು. ಡೆಲ್ಲಿ ಕ್ಯಾಪಿಟಲ್ಸ್ ತಂಡ ಅವರನ್ನು ಬಿಡುಗಡೆ ಮಾಡಿತ್ತು.
ಸರ್ಫರಾಜ್ ಖಾನ್ ಐಪಿಎಲ್ 2024 ರ ಹರಾಜಿನಲ್ಲಿ ಕೇವಲ 20 ಲಕ್ಷ ರೂ ಮೂಲ ಬೆಲೆಗೆ ಬಿಡ್ ಅಂಗಳಕ್ಕೆ ಎಂಟ್ರಿ ನೀಡಿದರು. ಆದರೆ ಯಾವುದೇ ತಂಡವು ಅವರಿಗೆ ಬೆಲೆ ನೀಡಲಿಲ್ಲ. ಈಗ ಈ ತಂಡಗಳು ಸರ್ಫರಾಜ್ ಅವರ ದೇಶೀಯ ಪ್ರದರ್ಶನದ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರ ಪ್ರದರ್ಶನವನ್ನು ನೋಡಿ ಪಶ್ಚಾತ್ತಾಪ ಪಡುವಂತಾಗಿದೆ.
ಆರ್‌ಸಿಬಿ ಈ ಪ್ಲೇಯರ್‌ನನ್ನು ತನ್ನ ತಂಡಕ್ಕೆ ಸೇರಿಸಿಕೊಳ್ಳಲು ಪ್ಲ್ಯಾನ್ ಮಾಡಿಕೊಳ್ಳುತ್ತಿದೆ. ತಂಡದಲ್ಲಿ ಗಾಯಾಳು ಆಟಗಾರರ ಸಂಖ್ಯೆ ಹೆಚ್ಚುತ್ತಿದ್ದ ಅವರ ಬದಲಿಗೆ ಸರ್ಫರಾಜ್ ಆರ್‌ಸಿಬಿ ತಂಡ ಸೇರಬಹುದು. ಅಂದಹಾಗೆ ಆರ್‌ಸಿಬಿಗೆ ಸರ್ಫರಾಜ್‌ಗೆ ಸಂಬಂಧ ವಿದೆ. ಇದಕ್ಕೂ ಮೊದಲು ಸರ್ಫರಾಜ್ ಆರ್‌ಸಿಬಿ ಪರ ಆಡಿ ಸೈ ಎನಿಸಿಕೊಂಡಿದ್ದಾರೆ.
ಇಂಗ್ಲೆಂಡ್ ವಿರುದ್ಧ ಟೆಸ್ಟ್‌ಗೆ ಪದಾರ್ಪಣೆ ಮಾಡಿದ ನಂತರ ಸರ್ಫರಾಜ್ ಖಾನ್‌ಗೆ ಬೇಡಿಕೆ ಸಾಕಷ್ಟು ಹೆಚ್ಚಿದೆ. ಯಾವುದೇ ತಂಡವು ಅವರನ್ನು ಐಪಿಎಲ್‌ಗೆ ತಮ್ಮ ತಂಡದಲ್ಲಿ ಸೇರಿಸಿಕೊಳ್ಳಲು ಬಯಸುತ್ತದೆ. ಈ ಸಂದರ್ಭದಲ್ಲಿ, ಸರ್ಫರಾಜ್ ಖಾನ್ ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ಬಂದರೆ, ಅವರ ಮೂಲ ಬೆಲೆ ಈಗ ಕನಿಷ್ಠ 50 ಲಕ್ಷ ರೂ ಆಗಿರುತ್ತದೆ. ಇದು ಕಳೆದ ಬಾರಿಗಿಂತ ದ್ವಿಗುಣವಾಗಿದೆ ಏಕೆಂದರೆ ನಿಯಮಗಳ ಪ್ರಕಾರ, ಯಾವುದೇ ಅಂತಾರಾಷ್ಟ್ರೀಯ ಆಟಗಾರನನ್ನು ಕಡಿಮೆ ಬೆಲೆಗೆ ಖರೀದಿಸಲಾಗುವುದಿಲ್ಲ. ಮೂಲ ಬೆಲೆ ರೂ 50 ಲಕ್ಷ. ಪ್ರಸ್ತುತ ಇರಬಹುದು ಮತ್ತು ಸರ್ಫರಾಜ್ ಖಾನ್ ಈಗ ಅಂತಾರಾಷ್ಟ್ರೀಯ ಆಟಗಾರ.