IPL 2024: ಈ ಬಾರಿ ಕೆಕೆಆರ್ vs ಆರ್‌ಸಿಬಿ ಫೈನಲ್ ಎನ್ನುತ್ತಿವೆ ಈ ಅಂಕಿ-ಅಂಶಗಳು
ಮೇ 22 ಬುಧವಾರ, 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ದೊಡ್ಡ ತಿರುವು ಪಡೆದುಕೊಂಡಿದೆ. 7 ಸೋಲಿನ ಬಳಿಕ ಸತತ 6 ಪಂದ್ಯಗಳನ್ನು ಗೆಲ್ಲುವ ಮೂಲಕ ಆರ್‌ಸಿಬಿ ಪ್ಲೇ ಆಫ್‌ಗೆ ಆರ್ಹತೆ ಪಡೆದಿರುವುದು ವಿಶೇಷವಾಗಿದೆ.
ನಾಕೌಟ್ ಪಂದ್ಯದಲ್ಲಿ ಸಿಎಸ್‌ಕೆ ವಿರುದ್ಧ ಗೆದ್ದ ನಂತರ ಆರ್‌ಸಿಬಿ ಪ್ಲೇ ಆಫ್‌ಗೆ ಆರ್ಹತೆ ಪಡೆದಿತ್ತು. ಇಂದು (ಮೇ 22) ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಐಪಿಎಲ್ 2024ರ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ (ಆರ್‌ಆರ್) ವಿರುದ್ಧ ಆರ್‌ಸಿಬಿ ಸೆಣಸಾಡುತ್ತಿದೆ.

ಆರ್‌ಆರ್ ಎದುರು ಆರ್‌ಸಿಬಿ ಜಯಗಳಿಸಿದರೆ ಫೈನಲ್ ತಲುಪು ಹಾದಿ ಸುಗಮವಾಗಲಿದೆ. ಏಕೆಂದರೆ ಐಪಿಎಲ್‌ನ ಈ ಮೂರು ಆವೃತ್ತಿಗಳು ಆರ್‌ಸಿಬಿ ಫೈನಲ್ ಆಡುವುದು ಪಕ್ಕ ಎನ್ನುತ್ತಿವೆ. ಅಲ್ಲದೆ ಈ ಮೂರು ಆವೃತ್ತಿಯ ಅಂಕಿ-ಅಂಶಗಳನ್ನು ಈ ಋತುವಿಗೆ ಹೋಲಿಸಿದರೆ ಒಂದೇ ರೀತಿಯಲ್ಲಿ ಕಂಡು ಬರುತ್ತಿದೆ.
ಆರ್‌ಸಿಬಿ ಸತತವಾಗಿ 5 ಕ್ಕಿಂತ ಹೆಚ್ಚಿನ ಪಂದ್ಯಗಳನ್ನು ಗೆದ್ದಾಗ ಫೈನಲ್
2009 ರಲ್ಲಿ ಟೀಮ್ ಇಂಡಿಯಾ ಮಾಜಿ ಆಟಗಾರ ಅನಿಲ್ ಕುಂಬ್ಳೆ ನೇತೃತ್ವದ ಆರ್‌ಸಿಬಿ ಲೀಗ್ ಹಂತದ ಪಂದ್ಯಗಳಲ್ಲಿ ಆನೇಕಗಳನ್ನು ಎದುರಿಸಿತ್ತು. ಪರಿಣಾಮ
ಮೊದಲ 10 ಪಂದ್ಯಗಳಲ್ಲಿ ಕೇವಲ 4 ರಲ್ಲಿ ಮಾತ್ರ ಗೆದ್ದಿತು.
ಬಳಿಕ ಸೆಮಿಫೈನಲ್‌ನಲ್ಲಿ ಸಿಎಸ್‌ಕೆ ತಂಡವನ್ನು ಸೋಲಿಸುವ ಮೂಲಕ ತಮ್ಮ ಗೆಲುವಿನ ಸಂಖ್ಯೆಯನ್ನು ಐದಕ್ಕೆ ಏರಿಕೆ ಮಾಡಿಕೊಂಡು ಫೈನಲ್‌ಗೆ ಲಗ್ಗೆ ಇಟ್ಟಿತ್ತು. ದುರದೃಷ್ಟವಶಾತ್, ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಸ್ಟೇಡಿಯಂನಲ್ಲಿ ನಡೆದ ಫೈನಲ್‌ನಲ್ಲಿ ಡೆಕ್ಕನ್ ಚಾರ್ಜರ್ಸ್ ( ಇಂದು ಸನ್ ರೈಸರ್ಸ್ ಹೈದರಾಬಾದ್) ವಿರುದ್ಧ ಆರ್‌ಸಿಬಿ 6 ರನ್‌ಗಳಿಂದ ಸೋಲುವ ಮೂಲಕ ಟ್ರೋಫಿ ಕೈ ಚೆಲ್ಲಿತ್ತು.

2011ರ ಐಪಿಎಲ್‌ನಲ್ಲಿ ಆರ್‌ಸಿಬಿ ಮೊದಲಾರ್ಧದಲ್ಲಿ ಐದು ಪಂದ್ಯಗಳಲ್ಲಿ ಕೇವಲ ಒಂದು ಗೆಲುವಿನೊಂದಿಗೆ ಕಳಪೆ ಆರಂಭ ಪಡೆದಿತ್ತು. ಬಳಿಕ ಗೆಲುವಿನ ಲಯಕ್ಕೆ ಮರಳಿದ ಆರ್‌ಸಿಬಿ ಲೀಗ್ ಹಂತದಲ್ಲಿ ಗಮನಾರ್ಹ ಗೆಲುವಿನ ಯಾತ್ರೆ ನಡೆಸಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದರು.
ಆದರೆ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಹಣಾಹಣಿಯಲ್ಲಿ ಸಿಎಸ್‌ಕೆ ಎದುರಿಸಿ ಆರ್‌ಸಿಬಿ 58 ರನ್‌ಗಳಿಂದ ಹೀನಾಯವಾಗಿ ಸೋತಿತ್ತು. ಹೀಗಾಗಿ ಎರಡನೇ ಬಾರಿಯೂ ಟ್ರೋಫಿ ಗೆಲ್ಲಲು ಸಾಧ್ಯವಾಗಲಿಲ್ಲ.
2016ರ ಐಪಿಎಲ್ ಋತುವಿನಲ್ಲಿ ಸೋಲು ಗೆಲುವುನೊಂದಿಗೆ ಆರಂಭ ಪಡೆದ ಆರ್‌ಸಿಬಿ ಮೊದಲ 10 ಪಂದ್ಯಗಳಲ್ಲಿ ಕೇವಲ 4 ಪಂದ್ಯಗಳನ್ನು ಗೆದ್ದು ಟೂರ್ನಿಯಿಂದ ಹೊರ ಬೀಳುವ ಪರಿಸ್ಥಿತಿ ತಲುಪಿತ್ತು.

ನಂತರ ಲೀಗ್ ಹಂತದಲ್ಲಿ ನಿರ್ಣಾಯಕ 4 ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ಆರ್‌ಸಿಬಿ ನೀಡಿ ಪ್ಲೇ ಆಫ್ ಪ್ರವೇಶಿಸಿತ್ತು. ಕ್ವಾಲಿಫೈಯರ್ 1 ರಲ್ಲಿ ಗುಜರಾತ್ ಲಯನ್ಸ್ ಅನ್ನು ಸೋಲಿಸುವ ಮೂಲಕ ಆರ್‌ಸಿಬಿ ಸತತ ಗೆಲುವನ್ನು ಪಡೆದು ಫೈನಲ್ ತಲುಪಿತ್ತು.
ಮತ್ತೊಮ್ಮೆ ಫೈನಲ್‌ನಲ್ಲಿ ಆರ್‌ಸಿಬಿ ಮತ್ತು ಎಸ್‌ಆರ್‌ಹೆಚ್ ಮುಖಾಮುಖಿಯಾಗಿತ್ತು. ಆದರೆ ಕೊನೆಯ ಹಂತದಲ್ಲಿ ಆರ್‌ಸಿಬಿ ಮುಗ್ಗರಿಸಿತ್ತು. ಹೀಗಾಗಿ ಕಪ್ ಗೆಲ್ಲುವ ಮೂರನೇ ಅವಕಾಶ ಕೂಡ ಆರ್‌ಸಿಬಿ ಪಾಲಿಗೆ ಮುಚ್ಚಿತ್ತು.
ಇದೀಗ ಈ ಅಂಕಿ-ಅಂಶಗಳನ್ನು ಗಮನಿಸಿದರೆ ಆರ್‌ಸಿಬಿ ಸತತ 5 ಅಥವಾ ಅದಕ್ಕಿಂತ ಹೆಚ್ಚು ಪಂದ್ಯಗಳನ್ನು ಗೆದ್ದ ನಂತರ ಐಪಿಎಲ್ ಫೈನಲ್‌ಗೆ ತಲುಪಿದ
ಮೂರು ನಿದರ್ಶನ ಕಾಣಬಹುದಾಗಿದೆ. ಆದರೆ ಪ್ರಶಸ್ತಿಯನ್ನು ಎತ್ತಿಹಿಡಿಯುವಲ್ಲಿ ವಿಫವಾಗಿದೆ. ಈ ಋತುವಿನಲ್ಲೂ ಆರ್‌ಸಿಬಿ ಸತತವಾಗಿ ಗೆಲುವು ಸಾಧಿಸಿದೆ.
ಇಂದು ನಡೆಯಲಿರುವ ಎಲಿಮಿನೇಟರ್‌ನಲ್ಲಿ ಆರ್‌ಆರ್ ಎದುರು ಗೆದ್ದು ನಂತರ ಕ್ವಾಲಿಫೈಯರ್ 2 ನಲ್ಲಿ ಎಸ್‌ಆರ್‌ಹೆಚ್ ಅನ್ನು ಸೋಲಿಸುವ ಮೂಲಕ ಕೆಕೆಆರ್ ವಿರುದ್ಧ ಆರ್‌ಸಿಬಿ ಫೈನಲ್ ಆಡಲಿದೆ ಎಂಬುದು ಅಭಿಮಾನಿಗಳ ಲೆಕ್ಕಚಾರವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications