ಒಂದು ಟೂರ್ನಿ ಆರಂಭವಾಗುತ್ತದೆ ಎಂದರೆ ಸಾಕು ತಮ್ಮ ತಂಡಗಳ ಬಗ್ಗೆ ಅಭಿಮಾನಿಗಳು ಲೆಕ್ಕಾಚಾರ ಆರಂಭವಾಗುತ್ತವೆ. ವಿಶ್ವ ಮಟ್ಟದ ಟೂರ್ನಿಗಳಾದರೆ ಹೆಸರಾಂತ ಜ್ಯೋತಿಷಿಗಳು ತಮ್ಮ ಅಭಿಪ್ರಾಯವನ್ನು ಮೊದಲೇ ತಿಳಿಸು ಬಿಡುತ್ತಾರೆ. ಅಲ್ಲದೆ ಈ ಬಾರಿ ಚಾಂಪಿಯನ್ ಪಟ್ಟ ಯಾರಿಗೆ ಸೇರಲಿದೆ ಎಂಬ ಬಗ್ಗೆಯೂ ಭವಿಷ್ಯ ನುಡಿದಿರುತ್ತಾರೆ. ಈ ರೀತಿಯ ಭವಿಷ್ಯಗಳನ್ನು ನಾವು ನೀವೆಲ್ಲಾ ಫಿಫಾ ವಿಶ್ವಕಪ್ ವೇಳೆ ಹಾಗೂ ಏಕದಿನ ವಿಶ್ವಕಪ್ ಹಾಗೂ ಟಿ20 ವಿಶ್ವಕಪ್ ವೇಳೆ ಕಾಣಿಸೋದು ಸಹಜ.
ಈಗ ಕಾಲ ಬದಲಾಗಿದೆ. ತಂತ್ರಜ್ಞಾನ ಮುಂದುವರೆದಂತೆ ಜ್ಯೋತಿಷ್ಯ ಕ್ಷೇತ್ರಕ್ಕೂ ಕೈ ಇಟ್ಟಿದೆ. ಏನಪ್ಪಾ ಜ್ಯೋತಿಷ್ಯ ತಂತ್ರಜ್ಞಾನ ಎಂದು ಹೇಳುತ್ತಿದ್ದಾರೆ ಎಂಬ ಗೊಂದಲ ನಿಮ್ಮಲ್ಲಿದ್ದರೆ ಇಲ್ಲಿದೆ ನೋಡಿ ಉತ್ತರ. ಈ ಜ್ಯೋತಿಷ್ಯದ ಪ್ರಕಾರ ಯಾವೆಲ್ಲಾ ತಂಡಗಳ ಸ್ಥಾನ ಈ ಬಾರಿ ಐಪಿಎಲ್ 2024ರಲ್ಲಿ ಹೇಗೆ ಇರಲಿದೆ ಎಂದು ಸ್ಪಷ್ಟ ಪಡಿಸಿದೆ. ಹಾಗಿದ್ರೆ ಈ ಬಗ್ಗೆ ಭವಿಷ್ಯ ನುಡಿದಿದ್ದು ಯಾರು? ಅಲ್ಲದೆ ಆರ್‌ಸಿಬಿ ಈ ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸುತ್ತಾ ಎಂಬ ಬಗ್ಗೆ ವರದಿ ಇಲ್ಲಿದೆ.

ಮಾರ್ಚ್ 22ರಿಂದ ಚೆನ್ನೈ ಚೆಪಾಕ್ ಅಂಗಳದಲ್ಲಿ ಐಪಿಎಲ್ ಆರಂಭವಾಗಲಿದೆ. ಈ ಟೂರ್ನಿಗೂ ಮುನ್ನವೇ ಸೂಪರ್ ಕಂಪ್ಯೂಟರ್ ಒಂದು ಭವಿಷ್ಯ ನುಡಿದ್ದಿದ್ದು ಎಲ್ಲ ಕಡೆ ಚರ್ಚೆಗೆ ಗ್ರಾಸವಾಗಿದೆ. ಐಪಿಎಲ್ ಆರಂಭಕ್ಕೂ ಮುನ್ನವೇ ಸೂಪರ್‌ಕಂಪ್ಯೂಟರ್ AI ಉಪಕರಣದ ಸಹಾಯದಿಂದ ಅಂತಿಮ ಪಾಯಿಂಟ್‌ಗಳ ಪಟ್ಟಿಯಲ್ಲಿ ದೊಡ್ಡ ಭವಿಷ್ಯ ನುಡಿದಿದೆ. ಈ ಭವಿಷ್ಯವಾಣಿಯಲ್ಲಿ, ನಂಬರ್ ಒನ್ ತಂಡವನ್ನು ಮಾತ್ರ ಉಲ್ಲೇಖಿಸಲಾಗಿಲ್ಲ, ಆದರೆ ಎಲ್ಲಾ ತಂಡಗಳ ಅಂಕಗಳೊಂದಿಗೆ ನಿವ್ವಳ ರನ್ ದರಗಳನ್ನು ಸಹ ಉಲ್ಲೇಖಿಸಲಾಗಿದೆ.
ಸೂಪರ್‌ಕಂಪ್ಯೂಟರ್‌ನ ಭವಿಷ್ಯ ಲಕ್ಷಾಂತರ ಫ್ಯಾನ್ಸ್ ದೃಷ್ಟಿ ಕದ್ದಿದೆ. ಕಂಪ್ಯೂಟರ್ ತನ್ನ ಭವಿಷ್ಯವಾಣಿಯಲ್ಲಿ ಹೇಳುವ ನಂಬರ್ ಒನ್ ತಂಡವನ್ನು ಅಭಿಮಾನಿಗಳು ನಂಬಲು ತಯಾರಿಲ್ಲ. ಎಲ್ಲ ತಂಡಗಳ ಅಭಿಮಾನಿಗಳು ಸಹ ಈ ಬಾರಿ ನಮ್ಮ ತಂಡ ಚಾಂಪಿಯನ್ ಪಟ್ಟಕ್ಕೇರಬೇಕು ಎಂದೇ ಬಯುಸುತ್ತಾರೆ. ಈ ಸಮಯದಲ್ಲಿ ಸೂಪರ್ ಕಂಪ್ಯೂಟರ್ ನುಡಿದಿರುವ ಭವಿಷ್ಯ, ಅಭಿಮಾನಿಗಳಿಗೆ ಅರಿಗಿಸಿಕೊಳ್ಳಲು ಕೊಂಚ ಸಮಯ ಹಿಡಿಯುತ್ತಿದೆ. ಸೂಪರ್ ಕಂಪ್ಯೂಟರ್ ನುಡಿದ ಭವಿಷ್ಯ ನಿಜವಾಗುತ್ತಾ ಎಂದು ತಿಳಿಯಲು ಸುಮಾರು 60 ದಿನಗಳ ಕಾಲ ಕಾಯಲೇ ಬೇಕು. ಆದರೆ ಐಪಿಎಲ್ ಆರಂಭಕ್ಕೂ ಮುನ್ನವೇ ಸೂಪರ್ ಕಂಪ್ಯೂಟರ್ ಇದೇ ಮೊದಲ ಬಾರಿಗೆ ದೊಡ್ಡ ಭವಿಷ್ಯ ನುಡಿದಿದೆ.

ಸೂಪರ್ ಕಂಪ್ಯೂಟರ್ ಯಾವೆಲ್ಲಾ ಅಂಶಗಳ ಆಧಾರದ ಮೇಲೆ ಪಾಂಯಿಟ್ಸ್ ಟೇಬಲ್ ಸಿದ್ಧ ಮಾಡಿದೆ?
- ಈ ಭವಿಷ್ಯವಾಣಿಯನ್ನು ಹೇಳಲು ಹಲವು ಫ್ಯಾಕ್ಟ್‌ಗಳನ್ನು ಸೂಪರ್ ಕಂಪ್ಯೂಟರ್ ಚೆಕ್ ಮಾಡಿಕೊಂಡಿದೆ.
- ಪ್ರತಿ ತಂಡಕ್ಕೂ ಬೇರೆ ಬೇರೆ ರನ್ ರೇಟ್‌ಗಳನ್ನು ನೀಡಲಾಗಿದೆ.
- ಈ ಹಿಂದಿನ ಆವೃತ್ತಿಗಳಲ್ಲಿ ತಂಡ ನೀಡಿದ ಪ್ರದರ್ಶನ, ಆಡುವಾಗ ಬಿದ್ದ ವಿಕೆಟ್ ಹಾಗೂ ಕಬಳಿಸಿದ ವಿಕೆಟ್‌ಗಳನ್ನು ಲೆಕ್ಕಾಚಾರ ಹಾಕಲಾಗಿದೆ.
- ಪ್ರತಿ ಪಂದ್ಯದ ಸೋಲು ಹಾಗೂ ಗೆಲುವಿನ ಲೆಕ್ಕಾಚಾರವನ್ನು ಗಮನದಲ್ಲಿಟ್ಟುಕೊಂಡು ಹಾಗೂ ಸ್ಕೋರ್ ಊಹಿಸಿ ಈ ಭವಿಷ್ಯ ನುಡಿಯಲಾಗಿದೆ.
- ಪ್ರತಿ ತಂಡದ ಬಲ ಹಗೂ ದೌರ್ಬಲ್ಯವನ್ನು ಸಹ ಸೂಪರ್ ಕಂಪ್ಯೂಟರ್ ತಾಳೆ ಹಾಕಿದೆ.
ಈ ಮೇಲಿನ ಎಲ್ಲ ಅಂಕಿ ಅಂಶಗಳನ್ನು ಗಮನಸಿಯೇ ಸೂಪರ್ ಕಂಪ್ಯೂಟರ್ ತನ್ನ ಅಂಕ ಪಟ್ಟಿಯನ್ನು ಸಿದ್ಧ ಪಡಿಸಿದೆ.
ಸೂಪರ್ ಕಂಪ್ಯೂಟರ್ ಈಗಾಗಲೇ ಅಂಕ ಪಟ್ಟಿಯನ್ನು ಸಹ ನೀಡಿದೆ. ಅದರ ಅನ್ವಯ ನಾಲ್ಕು ತಂಡಗಳ ಪ್ಲೇ ಆಫ್ ಸ್ಥಾನವನ್ನು ನಿಗದಿ ಪಡಿಸಿದೆ. ಈ ಅಂಕಿ ಪಟ್ಟಿಯನ್ನು ನೋಡಿದರೆ, ಗುಜರಾತ್ ಟೈಟನ್ಸ್, ಸಿಎಸ್‌ಕೆ, ಮುಂಬೈ, ಲಖ್ನೋ ಸೂಪರ್ ಜೈಂಟ್ಸ್ ತಂಡಗಳು ಪ್ಲೇ ಆಫ್‌ಗೆ ಪ್ರವೇಶಿಸುತ್ತವೆ ಎಂದು ತಿಳಿಸಿದೆ. ಅಲ್ಲದೆ ಈ ಬಾರಿ ಆರ್‌ಸಿಬಿ ಈ ರೇಸ್‌ನಲ್ಲಿ ಸ್ಥಾನವನ್ನು ಪಡೆಯುವುದಿಲ್ಲ ಎಂದು ಭವಿಷ್ಯ ನುಡಿದಿದೆ.
ಇನ್ನು ಯುವ ಆಟಗಾರರನ್ನು ಹೊಂದಿರುವ ರಾಜಸ್ಥಾನ ಐದನೇ ಸ್ಥಾನದಲ್ಲಿದ್ದರೆ, ಆರ್‌ಸಿಬಿ ಆರನೇ ಸ್ಥಾನ, ಪಂಜಾಬ್ ಕಿಂಗ್ಸ್ ಏಳನೇ ಸ್ಥಾನ, ಕೆಕೆಆರ್ ಎಂಟನೇ ಸ್ಥಾನ, ಡೆಲ್ಲಿ ಕ್ಯಾಪಿಟಲ್ಸ್ ಒಂಬತ್ತನೇ ಸ್ಥಾನ ಹಾಗೂ ಎಸ್‌ಆರ್‌ಎಚ್ ಅಂಕ ಪಟ್ಟಿಯಲ್ಲಿ ಕೊನೆಯಿಂದ ಮೊದಲ ಸ್ಥಾನವನ್ನು ಪಡೆದಿದೆ.