Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2024: ಟೆಸ್ಟ್‌ ಆಡಿದ್ದೇ ತಡ ಬದಲಾಯಿತು ಹಣೆಬರಹ:ಅಂದು 20 ಲಕ್ಷಕ್ಕೂ ಖರೀದಿಸಿದವರು, ಇಂದು ಕೋಟಿ ಕೋಟಿ ರೂ. ಹಿಡಿದು ಕ್ಯೂನಲ್ಲಿ

ಒಬ್ಬ ಮನುಷ್ಯನ ನಸೀಬು ಎಷ್ಟೇಲ್ಲಾ ಬದಲಾಗುತ್ತದೆ ಎಂಬುದಕ್ಕೆ ಈ ವ್ಯಕ್ತಿ ಬೆಸ್ಟ್‌ ಎಕ್ಸಾಂಪಲ್‌.. ಜಸ್ಟ್ ಮೂರುವರೆ ತಿಂಗಳ ಹಿಂದೆ ಈ ಯುವ ಬ್ಯಾಟರ್‌ನನ್ನು ಖರೀದಿಸಲು ಯಾವುದೇ ತಂಡ ಮುಂದೆ ಬಂದಿರಲಿಲ್ಲ. ಆದರೆ ಈಗ ಲಕ್‌ ಬದಲಾಗಿದೆ. ಅಂದು ಈ ಪ್ಲೇಯರ್‌ನನ್ನು ಕಂಡು ಮುಖ ತಿರುಗಿಸಿದವರೇ, ಇಂದು ಆತನತ್ತ ಮುಖ ಮಾಡಿ ಹಣದ ಚಿಲವನ್ನೇ ಹಿಡಿದು ನಿಂತು ಬಿಟ್ಟಿದ್ದಾರೆ.

ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್‌ ಪಂದ್ಯ ರಾಜ್‌ಕೋಟ್‌ನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಇಬ್ಬರಿಗೆ ಆಡುವ ಹನ್ನೋಂದರ ಬಳಗದಲ್ಲಿ ಅವಕಾಶ ನೀಡಲಾಯಿತು. ಇದರಲ್ಲಿ ಒಬ್ಬ ರಣಜಿ ರನ್‌ಗಳನ್ನು ಗುಡ್ಡೆ ಹಾಕಿ ಅದರ ಮೇಲೆ ರಾಜನಂತೆ ಕುಳಿತಿರುವ ಸರ್ಫರಾಜ್‌ ಖಾನ್‌..

IPL 2024 Test Performance Transforms Player Fortunes from Lakhs to Crores

ಕ್ರಿಕೆಟ್‌ ಪ್ರೇಮಿ

ಪ್ರೇಮಿಗಳ ದಿನ ಹಿಂದಿನ ಅಷ್ಟೇ ಮುಗಿದಿತ್ತು. ಯುವ ಪ್ರೇಮಿಗಳು ಆ ಅಮಲಿನಲ್ಲೇ ಫೆಬ್ರವರಿ 15ರ ಸೂರ್ಯೊದಯವನ್ನು ಬರಮಾಡಿಕೊಳ್ಳಲು ಕಾತುರಾರಗಿದ್ದರು. ಆದರೆ ಇಲ್ಲೋಬ್ಬ ಕ್ರಿಕೆಟ್‌ ಪ್ರೇಮಿಗೆ ಈ ದಿನ ನಿಜಕ್ಕೂ ಆತನ ಬದುಕಿನಲ್ಲಿ ಎಂದೂ ಮರೆಯದ ಅವಿಸ್ಮರಣೀಯ ದಿನವಾಯಿತು. ಟೀಮ್ ಇಂಡಿಯಾದ ಮೊದಲ ಇನ್ನಿಂಗ್ಸ್‌ನ 63.3ನೇ ಓವರ್‌ನಲ್ಲಿ ರೋಹಿತ್‌ ಶರ್ಮಾ ಔಟ್ ಆಗುತ್ತಿದ್ದಂತೆ, ಪ್ಯಾಡ್ ಕಟ್ಟಿಕೊಂಡು ಅಂಗಳಕ್ಕೆ ಇಳಿದ ಪ್ಲೇಯರ್‌ ಸರ್ಫರಾಜ್‌ ಖಾನ್‌..

ಭರ್ಜರಿ ಆರಂಭ

ಸರ್ಫರಾಜ್‌ ಖಾನ್‌ ಅಂಗಳಕ್ಕೆ ಇಳಿಯುತ್ತಿದ್ದಂತೆ ಇವರ ಸತತ ಪರಿಶ್ರಮ ಹಾಗೂ ತಪ್ಪಸ್ಸು ಎದ್ದು ಕಾಣುತ್ತಿತ್ತು. ಒಂದೆರೆಡು ಬೌಲ್‌ ತಾಳ್ಮೆಯಿಂದ ಆಡಿ ಪಿಚ್ ಮರ್ಮ ಅರ್ಥ ಮಾಡಿಕೊಂಡಿದ್ದೇ ತಡ, ತನ್ನ ಅಸಲಿ ಆಟ ಶುರು ಮಾಡಿದರು. ಇವರ ಭರ್ಜರಿ ಫುಟ್ ವರ್ಕ್‌ ಹಾಗೂ ಶಾಟ್ ಸೆಲೆಕ್ಷನ್‌ ನೋಡಿದ ಅಭಿಮಾನಿಗಳು ಫುಲ್‌ ಖುಷ್ ಆದರು. ಸೊಗಸಾದ ಬ್ಯಾಟಿಂಗ್ ಮಾಡಿದ ಸರ್ಫರಾಜ್‌ ತಾವಾಡಿದ ಮೊದಲ ಟೆಸ್ಟ್‌ನ ಎರಡೂ ಇನಿಂಗ್ಸ್‌ಗಳಲ್ಲಿ ಅರ್ಧಶತಕ ಬಾರಿಸಿ ಅಬ್ಬರಿಸಿದರು.

IPL 2024 Test Performance Transforms Player Fortunes from Lakhs to Crores

ಸರ್ಫರಾಜ್ ಖಾನ್ ಬ್ಯಾಟಿಂಗ್ ನೋಡಿದ ಐಪಿಎಲ್‌ ಫ್ರಾಂಚೈಸಿ ಕೈ ಕೈ ಹಿಚಿಕೊಳ್ಳುವಂತೆ ಆಗಿದೆ. ಇವರ ಹೆಸರು ಬಿಡ್ಡಿಂಗ್ ಅಂಗಳದಲ್ಲಿ ಹೆಸರು ಕೇಳಿದಾಗ ಐಪಿಎಲ್‌ ಮಾಲೀಕರು ಇವರನ್ನು ಖರೀದಿಸಲು ಮನಸ್ಸು ಮಾಡಲಿಲ್ಲ. ಇದಕ್ಕೆ ಕಾರಣ ಕಳೆದ ಕೆಲವು ಆವೃತ್ತಿಗಳಲ್ಲಿ ಸರ್ಫರಾಜ್ ಖಾನ್‌ ಆಡಿದ ಧಾಟಿ ಹಾಗಿತ್ತು.

ಆದರೆ, ಒಂದು ಟೆಸ್ಟ್‌ ಆಡಿದ ಮೇಲೆ ಸರ್ಫರಾಜ್‌ ಖಾನ್‌ ಲಕ್ಕ ಬದಲಾಗಿದೆ. ಅಂದು 20 ಲಕ್ಷ ನೀಡಿದೆ ತಂಡಕ್ಕೆ ಬರಮಾಡಿಕೊಳ್ಳಲು ಹಿಂದೇಟು ಹಾಕುತ್ತಿದ್ದ ಸರ್ಫರಾಜ್‌ ಅವರನ್ನು ಖರೀದಿಸಲು ಕೋಟಿ ಕೋಟಿ ರೂಪಾಯಿ ಹಿಡಿದು ತಮ್ಮ ತಂಡದ ಜೆರ್ಸಿ ನೀಡಲು ಪ್ಲ್ಯಾನ್ ಮಾಡಿಕೊಂಡಿವೆ. ಆರ್‌ಸಿಬಿ ಸೇರಿದಂತೆ ಮೂರು ತಂಡಗಳು ಸರ್ಫರಾಜ್‌ ಖಾನ್‌ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಯೋಜನೆ ರೂಪಿಕೊಂಡಿವೆ.

ಐಪಿಎಲ್ ವೃತ್ತಿ

ಪಂಜಾಬ್ ಕಿಂಗ್ಸ್‌ನ ಜೆರ್ಸಿಯಲ್ಲಿ ಸರ್ಫರಾಜ್ ಖಾನ್ ಐಪಿಎಲ್‌ಗೆ ಪದಾರ್ಪಣೆ ಮಾಡಿದರು. ಇದರ ನಂತರ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಭಾಗವಾದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ನಂತರ ಡೆಲ್ಲಿ ಕ್ಯಾಪಿಟಲ್ಸ್ ಸರ್ಫರಾಜ್ ಖಾನ್ ಅವರನ್ನು ಸೇರಿಸಿತು. ಆದರೆ ಇತ್ತೀಚೆಗೆ ಐಪಿಎಲ್ ಹರಾಜಿಗೂ ಮುನ್ನ ಸರ್ಫರಾಜ್ ಖಾನ್ ಬಿಡುಗಡೆಯಾಗಿದ್ದರು. ಇದಾದ ಬಳಿಕ ಐಪಿಎಲ್ ಹರಾಜಿನಲ್ಲಿ ಸರ್ಫರಾಜ್ ಖಾನ್ ಮೂಲ ಬೆಲೆ 20 ಲಕ್ಷ ರೂ.ಗಳಾಗಿದ್ದು, ಯಾವುದೇ ತಂಡ ಆಸಕ್ತಿ ತೋರಲಿಲ್ಲ. ಈ ಮೂಲಕ ಸರ್ಫರಾಜ್ ಖಾನ್ ಮಾರಾಟವಾಗದೆ ಉಳಿದಿದ್ದರು, ಆದರೆ ಇದೀಗ ಈ ಯುವ ಆಟಗಾರನಿಗೆ ಸಿಹಿ ಸುದ್ದಿ ಬರುವ ಸಾಧ್ಯತೆ ಇದೆ.

Story first published: Monday, March 4, 2024, 9:34 [IST]
Other articles published on Mar 4, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+