For Quick Alerts
ALLOW NOTIFICATIONS  
For Daily Alerts
 

IPL 2024: ಎಬಿಡಿ ರೀತಿ ಹಲವು ಆಟ ಆಡಿ ಸೈ ಎನಿಸಿಕೊಂಡ ಬ್ರಿಸ್ಬೇನ್ ಪ್ಲೇಯರ್‌ ಮೇಲೆ ಐಪಿಎಲ್‌ ಮಾಲೀಕರ ಕಣ್ಣು

ಬಿಗ್ ಬ್ಯಾಷ್ ಲೀಗ್ 2024 ರ ಪಂದ್ಯವನ್ನು ಬ್ರಿಸ್ಬೇನ್ ಹೀಟ್ ಮತ್ತು ಅಡಿಲೇಡ್ ಸ್ಟ್ರೈಕರ್ಸ್ ನಡುವೆ ನಡೆದ ಪಂದ್ಯವನ್ನು ನೋಡಿದ ಐಪಿಎಲ್‌ ಫ್ರಾಂಚೈಸಿಗಳು ಪದೆ ಪದೇ ನೋಡುವಂತೆ ಮಾಡಿದೆ. ಅಬ್ಬಾ.. ಬ್ರಿಸ್ಬೇನ್ ತಂಡದ ಬ್ಯಾಟರ್‌ ನೋಡಿದ ಐಪಿಎಲ್ ಮಾಲೀಕರು ಇತನನ್ನು ನಮ್ಮ ತಂಡಕ್ಕೆ ಸೇರಿಸಿಕೊಳ್ಳಬೇಕಲ್ಲಾ ಎಂಬ ಚಿಂತೆಯನ್ನು ನಡೆಸುವಂತೆ ಮಾಡಿದ್ದಾರೆ..

ಐಪಿಎಲ್‌ 2024ರಲ್ಲಿ ಅವಕಾಶ ಸಿಕ್ಕರೆ ಆಸ್ಟ್ರೇಲಿಯಾದ ಈ ಪ್ಲೇಯರ್‌ಗೆ ಮಣೆ ಹಾಕೋಣ ಎಂದು ಮಾಲೀಕರು ಪ್ಲ್ಯಾನ್‌ ಮಾಡಿಕೊಳ್ಳುತ್ತಿದ್ದಾರೆ. ಜನವರಿ 22 ರಂದು ಕ್ವೀನ್ಸ್‌ಲ್ಯಾಂಡ್‌ನ ಹೆರಿಟೇಜ್ ಬ್ಯಾಂಕ್ ಸ್ಟೇಡಿಯಂನಲ್ಲಿ ಬ್ರಿಸ್ಬೇನ್ ಹೀಟ್ ಮತ್ತು ಅಡಿಲೇಡ್ ಸ್ಟ್ರೈಕರ್ಸ್ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಬ್ರಿಸ್ಬೇನ್ ಪರ ಆಡುತ್ತಿದ್ದ ಜೋಶ್ ಬ್ರೌನ್ ಸಂಚಲನ ಮೂಡಿಸಿದರು.

IPL 2024: The eyes of the IPL owners are on the Brisbane player who has played many games like ABD

ಜೋಶ್ ಬ್ರೌನ್ ಹಲವು ಆಟದ ಅಂಗಳವನ್ನು ಪ್ರವೇಶಿಸಿ ಕೊನೆಗೆ ಕ್ರಿಕೆಟ್‌ ಬ್ಯಾಟ್‌ ಹಿಡಿದರು. ಇವರನ್ನು ನೋಡಿದರೆ ದಕ್ಷಿಣ ಆಫ್ರಿಕಾದ ಸ್ಟಾರ್ ಪ್ಲೇಯರ್‌ ಎಬಿ ಡಿವಿಲಿಯರ್ಸ್‌ ಅವರ ನೆನಪು ಆಗದೆ ಇರದು. ಎಬಿಡಿ ಸಹ ಹಲವು ಕ್ರೀಡೆಗಳನ್ನು ಆಡಿ ಸೈ ಎನಿಸಿಕೊಂಡ ಬಳಿಕವೇ ಅವರು ಸಹ ಕ್ರಿಕೆಟ್‌ನತ್ತ ಮುಖ ಮಾಡಿದರು. ಅಲ್ಲಿಂದ ಇವರು ವಿಶ್ವ ಕ್ರಿಕೆಟ್‌ನಲ್ಲಿ ವೇಗವಾಗಿ ಬ್ಯಾಟ್ ಮಾಡುವ ಮೂಲಕವೇ ಹೆಸರು ಮಾಡಿದರು.

ಬ್ರೌನ್ ಬಿರುಸಿನ ಶತಕ ಬಾರಿಸುವ ಮೂಲಕ ವಿಶ್ವದ ಚಿತ್ತ ಕದ್ದರು. 245.61 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದರು. ಬ್ರೌನ್‌ ಅವರು ಕೇವಲ 57 ಎಸೆತಗಳಲ್ಲಿ 140 ರನ್ ಗಳಿಸಿದರು. ಅವರು ತಮ್ಮ ಇನ್ನಿಂಗ್ಸ್‌ನಲ್ಲಿ 12 ಸಿಕ್ಸರ್ ಮತ್ತು 10 ಬೌಂಡರಿಗಳನ್ನು ಬಾರಿಸಿದರು. ಇದರೊಂದಿಗೆ ಬಿಬಿಎಲ್‌ ಲೀಗ್‌ನ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು.

30 ವರ್ಷದ ಜೋಶ್ ಬ್ರೌನ್ ಬ್ರಿಸ್ಬೇನ್‌ನಲ್ಲಿ ಬೆಳೆದರು. ಅವರಿಗೆ ಬಾಲ್ಯದಿಂದಲೂ ಕ್ರಿಕೆಟ್‌ನಲ್ಲಿ ಆಸಕ್ತಿ ಇರಲಿಲ್ಲ, ಇತರ ಕ್ರೀಡೆಗಳಲ್ಲಿ ಅವರ ಆಸಕ್ತಿ ಹೆಚ್ಚಿತ್ತು. ಅವರು ಗಾಲ್ಫ್ ಆಡುತ್ತಿದ್ದರು. ಅವರು ಫುಟ್‌ಬಾಲ್‌ ಬಗ್ಗೆಯೂ ಒಲವು ಹೊಂದಿದ್ದರು. ಬ್ರೌನ್ 8 ವರ್ಷ ವಯಸ್ಸಿನವನಾಗಿದ್ದಾಗ, ಫುಟ್ಬಾಲ್ ಪಂದ್ಯದಲ್ಲಿ 10 ಗೋಲುಗಳನ್ನು ಗಳಿಸಿದ್ದರು. ಬಿಬಿಎಲ್‌ ಪಂದ್ಯದ ಸಂದರ್ಭದಲ್ಲಿ ಅವರ ತಾಯಿ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದರು. ಜೋಶ್ 13 ನೇ ವಯಸ್ಸಿನಲ್ಲಿ ಕ್ರಿಕೆಟ್ ಆಡಲು ಪ್ರಾರಂಭಿಸಿದರು.

ಜೋಶ್ ಬ್ರೌನ್ ಕೇವಲ 18 ತಿಂಗಳುಗಳಲ್ಲಿ ಥರ್ಡ್‌ ಡಿವಿಜನ್ ಕ್ರಿಕೆಟ್‌ನಿಂದ ಕ್ವೀನ್ಸ್‌ಲ್ಯಾಂಡ್ ಸೆಕಂಡ್ ಡಿವಿಜನ್ 11 ರ ಭಾಗವಾದರು. ಬ್ಯಾಟಿಂಗ್ ಜೊತೆಗೆ ಬ್ರೌನ್ ಬೌಲಿಂಗ್ ಕೂಡ ಮಾಡುತ್ತಾರೆ. ಅವರು ಬಲಗೈ ಮಧ್ಯಮ ವೇಗಿ. ಜೋಶ್ ಬ್ರೌನ್ ತಮ್ಮ ದೇಶೀಯ ವೃತ್ತಿಜೀವನದಲ್ಲಿ ಒಟ್ಟು 1 ಲಿಸ್ಟ್ ಎ ಪಂದ್ಯ ಮತ್ತು 22 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅವರು ಲಿಸ್ಟ್ ಎ ನಲ್ಲಿ 38 ರನ್‌ಗಳನ್ನು ಹೊಂದಿದ್ದಾರೆ. ಆದರೆ ಟಿ 20 ನಲ್ಲಿ ಅವರು 150 ಸ್ಟ್ರೈಕ್ ರೇಟ್‌ನಲ್ಲಿ 571 ರನ್ ಗಳಿಸಿದ್ದಾರೆ. ಇದರಲ್ಲಿ ಅವರ ಬ್ಯಾಟ್‌ನಿಂದ 1 ಶತಕ ಮತ್ತು 1 ಅರ್ಧ ಶತಕವೂ ಕಂಡುಬಂದಿದೆ. ಆದಾಗ್ಯೂ, ಜೋಶ್ ಬ್ರೌನ್ ಅವರ ಬಿರುಸಿನ ಶತಕಕ್ಕೆ ಧನ್ಯವಾದಗಳು, ಬ್ರಿಸ್ಬೇನ್ ಹೀಟ್ ಅಡಿಲೇಡ್ ಸ್ಟ್ರೈಕರ್ಸ್ ಅನ್ನು 54 ರನ್‌ಗಳಿಂದ ಸೋಲಿಸಿತು.

Story first published: Tuesday, January 23, 2024, 12:03 [IST]
Other articles published on Jan 23, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+