For Quick Alerts
ALLOW NOTIFICATIONS  
For Daily Alerts
 

IPL 2024: ಡೆಲ್ಲಿ ತಂಡದ ಬಲ ಹೆಚ್ಚಿಸಲಿದ್ದಾರೆ ಸ್ಟಾರ್ ವೇಗದ ಬೌಲರ್‌

ಐಪಿಎಲ್ 2024 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ನ ನಿರೀಕ್ಷಿತ ಮಟ್ಟದಲ್ಲಿ ಇರಲಿಲ್ಲ. 17ನೇ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ತಂಡ ಸೋಲನ್ನು ಕಂಡಿತು. ಆದರೆ ಲೀಗ್‌ನ ಮುಂದಿನ ಪಂದ್ಯಕ್ಕೂ ಮುನ್ನ ರಿಷಭ್‌ ಪಂತ್‌ ನಾಯಕತ್ವದ ತಂಡಕ್ಕೆ ದೊಡ್ಡ ಗುಡ್ ನ್ಯೂಸ್ ಸಿಕ್ಕಿದೆ. ಈ ಸುದ್ದಿ ನಿಜಕ್ಕೂ ಡೆಲ್ಲಿ ಕ್ಯಾಪಿಟಲ್ಸ್ ಚಿಂತೆಯನ್ನು ದೂರ ಮಾಡಬಹುದು.

ಡೆಲ್ಲಿ ಕ್ಯಾಪಿಟಲ್ಸ್‌ ಸಂಘಟಿತ ಆಟದ ಮೇಲೆ ಬಲವನ್ನು ಇಟ್ಟುಕೊಂಡಿದೆ. ಆದರೆ ಬ್ಯಾಟರ್‌ಗಳು ಹಾಗೂ ಬೌಲರ್‌ಗಳು ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಪ್ರದರ್ಶನ ನೀಡುತ್ತಿಲ್ಲ. ಹೀಗಾಗಿ ಮ್ಯಾನೇಜ್ಮೆಂಟ್‌ ಚಿಂತೆಯಲ್ಲಿದೆ. ಆದರೆ ಸ್ಟಾರ್ ಆಟಗಾರರ ಆಗಮನ ಎಲ್ಲರ ಮುಖದಲ್ಲೂ ಮಂದಹಾಸ ಮೂಡುವಂತೆ ಮಾಡಿದೆ.

IPL 2024 The star fast bowler will strength For the Delhi team

ಡೆಲ್ಲಿ ಸೇರಿದ್ದು ಯಾರು?

ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಎನ್ರಿಕ್ ನೋರ್ಕಿಯಾ ಅವರು ಇಂಡಿಯನ್ ಡೆಲ್ಲಿ ಕ್ಯಾಪಿಟಲ್ಸ್‌ನ ಶಿಬಿರವನ್ನು ಸೇರಿಕೊಂಡಿದ್ದಾರೆ. ಬಲಗೈ ವೇಗದ ಬೌಲರ್ ಇತ್ತೀಚೆಗಷ್ಟೇ ಬೆನ್ನುನೋವಿನಿಂದ ಚೇತರಿಸಿಕೊಂಡಿದ್ದಾರೆ. ಇದರಿಂದಾಗಿ ಅವರಿಗೆ ದಕ್ಷಿಣ ಆಫ್ರಿಕಾ ತಂಡ ಏಕದಿನ ವಿಶ್ವಕಪ್ 2023 ತಂಡದಲ್ಲಿ ಸ್ಥಾನ ನೀಡಲು ನಿರಾಕರಿಸಲಾಗಿತ್ತು. ಆದರೆ ಇದೀಗ ಐಪಿಎಲ್ ನಲ್ಲಿ ಸದ್ದು ಮಾಡಲು ಸಜ್ಜಾಗಿದ್ದಾರೆ.

ಐಪಿಎಲ್‌ನಲ್ಲಿ ಹೇಗಿದೆ ಸಾಧನೆ?

ಸೆಪ್ಟೆಂಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಐದು ಪಂದ್ಯಗಳ ಏಕದಿನ ಸರಣಿಯನ್ನು ಆಯೋಜಿಸಲಾಗಿತ್ತು. ಈ ಸರಣಿಯ ಎರಡನೇ ಪಂದ್ಯದಲ್ಲಿ ಎನ್ರಿಕ್ ನಾರ್ಕಿಯಾ ಗಾಯಕ್ಕೆ ತುತ್ತಾಗಿದ್ದರು. ಹೀಗಾಗಿಯೇ ಎನ್ರಿಕ್ ನಾರ್ಕಿಯಾ ವಿಶ್ವಕಪ್ 2023 ರಲ್ಲಿ ತಂಡವನ್ನು ಸೇರಿಕೊಳ್ಳಲು ಆಗಿರಲಿಲ್ಲ. ಅವರು ಡೆಲ್ಲಿ ಕ್ಯಾಪಿಟಲ್ಸ್‌ನ ಪ್ರಮುಖ ಬೌಲರ್‌ಗಳಲ್ಲಿ ಒಬ್ಬರು.

ಎನ್ರಿಕ್ ನಾರ್ಕಿಯಾ ಐಪಿಎಲ್‌ನಲ್ಲಿ ಇದುವರೆಗೆ 40 ಪಂದ್ಯಗಳನ್ನು ಆಡಿರುವ ಅವರು 8.33 ಎಕಾನಮಿಯಲ್ಲಿ 53 ವಿಕೆಟ್‌ಗಳನ್ನು ಪಡೆದಿದ್ದಾರೆ. ಇನ್ನು ಡೆಲ್ಲಿ ತಂಡದ ಪರ ಆಡಿದ 10 ಪಂದ್ಯಗಳಲ್ಲಿ 10 ವಿಕೆಟ್ ಪಡೆದಿದ್ದಾರೆ. ಇವರು ಬೌಲಿಂಗ್‌ನಲ್ಲಿ ಮಿಶ್ರಣವನ್ನು ಮಾಡಬಲ್ಲರು. ಹೀಗಾಗಿ ಇವರ ಮೇಲೆ ಟೀಮ್ ಮ್ಯಾನೇಜ್ಮೆಂಟ್‌ಗೆ ನಂಬಿಕೆ ಹೆಚ್ಚಿದೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡ

ರಿಷಭ್ ಪಂತ್ (ನಾಯಕ), ಪ್ರವೀಣ್ ದುಬೆ, ಡೇವಿಡ್ ವಾರ್ನರ್, ವಿಕ್ಕಿ ಓಸ್ತ್ವಾಲ್, ಪೃಥ್ವಿ ಶಾ, ಎನ್ರಿಕ್ ನೋರ್ಕಿಯಾ, ಅಭಿಷೇಕ್ ಪೊರೆಲ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಜೇಕ್ ಫ್ರೇಸರ್-ಮೆಕ್‌ಗುರ್ಕ್, ಲಲಿತ್ ಯಾದವ್, ಖಲೀಲ್ ಅಹ್ಮದ್, ಮಿಚೆಲ್ ಮಾರ್ಷ್, ಇಶಾಂತ್ ಶರ್ಮಾ, ಮುಖೇಶ್ ಕುಮಾರ್, ಟ್ರಿಸ್ಟಾನ್ ಸ್ಟಬ್ಸ್, ರಿಕಿ ಭುಯಿ, ಕುಮಾರ್ ಕುಶಾಗ್ರಾ, ರಸಿಖ್ ದಾರ್, ಜ್ಯೆ ರಿಚರ್ಡ್ಸನ್, ಸುಮಿತ್ ಕುಮಾರ್, ಶಾಯ್ ಹೋಪ್, ಸ್ವಸ್ತಿಕ್ ಚಿಕಾರಾ.

Story first published: Monday, March 25, 2024, 17:04 [IST]
Other articles published on Mar 25, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+