IPL 2024: ಹೊಸದಾಗಿ ನಿರ್ಮಿಸಿದ ಕ್ರೀಡಾಂಗಣದಲ್ಲಿ ತವರಿನ ಪಂದ್ಯಗಳನ್ನು ಆಡಲಿದೆ ಈ ತಂಡ
ಬಹು ನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭಕ್ಕೆ ಕೇವಲ ಒಂದು ತಿಂಗಳಿಗಿಂತ ಕಡಿಮೆ ಅವಧಿ ಇದೆ. ಏಕೆಂದರೆ, ಮಾರ್ಚ್ 22ರಂದು ಚೆನ್ನೈನಲ್ಲಿ ಆರ್‌ಸಿಬಿ ಮತ್ತು ಸಿಎಸ್‌ಕೆ ತಂಡಗಳ ನಡುವಿನ ಹೈ-ವೋಲ್ಟೇಜ್ ಪಂದ್ಯದೊಂದಿಗೆ ಅದ್ಧೂರಿ ಚಾಲನೆ ಸಿಗಲಿದೆ.
2024ರ ಐಪಿಎಲ್‌ನ 17ನೇ ಆವೃತ್ತಿಗಾಗಿ ಈಗಾಗಲೇ ಎಲ್ಲಾ ಹತ್ತು ತಂಡಗಳು ತಮ್ಮ ತಯಾರಿಯನ್ನು ಆರಂಭಿಸಿವೆ. ಸದ್ಯ ನಡೆಯುತ್ತಿರುವ ಎರಡನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ ಮುಗಿಯುತ್ತಿದ್ದಂತೆಯೇ ಪುರುಷರ ಲೀಗ್ ಆರಂಭವಾಗಲಿದೆ.

ಇನ್ನು ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ತಂಡವು 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಮೊಹಾಲಿಯ ಮುಲ್ಲನ್‌ಪುರದಲ್ಲಿ ಹೊಸದಾಗಿ ನಿರ್ಮಿಸಲಾದ ಮಹಾರಾಜ ಯಾದವೀಂದ್ರ ಸಿಂಗ್ ಕ್ರಿಕೆಟ್ ಸ್ಟೇಡಿಯಂನಲ್ಲಿ ತಮ್ಮ ತವರಿನ ಪಂದ್ಯಗಳನ್ನು ಆಯೋಜಿಸಲಿದೆ.
ಶನಿವಾರ, ಮಾರ್ಚ್ 23ರಂದು ಪಂಜಾಬ್ ಕಿಂಗ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ತಂಡದೊಂದಿಗೆ ತನ್ನ ಮೊದಲ ಪಂದ್ಯಕ್ಕೆ ಮುಲ್ಲನ್‌ಪುರ ಸ್ಟೇಡಿಯಂ ಆತಿಥ್ಯ ವಹಿಸಲಿದೆ.

ಇದಕ್ಕೂ ಮುನ್ನ ಮೊಹಾಲಿಯಲ್ಲಿರುವ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್‌ನ ಐಎಸ್ ಬಿಂದ್ರಾ ಸ್ಟೇಡಿಯಂ ಪಂಜಾಬ್ ಕಿಂಗ್ಸ್ ತಂಡದ ತವರಿನ ಪಂದ್ಯಗಳನ್ನು ಅನೇಕ ವರ್ಷಗಳಲ್ಲಿ ಆಯೋಜಿಸಿದೆ.
ಆದಾಗ್ಯೂ, ಮೊಹಾಲಿಯ ಕ್ರಿಕೆಟ್ ಪ್ರೇಮಿಗಳಿಗೆ ಈಗ ಹೊಸ ಕ್ರೀಡಾಂಗಣದ ವಾತಾವರಣವನ್ನು ಅನುಭವಿಸುವ ಅವಕಾಶ ಸಿಗುತ್ತದೆ. ಈ ಮಹಾರಾಜ ಯಾದವೀಂದ್ರ ಸಿಂಗ್ ಕ್ರೀಡಾಂಗಣವು 33,000 ಆಸನಗಳ ಸಾಮರ್ಥ್ಯವನ್ನು ಹೊಂದಿದೆ.
"ಕಳೆದ ಎರಡು ವರ್ಷಗಳಿಂದ ದೇಶೀಯ ಪಂದ್ಯಗಳನ್ನು ಆಯೋಜಿಸಿರುವ ಈ ಕ್ರೀಡಾಂಗಣವು ಎಲ್ಲಾ ಆಧುನಿಕ ಸೌಲಭ್ಯಗಳು ಮತ್ತು ಉನ್ನತ ದರ್ಜೆಯ ಮೂಲಸೌಕರ್ಯಗಳನ್ನು ಒಳಗೊಂಡಿದೆ. 33,000 ಪ್ರೇಕ್ಷಕರಿಗೆ ಆಸನದ ಸಾಮರ್ಥ್ಯವನ್ನು ಹೊಂದಿದೆ," ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.
ಮುಲ್ಲನ್‌ಪುರ ಸ್ಟೇಡಿಯಂನಲ್ಲಿ ವಿಶ್ವದರ್ಜೆಯ ಸೌಲಭ್ಯಗಳು
"ಮೊಹಾಲಿಯ ಮುಲ್ಲನ್‌ಪುರ ಕ್ರಿಕೆಟ್ ಕ್ರೀಡಾಂಗಣವು ಸುಸಜ್ಜಿತ ಹೆರಿಂಗ್‌ಬೋನ್ ಒಳಚರಂಡಿ ವ್ಯವಸ್ಥೆಯನ್ನು ಹೊಂದಿದೆ. ಇದು ಮಳೆ ನಿಂತ ನಂತರ 25-30 ನಿಮಿಷಗಳಲ್ಲಿ ನೀರನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ".
"ಸಾಂಪ್ರದಾಯಿಕ ಮಣ್ಣನ್ನು ಬಳಸುವ ಬದಲು, ನೆಲವನ್ನು ಮರಳಿನಿಂದ ತಯಾರಿಸಲಾಗುತ್ತದೆ. ಇದನ್ನು ನಿರ್ವಹಿಸುವು ಕಷ್ಟ, ಆದರೆ ಉತ್ತಮ ಸ್ಥಿರತೆಯನ್ನು ನೀಡುತ್ತದೆ".
"ಕ್ರೀಡಾಂಗಣದಲ್ಲಿ ಹಬೆ, ಸೌನಾ ಮತ್ತು ಐಸ್ ಸ್ನಾನದ ಸೌಲಭ್ಯಗಳನ್ನು ಹೊಂದಿರುವ ಎರಡು ಅಂತಾರಾಷ್ಟ್ರೀಯ ಗುಣಮಟ್ಟದ ಡ್ರೆಸ್ಸಿಂಗ್ ಕೊಠಡಿಗಳನ್ನು ಹೊಂದಿದೆ. ಅಲ್ಲದೆ, ಈ ಸಂಕೀರ್ಣದಲ್ಲಿ ವಿಶ್ವ ದರ್ಜೆಯ ಜಿಮ್ ಅನ್ನು ಸಹ ಸ್ಥಾಪಿಸಲಾಗಿದೆ," ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.
ಫೆಬ್ರವರಿ ಎರಡನೇ ವಾರದಲ್ಲಿ ಚಂಡೀಗಢದ ಬ್ರಿಟಿಷ್ ಡೆಪ್ಯುಟಿ ಹೈ-ಕಮಿಷನರ್ ಕ್ಯಾರೋಲಿನ್ ರೋವೆಟ್ ಅವರು ಕ್ರೀಡಾಂಗಣಕ್ಕೆ ಭೇಟಿ ನೀಡಿದ್ದರು. ಅವರು ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ (ಪಿಸಿಎ) ಗೌರವ ಕಾರ್ಯದರ್ಶಿ ದಿಲ್ಶರ್ ಖನ್ನಾ ಮತ್ತು ಉಪಾಧ್ಯಕ್ಷ ಪ್ರೀತ್ ಮೊಹಿಂದರ್ ಸಿಂಗ್ ಬಂಗಾ ಅವರಿಗೆ ಕ್ರೀಡಾಂಗಣದ ಪ್ರವಾಸಕ್ಕಾಗಿ ಧನ್ಯವಾದ ಹೇಳಿದರು.
ಇದೇ ವೇಳೆ ಐಪಿಎಲ್‌ನ ಬಲಿಷ್ಠ ತಂಡಗಳಲ್ಲಿ ಒಂದಾಗಿರುವ ಪಂಜಾಬ್ ಕಿಂಗ್ಸ್ ತಮ್ಮ ಚೊಚ್ಚಲ ಐಪಿಎಲ್ ಪ್ರಶಸ್ತಿಯನ್ನು ಗೆಲ್ಲುವ ನಿರೀಕ್ಷೆಯಲ್ಲಿದೆ. ಒಂದು ಬಾರಿಯೂ ಐಪಿಎಲ್ ಗೆಲ್ಲದ ಕೆಲವೇ ತಂಡಗಳಲ್ಲಿ ಒಂದಾಗಿದೆ.
ವಾಸ್ತವವಾಗಿ, 2014ರ ಐಪಿಎಲ್ ಫೈನಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ ಸೋತ ನಂತರ, ಪಂಜಾಬ್ ಕಿಂಗ್ಸ್ ತಂಡ ಒಮ್ಮೆಯೂ ಪ್ಲೇಆಫ್‌ಗೆ ಅರ್ಹತೆ ಪಡೆಯಲು ವಿಫಲವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications