For Quick Alerts
ALLOW NOTIFICATIONS  
For Daily Alerts
 

IPL 2024: ಏಡೆನ್ ಮಾರ್ಕ್ರಾಮ್ ಬದಲಿಗೆ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಹೊಸ ನಾಯಕ!

ಬಹು ನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 17ನೇ ಆವೃತ್ತಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಇದಕ್ಕೂ ಮುನ್ನ ಎಲ್ಲ ಹತ್ತು ಫ್ರಾಂಚೈಸಿಗಳು ತಮ್ಮ ತಂಡಗಳನ್ನು ಸಿದ್ಧಪಡಿಸುತ್ತಿವೆ.

ಇದೇ ವೇಳೆ ಏಡೆನ್ ಮಾರ್ಕ್ರಾಮ್ ಬದಲಿಗೆ ಆಸ್ಟ್ರೇಲಿಯಾ ತಂಡದ ಸ್ಟಾರ್ ಆಟಗಾರ ಪ್ಯಾಟ್ ಕಮ್ಮಿನ್ಸ್ ಸನ್‌ ರೈಸರ್ಸ್ ಹೈದರಾಬಾದ್ ತಂಡದ ನಾಯಕರಾಗಿ ನೇಮಕಗೊಂಡಿದ್ದಾರೆ. ಇದನ್ನು ಎಸ್‌ಆರ್‌ಎಚ್ ಫ್ರಾಂಚೈಸಿ ಸೋಮವಾರ ಖಚಿತಪಡಿಸಿದೆ.

IPL 2024 This World Cup Winning Captain to Lead Sunrisers Hyderabad Instead of Aiden Markram

2024ರ ಐಪಿಎಲ್‌ಗಾಗಿ ನಡೆದ ಮಿನಿ ಹರಾಜಿನಲ್ಲಿ 20.5 ಕೋಟಿ ರೂಪಾಯಿಗಳ ದಾಖಲೆಯ ಮೊತ್ತಕ್ಕೆ ಖರೀದಿಸಲ್ಪಟ್ಟ ಪ್ಯಾಟ್ ಕಮ್ಮಿನ್ಸ್, ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ಏಡೆನ್ ಮಾರ್ಕ್ರಾಮ್ ಬದಲಿಗೆ ನಾಯಕನಾಗಿ ಆಯ್ಕೆಯಾಗಿದ್ದಾರೆ.

'ಆರೆಂಜ್ ಆರ್ಮಿ! ನಮ್ಮ ಹೊಸ ನಾಯಕ ಪ್ಯಾಟ್ ಕಮ್ಮಿನ್ಸ್' ಎಂಬ ಶೀರ್ಷಿಕೆಯೊಂದಿಗೆ ಪ್ಯಾಟ್ ಕಮ್ಮಿನ್ಸ್ ಅವರ ಚಿತ್ರವನ್ನು ಸನ್‌ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪೋಸ್ಟ್ ಮಾಡಿದೆ.

ಸನ್‌ ರೈಸರ್ಸ್ ಹೈದರಾಬಾದ್ ತಂಡವು ಮಾರ್ಚ್ 23ರಂದು ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸುವ ಮೂಲಕ ಈ ಆವೃತ್ತಿಯ ಅಭಿಯಾನ ಆರಂಭಿಸಲಿದೆ.

ಪ್ಯಾಟ್ ಕಮ್ಮಿನ್ಸ್ ಬೌಲಿಂಗ್‌ನೊಂದಿಗೆ ಮತ್ತು ನಾಯಕನಾಗಿ ತಮ್ಮ ಪರಾಕ್ರಮಕ್ಕಾಗಿ ಹೆಸರುವಾಸಿಯಾಗಿದ್ದಾರೆ. ಇತ್ತೀಚಿನ ಕ್ರಿಕೆಟ್ ಘಟನೆಗಳಲ್ಲಿ ಅಸಾಧಾರಣ ಪ್ರದರ್ಶನ ನೀಡಿದ್ದಾರೆ.

2023ರ ಐಸಿಸಿ ಏಕದಿನ ವಿಶ್ವಕಪ್ ಸಮಯದಲ್ಲಿ ತಮ್ಮ ಗಮನಾರ್ಹ ನಾಯಕತ್ವ ಪ್ರದರ್ಶಿಸಿದರು. ಅಲ್ಲಿ ಆಸ್ಟ್ರೇಲಿಯಾ ತಂಡವನ್ನು ಭಾರತ ವಿರುದ್ಧ ಟ್ರೋಫಿ ಗೆಲುವಿಗೆ ಮುನ್ನಡೆಸಿದರು. ಸಂಭಾವ್ಯ ನಾಯಕತ್ವ ಸ್ಪರ್ಧಿಯಾಗಿ ಅವರ ರುಜುವಾತನ್ನು ಮತ್ತಷ್ಟು ಗಟ್ಟಿಗೊಳಿಸಿದರು.

2023ರ ಡಿಸೆಂಬರ್‌ನಲ್ಲಿ ನಡೆದ 2024ರ ಐಪಿಎಲ್ ಮಿನಿ ಹರಾಜಿನಲ್ಲಿ ಆಸ್ಟ್ರೇಲಿಯಾದ ವಿಶ್ವಕಪ್ ಫೈನಲ್ ಹೀರೋ ಟ್ರಾವಿಸ್ ಹೆಡ್‌ಗೆ ಸಹಿ ಹಾಕುವುದರೊಂದಿಗೆ ಸನ್ ರೈಸರ್ಸ್ ಹೈದರಾಬಾದ್ ತಮ್ಮ ವ್ಯವಹಾರವನ್ನು ಪ್ರಾರಂಭಿಸಿತು.

ಆದಾಗ್ಯೂ, 2016ರ ಚಾಂಪಿಯನ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಜೊತೆಗಿನ ಬಿಡ್ಡಿಂಗ್ ವಾರ್‌ನಲ್ಲಿ ಆಸ್ಟ್ರೇಲಿಯದ ನಾಯಕ ಪ್ಯಾಟ್ ಕಮಿನ್ಸ್ ಅವರನ್ನು 20.5 ಕೋಟಿ ರೂಪಾಯಿಗೆ ಸಹಿ ಹಾಕಿಸಿಕೊಂಡಿತು.

ನಾಯಕತ್ವ ಬದಲಾಯಿಸುವ ಮ್ಯಾನೇಜ್‌ಮೆಂಟ್‌ನ ದೃಢ ನಿರ್ಧಾರ

2023ರ ಐಪಿಎಲ್‌ನಲ್ಲಿ ಎಸ್‌ಆರ್‌ಎಚ್ ನಿರಾಶಾದಾಯಕ ಪ್ರದರ್ಶನದ ಹಿನ್ನೆಲೆಯಲ್ಲಿ ಪ್ಯಾಟ್ ಕಮ್ಮಿನ್ಸ್ ಅವರನ್ನು ನೇಮಕ ಮಾಡುವ ನಿರ್ಧಾರ ಬಂದಿದೆ. ಕಳೆದ ವ‍ರ್ಷ ತಂಡವು ಅಂಕಪಟ್ಟಿಯ ಕೆಳಭಾಗದಲ್ಲಿದ್ದರು. ಹಿಂದಿನ ಆವೃತ್ತಿಯಲ್ಲಿ ತಂಡದ ನೀರಸ ಪ್ರದರ್ಶನದ ನಂತರ, ನಾಯಕರಾಗಿದ್ದ ಏಡೆನ್ ಮಾರ್ಕ್ರಾಮ್ ಅವರನ್ನು ಬದಲಾಯಿಸಲು ನಿರ್ಧರಿಸಲಾಗಿದೆ.

ಐಪಿಎಲ್ 2024: ಎಸ್‌ಆರ್‌ಎಚ್ ಸಂಪೂರ್ಣ ತಂಡ

ಪ್ಯಾಟ್ ಕಮ್ಮಿನ್ಸ್ (ನಾಯಕ) ಅಬ್ದುಲ್ ಸಮದ್, ಐಡೆನ್ ಮಾರ್ಕ್ರಾಮ್, ರಾಹುಲ್ ತ್ರಿಪಾಠಿ, ಗ್ಲೆನ್ ಫಿಲಿಪ್ಸ್, ಮಯಾಂಕ್ ಅಗರ್ವಾಲ್, ಹೆನ್ರಿಚ್ ಕ್ಲಾಸೆನ್, ಅನ್ಮೋಲ್‌ಪ್ರೀತ್ ಸಿಂಗ್, ಉಪೇಂದ್ರ ಯಾದವ್, ನಿತೀಶ್ ಕುಮಾರ್ ರೆಡ್ಡಿ, ಅಭಿಷೇಕ್ ಶರ್ಮಾ, ಮಾರ್ಕೊ ಜಾನ್ಸೆನ್, ವಾಷಿಂಗ್ಟನ್ ಸುಂದರ್, ಸನ್ವಿರ್ ಸಿಂಗ್, ಭುವನೇಶ್ವರ್ ಕುಮಾರ್, ಫಜಲ್ಹಕ್ ಫಾರೂಕಿ, ಟಿ ನಟರಾಜನ್, ಉಮ್ರಾನ್ ಮಲಿಕ್, ಮಯಾಂಕ್ ಮಾರ್ಕಂಡೆ, ಶಹಬಾಜ್ ಅಹ್ಮದ್, ಟ್ರಾವಿಸ್ ಹೆಡ್, ವನಿಂದು ಹಸರಂಗ, ಜಯದೇವ್ ಉನಾದ್ಕಟ್, ಆಕಾಶ್ ಸಿಂಗ್, ಜಾತವೇಧ್ ಸುಬ್ರಹ್ಮಣ್ಯನ್.

Story first published: Monday, March 4, 2024, 11:44 [IST]
Other articles published on Mar 4, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+