For Quick Alerts
ALLOW NOTIFICATIONS  
For Daily Alerts
 

IPL 2024: ಎಲ್‌ಎಸ್‌ಜಿ ನಾಯಕತ್ವ ತ್ಯಜಿಸಲಿರುವ ಕೆಎಲ್ ರಾಹುಲ್?; ರಿಟೇನ್ ಆಗೋದು ಅನುಮಾನ!

ಐಪಿಎಲ್ 2024ರ ಆವೃತ್ತಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಇತ್ತೀಚಿನ ಹಿನ್ನಡೆಯ ನಂತರ, ಎಲ್‌ಎಸ್‌ಜಿ ನಾಯಕತ್ವದ ಪಾತ್ರದಿಂದ ಕೆಎಲ್ ರಾಹುಲ್ ಕೆಳಗಿಳಿಯುವ ಬಗ್ಗೆ ಯೋಚಿಸುತ್ತಿದ್ದಾರೆ.

ಬುಧವಾರದಂದು ಸನ್‌ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧದ ಹೀನಾಯ ಸೋಲು ಸೇರಿದಂತೆ, ಸತತ ಪಂದ್ಯಗಳಲ್ಲಿ ಸೋಲಿನ ನಂತರ ಕೆಎಲ್ ರಾಹುಲ್ ಅವರ ನಾಯಕತ್ವದ ಭವಿಷ್ಯದ ಬಗ್ಗೆ ಊಹಾಪೋಹಗಳು ಹಬ್ಬಿವೆ.

ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಸೋಲಿನಲ್ಲಿ ಎಲ್‌ಎಲ್‌ಜಿ ಪಿಚ್‌ನಲ್ಲಿ ಹೆಣಗಾಡುತ್ತಿರುವುದನ್ನು ಕಂಡುಬಂತು. ಲಕ್ನೋ ಬ್ಯಾಟರ್‌ಗಳು ಎದುರಾಳಿಯ ವೇಗವನ್ನು ಎದುರಿಸಲು ವಿಫಲರಾದರು.

IPL 2024 Unlikely to be Retained Will KL Rahul to quit LSG Captaincy

ಲಕ್ನೋ ಸೂಪರ್ ಜೈಂಟ್ಸ್ ತಂಡದ ಕಳಪೆ ಪ್ರದರ್ಶನದ ಜವಾಬ್ದಾರಿಯನ್ನು ಕೆಎಲ್ ರಾಹುಲ್ ತೆಗೆದುಕೊಳ್ಳಬಹುದು ಮತ್ತು ಉಳಿದ ಎರಡು ಲೀಗ್ ಪಂದ್ಯಗಳಿಗೆ ನಾಯಕತ್ವದಿಂದ ಕೆಳಗಿಳಿಯಬಹುದು ಎಂದು ವರದಿಗಳು ತಿಳಿಸಿವೆ.

ಹಿಂದೂಸ್ತಾನ್ ಟೈಮ್ಸ್ ಪ್ರಕಾರ, ಮುಂಬರುವ ಐಪಿಎಲ್ ಪಂದ್ಯಗಳಲ್ಲಿ ಕೆಎಲ್ ರಾಹುಲ್ ತಮ್ಮ ಬ್ಯಾಟಿಂಗ್ ಮೇಲೆ ಮಾತ್ರ ಗಮನ ಹರಿಸುವ ಸಾಧ್ಯತೆಯಿದ್ದು, ತಂಡದ ಮ್ಯಾನೇಜ್‌ಮೆಂಟ್ ಇಂತಹ ನಿರ್ಧಾರವನ್ನು ಬೆಂಬಲಿಸುವ ಸಾಧ್ಯತೆ ಇದೆ.

2025ರ ಐಪಿಎಲ್‌ಗಾಗಿ ನಡೆಯುವ ಮೆಗಾ ಹರಾಜಿನ ಮೊದಲು ಕೆಎಲ್ ರಾಹುಲ್ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ಉಳಿಸಿಕೊಳ್ಳುವ ಬಗ್ಗೆ ಅನಿಶ್ಚಿತತೆಯ ನಡುವೆ ನಾಯಕತ್ವ ತ್ಯಜಿಸುವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.

"ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಮುಂದಿನ ಪಂದ್ಯಕ್ಕೆ ಐದು ದಿನಗಳ ಅಂತರವಿದೆ. ಸದ್ಯಕ್ಕೆ, ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಆದರೆ ಕೆಎಲ್ ರಾಹುಲ್ ಉಳಿದ ಎರಡು ಪಂದ್ಯಗಳಿಗೆ ತಮ್ಮ ಬ್ಯಾಟಿಂಗ್‌ನತ್ತ ಗಮನ ಹರಿಸಲು ಯೋಜಿಸಿದ್ದಾರೆ. ತಂಡದ ಮ್ಯಾನೇಜ್‌ಮೆಂಟ್ ಪರವಾಗಿಲ್ಲ ಎಂದು ತಿಳಿಸಿದೆ" ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಸೋಲಿನ ನಂತರ, ನಾಯಕ ಕೆಎಲ್ ರಾಹುಲ್ ಅವರೊಂದಿಗೆ ಎಲ್‌ಎಸ್‌ಜಿ ಮಾಲೀಕ ಸಂಜೀವ್ ಗೋಯೆಂಕಾ ಇತ್ತೀಚಿನ ಕೋಪದ ವಾಗ್ವಾದದ ಹಿನ್ನೆಲೆಯಲ್ಲಿ ನಾಯಕತ್ವದಿಂದ ಕೆಳಗಿಳಿಯುವ ನಿರ್ಧಾರವು ಬಂದಿದೆ.

2017ರ ಆವೃತ್ತಿಗೆ ಮುಂಚಿತವಾಗಿ ಎಂಎಸ್ ಧೋನಿ ಬದಲಿಗೆ ಸ್ಟೀವ್ ಸ್ಮಿತ್‌ ಅವರನ್ನು ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ತಂಡಕ್ಕೆ ನಾಯಕನಾದ ಹಳೆಯ ನಿರ್ಧಾರಗಳನ್ನು ನೆನಪಿಸುತ್ತದೆ.

IPL 2024 Unlikely to be Retained Will KL Rahul to quit LSG Captaincy

ಲಕ್ನೋ ಸೂಪರ್ ಜೈಂಟ್ಸ್ ತಂಡ ಪ್ಲೇಆಫ್‌ಗೆ ಪ್ರವೇಶಿಸುವ ಸಾಧ್ಯತೆಗಳು ಇನ್ನೂ ಗಣಿತದ ಪ್ರಕಾರ ಜೀವಂತವಾಗಿವೆ. ಆದರೆ ಅವರು ತಮ್ಮ ನೆಟ್ ರನ್ ರೇಟ್ ಅನ್ನು ಗಮನಾರ್ಹವಾಗಿ ಸುಧಾರಿಸುವ ದೊಡ್ಡ ಜವಾಬ್ದಾರಿ ಇದೆ.

ಒಂದು ವೇಳೆ ವಿಕೆಟ್ ಕೀಪರ್-ಬ್ಯಾಟರ್ ಎಲ್‌ಎಸ್‌ಜಿ ತಂಡಕ್ಕೆ ತನ್ನ ನಾಯಕತ್ವವನ್ನು ತ್ಯಜಿಸಿದರೆ, ಉಪನಾಯಕ ನಿಕೋಲಸ್ ಪೂರನ್ ಉಳಿದ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ.

ಬ್ಯಾಟ್‌ನೊಂದಿಗೆ ಕರ್ನಾಟಕ ಮೂಲದ ಕೆಎಲ್ ರಾಹುಲ್ ಪ್ರದರ್ಶನವು ಐಪಿಎಲ್ 2024ರ ಉದ್ದಕ್ಕೂ ಅದ್ಭುತವಾಗೊದೆ. ಆದರೆ ಅವರ ಸ್ಟ್ರೈಕ್ ರೇಟ್‌ನ ಬಗ್ಗೆ ಸಮಸ್ಯೆಗಳು ಮುನ್ನೆಲೆಗೆ ಬಂದಿವೆ. ಇದು ಅಗ್ರ-ಹತ್ತು ಬ್ಯಾಟರ್‌ಗಳಲ್ಲಿ ಕಡಿಮೆಯಾಗಿದೆ.

ಇನಿಂಗ್ಸ್‌ನ ಆರಂಭದಲ್ಲಿ ಸ್ಟ್ರೈಕ್ ರೇಟ್ ಅನ್ನು ವೇಗಗೊಳಿಸಲು ಕೆಎಲ್ ರಾಹುಲ್ ಅವರ ಅಸಮರ್ಥತೆಯು ಟಿ20 ಸ್ವರೂಪಕ್ಕೆ ಅವರ ಅಗತ್ಯೆತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಇದೀಗ ಕೆಎಲ್ ರಾಹುಲ್ ಅವರ ನಾಯಕತ್ವ ಮತ್ತು ತಂಡದೊಳಗೆ ಅವರ ಭವಿಷ್ಯದ ಪಾತ್ರ ಕುತೂಹಲಕಾರಿಯಾಗಿದೆ. 2025ರ ಐಪಿಎಲ್‌ಗಾಗಿ ಎಲ್‌ಎಸ್‌ಜಿ ತಂಡದಲ್ಲಿ ಉಳಿಯುತ್ತಾರಾ ಅಥವಾ ಬಿಡುಗಡೆಗೊಳ್ಳುತ್ತಾರಾ ಎಂದು ಕಾದು ನೋಡಬೇಕಿದೆ.

Story first published: Thursday, May 9, 2024, 23:17 [IST]
Other articles published on May 9, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+