ಇನ್ನೇನು ಕೆಲವೇ ದಿನಗಳಲ್ಲಿ ಐಪಿಎಲ್ ಆರಂಭವಾಗಲಿದೆ. ಈಗಾಗಲೇ ಎಲ್ಲ ತಂಡಗಳು ಅಭ್ಯಾಸ ಆರಂಭಿಸಿವೆ. ಮಾರ್ಚ್ 22 ರಿಂದ ದೇಶದಲ್ಲಿ ಐಪಿಎಲ್ ರಂಗು ಆವರಿಸಲಿದೆ. ಈ ಲೀಗ್ ಯಶಸ್ವಿ ತಂಡಗಳಲ್ಲಿ ಒಂದಾಗಿರುವ ಸಿಎಸ್‌ಕೆ ಹಾಗೂ ಚೊಚ್ಚಲ ಪ್ರಶಸ್ತಿ ಕನಸಿನಲ್ಲಿರುವ ಆರ್‌ಸಿಬಿ ಅಖಾಡದಲ್ಲಿ ಕಾದಾಟ ನಡೆಸಲಿವೆ. ಈ ಪಂದ್ಯವನ್ನು ನೋಡಲು ಅಭಿಮಾನಿಗಳು ಕಾತುರಾಗಿದ್ದಾರೆ.
ಉಭಯ ತಂಡಗಳಲ್ಲಿ ಸ್ಟಾರ್ ಆಟಗಾರರು ಇದ್ದು ಎಲ್ಲರ ಚಿತ್ತ ಕದ್ದಿದ್ದಾರೆ. ಆದರೆ ಆರ್‌ಸಿಬಿ ತಂಡದಲ್ಲಿರುವ ಸ್ಟಾರ್ ಪ್ಲೇಯರ್ ವಿರಾಟ್ ಕೊಹ್ಲಿ ಅವರಿಗೆ ಈ ಪಂದ್ಯ ವಿಶೇಷವಾಗಿದೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಐತಿಹಾಸಿಕ ದಾಖಲೆಯನ್ನು ಸೃಷ್ಟಿ ಮಾಡುವ ಹಂಬಲ ಹೊಂದಿದ್ದಾರೆ. ವಿರಾಟ್ ಸೃಷ್ಟಿಸಲಿರುವ ದಾಖಲೆ ಯಾವುದು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ವಿರಾಟ್ ಕೊಹ್ಲಿ ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳ ಒಬ್ಬರು. ಐಪಿಎಲ್ 2024 ರ ಮೊದಲ ಪಂದ್ಯದಲ್ಲಿ ಅವರು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 6 ರನ್ ಗಳಿಸಿದರೆ, ಅವರು ಟಿ 20 ಕ್ರಿಕೆಟ್‌ನಲ್ಲಿ ತಮ್ಮ 12000 ರನ್ ಪೂರ್ಣಗೊಳಿಸುತ್ತಾರೆ. ಟಿ20 ಕ್ರಿಕೆಟ್‌ನಲ್ಲಿ 12000 ರನ್ ಗಳಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಅವರಿಗಿಂತ ಮೊದಲು ಯಾವುದೇ ಭಾರತೀಯ ಆಟಗಾರ ಟಿ20 ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಲು ಸಾಧ್ಯವಾಗಿಲ್ಲ.
ವಿರಾಟ್ ಕೊಹ್ಲಿ ಇದುವರೆಗೆ 376 ಟಿ20 ಪಂದ್ಯಗಳಲ್ಲಿ 8 ಶತಕಗಳನ್ನು ಒಳಗೊಂಡಂತೆ 11994 ರನ್ ಗಳಿಸಿದ್ದಾರೆ. ಇದಲ್ಲದೆ, ಅವರ ಹೆಸರಿನಲ್ಲಿ 91 ಅರ್ಧ ಶತಕಗಳು ಸೇರಿವೆ. ಕ್ರಿಸ್ ಗೇಲ್ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದಾರೆ. ಗೇಲ್ ಅವರ ಹೆಸರಿನಲ್ಲಿ 14562 ರನ್‌ಗಳಿವೆ.

ಯುನಿವರ್ಸಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ್ದಾರೆ. ಗೇಲ್ ಅವರ ಹೆಸರಿನಲ್ಲಿ 14562 ರನ್‌ಗಳಿವೆ. ಎರಡನೇ ಸ್ಥಾನದಲ್ಲಿ ಶೋಯಿಬ್ ಮಲಿಕ್ ಇದ್ದು ಇವರು 13338 ರನ್ ಸಿಡಿಸಿದ್ದಾರೆ. ವಿಂಡೀಸ್ ತಂಡದ ದೈತ್ಯ ಕಿರನ್ ಪೋಲಾರ್ಡ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಇವರು 12899 ರನ್ ಸಿಡಿಸಿದ್ದಾರೆ. ಡೇವಿಡ್ ವಾರ್ನರ್ ನಾಲ್ಕನೇ ಸ್ಥಾನದಲ್ಲಿದ್ದು ಇವರು 12065 ರನ್ ಕಲೆ ಹಾಕಿದ್ದಾರೆ.
ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ವಿರಾಟ್ ಕೊಹ್ಲಿ. ಆರ್‌ಸಿಬಿ ತಂಡವನ್ನು ಹಲವು ಬಾರಿ ಸಂಕಷ್ಟದಿಂದ ವಿರಾಟ್ ಪಾರು ಮಾಡಿದ್ದಾರೆ. ಕೊಹ್ಲಿ 2008 ರಿಂದ 2023 ರವರೆಗೆ 16 ಐಪಿಎಲ್ ಸೀಸನ್‌ಗಳನ್ನು ಆರ್‌ಸಿಬಿ ತಂಡಕ್ಕಾಗಿ ಮಾತ್ರ. ಈ ಸಾಧನೆ ಮಾಡಿದ ಮೊದಲ ಆಟಗಾರ ವಿರಾಟ್. ಐಪಿಎಲ್‌ನಲ್ಲಿ ಕೊಹ್ಲಿ 7 ಶತಕ ಸೇರಿದಂತೆ 7263 ರನ್ ಗಳಿಸಿದ್ದಾರೆ.