IPL 2024: RCB ಐಪಿಎಲ್ ಟ್ರೋಫಿ ಗೆಲ್ಲದಿರಲು ವಿರಾಟ್ ಕೊಹ್ಲಿಯೇ ಕಾರಣ!; ಏನಿದು ಹೊಸ ಆರೋಪ?
2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 17ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಈವರೆಗೆ ಆಡಿದ ಮೂರು ಪಂದ್ಯಗಳಲ್ಲಿ 181 ರನ್ ಗಳಿಸಿ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡಿದ್ದಾರೆ.
ಅದರೆ, ಆರ್‌ಸಿಬಿ ತಂಡ ಐಪಿಎಲ್ ಪ್ರಶಸ್ತಿಯನ್ನು ಗೆಲ್ಲುವುದು ವಿರಾಟ್ ಕೊಹ್ಲಿಯ ಅದೃಷ್ಟದಲ್ಲಿಲ್ಲ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದಿಂದ ಅವರನ್ನು ಒಂದು ವರ್ಷದವರೆಗೆ ಕೈಬಿಡುವ ಬಗ್ಗೆ ಯೋಚಿಸಬೇಕು. ಇದರಿಂದ ಫ್ರಾಂಚೈಸಿಗೆ ಪ್ರಶಸ್ತಿ ಗೆಲ್ಲಲು ಅನುಕೂಲ ಮಾಡಿಕೊಡಬೇಕು ಎಂದು ಮಾಜಿ ನಟ, ಸಿನಿಮಾ ವಿಮರ್ಶಕ ಕಮಾಲ್ ಆರ್ ಖಾನ್ ಹೇಳಿದ್ದಾರೆ.

2008ರಲ್ಲಿ ಐಪಿಎಲ್ ಆರಂಭವಾದಾಗಿನಿಂದ ವಿರಾಟ್ ಕೊಹ್ಲಿ ಆರ್‌ಸಿಬಿ ತಂಡದ ಪ್ರಮುಖ ಆಟಗಾರನಾಗಿದ್ದಾರೆ. ಐಪಿಎಲ್ ಮತ್ತು ಆರ್‌ಸಿಬಿ ಪರ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎನಿಸಿದ್ದಾರೆ. 2008ರಲ್ಲಿ ಡ್ರಾಫ್ಟ್ ಮೂಲಕ ಸ್ಥಾನ ಭದ್ರಪಡಿಸಿಕೊಂಡ ವಿರಾಟ್ ಕೊಹ್ಲಿ 16 ವರ್ಷಗಳ ಕಾಲ ಆರ್‌ಸಿಬಿ ಫ್ರಾಂಚೈಸಿಯೊಂದಿಗೆ ಇದ್ದಾರೆ.
ಇದೇ ವೇಳೆ, ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದರೂ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವನ್ನು ಐಪಿಎಲ್ ಪ್ರಶಸ್ತಿಗೆ ಮುನ್ನಡೆಸಲು ವಿರಾಟ್ ಕೊಹ್ಲಿಗೆ ಸಾಧ್ಯವಾಗಿಲ್ಲ.

ಬ್ಯಾಟಿಂಗ್ ದಿಗ್ಗಜ ವಿರಾಟ್ ಕೊಹ್ಲಿ ಎರಡು ವರ್ಷಗಳ ಹಿಂದೆಯೇ ಆರ್‌ಸಿಬಿ ನಾಯಕತ್ವವನ್ನು ತ್ಯಜಿಸಿದರೂ, ಇನ್ನೂ ಫ್ರಾಂಚೈಸಿಯ ಅಗ್ರ ಮತ್ತು ಪ್ರಮುಖ ಬ್ಯಾಟರ್ ಆಗಿ ಉಳಿದಿದ್ದಾರೆ.
ಐಪಿಎಲ್ 2024ರ ಆವೃತ್ತಿಯಲ್ಲಿ ಆರ್‌ಸಿಬಿ ತಂಡ ಕೆಕೆಆರ್ ವಿರುದ್ಧ ಸೋತ ನಂತರ, ಸಿನಿಮಾ ವಿಮರ್ಶಕ ಕಮಾಲ್ ಆರ್ ಖಾನ್ ಅವರು ವಿರಾಟ್ ಕೊಹ್ಲಿ ವಿರುದ್ಧ ಕ್ರೂರವಾಗಿ ಗೇಲಿ ಮಾಡಿದರು ಮತ್ತು ಐಪಿಎಲ್ ಟ್ರೋಫಿ ಬರದ ಹೊಣೆಯನ್ನು ಕೊಹ್ಲಿ ಹೆಗಲ ಮೇಲೆ ಹೊರಿಸಿದ್ದಾರೆ.
16 ವರ್ಷಗಳ ಸುದೀರ್ಘ ಐಪಿಎಲ್ ಚಾಂಪಿಯನ್‌ಶಿಪ್ ಇತಿಹಾಸದಲ್ಲಿ ಆರ್‌ಸಿಬಿ ಒಮ್ಮೆಯೂ ಟ್ರೋಫಿ ಗೆಲ್ಲಲು ವಿಫಲವಾದ ನಂತರ, ಕಮಾಲ್ ಆರ್ ಖಾನ್ (ಕೆಆರ್‌ಕೆ) ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.
ಸ್ವತಃ ವಿರಾಟ್ ಕೊಹ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕು ಮತ್ತು ಅವರಿಲ್ಲದೆ ಆರ್‌ಸಿಬಿ ಪ್ರಶಸ್ತಿ ಗೆಲ್ಲಲು ಸಾಧ್ಯವಾದರೆ, ಪ್ರಯೋಗ ಮಾಡಲು ಒಂದು ವರ್ಷ ತಂಡದಿಂದ ಹಿಂದೆ ಸರಿಯಬೇಕು. ಬಹುಶಃ ವಿರಾಟ್ ಕೊಹ್ಲಿ ಆರ್‌ಸಿಬಿಗೆ ಅಪಶಕುನ ತರುತ್ತಿದ್ದಾರೆ. ಏಕೆಂದರೆ ಐಪಿಎಲ್ ಟ್ರೋಫಿಯನ್ನು ಅವರ ಹಣೆಬರಹದಲ್ಲಿ ಬರೆಯಲಾಗಿಲ್ಲ,'' ಎಂದು ಚಲನಚಿತ್ರ ವಿಮರ್ಶಕರಾಗಿರುವ ಕಮಾಲ್ ಆರ್ ಖಾನ್ ತಿಳಿಸಿದ್ದಾರೆ.
ಆದರೆ, ಐಪಿಎಲ್ ಪ್ರಶಸ್ತಿ ಗೆಲುವು ಸಾಧಿಸಲು ಆರ್‌ಸಿಬಿ ತಂಡಕ್ಕೆ ವಿರಾಟ್ ಕೊಹ್ಲಿ ಅತಿ ಪ್ರಮುಖವಾಗಿದ್ದಾರೆ. ಇದಕ್ಕೆ ಅವರ ಹಿಂದಿನ ಸಾಧನೆಗಳೇ ಸಾಕ್ಷಿಯಾಗಿವೆ.
ಆರ್‌ಸಿಬಿ ಫ್ರಾಂಚೈಸ್ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿರುವ ವಿರಾಟ್ ಕೊಹ್ಲಿ ಕಳೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 77 ರನ್ ಮತ್ತು ಇತ್ತೀಚಿನ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಅಜೇಯ 83 ರನ್ ಗಳಿಸುವುದರೊಂದಿಗೆ ಮಿಂಚಿದರು.
ಆದಾಗ್ಯೂ, ವಿರಾಟ್ ಕೊಹ್ಲಿಯ ವೈಯಕ್ತಿಕ ವರ್ಚಸ್ಸು ಮತ್ತು ತಂಡದಕ್ಕಾಗಿ ಅಚಲವಾದ ಬದ್ಧತೆಯ ಹೊರತಾಗಿಯೂ, ಐಪಿಎಲ್‌ನಲ್ಲಿ ಅಂತಿಮ ಯಶಸ್ಸಿನ ರುಚಿಯನ್ನು ಇನ್ನೂ ಅನುಭವಿಸಿಲ್ಲ. ಇದು ವಿರಾಟ್ ಕೊಹ್ಲಿ ಮತ್ತು ಆರ್‌ಸಿಬಿ ಫ್ರಾಂಚೈಸಿ ಕೋಟ್ಯಂತರ ಅಭಿಮಾನಿಗಳ ಹತಾಶೆಗೆ ಕಾರಣವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications