IPL 2024: ವಿರಾಟ್ ಕೊಹ್ಲಿ, ಡುಪ್ಲೇಸಿಸ್ ಅಲ್ಲ ಈ 3 ಪವರ್ ಫುಲ್ ಪ್ಲೇಯರ್ಸ್ ಬಲದಿಂದ RCB ಕಪ್ ಗೆಲ್ಲುವುದು ಫಿಕ್ಸ್!
ಐಪಿಎಲ್‌ಗೆ ದಿನಗಣನೆ ಆರಂಭವಾಗಿದೆ. ಈ ಬಾರಿ ಆರ್‌ಸಿಬಿ ಮೇಲ್ನೋಟಕ್ಕಂತೂ ಬಲಿಷ್ಠವಾಗಿ ಕಾಣುತ್ತಿದೆ. ಚೊಚ್ಚಲ ಟ್ರೋಫಿ ಗೆಲುವಿನ ಅಭಿಯಾನವನ್ನು ಆರಂಭಿಸಲು ಆರ್‌ಸಿಬಿ ಆಟಗಾರರು ಸಹ ಎದುರು ನೋಡುತ್ತಿದ್ದಾರೆ. ಈ ಬಾರಿ ಆರ್‌ಸಿಬಿ ತಂಡದ ಸ್ಟಾರ್ ಆಟಗಾರರು ಭರ್ಜರಿ ಫಾರ್ಮ್‌ನಲ್ಲಿದ್ದು, ಕಪ್ ಗೆಲುವಿನ ಆಸೆ ಚಿಗುರಿದೆ. ಈ ಬಾರಿ ಆರ್‌ಸಿಬಿ ತಂಡದ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ, ನಾಯಕ ಫಾಫ್ ಡುಪ್ಲೇಸಿಸ್ ಬಲದ ಮೇಲೆ ಕಪ್ ಗೆಲ್ಲುತ್ತದೆ ಎಂದು ಹೇಳುತ್ತಿಲ್ಲ ಬದಲಿಗೆ ಈ ಮೂವರು ಆಟಗಾರರು ನಿಜಕ್ಕೂ ಆರ್‌ಸಿಬಿ ಆನೆ ಬಲ ತುಂಬಿದ್ದಾರೆ.
ಆರ್‌ಸಿಬಿ 17ನೇ ಆವೃತ್ತಿಯ ಐಪಿಎಲ್‌ನಲ್ಲಿ ಮೊದಲ ಐಪಿಎಲ್ ಟ್ರೋಫಿ ಹುಡುಕಾಟದಲ್ಲಿದೆ. 2009, 2011, ಮತ್ತು 2016ರಲ್ಲಿ ಕಪ್ ಮೇಲೆ ಒಂದು ಕೈ ಇಟ್ಟಿತ್ತು. ಆದರೆ ಫೈನಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡದೆ ಪಂದ್ಯ ಸೋಲು ಅನುಭವಿಸಿತು. ಆದರೆ, ಈ ಬಾರಿ ಐಪಿಎಲ್ ಟ್ರೋಫಿಯನ್ನ ಗೆದ್ದು ಅಭಿಮಾನಿಗಳಿಗೆ ಉಡುಗೊರೆ ನೀಡಲು ಆರ್‌ಸಿಬಿ ಪ್ಲ್ಯಾನ್ ಮಾಡಿಕೊಂಡಿದೆ. ಆರ್‌ಸಿಬಿ ತಂಡದ ಈ 3 ಆಟಗಾರರ ಕಪ್ ಗೆಲುವಿನ ಭರವಸೆ ಮೂಡಿಸಿದ್ದಾರೆ. ಈ ಮೂವರು ಆಟಗಾರರ ಬಗ್ಗೆ ಇಲ್ಲಿದೆ ಮಾಹಿತಿ.

ಟಾಪ್ ಆರ್ಡರ್‌ಗೆ ಬಲ ತುಂಬುವ ಪ್ಲೇಯರ್
ಆರ್‌ಸಿಬಿ ಮೊದಲ ಬಾರಿಗೆ ಪ್ರಶಸ್ತಿ ಗೆಲ್ಲುವ ಕನಸು ಕಾಣುತ್ತಿದೆ. ಇದಕ್ಕೆ ಬಲ ತುಂಬುವ ಆಟಗಾರ, ಇಂಗ್ಲೆಂಡ್‌ನ ಬಿರುಗಾಳಿಯ ಆರಂಭಿಕ ಆಟಗಾರ ವಿಲ್ ಜಾಕ್ಸ್. ಇವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡಿ, ಅವರಿಗೆ ನಿರಂತರ ಅವಕಾಶಗಳನ್ನು ನೀಡಬೇಕು. ಇತ್ತೀಚೆಗಷ್ಟೇ ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ನಲ್ಲಿ ಕೇವಲ 53 ಎಸೆತಗಳಲ್ಲಿ 108 ರನ್ ಗಳಿಸಿದ್ದ ವಿಲ್, ಮೊದಲ ಬಾರಿಗೆ ತಂಡವನ್ನು ಚಾಂಪಿಯನ್ ಮಾಡುವ ಸಂಪೂರ್ಣ ಸಾಮರ್ಥ್ಯವನ್ನು ಹೊಂದಿದ್ದಾರೆ.
ಅವರು ಫಾಫ್ ಮತ್ತು ವಿರಾಟ್ ಜೊತೆಗೆ ಆರ್‌ಸಿಬಿಯ ಬ್ಯಾಟಿಂಗ್ ಅನ್ನು ಬಲ ಪಡಿಸಬಲ್ಲ ಪ್ಲೇಯರ್. ಅಲ್ಲದೆ ಎದುರಾಳಿ ಬೌಲರ್‌ಗಳಿಗೆ ಈಗಾಗಲೇ ನಡುಕ ಹುಟ್ಟಿಸಿದ್ದಾರೆ. ಗಾಯದ ಸಮಸ್ಯೆಯಿಂದ ಕಳೆದ ಋತುವಿನಲ್ಲಿ ಆಡಲು ಸಾಧ್ಯವಾಗದ ಈ ಆಟಗಾರನಿಂದ ತಂಡ ಮತ್ತು ಅಭಿಮಾನಿಗಳು ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದಾರೆ. ಬಿರುಸಿನ ಬ್ಯಾಟಿಂಗ್ ಮೂಲಕ ಪಂದ್ಯವನ್ನು ತಂಡದ ಪರವಾಗಿ ಪಂದ್ಯದ ಗತಿಯನ್ನೇ ತಿರುಗಿಸುವ ಶಕ್ತಿ ಹೊಂದಿರುವ ಈ ಆಟಗಾರ ಇದುವರೆಗೆ 156 ಟಿ20 ಲೀಗ್ ಪಂದ್ಯಗಳಲ್ಲಿ 3 ಶತಕ ಹಾಗೂ 30 ಅರ್ಧ ಶತಕ ಬಾರಿಸಿದ್ದಾರೆ.

ಮಿಡ್ಲ್ ಆರ್ಡರ್‌ನಲ್ಲಿ ಇವರೇ ಆನೆ ಬಲ
ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ವಿಶ್ವಕಪ್ 2023 ರಿಂದ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ದ್ವಿಶತಕ ಹಾಗೂ ಶತಕ ಸಿಡಿಸಿದ ಈ ಆಟಗಾರ, ಭಾರತ ವಿರುದ್ಧದ ಟಿ20ಯಲ್ಲಿ ಶತಕ ಸಿಡಿಸಿದ್ದಾರೆ. ಅಲ್ಲದೆ, ಇತ್ತೀಚೆಗಷ್ಟೇ ವೆಸ್ಟ್ ಇಂಡೀಸ್ ವಿರುದ್ಧ ಟಿ20 ಕರಿಯರ್‌ನಲ್ಲಿ 5ನೇ ಶತಕ ಬಾರಿಸಿದ್ದಾರೆ. ಮ್ಯಾಕ್ಸ್‌ವೆಲ್ ಬ್ಯಾಟ್ ಮತ್ತು ಬಾಲ್‌ನೊಂದಿಗೆ ಪಂದ್ಯಗಳನ್ನು ಗೆಲ್ಲಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ.
ಐಪಿಎಲ್ 2024 ರಲ್ಲಿ ಮ್ಯಾಕ್ಸ್‌ವೆಲ್ ತನ್ನ ಅದೇ ಫಾರ್ಮ್ ಅನ್ನು ಉಳಿಸಿಕೊಳ್ಳಲು ಮತ್ತು ಮೊದಲ ಬಾರಿಗೆ ತಂಡವನ್ನು ಚಾಂಪಿಯನ್ ಮಾಡುವಲ್ಲಿ ದೊಡ್ಡ ಪಾತ್ರವನ್ನು ವಹಿಸಬೇಕೆಂದು RCB ಬಯಸುತ್ತಿದೆ. ಈ ಆಟಗಾರನ ಫಾರ್ಮ್ ಅನ್ನು ಪರಿಗಣಿಸಿ ಇದನ್ನು ನಿರೀಕ್ಷಿಸಬಹುದು. ಕಳೆದ ಋತುವಿನಲ್ಲಿಯೂ ಮ್ಯಾಕ್ಸ್‌ವೆಲ್‌ನ ಪ್ರದರ್ಶನ ಉತ್ತಮವಾಗಿತ್ತು. ಅವರು 14 ಪಂದ್ಯಗಳಲ್ಲಿ 5 ಅರ್ಧ ಶತಕಗಳನ್ನು ಗಳಿಸಿ 400 ರನ್ ಗಳಿಸಿದರು ಮತ್ತು 3 ವಿಕೆಟ್‌ಗಳನ್ನು ಸಹ ಪಡೆದಿದ್ದರು.

ಪವರ್ ಫುಲ್ ಬೌಲರ್
ವಿಲ್ ಜಾಕ್ವೆಸ್ ಮತ್ತು ಮ್ಯಾಕ್ಸ್‌ವೆಲ್ ಫಾರ್ಮ್‌ನಲ್ಲಿರುವುದರಿಂದ ಆರ್‌ಸಿಬಿಯ ಬ್ಯಾಟಿಂಗ್ ಬಲಗೊಂಡಿದೆ. ಆದರೆ ಐಪಿಎಲ್ 2024 ರಲ್ಲಿ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರ ಪಾತ್ರವು ತಂಡಕ್ಕೆ ಬಹಳ ಮುಖ್ಯವಾಗಿದೆ. ಏಷ್ಯಾಕಪ್ ಮತ್ತು ವಿಶ್ವಕಪ್‌ನಲ್ಲಿ ಅದ್ಭುತ ಬೌಲಿಂಗ್ ಮಾಡಿದ್ದ ಸಿರಾಜ್ ಆರಂಭಿಕ ಓವರ್‌ಗಳಲ್ಲಿ ವಿಕೆಟ್ ಕಬಳಿಸಿ ಹೆಸರುವಾಸಿ.
ಅವರು ಐಪಿಎಲ್‌ನಲ್ಲಿ ಈಗಿರುವ ಫಾರ್ಮ್ ಅನ್ನು ಮುಂದುವರೆಸುವಲ್ಲಿ ಯಶಸ್ವಿಯಾದರೆ, ಅಲ್ಜಾರಿ ಜೋಸೆಫ್ ಅಥವಾ ಲಾಕಿ ಫರ್ಗುಸನ್ ಅವರೊಂದಿಗೆ ತಂಡದ ಬೌಲಿಂಗ್ ಅನ್ನು ಮಾರಕವಾಗಿಸಬಹುದು. ಮತ್ತು ತಂಡ ಮೊದಲ ಬಾರಿಗೆ ಚಾಂಪಿಯನ್ ಮಾಡುವಲ್ಲಿ ದೊಡ್ಡ ಪಾತ್ರವನ್ನು ವಹಿಸಬಹುದು. ಕಳೆದ ಋತುವಿನಲ್ಲಿ ಸಿರಾಜ್ 14 ಪಂದ್ಯಗಳಲ್ಲಿ 19 ವಿಕೆಟ್ ಪಡೆದಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications