IPL 2024: ಟಗರು ಬಂತು ಟಗರು...; ಐಪಿಎಲ್‌ಗಾಗಿ ಆರ್‌ಸಿಬಿ ಕ್ಯಾಂಪ್ ಸೇರಲು ಬಂದ ಕಿಂಗ್ ಕೊಹ್ಲಿ
2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 17ನೇ ಆವೃತ್ತಿಗಾಗಿ ಭಾರತದಲ್ಲಿ ಕ್ರಿಕೆಟ್ ಉತ್ಸಾಹವು ಅತ್ಯುನ್ನತ ಮಟ್ಟ ತಲುಪಿದ್ದು, ಉದ್ಘಾಟನಾ ಪಂದ್ಯಕ್ಕೆ ಕೇವಲ ಐದು ದಿನಗಳು ಮಾತ್ರ ಬಾಕಿ ಉಳಿದಿವೆ. ಮಾರ್ಚ್ 22ರಂದು ಆರ್‌ಸಿಬಿ ಮತ್ತು ಸಿಎಸ್‌ಕೆ ನಡುವೆ ಮೊದಲ ಪಂದ್ಯ ನಡೆಯಲಿದ್ದರೆ, ಮೇ 26ರಂದು ಫೈನಲ್ ಪಂದ್ಯ ನಡೆಯುವ ನಿರೀಕ್ಷೆ ಇದೆ.
ಈಗಾಗಲೇ ಕೆಲವು ತಂಡಗಳ ಆಟಗಾರರು ತರಬೇತಿ ಶಿಬಿರಗಳಲ್ಲಿ ಬೆವರು ಹರಿಸುತ್ತಿದ್ದರೆ, ಕೆಲವು ಸ್ಟಾರ್ ಆಟಗಾರರು ಇನ್ನೂ ಅವರ ಫ್ರಾಂಚೈಸಿಗಳನ್ನು ಸೇರಿಕೊಳ್ಳಬೇಕಿದೆ.
ಇದೀಗ ಭಾರತ ಹಾಗೂ ಆರ್‌ಸಿಬಿ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಎರಡನೇ ಬಾರಿಗೆ ತಂದೆಯಾದ ನಂತರ, ಮೊದಲ ಬಾರಿಗೆ ಭಾರತಕ್ಕೆ ಮರಳಿದ್ದಾರೆ. ಲಂಡನ್‌ನಿಂದ ಭಾನುವಾರ, ಮಾರ್ಚ್ 17ರಂದು ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದರು.

ವಿರಾಟ್ ಕೊಹ್ಲಿ ತನ್ನ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಸೇರಲು ಭಾರತಕ್ಕೆ ಹಿಂದಿರುಗಿದಾಗ ಮುಂಬೈನ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ವಿರಾಟ್ ಕೊಹ್ಲಿ ಈ ಬಾರಿ ಐಪಿಎಲ್‌ನಲ್ಲಿ ಆಡುತ್ತಾರೆಯೇ ಎಂಬ ಗೊಂದಲದಲ್ಲಿದ್ದ ಆರ್‌ಸಿಬಿ ತಂಡದ ಅಭಿಮಾನಿಗಳಿಗೆ ಸಂತೋಷದ ಸುದ್ದಿಯಾಗಿದೆ.
ಮಾರ್ಚ್ 19ರಂದು ಬೆಂಗಳೂರಿನಲ್ಲಿ ಆರ್‌ಸಿಬಿ "ಅನ್‌ಬಾಕ್ಸ್' ಈವೆಂಟ್‌ಗೆ ಮುಂಚಿತವಾಗಿ ಅಗ್ರ ಕ್ರಮಾಂಕದ ಬ್ಯಾಟರ್ ಶೀಘ್ರದಲ್ಲೇ ಬೆಂಗಳೂರಿನಲ್ಲಿ ತನ್ನ ಸಹ ಆಟಗಾರರನ್ನು ಸೇರುವ ಸಾಧ್ಯತೆಯಿದೆ.
ಉದ್ಯಾನ ನಗರಿಯಲ್ಲಿ ನಡೆಯುವ ಹೈ-ಪ್ರೊಫೈಲ್ ವಾರ್ಷಿಕ ಕಾರ್ಯಕ್ರಮವಾದ "ಆರ್‌ಸಿಬಿ ಅನ್‌ಬಾಕ್ಸ್' ಈವೆಂಟ್‌ನಲ್ಲಿ ವಿರಾಟ್ ಕೊಹ್ಲಿ ತಮ್ಮ ಫ್ರಾಂಚೈಸಿಗಾಗಿ ಮೊದಲ ಬಾರಿಗೆ ಕಾಣಿಸಿಕೊಳ್ಳಬಹುದು, ಇಲ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಯರನ್ನು ಹತ್ತಿರದಿಂದ ವೀಕ್ಷಿಸಬಹುದು.

ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ತಮ್ಮ ಮಗ ಅಕಾಯ್‌ನನ್ನು ಸ್ವಾಗತಿಸುತ್ತಿದ್ದಂತೆ ಅಭಿಮಾನಿಗಳು ಸೇರಿದಂತೆ ಕ್ರಿಕೆಟ್ ಜಗತ್ತು ಸಂತೋಷಪಟ್ಟಿತು.
2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಆಡಲು ಸಜ್ಜಾಗುತ್ತಿರುವ ವಿರಾಟ್ ಕೊಹ್ಲಿಗೆ ಅವರ ವೃತ್ತಿಪರ ವೃತ್ತಿಜೀವನದ ನಿರ್ಣಾಯಕ ಹಂತವಾಗಿದೆ.
ಐಪಿಎಲ್ 2024ರ ಮೊದಲು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಶಿಬಿರವನ್ನು ಸೇರಲು ವಿರಾಟ್ ಕೊಹ್ಲಿ ಸಿದ್ಧರಾಗಿದ್ದಾರೆ. ಐಪಿಎಲ್ ಆರಂಭದಿಂದಲೂ ಆರ್‌ಸಿಬಿಯ ಅವಿಭಾಜ್ಯ ಸದಸ್ಯನಾಗಿರುವ ಕೊಹ್ಲಿಯ ಪುನರಾಗಮನಕ್ಕೆ ಅಭಿಮಾನಿಗಳು ಮತ್ತು ಸಹ ಆಟಗಾರರು ಕುತೂಹಲದಿಂದ ನಿರೀಕ್ಷಿಸುತ್ತಿದ್ದಾರೆ.

ವಿರಾಟ್ ಕೊಹ್ಲಿ ಅವರ ನಾಯಕತ್ವ ಮತ್ತು ಬ್ಯಾಟಿಂಗ್ ಪ್ರದರ್ಶನ ತಂಡಕ್ಕೆ ಪ್ರಮುಖವಾಗಿವೆ ಮತ್ತು ಮುಂಬರುವ ಋತುವಿನಲ್ಲಿ ಅವರ ಉಪಸ್ಥಿತಿಯು ಆರ್‌ಸಿಬಿ ತಂಡದ ಟ್ರೋಫಿ ಗೆಲುವಿನ ಅವಕಾಶಗಳನ್ನು ಗಮನಾರ್ಹವಾಗಿ ಹೆಚ್ಚಿಸುವ ನಿರೀಕ್ಷೆಯಿದೆ.
ವಿರಾಟ್ ಕೊಹ್ಲಿ ಆರ್‌ಸಿಬಿ ಕ್ಯಾಂಪ್ ಸೇರಲಿದ್ದಾರೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ನಿಷ್ಠಾವಂತ ಅಭಿಮಾನಿಗಳು ತಮ್ಮ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅವರು ತಂಡದ ಪೂರ್ವ-ಟೂರ್ನಮೆಂಟ್ ಶಿಬಿರವನ್ನು ಶೀಘ್ರದಲ್ಲೇ ಸೇರಿಕೊಳ್ಳುವುದನ್ನು ಕಾಯುತ್ತಿದ್ದಾರೆ.
ವಿರಾಟ್ ಕೊಹ್ಲಿ ವೈಯಕ್ತಿಕ ಕಾರಣಗಳಿಂದ ಇಂಗ್ಲೆಂಡ್ ವಿರುದ್ಧದ ಇತ್ತೀಚಿನ ಟೆಸ್ಟ್ ಸರಣಿಯನ್ನು ತಪ್ಪಿಸಿಕೊಂಡರು. ಆದರೆ ಅವರು ಐಪಿಎಲ್‌ಗೆ ಮರಳುತ್ತಿರುವುದು ಆರ್‌ಸಿಬಿ ತಂಡಕ್ಕೆ ಖುಷಿಯ ಸುದ್ದಿಯಾಗಿದೆ.
ಐಪಿಎಲ್ 2024ರ ಆರಂಭವು ಹೈ-ವೋಲ್ಟೇಜ್ ಪಂದ್ಯದೊಂದಿಗೆ ಕಿಕ್‌ಸ್ಟಾರ್ಟ್ ಪಡೆಯಲಿದ್ದು, ಮಾರ್ಚ್ 22ರಂದು ಚೆನ್ನೈನ ಐಕಾನಿಕ್ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಆರ್‌ಸಿಬಿ ತಂಡವು ಸಾಂಪ್ರದಾಯಿಕ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ವಿರುದ್ಧ ಸೆಣಸಲಿದೆ.
ಈ ಪಂದ್ಯದಲ್ಲಿ ಭಾರತೀಯ ಕ್ರಿಕೆಟ್‌ನ ಮತ್ತೊಬ್ಬ ಲೆಜೆಂಡ್ ಆಟಗಾರ ಎಂಎಸ್ ಧೋನಿ ನಾಯಕತ್ವದ ತಂಡದ ವಿರುದ್ಧ ಆರ್‌ಸಿಬಿ ತಂಡ ಕಣಕ್ಕಿಳಿಯಲಿದ್ದು, ಈ ಮುಖಾಮುಖಿಯು ಪಂದ್ಯಾವಳಿಗೆ ಹೆಚ್ಚುವರಿ ಉತ್ಸಾಹವನ್ನು ಸೇರಿಸಲಿದೆ.
ವಿರಾಟ್ ಕೊಹ್ಲಿ ಬೆಂಬಲಕ್ಕೆ ನಿಂತ ಇರ್ಫಾನ್ ಪಠಾಣ್
ಭಾರತ ತಂಡದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಮಾತನಾಡಿ, ವಿರಾಮದಿಂದ ಹೊರಬರುವುದರಿಂದ ವಿರಾಟ್ ಕೊಹ್ಲಿ ಎದುರಾಳಿ ತಂಡಗಳಿಗೆ ದೊಡ್ಡ ಬೆದರಿಕೆಯನ್ನು ಒಡ್ಡಲಿದ್ದಾರೆ ಎಂದು ಹೇಳಿದರು. ವಿರಾಟ್ ಕೊಹ್ಲಿ ಅವರು 2016ರಲ್ಲಿ 973 ರನ್ ಗಳಿಸಿದ್ದನ್ನು ಪುನರಾವರ್ತಿಸುತ್ತಾರೆ ಎಂದು ಮಾಜಿ ಕ್ರಿಕೆಟಿಗ ತಿಳಿಸಿದರು.
"ಮೊದಲನೆಯದಾಗಿ, ಕೊಹ್ಲಿ ತಾಜಾನಾಗಿರುತ್ತಾನೆ. ಇಷ್ಟು ಫಿಟ್ ಆಗಿರುವ ವಿರಾಟ್ ಕೊಹ್ಲಿಯಂತಹ ಆಟಗಾರರು ಎದುರಾಳಿಗಳಿಗೆ ತುಂಬಾ ಅಪಾಯಕಾರಿ. ಅವರು ಐಪಿಎಲ್‌ನಲ್ಲಿ ಆಡಲು ಎದುರು ನೋಡುತ್ತಿದ್ದಾರೆ. 2016ರ ನಂತರ ತಮ್ಮ ಜೀವನದ ಎರಡನೇ ಅತ್ಯುತ್ತಮ ಋತುವನ್ನು ಹೊಂದಿರುತ್ತಾರೆ ಎಂದು ನಾನು ವೈಯಕ್ತಿಕವಾಗಿ ಭಾವಿಸುತ್ತೇನೆ," ಎಂದು ಇರ್ಫನ್ ಪಠಾಣ್ ಸ್ಟಾರ್ ಸ್ಪೋರ್ಟ್ಸ್ ಪ್ರೆಸ್ ಮೀಟ್‌ನಲ್ಲಿ ಅಭಿಪ್ರಾಯಪಟ್ಟರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications