Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2024: ವಿರಾಟ್‌ ಕೊಹ್ಲಿಯಲ್ಲಿ ನಿಜವಾಗಿಯೂ ಸ್ಟ್ರೈಕ್‌ ರೇಟ್‌ ಸಮಸ್ಯೆ ಇದೆಯೇ?

ಗುರುವಾರ ಏಪ್ರಿಲ್‌ 25 ರಂದು ನಡೆದ ಇಂಡಿಯನ್‌ ಪ್ರಿಮೀಯರ್‌ ಲೀಗ್‌ (ಐಪಿಎಲ್‌)ನ 41ನೇ ಪಂದ್ಯದಲ್ಲಿ ಸನ್‌ ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್‌) ವಿರುದ್ಧ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಒಂದು ತಿಂಗಳ ನಂತರ ಎರಡನೇ ಭರ್ಜರಿ ಗೆಲುವು ಸಾಧಿಸಿದೆ. ಗೆಲ್ಲುವ ನೆಚ್ಚಿನ ತಂಡವಾಗಿ ಮೈದಾನಕ್ಕೀಳಿದಿದ್ದ ಬಲಿಷ್ಠ ಹೈದರಾಬಾದ್‌ ತಂಡವನ್ನು ತವರಿನಲ್ಲೆ ಆರ್‌ಸಿಬಿ ಬೌಲರ್ಸ್‌ ಕಟ್ಟಿಹಾಕಿದರು.

ಈ ಪಂದ್ಯದಲ್ಲಿ ಆರ್‌ಸಿಬಿ ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ ಅರ್ಧಶತಕ ಗಳಿಸುವ ಮೂಲಕ 430 ರನ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ನಂತರ 349 ರನ್‌ ಗಳಿಸಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕ ಋತುರಾಜ್‌ ಗಾಯಕ್ವಾಡ್‌ ಎರಡನೇ ಸ್ಥಾನದಲ್ಲಿದ್ದಾರೆ. 17ನೇ ಐಪಿಎಲ್‌ ಆವೃತ್ತಿಯಲ್ಲಿ ಅತಿ ಹೆಚ್ಚು ರನ್‌ ಹೊಡೆದವರ ಪಟ್ಟಿಯಲ್ಲಿ ಮೊದಲಿರುವ ವಿರಾಟ್‌ ಕೊಹ್ಲಿ ಆಡಿರುವ 9 ಪಂದ್ಯಗಳಲ್ಲಿ ಮೂರು ಅರ್ಧಶತಕ ಹಾಗು ಒಂದು ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಐಪಿಎಲ್‌ನಲ್ಲಿ ಅಜೇಯ 113* ರನ್‌ ವಿರಾಟ್‌ ಕೊಹ್ಲಿಯ ಬೆಸ್ಟ್‌ ನಾಕೌಟ್ ಆಗಿದೆ.

IPL 2024 Virat Kohli Strike Rate Discussion

ಹೀಗೆ ಅದ್ಭುತವಾಗಿ ಪ್ರಸ್ತುತ ಐಪಿಎಲ್‌ನಲ್ಲಿ ರನ್‌ ಕಲೆ ಹಾಕುತ್ತಿರುವ ವಿರಾಟ್‌ ಕೊಹ್ಲಿ ಬ್ಯಾಟಿಂಗ್‌ ಬಗ್ಗೆ ಚರ್ಚೆ ಶುರುವಾಗಿದೆ. ಹೈದರಾಬಾದ್‌ ವಿರುದ್ಧ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಇನ್ನಿಂಗ್ಸ್‌ ಆರಂಭಿಸಿದ ನಾಯಕ ಫಾಫ್‌ ಡು ಪ್ಲೆಸಿಸ್‌ ಮತ್ತು ವಿರಾಟ್‌ ಕೊಹ್ಲಿ ಪವರ್‌ ಫ್ಲೇ ನಲ್ಲಿ ಉತ್ತಮವಾಗಿ ರನ್‌ ಗಳಿಸಿದರು. ಇದರಲ್ಲಿ ಕೊಹ್ಲಿ ಎದುರಿಸಿದ ಮೊದಲ 18 ಎಸೆತಗಳಲ್ಲಿ 32 ರನ್‌ಗಳನ್ನು ಗಳಿಸುವ ಮೂಲಕ ಒಳ್ಳೆಯ ಬ್ಯಾಟಿಂಗ್‌ ಸ್ಟ್ರೈಕ್‌ ರೇಟ್‌ ಹೊಂದಿದ್ದರು.

ಈ ಹಂತದಲ್ಲಿ ಕೊಹ್ಲಿ ಬ್ಯಾಟ್‌ನಿಂದ 4 ಬೌಂಡರಿ ಮತ್ತು ಒಂದು ಸಿಕ್ಸರ್‌ ಕೂಡ ಬಂದಿತ್ತು. ಆದರೆ 7 ರಿಂದ 15 ಓವರ್‌ಗಳಲ್ಲಿ ಒಂದೇ ಒಂದು ಬೌಂಡರಿ ಗಳಿಸಲು ಕೊಹ್ಲಿ ಕೈಯಿಂದ ಆಗಲಿಲ್ಲ. ಕೊಹ್ಲಿ ಎದುರಿಸಿದ ಕೊನೆಯ 25 ಎಸೆತಗಳಲ್ಲಿ ಕೇವಲ 19 ರನ್‌ ಗಳಿಸಿದರು. 118.60 ಸ್ಟ್ರೈಕ್‌ ರೇಟ್‌ನಲ್ಲಿ 43 ಎಸೆತಗಳಿಂದ ಕೊಹ್ಲಿ ಗಳಿಸಿದ್ದು ಕೇವಲ 51 ರನ್‌ ಅಷ್ಟೆ. ಹೀಗಾಗಿ ಮತ್ತೊಮ್ಮೆ ಕೊಹ್ಲಿ ಸ್ಟ್ರೈಕ್‌ ರೇಟ್‌ ಬಗ್ಗೆ ದಿಗ್ಗಜ ಕ್ರಿಕೆಟಿಗರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಜಿಯೋ ಸಿನಿಮಾದಲ್ಲಿ ವಿರಾಟ್‌ ಕೊಹ್ಲಿ ಬ್ಯಾಟಿಂಗ್‌ಯನ್ನು ಟೀಮ್‌ ಇಂಡಿಯಾದ ಮಾಜಿ ಕ್ರಿಕೆಟಿಗ ಅಜಯ್‌ ಜಡೇಜಾ ಸಂಪೂರ್ಣವಾಗಿ ದೂಷಿಸಿದ್ದಾರೆ. ಹೈದರಾಬಾದ್‌ ಎದುರು ಕೊಹ್ಲಿ ಇನ್ನಿಂಗ್ಸ್‌ ಆರಂಭಿಸಿದಾಗ ವಿಭಿನ್ನ ಮನಸ್ಥಿತಿಯಲ್ಲಿದ್ದರು. ಮೊದಲ 12 ಎಸೆತಗಳನ್ನು ಸುಮಾರು 24 ರನ್‌ಗಳನ್ನು ಕೊಹ್ಲಿ ಗಳಿಸಿದಾಗ, ಎಸ್‌ಆರ್‌ಹೆಚ್‌ ಇತರೆ ತಂಡಗಳಿಗೆ ಮಾಡುವುದನ್ನು ಆರ್‌ಸಿಬಿ ಮಾಡುತ್ತಿದೆ ಎಂದು ಭಾವಿಸಿದ್ದೇವು. ಆದರೆ ಎಸ್‌ಆರ್‌ಹೆಚ್‌ ಮತ್ತು ಆರ್‌ಸಿಬಿ ನಡುವಿನ ಪ್ರಮುಖ ವ್ಯತ್ಯಾಸ ಪಂದ್ಯ ಮುಂದೆ ಬಂದಾಗ ತಿಳಿಯಿತು ಎಂದು ಹೇಳಿದ್ದಾರೆ.

ಆರ್‌.ಪಿ ಸಿಂಗ್‌ ಹೇಳಿದ್ದೇನು? :

ಮತ್ತೊಂದೆಡೆ ಟೀಮ್‌ ಇಂಡಿಯಾದ ಮಾಜಿ ವೇಗಿ ಆರ್‌.ಪಿ ಸಿಂಗ್‌ ಕೊಹ್ಲಿ ಸ್ಟ್ರೈಕ್‌ ರೇಟ್‌ ಅನ್ನು ಸರ್ಮಥನೆ ಮಾಡಿಕೊಂಡಿದ್ದಾರೆ. ಕೊಹ್ಲಿ ಪವರ್‌ ಪ್ಲೇ ಒಳಗೆ ತನ್ನನ್ನು ತಾನು ಬದಲಾಯಿಸಿಕೊಂಡಿದ್ದಾನರೆ. ಇನ್ನು ಮುಂದೆ ನಾವು ಕೊಹ್ಲಿಯಿಂದ ಹಿಂದಿನ ಆಟವನ್ನು ನೋಡುವುದಿಲ್ಲ. ಶಾಟ್‌ ಆಡಲು ಕೊಹ್ಲಿ ಸಮಯವನ್ನು ತೆಗೆದುಕೊಂಡು ಬಾಲ್‌ ಬರುವ ಪ್ರಕಾರ ಶಾಟ್‌ ಆಡುತ್ತಾರೆ.

ಗುರುವಾರ ನಡೆದ ಹೈದರಾಬಾದ್‌ ನಡುವಿನ ಪಂದ್ಯದಲ್ಲಿ ಕೊಹ್ಲಿ ಕೊನೆ ಹಂತದಲ್ಲಿ ಒಂದೇ ಒಂದು ಬೌಂಡರಿ ಹೊಡೆಯಲಿಲ್ಲ. ಆದರೆ ಅವರು ಸುಮ್ಮನೆ ಇರಲಿಲ್ಲ. ಎರಡು ವಿಕೆಟ್‌ ಬಿದ್ದ ನಂತರ ಒಂದು ಕಡೆ ಕಟ್ಟಿಯಾಗಿ ನಿಂತು ರಜತ್‌ ಪಾಟಿದಾರ್‌ ಅವರಿಗೆ ರನ್‌ ಗಳಿಸಲು ಕೊಹ್ಲಿ ಅವಕಾಶ ಮಾಡಿಕೊಟ್ಟರು ಎಂದು ತಿಳಿಸಿದ್ದಾರೆ.

Story first published: Friday, April 26, 2024, 13:03 [IST]
Other articles published on Apr 26, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+