Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2024: ಬಿರುಸಿನ ಬ್ಯಾಟಿಂಗ್ ನಡೆಸಿ ಡೆಲ್ಲಿ ಕ್ಯಾಪಿಟಲ್ಸ್‌ ಫ್ರಾಂಚೈಸಿ ಮುಖದಲ್ಲಿ ನಗು ಮೂಡಿಸಿದ ವಾರ್ನರ್

ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಡೇವಿಡ್ ವಾರ್ನರ್ ಬಿರುಸಿನ ಬ್ಯಾಟಿಂಗ್ ಆಡಿದರು. ಈ ಮೂಲಕ ಐಪಿಎಲ್‌ಗೆ ದಿನಗಳು ಬಾಕಿ ಇರುವಂತೆ ಡೇವಿಡ್ ವಾರ್ನರ್‌ ಭರ್ಜರಿ ಫಾರ್ಮ್‌ಗೆ ಮರಳಿದ್ದಾರೆ. ಅಲ್ಲದೆ ತಾವು ಪ್ರತಿನಿಧಿಸುವ ಡೆಲ್ಲಿ ತಂಡವನ್ನು ಚಾಂಪಿಯನ್‌ ಪಟ್ಟಕ್ಕೆ ಏರಿಸುವ ಮಹದಾಸೆಯನ್ನು ಹೊಂದಿದ್ದಾರೆ.

ಡೇವಿಡ್‌ ವಾರ್ನರ್‌ ಮಂಗಳವಾ ಬ್ಯಾಟಿಂಗ್ ಮಾಡಿದ ಧಾಟಿಯನ್ನು ನೋಡಿದ ಫ್ಯಾನ್ಸ್‌ ಫುಲ್ ಖುಷ್ ಆಗಿದ್ದಾರೆ. ಒಬ್ಬರ ಹಿಂದೆ ಒಬ್ಬರಂತೆ ಐಪಿಎಲ್‌ ಫ್ರಾಂಚೈಸಿಗಳ ಮುಖದಲ್ಲಿ ಪ್ಲೇಯರ್ಸ್‌ ಮಂದಹಾಸವನ್ನು ಮೂಡಿಸುತ್ತಿದ್ದಾರೆ. ಈಗ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಸರದಿಯಾಗಿದೆ. ಡೇವಿಡ್‌ ವಾರ್ನರ್‌ ಅವರ ಧಮಾಕೆದಾರ್ ಬ್ಯಾಟಿಂಗ್ ನೋಡಿದ ಡೆಲ್ಲಿ ತಂಡ ಫುಲ್ ಖುಷ್ ಆಗಿದೆ.

IPL 2024: Warner puts a smile on Delhi Capitals franchise with his blistering batting

ಐಪಿಎಲ್ ಆರಂಭಕ್ಕೂ ಮುನ್ನವೇ ಸ್ಟಾರ್ ಪ್ಲೇಯರ್ ಫಾರ್ಮ್‌ಗೆ ಮರಳಿರುವುದು ಫ್ರಾಂಚೈಸಿ ಸಂತಸವನ್ನು ಇಮ್ಮಡಿ ಮಾಡಿದೆ. ಮಂಗಳವಾರ ವೆಸ್ಟ್‌ ಇಂಡೀಸ್‌ ವಿರುದ್ಧ ನಡೆದ ಪಂದ್ಯದಲ್ಲಿ ಡೇವಿಡ್ ವಾರ್ನರ್ 49 ಎಸೆತಗಳಲ್ಲಿ 81 ರನ್ ಗಳಿಸಿದರು. ಅವರು ತಮ್ಮ ಇನ್ನಿಂಗ್ಸ್‌ನಲ್ಲಿ 9 ಬೌಂಡರಿ ಮತ್ತು 3 ಸಿಕ್ಸರ್‌ಗಳನ್ನು ಬಾರಿಸಿದರು.

ಈ ಸರಣಿಯ ಮೊದಲ ಟಿ20 ಪಂದ್ಯದಲ್ಲಿ, ಡೇವಿಡ್ ವಾರ್ನರ್ 36 ಎಸೆತಗಳಲ್ಲಿ 70 ರನ್ ಗಳಿಸಿದ್ದರು. ಈ ಇನ್ನಿಂಗ್ಸ್‌ನಲ್ಲಿ 12 ಬೌಂಡರಿ ಮತ್ತು 1 ಸಿಕ್ಸರ್‌ಗಳನ್ನು ಸೇರಿವೆ. ಆದಾಗ್ಯೂ, ಐಪಿಎಲ್ 2024 ರ ಮೊದಲು ಡೆಲ್ಲಿ ಕ್ಯಾಪಿಟಲ್ಸ್‌ಗೆ ಡೇವಿಡ್ ವಾರ್ನರ್ ಅವರ ಬಿರುಗಾಳಿಯ ಫಾರ್ಮ್ ಕಂಡುಕೊಂಡಿರುವುದು ಕ್ಯಾಪಿಟಲ್ಸ್‌ ತಂಡಕ್ಕೆ ಶುಭ ಸುದ್ದಿಯಾಗಿದೆ.

ಡೆಲ್ಲಿ ಕ್ಯಾಪಿಟಲ್ಸ್ ತನ್ನ ಮೊದಲ ಐಪಿಎಲ್ ಪ್ರಶಸ್ತಿಗಾಗಿ ಹುಡುಕಾಟ ನಡೆಸುತ್ತಿದೆ. ಇಲ್ಲಿಯವರೆಗೆ ಡೆಲ್ಲಿ ಕ್ಯಾಪಿಟಲ್ಸ್ ಐಪಿಎಲ್ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿದೆ. ಇದಲ್ಲದೇ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಬ್ ಪಂತ್ ಆಡುವುದು ಅನುಮಾನ ಮೂಡಿಸಿದೆ. ರಿಷಬ್ ಪಂತ್ ಐಪಿಎಲ್ ಆರಂಭದವರೆಗೂ ಫಿಟ್ ಆಗುತ್ತಾರೋ ಇಲ್ಲವೋ ಎಂಬ ಪ್ರಶ್ನೆ ಕಾಡುತ್ತಲೇ ಇದೆ.

IPL 2024: Warner puts a smile on Delhi Capitals franchise with his blistering batting

ಡೇವಿಡ್ ವಾರ್ನರ್ ಅವರ ಬಿರುಸಿನ ಫಾರ್ಮ್ ಖಂಡಿತವಾಗಿಯೂ ಡೆಲ್ಲಿ ಕ್ಯಾಪಿಟಲ್ಸ್‌ಗೆ ಒಳ್ಳೆಯ ಸುದ್ದಿಯಾಗಿದೆ. ಡೇವಿಡ್ ವಾರ್ನರ್ ಐಪಿಎಲ್‌ನಲ್ಲಿ ತಮ್ಮ ಫಾರ್ಮ್ ಅನ್ನು ಉಳಿಸಿಕೊಳ್ಳಲು ಸಾಧ್ಯವಾದರೆ, ನಂತರ ಡೆಲ್ಲಿ ಕ್ಯಾಪಿಟಲ್ಸ್ ಹಾದಿ ಸುಲಭವಾಗಬಹುದು.

ಐಪಿಎಲ್‌ನಲ್ಲಿ ವಾರ್ನರ್‌

ಇದುವರೆಗೆ ಡೇವಿಡ್ ವಾರ್ನರ್ 176 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ವಾರ್ನರ್‌ 41.54 ಸರಾಸರಿ ಮತ್ತು 139.92 ಸ್ಟ್ರೈಕ್ ರೇಟ್‌ನಲ್ಲಿ 6397 ರನ್ ಗಳಿಸಿದ್ದಾರೆ. ಇದಲ್ಲದೆ, ಡೇವಿಡ್ ವಾರ್ನರ್ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು. ಡೇವಿಡ್ ವಾರ್ನರ್ ಐಪಿಎಲ್‌ನಲ್ಲಿ 4 ಶತಕ ಸಿಡಿಸಿದ್ದಾರೆ.

ಡೇವಿಡ್ ವಾರ್ನರ್‌ ಶ್ರೀಮಂತ ಲೀಗ್‌ನಲ್ಲಿ 61 ಬಾರಿ ಐವತ್ತು ರನ್ ಗಡಿ ದಾಟಿದ್ದಾರೆ. ಡೇವಿಡ್ ವಾರ್ನರ್ ಅವರ ಬಿರುಸಿನ ಫಾರ್ಮ್ ಐಪಿಎಲ್‌ಗಿಂತ ಮೊದಲು ಡೆಲ್ಲಿ ಕ್ಯಾಪಿಟಲ್ಸ್‌ ಬೀಗುವಂತೆ ಮಾಡಿದೆ. ಡೇವಿಡ್ ವಾರ್ನರ್ ಐಪಿಎಲ್‌ನಲ್ಲಿ ತಮ್ಮ ಅತ್ಯುತ್ತಮ ಫಾರ್ಮ್ ಅನ್ನು ಉಳಿಸಿಕೊಳ್ಳಬಹುದೇ ಅಥವಾ ಇಲ್ಲವೇ ಎಂಬುದು ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ.

Story first published: Tuesday, February 13, 2024, 19:31 [IST]
Other articles published on Feb 13, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+