For Quick Alerts
ALLOW NOTIFICATIONS  
For Daily Alerts
 

IPL 2024: ಪ್ರತಿ ತಂಡದ ಪ್ಲೇಆಫ್ ಸನ್ನಿವೇಶ ಹೇಗಿದೆ?; ಆರ್‌ಸಿಬಿ ಕಥೆಯೇನು?

2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅಂತ್ಯದತ್ತ ಸಾಗುತ್ತಿದ್ದು, ಇನ್ನೂ ಯಾವ ತಂಡವು ಅಗ್ರ ನಾಲ್ಕು ಸ್ಥಾನಗಳಲ್ಲಿ ಖಚಿತವಾಗಿಲ್ಲ. ಮುಂಬೈ ಇಂಡಿಯನ್ಸ್ ಈಗಾಗಲೇ ಪಂದ್ಯಾವಳಿಯಿಂದ ಹೊರಬಿದ್ದಿದ್ದು, ನಾಲ್ಕು ಸ್ಥಾನಗಳಿಗಾಗಿ ಉಳಿದ ತಂಡಗಳಿಂದ ಪೈಪೋಟಿ ನಡೆಯುತ್ತಿದೆ.

ಪ್ಲೇಆಫ್ ರೇಸ್‌ನಲ್ಲಿ ಅಗ್ರ ತಂಡಗಳು ಕೆಲವು ಸೋಲುಗಳನ್ನು ಅನುಭವಿಸಿದ್ದರೆ, ಅಂಕಪಟ್ಟಿಯ ಕೆಳಭಾಗದಲ್ಲಿ ಸೊರಗುತ್ತಿರುವ ತಂಡಗಳು ಕೆಲವು ಗೆಲುವುಗಳನ್ನು ಪಡೆದಿವೆ. ಲೀಗ್ ಹಂತದ ಇನ್ನೂ 13 ಪಂದ್ಯಗಳು ಬಾಕಿಯಿದ್ದು, ಪ್ರಸ್ತುತ ಹಂತದಲ್ಲಿ ಕೆಕೆಆರ್ ತಂಡ ಅಗ್ರಸ್ಥಾನದಲ್ಲಿದೆ. ಉಳಿದ ತಂಡಗಳ ಅಂಕಿಅಂಶ ಮತ್ತು ಪ್ಲೇಆಫ್ ಸನ್ನಿವೇಶವನ್ನು ಇಲ್ಲಿ ನೋಡಬಹುದು.

IPL 2024 What Are All Teams Playoff Qualification Scenario What s RCB Playoffs Chance

1. ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್)

ಎರಡು ಬಾರಿಯ ಚಾಂಪಿಯನ್ ಹೆಚ್ಚಿನ ಸಮಯದ ಕಾಲ 2ನೇ ಸ್ಥಾನದಲ್ಲಿದ್ದರು. ಆದರೆ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ತಮ್ಮ ಕೊನೆಯ ಪಂದ್ಯದಲ್ಲಿ ಬೃಹತ್ ಗೆಲುವು ರಾಜಸ್ಥಾನ್ ರಾಯಲ್ಸ್ ತಂಡವನ್ನು ಅಂಕಪಟ್ಟಿಯಲ್ಲಿ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿತು.

11 ಪಂದ್ಯಗಳಿಂದ 8 ಗೆಲುವುಗಳು ಮತ್ತು ಕೇವಲ 3 ಸೋಲುಗಳೊಂದಿಗೆ, ಕೆಕೆಆರ್ ಪ್ಲೇಆಫ್‌ಗೆ ಅರ್ಹತೆ ಪಡೆಯಲು ತೀರಾ ಹತ್ತಿರದಲ್ಲಿದೆ. ಅಗ್ರ 2ರಲ್ಲಿ ಸ್ಥಾನ ಪಡೆಯುವ ಉತ್ತಮ ಅವಕಾಶವನ್ನು ಹೊಂದಿದ್ದಾರೆ ಮತ್ತು ಕ್ವಾಲಿಫೈಯರ್ 1ರಲ್ಲಿ ಆಡಲು ಅವಕಾಶವನ್ನು ಗಳಿಸುತ್ತಾರೆ. ಲೀಗ್ ಹಂತದಲ್ಲಿ ಇನ್ನೊಂದು ಗೆಲುವು ಪ್ಲೇಆಫ್‌ನಲ್ಲಿ ಕೆಕೆಆರ್ ಸ್ಥಾನವನ್ನು ಭದ್ರಪಡಿಸುತ್ತದೆ.

IPL 2024 What Are All Teams Playoff Qualification Scenario What s RCB Playoffs Chance

2. ರಾಜಸ್ಥಾನ್ ರಾಯಲ್ಸ್ (ಆರ್‌ಆರ್)

ಉದ್ಘಾಟನಾ ಆವೃತ್ತಿಯ ಚಾಂಪಿಯನ್ ರಾಜಸ್ಥಾನ್ ರಾಯಲ್ಸ್ ತಂಡ ಐಪಿಎಲ್ 2024ರಲ್ಲಿ ತಮ್ಮ ಮೊದಲ ಒಂಬತ್ತು ಪಂದ್ಯಗಳಲ್ಲಿ ಒಂದನ್ನು ಮಾತ್ರ ಸೋತಿದ್ದರು ಮತ್ತು ನಂ.1 ಸ್ಥಾನದಲ್ಲಿ ಆಕ್ರಮಿಸಿಕೊಂಡಿದ್ದರು.

ಆದರೆ, ತಮ್ಮ ಕೊನೆಯ ಎರಡು ಪಂದ್ಯಗಳಲ್ಲಿ ಸತತ ಸೋಲುಗಳು ಮತ್ತು ಕೆಕೆಆರ್ ತಂಡದ ಮೂರು ಗೆಲುವುಗಳು ಸಂಜು ಸ್ಯಾಮ್ಸನ್ ನಾಯಕತ್ವದ ತಂಡ ಎರಡನೇ ಸ್ಥಾನಕ್ಕೆ ಕುಸಿಯುವಂತೆ ಮಾಡಿದೆ.

ರಾಜಸ್ಥಾನ್ ರಾಯಲ್ಸ್ ತಂಡ ಆಡಿದ 11 ಪಂದ್ಯಗಳಿಂದ 8 ಗೆಲುವು ಮತ್ತು 3 ಸೋಲುಗಳನ್ನು ಕಂಡಿದ್ದು, ನೆಟ್ ರನ್‌ ರೇಟ್ ಕೆಕೆಆರ್ ತಂಡಕ್ಕಿಂತ ಕಡಿಮೆಯಾಗಿದೆ. ರಾಜಸ್ಥಾನ್ ರಾಯಲ್ಸ್ ಪ್ಲೇಆಫ್‌ಗೆ ಅರ್ಹತೆ ಪಡೆಯಲು ಇನ್ನೂ ಪ್ರಬಲ ಸ್ಥಾನದಲ್ಲಿದೆ. ಅವರು ತಮ್ಮ ಮುಂದಿನ ಮೂರು ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಗೆದ್ದರೆ ಸಾಕು.

3. ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್)

ಪ್ಯಾಟ್ ಕಮಿನ್ಸ್ ನಾಯಕತ್ವದ ತಂಡವು 12 ಪಂದ್ಯಗಳಿಂದ 7 ಗೆಲುವು ಮತ್ತು 5 ಸೋಲುಗಳನ್ನು ದಾಖಲಿಸಿದೆ. ಸನ್‌ರೈಸರ್ಸ್ ಹೈದರಾಬಾದ್ ತಮ್ಮ ಕೊನೆಯ ಎರಡು ಪಂದ್ಯಗಳಲ್ಲಿ ಗೆಲುವಿನೊಂದಿಗೆ ಪ್ಲೇಆಫ್ ಅರ್ಹತೆಯನ್ನು ಖಚಿತಪಡಿಸಿಕೊಳ್ಳಬಹುದು.

ಸನ್‌ರೈಸರ್ಸ್ ಹೈದರಾಬಾದ್ ತಮ್ಮ ಮುಂದಿನ ಎರಡು ಪಂದ್ಯಗಳಲ್ಲಿ ಕೇವಲ ಒಂದು ಗೆಲುವನ್ನು ಗೆದ್ದರೆ, ಅಗ್ರಸ್ಥಾನದಲ್ಲೇ ಮುಂದುವರೆಯಬಹುದು. ಪ್ರಸ್ತುತ ಅವರ ನೆಟ್ ರನ್ ರೇಟ್‌ಗೆ (NRR) +0.406 ಆಗಿದೆ.

4. ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ)

ಯೆಲ್ಲೋ ಅರ್ಮಿ ಈ ಆವೃತ್ತಿಯಲ್ಲಿ ಏರಿಳಿತಗಳಿಂದ ಕೂಡಿದೆ. ಮೊದಲ 11 ಪಂದ್ಯಗಳಲ್ಲಿ ಆರು ಗೆಲುವು, ಐದರಲ್ಲಿ ಸೋತಿದೆ.
ತಮ್ಮ ಕೊನೆಯ ಮೂರು ಪಂದ್ಯಗಳ ಗೆಲುವುಗಳು ಹಾಲಿ ಚಾಂಪಿಯನ್ ತಂಡಕ್ಕೆ ಪ್ಲೇಆಫ್ ಸ್ಥಾನವನ್ನು ಖಚಿತಪಡಿಸುತ್ತದೆ.

ಉಳಿದ ಮೂರು ಪಂದ್ಯಗಳಲ್ಲಿ ಎರಡು ಗೆಲುವುಗಳು ಮತ್ತು ನೆಟ್ ರನ್ ರೇಟ್ ಪ್ಲೇಆಫ್ ಸ್ಥಾನ ಗಟ್ಟಿಯಾಗಲಿದೆ. ಐದು ಬಾರಿಯ ಚಾಂಪಿಯನ್ +0.700ರ ಅದ್ಭುತ ನೆಟ್ ರನ್ ರೇಟ್ ಹೊಂದಿದೆ. ಇದು ಲೀಗ್‌ನಲ್ಲಿ ಎರಡನೇ ಅತ್ಯುತ್ತಮವಾಗಿದೆ.

5. ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ)

ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ 12 ಪಂದ್ಯಗಳಿಂದ ಆರು ಗೆಲುವು ಮತ್ತು ಆರು ಸೋಲು ಅನುಭವಿಸಿದ್ದು, ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಉಳಿದಿರುವ ಎರಡು ಪಂದ್ಯಗಳಲ್ಲಿ ಗೆಲ್ಲುವುದರೊಂದಿಗೆ ಅವರು 16 ಅಂಕಗಳನ್ನು ಪಡೆಯಬಹುದು.

ಆದಾಗ್ಯೂ, ಈ ಕ್ಷಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಪ್ಲೇಆಫ್‌ನಲ್ಲಿ ಮುಕ್ತಾಯವನ್ನು ಖಚಿತಪಡಿಸುವುದಿಲ್ಲ. ಎಸ್‌ಆರ್‌ಹೆಚ್ ಅಥವಾ ಸಿಎಸ್‌ಕೆ ತಮ್ಮ ಉಳಿದಿರುವ ಪಂದ್ಯಗಳಲ್ಲಿ ಒಂದನ್ನಾದರೂ ಸೋಲಬೇಕು ಎಂದು ಅವರು ಆಶಿಸಬೇಕಾಗುತ್ತದೆ.

6. ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ)

ಲಕ್ನೋ ಸೂಪರ್ ಜೈಂಟ್ಸ್ ಕಳೆದ ಎರಡು ವರ್ಷಗಳಲ್ಲಿ ಸತತವಾಗಿ ಪ್ಲೇಆಫ್‌ಗೆ ಅರ್ಹತೆ ಪಡೆದಿದೆ. ಆದರೆ ತಮ್ಮ ಕೊನೆಯ ಎರಡು ಪಂದ್ಯಗಳಲ್ಲಿ ಭಾರೀ ಸೋಲುಗಳನ್ನು ಅನುಭವಿಸಿದ ನಂತರ ಅವರಿಗೆ ಅವಕಾಶಗಳು ಸ್ವಲ್ಪ ಕಠಿಣವಾಗಿವೆ.

ಕೆಎಲ್ ರಾಹುಲ್ ನಾಯಕತ್ವದ ತಂಡ ಆಡಿದ 12 ಪಂದ್ಯಗಳಲ್ಲಿ 6 ಗೆದ್ದು 6ರಲ್ಲಿ ಸೋತಿದೆ. ಅವರ ನೆಟ್ ರನ್ ರೇಟ್ -0.769 ಆಗಿದ್ದು, ಅವರು ಗರಿಷ್ಠ 16 ಅಂಕಗಳನ್ನು ಪಡೆಯಬಹುದು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಒಂದು ಪಂದ್ಯ ಗೆಲ್ಲಬಹುದು.

ಡೆಲ್ಲಿ ವಿರುದ್ಧದ ಪಂದ್ಯ ಸೇರಿದಂತೆ ಉಳಿದಿರುವ ಎರಡೂ ಪಂದ್ಯಗಳನ್ನು ಗೆದ್ದರೆ, ಅದು ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸ್ಪರ್ಧೆಯಿಂದ ಹೊರಹಾಕುತ್ತದೆ. ಆದಾಗ್ಯೂ, ಪ್ರಸ್ತುತ ಅಗ್ರ ನಾಲ್ಕು ತಂಡಗಳು ತಮ್ಮ ಉಳಿದ ಪಂದ್ಯಗಳಲ್ಲಿ ಹೇಗೆ ಕಾರ್ಯನಿರ್ವಹಿಸುತ್ತಿವೆ ಎಂಬುದರ ಮೇಲೆ ಎಲ್‌ಎಸ್‌ಜಿ ತಮ್ಮ ಕಣ್ಣುಗಳನ್ನು ಇರಿಸಬೇಕಾಗುತ್ತದೆ.

7. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ)

ತಮ್ಮ ಮೊದಲ ಎಂಟು ಪಂದ್ಯಗಳಲ್ಲಿ ಏಳನ್ನು ಸೋತ ನಂತರ, ಆರ್‌ಸಿಬಿ ತಂಡ ಇದೀಗ ವಾಪಸಾತಿ ಮಾಡಿದೆ. ಪ್ಲೇಆಫ್ ರೇಸ್‌ನಲ್ಲಿ ಉಳಿಯಲು ತಮ್ಮ ಕೊನೆಯ ಮೂರು ಪಂದ್ಯಗಳನ್ನು ಗೆದ್ದಿದೆ. ಫಾಫ್ ಡು ಪ್ಲೆಸಿಸ್ ನಾಯಕತ್ವದ ತಂಡವು 11 ಪಂದ್ಯಗಳಿಂದ 4 ಗೆಲುವು ಮತ್ತು 7 ಸೋಲುಗಳನ್ನು ಕಂಡಿದ್ದು, ಉಳಿದ ಮೂರು ಪಂದ್ಯಗಳಿಂದ ಗರಿಷ್ಠ 14 ಅಂಕಗಳನ್ನು ಪಡೆಯಬಹುದು.

ಆದರೆ, ಆರ್‌ಸಿಬಿ ತಮ್ಮ ನೆಟ್ ರನ್ ರೇಟ್ -0.049 ಅನ್ನು ಗಣನೀಯವಾಗಿ ಸುಧಾರಿಸಬೇಕಾಗುತ್ತದೆ. ಸನ್ ರೈಸರ್ಸ್ ಹೈದರಾಬಾದ್, ಸಿಎಸ್‌ಕೆ, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್‌ನಂತಹ ತಂಡಗಳು ತಮ್ಮ ಉಳಿದ ಪಂದ್ಯಗಳಲ್ಲಿ ಅಂಕಗಳನ್ನು ಕಳೆದುಕೊಳ್ಳಬೇಕಿದೆ.

8. ಪಂಜಾಬ್ ಕಿಂಗ್ಸ್ (ಪಿಬಿಕೆಎಸ್)

ಆರ್‌ಸಿಬಿ ತಂಡದಂತೆ ಪಂಜಾಬ್ ಕಿಂಗ್ಸ್ ಕೂಡ ಗರಿಷ್ಠ 14 ಅಂಕ ಗಳಿಸಬಹುದು. ಪಂಜಾಬ್ ಕಿಂಗ್ಸ್ ಆಡಿದ 11 ಪಂದ್ಯಗಳಿಂದ ನಾಲ್ಕು ಗೆಲುವುಗಳು ಮತ್ತು ಏಳು ಸೋಲುಗಳನ್ನು ಹೊಂದಿದೆ ಮತ್ತು -0.187 ನೆಟ್ ರನ್ ರೇಟ್ ಹೊಂದಿದೆ. ಸ್ಯಾಮ್ ಕರ್ರಾನ್ ನಾಯಕತ್ವದ ತಂಡವು ಪ್ಲೇಆಫ್ ಆಕಾಂಕ್ಷಿಗಳಾದ ಆರ್‌ಸಿಬಿ ಮತ್ತು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ತಲಾ ಒಂದು ಪಂದ್ಯವನ್ನು ಆಡಲಿದ್ದಾರೆ. ಆ ಪಂದ್ಯಗಳಲ್ಲಿ ಗೆಲುವು ಅನಿವಾರ್ಯವಾಗಿದೆ.

ಆದರೂ, ತಮ್ಮ ನೆಟ್ ರನ್ ರೇಟ್ ಅನ್ನು ಉತ್ತಮಗೊಳಿಸಬೇಕಾಗುತ್ತದೆ ಮತ್ತು ಇತರ ತಂಡಗಳ ಫಲಿತಾಂಶಗಳು ಮುನ್ನೆಲೆಗೆ ಬರುತ್ತವೆ. ಪಂಜಾಬ್ ತನ್ನ ಉಳಿದ ಯಾವುದೇ ಪಂದ್ಯಗಳಲ್ಲಿ ಸೋಲನ್ನು ಕಾಣುವಂತಿಲ್ಲ.

9. ಮುಂಬೈ ಇಂಡಿಯನ್ಸ್ (ಎಂಐ)

ಐದು ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ಈ ಬಾರಿ ನಿರಾಶಾದಾಯಕ ಆವೃತ್ತಿಯನ್ನು ಹೊಂದಿದ್ದು, ಆಡಿದ 12 ಪಂದ್ಯಗಳಲ್ಲಿ ಕೇವಲ ನಾಲ್ಕು ಪಂದ್ಯಗಳಲ್ಲಿ ಗೆದ್ದಿದೆ ಮತ್ತು ಎಂಟು ಪಂದ್ಯಗಳಲ್ಲಿ ಸೋತಿದೆ. ಮುಂಬೈ ಇಂಡಿಯನ್ಸ್ ಈಗಾಗಲೇ 2024ರ ಸ್ಪರ್ಧೆಯಿಂದ ಹೊರಬಿದ್ದಿದೆ.

ತಮ್ಮ ಕೊನೆಯ ಎರಡು ಪಂದ್ಯಗಳನ್ನು ಗೆದ್ದರೂ ಸಹ, ಮುಂಬೈ ಇಂಡಿಯನ್ಸ್ ಗರಿಷ್ಠ 12 ಅಂಕಗಳನ್ನು ಪಡೆಯುತ್ತದೆ. ಇದು ಪ್ಲೇಆಫ್ ಅರ್ಹತೆಯನ್ನು ಖಚಿತಪಡಿಸಿಕೊಳ್ಳಲು ಸಾಕಾಗುವುದಿಲ್ಲ. ಏಕೆಂದರೆ ಉಳಿದ ಕೆಲವು ತಂಡಗಳು 14 ಮತ್ತು ಹೆಚ್ಚು ಅಂಕ ಗಳಿಸಲಿವೆ.

10. ಗುಜರಾತ್ ಟೈಟನ್ಸ್ (ಜಿಟಿ)

2022ರ ಚಾಂಪಿಯನ್ ಗುಜರಾತ್ ಟೈಟನ್ಸ್ ಇನ್ನೂ ಪ್ಲೇಆಫ್ ತಲುಪುವ ಗಣಿತದ ಅವಕಾಶದೊಂದಿಗೆ ಇದ್ದಾರೆ. ಆಡಿದ 11 ಪಂದ್ಯಗಳಲ್ಲಿ 4 ಗೆಲುವು ಮತ್ತು ಏಳರಲ್ಲಿ ಸೋತಿದೆ.

ಗುಜರಾತ್ ಟೈಟನ್ಸ್ ಗರಿಷ್ಠ 14 ಅಂಕಗಳನ್ನು ಕಲೆಹಾಕಬಹುದು. ಆದರೆ ಅವರ ನೆಟ್ ರನ್ ರೇಟ್ -1.320 ಪಂದ್ಯಾವಳಿಯಲ್ಲಿ ಅತಿ ಕೆಟ್ಟದಾಗಿದೆ. ಮುಂದಿನ ಮೂರು ಪಂದ್ಯಗಳಲ್ಲಿ ಅದನ್ನು ಉತ್ತಮಗೊಳಿಸಲು ಕಷ್ಟವಾಗುತ್ತದೆ.

ಮೂರು ಬಲಿಷ್ಠ ತಂಡಗಳಾದ ಸಿಎಸ್‌ಕೆ, ಕೆಕೆಆರ್ ಮತ್ತು ಎಸ್‌ಆರ್‌ಹೆಚ್ ವಿರುದ್ಧ ಪಂದ್ಯಗಳನ್ನು ಹೊಂದಿದೆ ಮತ್ತು ಶುಭ್ಮನ್ ಗಿಲ್ ನಾಯಕತ್ವದ ತಂಡದ ಪ್ರದರ್ಶನಗಳನ್ನು ಪರಿಗಣಿಸಿ ಈ ಮೂರು ತಂಡಗಳನ್ನು ಸೋಲಿಸುವುದು ಕಠಿಣವಾಗಿರುತ್ತದೆ.

Story first published: Thursday, May 9, 2024, 15:18 [IST]
Other articles published on May 9, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+