IPL 2024: ಆರ್‌ಸಿಬಿ ಪರ ಗರಿಷ್ಠ ವಿಕೆಟ್ ಬೌಲರ್‌ಗಳು ಯಾರು? ಎಷ್ಟು ಕನ್ನಡಿಗರಿಗೆ ಈ ಪಟ್ಟಿಯಲ್ಲಿ ಸ್ಥಾನ?
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್‌ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದೆ. ಐಪಿಎಲ್ 2024ರಲ್ಲಿ ಆರ್‌ಸಿಬಿ ತಂಡದ ಚೊಚ್ಚಲ ಬಾರಿಗೆ ಐಪಿಎಲ್ ಪ್ರಶಸ್ತಿ ಎತ್ತುವ ಕನಸು ಕಾಣುತ್ತಿದೆ. ಈ ಕನಸು ನನಸಾಗಬೇಕೆಂದರೆ ತಂಡದ ಸ್ಟಾರ್ ಬೌಲರ್‌ಗಳು ಅಬ್ಬರದ ಪ್ರದರ್ಶನ ನೀಡುವ ಅವಶ್ಯಕತೆ ಇದೆ.
ಆರ್‌ಸಿಬಿ ತಂಡದಲ್ಲಿ ಆರಂಭದಿಂದಲೂ ಸ್ಟಾರ್ ಬೌಲರ್‌ಗಳು ಇದ್ದರು. ಈ ಆಟಗಾರರು ತಂಡದ ಪರ ತಮ್ಮ ಕಾಣಿಕೆ ನೀಡಿದ್ದಾರೆ. ಅಲ್ಲದೆ ಅವಶ್ಯಕತೆ ಇದ್ದಾಗ ವಿಕೆಟ್ ಪಡೆದು ತಮ್ಮ ಕ್ಷಮತೆಯನ್ನು ಸಾಬೀತು ಪಡಿಸಿದ್ದಾರೆ. ಆರ್‌ಸಿಬಿ ಪರ ಗರಿಷ್ಠ ವಿಕೆಟ್ ಪಡೆದ ಆಟಗಾರರು ಯಾರು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಅಲ್ಲದೆ ಕರ್ನಾಟಕದ ಆಟಗಾರರ ಪ್ರದರ್ಶನ ಹೇಗಿದೆ ಎಂಬ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಚಹಾಲ್‌ಗೆ ಅಗ್ರ ಸ್ಥಾನ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಅತಿ ಅಧಿಕ ವಿಕೆಟ್ ಪಡೆದವರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದ ಸ್ಪಿನ್ ಬೌಲರ್ ಯಜುವೇಂದ್ರ ಚಹಾಲ್ ಇದ್ದಾರೆ. ಈಗ ಚಹಾಲ್ ರಾಜಸ್ಥಾನ ರಾಯಲ್ಸ್ ತಂಡದ ಆಡುತ್ತಿದ್ದರೂ ಸಹ ಅವರ ಆಟವನ್ನು ಗುರುತಿಸಿದ್ದು, ಆರ್‌ಸಿಬಿ.. ಚಹಾಲ್ ಆರ್‌ಸಿಬಿ ಪರ 113 ಪಂದ್ಯಗಳಲ್ಲಿ 139 ವಿಕೆಟ್ ಪಡೆದು ಬೀಗಿದ್ದಾರೆ. ಈ ಮೂಲಕ ಚಹಾಲ್ ಆರ್‌ಸಿಬಿ ಪರ ಗರಿಷ್ಠ ವಿಕೆಟ್ ಪಡೆದ ಆಟಗಾರರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ.
ಹರ್ಷಲ್ ಮಾರಕ
ಆರ್‌ಸಿಬಿ ತಂಡದ ಬೌಲಿಂಗ್ ವಿಭಾಗವನ್ನು ಹಲವು ಆವೃತ್ತಿಗಳಲ್ಲಿ ಮುನ್ನಡೆಸಿದ್ದ ಸ್ಟಾರ್ ವೇಗದ ಬೌಲರ್ ಹರ್ಷಲ್ ಪಟೇಲ್ ಸಹ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಸ್ಲೋವರ್ ಒನ್ ಹಾಗೂ ಡೆತ್ ಓವರ್‌ಗಳಲ್ಲಿ ಬಿಗುವಿನ ದಾಳಿ ನಡೆಸಿ ಅಬ್ಬರಿಸಬಲ್ಲ ಕ್ಷಮತೆಯನ್ನು ಹರ್ಷಲ್ ಪಟೇಲ್ ಹೊಂದಿದ್ದರು. ಹರ್ಷಲ್ ಆರ್‌ಸಿಬಿ ಪರ ಆಡಿದ 80 ಪಂದ್ಯಗಳಲ್ಲಿ 99 ವಿಕೆಟ್ ಪಡೆದಿದ್ದಾರೆ.
ವಿನಯ್‌ಗೆ 80 ವಿಕೆಟ್
ಬೆಂಗಳೂರು ತಂಡದ ಪರ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ವಿನಯ್ ಕುಮಾರ್ ಅವರಿಗೂ ಸ್ಥಾನವಿದೆ. ಆರ್‌ಸಿಬಿ ತಂಡದ ಪರ ಆಡಿದ್ದ ಕರ್ನಾಟಕದ ಪ್ಲೇಯರ್ ತಮ್ಮ ಶಿಸ್ತು ಬದ್ಧ ದಾಳಿಯ ಮೂಲಕ ಎದುರಾಳಿ ಬ್ಯಾಟರ್‌ಗಳಿಗೆ ಕಾಟ ನೀಡಿದ್ದರು. ವಿನಯ್ ಕುಮಾರ್ ಆರ್‌ಸಿಬಿ ಪರ 70 ಪಂದ್ಯಗಳನ್ನು ಆಡಿದ್ದು 80 ವಿಕೆಟ್ ಪಡೆದಿದ್ದಾರೆ.

ಸಿರಾಜ್ ಅಬ್ಬರ
ಸದ್ಯ ಟೀಮ್ ಇಂಡಿಯಾದ ಸ್ಟಾರ್ ಬೌಲರ್ ಹಾಗೂ ವಿಶ್ವದ ಮಾಜಿ ನಂಬರ್ 1 ಆಟಗಾರ ಮೊಹಮ್ಮದ್ ಸಿರಾಜ್ ಆರ್‌ಸಿಬಿ ಬೌಲಿಂಗ್ ನೊಗವನ್ನು ಹೊತ್ತಿದ್ದಾರೆ. ಇವರು ಆಡಿದ 73 ಪಂದ್ಯಗಳಲ್ಲಿ 68 ವಿಕೆಟ್ ಪಡೆದಿದ್ದಾರೆ. ಈ ಬಾರಿಯೂ ಇವರು ಆರ್‌ಸಿಬಿ ಪರ ಅಖಾಡಕ್ಕೆ ಇಳಿಯಲಿದ್ದಾರೆ. ಅಲ್ಲದೆ ಹಲವು ದಾಖಲೆಗಳನ್ನು ಅಳಿಸುವ ಕ್ಷಮತೆಯನ್ನು ಇವರು ಹೊಂದಿದ್ದಾರೆ.
ಅನಿಲ್, ಅರವಿಂದ್ ಶೈನ್
ಟೀಮ್ ಇಂಡಿಯಾದ ಸ್ಟಾರ್ ಸ್ಪಿನ್ ಬೌಲರ್ ಅನಿಲ್ ಕುಂಬ್ಳೆ ಅವರು ಆರ್‌ಸಿಬಿ ಪರ ಆಡಿದ 51 ಪಂದ್ಯಗಳಲ್ಲಿ 53 ವಿಕೆಟ್ ಪಡೆದು ಬೀಗಿದ್ದಾರೆ. ಇವರ ನಂತರದ ಸ್ಥಾನದಲ್ಲಿ ಇನ್ನೊಬ್ಬ ಕನ್ನಡಿಗ ಎಸ್ ಅರವಿಂದ್ ಸ್ಥಾನ ಪಡೆದಿದ್ದಾರೆ. ಇವರು 51 ವಿಕೆಟ್ ಕಬಳಿಸಿದ್ದಾರೆ. ಇನ್ನು ಟೀಮ್ ಇಂಡಿಯಾದ ಮಾಜಿ ವೇಗಿ ರಿವರ್ಸ್ ಸ್ವಿಂಗ್ ಉಸ್ತಾದ್ ಎಂದೇ ಕರೆಯಲ್ಪಡುವ ಜಹೀರ್ ಖಾನ್ ಅವರಿಗೂ ಈ ಪಟ್ಟಿಯಲ್ಲಿ ಸ್ಥಾನವಿದೆ. ಇವರು ಸಹ 49 ವಿಕೆಟ್ ಪಡೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications