Nitish Reddy: ಪಂಜಾಬ್ ವಿರುದ್ಧ ಎಸ್‌ಆರ್‌ಎಚ್ ತಂಡವನ್ನು ಸೋಲಿನಿಂದ ಪಾರು ಮಾಡಿದ ನಿತೀಶ್ ರೆಡ್ಡಿ ಯಾರು?
ಮಂಗಳವಾರ, ಏಪ್ರಿಲ್ 9ರಂದು ಮುಲ್ಲನ್‌ಪುರದ ಯಾದವೀಂದ್ರ ಸಿಂಗ್ ಸ್ಟೇಡಿಯಂನಲ್ಲಿ ನಡೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 23ನೇ ರೋಚಕ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡದ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ ತಂಡವು ಭರ್ಜರಿ ಗೆಲುವು ದಾಖಲಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡ ನಿತೀಶ್ ರೆಡ್ಡಿ ಅವರ ಅಮೋಘ ಅರ್ಧಶತಕದ ಸಹಾಯದಿಂದ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 182 ರನ್‌ಗಳನ್ನು ಕಲೆಹಾಕಿತು.
183 ರನ್‌ಗಳ ಸವಾಲಿನ ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 180 ರನ್ ಗಳಿಸಿ ಕೇವಲ 2 ರನ್‌ಗಳ ರೋಚಕ ಸೋಲು ಅನುಭವಿಸಿತು.

ಪಂಜಾಬ್ ಕಿಂಗ್ಸ್ ಗೆಲುವಿಗೆ ಕೊನೆಯ ಓವರ್‌ನಲ್ಲಿ 29 ರನ್‌ಗಳು ಬೇಕಾಗಿದ್ದಾಗ, ಶಶಾಂಕ್ ಸಿಂಗ್ ಮತ್ತು ಅಶುತೋಷ್ ಶರ್ಮಾ ಜೋಡಿ 26 ರನ್ ಗಳಿಸಿದ ಕೆಚ್ಚೆದೆಯ ಹೋರಾಟ ಪ್ರದರ್ಶಿಸಿದ ಹೊರತಾಗಿಯೂ 2 ರನ್‌ಗಳ ವೀರೋಚಿತ ಸೋಲು ಕಂಡಿತು.
ಏಕಾಂಗಿ ಹೋರಾಟ ನಡೆಸಿದ ನಿತೀಶ್ ರೆಡ್ಡಿ
ಸನ್‌ರೈಸರ್ಸ್ ಹೈದರಾಬಾದ್ ತಂಡದ ಆಲ್‌ರೌಂಡರ್ ನಿತೀಶ್ ರೆಡ್ಡಿ ಅವರು ಪಂಜಾಬ್ ಕಿಂಗ್ಸ್ ವಿರುದ್ಧ ಐಪಿಎಲ್‌ನಲ್ಲಿ ತಮ್ಮ ಚೊಚ್ಚಲ ಅರ್ಧಶತಕ ಸಿಡಿಸಿದರು. ಎಸ್‌ಆರ್‌ಎಚ್ ತಂಡದ ಅಗ್ರಕ್ರಮಾಂಕದ ಬ್ಯಾಟರ್‌ಗಳು ಪಂಜಾಬ್ ಕಿಂಗ್ಸ್ ಬೌಲರ್‌ಗಳ ವಿರುದ್ಧ ದಿಢೀರ್ ಕುಸಿತದ ನಂತರ ಕೆಳಕ್ರಮಾಂಕದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದರು.
ಅಬಿಷೇಕ್ ಶರ್ಮಾ, ಹೆನ್ರಿಚ್ ಕ್ಲಾಸೆನ್ ಮತ್ತು ಏಡೆನ್ ಮಾರ್ಕ್ರಾಮ್ ಅವರು ಪ್ರತಿರೋಧ ಒಡ್ಡಲು ಹೆಣಗಾಡಿದ ವೇಳೆ ತಂಡಕ್ಕೆ ಸರಿಯಾದ ಸಮಯದಲ್ಲಿ ತಮ್ಮ ಪರಾಕ್ರಮವನ್ನು ಪ್ರದರ್ಶಿಸಿ ಆಸರೆಯಾದವರು ನಿತೀಶ್ ರೆಡ್ಡಿ. ತನ್ನ ನಾಲ್ಕನೇ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಪಂದ್ಯ ವಿಜೇತ ಆಟ ಆಡಿದರು.

ತಮ್ಮ ಸಹ ಅಟಗಾರರ ಪಂಜಾಬ್ ಕಿಂಗ್ಸ್ ತಂಡದ ವೇಗದ ದಾಳಿಯನ್ನು ನಿಭಾಯಿಸಲು ಹೆಣಗಾಡುತ್ತಿದ್ದಂತೆ, ನಿತೀಶ್ ರೆಡ್ಡಿ ಎದುರಾಳಿ ಬೌಲರ್‌ಗಳಿಗೆ ಸಿಕ್ಸರ್, ಬೌಂಡರಿ ಬಾರಿಸಿ ಸ್ಕೋರ್ ಬೋರ್ಡ್‌ನಲ್ಲಿ ರನ್ ಹೆಚ್ಚಾಗುವಂತೆ ನೋಡಿಕೊಂಡರು.
ವಿಶೇಷವಾಗಿ ಪಂಜಾಬ್ ಕಿಂಗ್ಸ್‌ನ ಪ್ರಮುಖ ಬೌಲರ್ ಹರ್‌ಪ್ರೀತ್ ಬ್ರಾರ್ ಅವರ ಬೌಲಿಂಗ್‌ನಲ್ಲಿ ಮೂರು ಸಿಕ್ಸರ್ ಮತ್ತು ಮೂರು ಬೌಂಡರಿಗಳನ್ನು ಬಾರಿಸಿದರು. ನಿತೀಶ್ ರೆಡ್ಡಿ ಅವರು ಹರ್‌ಪ್ರೀತ್ ಬ್ರಾರ್ ಒಂದೇ ಓವರ್‌ನಲ್ಲಿ 23 ರನ್ ಗಳಿಸಿದರು ಮತ್ತು ಪಂದ್ಯದ ಆವೇಗವನ್ನು ಬದಲಾಯಿಸಿದರು.
ಕೇವಲ 37 ಎಸೆತಗಳಲ್ಲಿ 4 ಬೌಂಡರಿ ಹಾಗೂ 5 ಸಿಕ್ಸರ್‌ಗಳ ಸಮೇತ 64 ರನ್ ಗಳಿಸಿದರು. ಈ ಮೂಲಕ ಆಂಧ್ರಪ್ರದೇಶ ಬ್ಯಾಟರ್ ತಮ್ಮ ಅತ್ಯಧಿಕ ಟಿ20 ಸ್ಕೋರ್ ಮಾಡಿದರು. ಬೌಲಿಂಗ್‌ನಲ್ಲಿಯೂ 3 ಓವರ್‌ಗಳಲ್ಲಿ 33 ರನ್ ನೀಡಿ 3 ವಿಕೆಟ್ ಪಡೆದರು.

ನಿತೀಶ್ ರೆಡ್ಡಿ ಕ್ರಿಕೆಟ್ ಎತ್ತರಕ್ಕೆ ಏರಲು ಸಜ್ಜು
ಗಮನಾರ್ಹವಾಗಿ, ಐಪಿಎಲ್ 2023ರ ಅವಧಿಯಲ್ಲಿ ನಿತೀಶ್ ರೆಡ್ಡಿ ಅವರನ್ನು ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಮೂಲ ಬೆಲೆ 20 ಲಕ್ಷ ರೂಪಾಯಿಗೆ ಖರೀದಿಸಿತು.
ದೇಶೀಯ ಕ್ರಿಕೆಟ್‌ನಲ್ಲಿ ಆಂಧ್ರಪ್ರದೇಶ ರಾಜ್ಯ ಪರ ಆಡುವ ನಿತೀಶ್ ರೆಡ್ಡಿ ಈವರೆಗೆ 17 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ ಮತ್ತು 159ರ ಅತ್ಯಧಿಕ ಸ್ಕೋರ್‌ನೊಂದಿಗೆ 566 ರನ್ ಗಳಿಸಿದ್ದಾರೆ.
20 ವರ್ಷದ ಬ್ಯಾಟರ್ ನಿತೀಶ್ ರೆಡ್ಡಿ ಎರಡು ಅರ್ಧ ಶತಕ ಮತ್ತು ಒಂದು ಶತಕ ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ. ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಅಜೇಯ 14 ರನ್ ಗಳಿಸಿದ ನಂತರ ಪಂಜಾಬ್ ಕಿಂಗ್ಸ್ ವಿರುದ್ಧ 64 ರನ್ ಗಳಿಸಿದ್ದು ಅವರ ಅತ್ಯಧಿಕ ಟಿ20 ಸ್ಕೋರ್ ಆಗಿದೆ.
ಮಂಗಳವಾರದಂದು ನಿತೀಶ್ ರೆಡ್ಡಿ 172.97ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಮಾಡಿದರು. ಅಂತಿಮವಾಗಿ ತಮ್ಮ ತಂಡದ ರನ್ ರೇಟ್ ಅನ್ನು ಮತ್ತಷ್ಟು ವಿಸ್ತರಿಸಲು ಪ್ರಯತ್ನಿಸುತ್ತಿರುವಾಗ ಅರ್ಶ್‌ದೀಪ್ ಸಿಂಗ್ ಬೌಲಿಂಗ್‌ನಲ್ಲಿ ಔಟಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications