IPL 2024: ಟಾಮ್ ಕರನ್ ಸ್ಥಾನ ತುಂಬುವುದು ಯಾರು? ಮೂರು ಆಲ್‌ರೌಂಡರ್‌ಗಳ ಮೇಲೆ ಆರ್‌ಸಿಬಿ ಕಣ್ಣು
ಐಪಿಎಲ್ 2024 ರ ಮೊದಲು, ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಆತಂಕಕಾರಿ ಸುದ್ದಿ ಇದೆ. ತಂಡವು 1.5 ಕೋಟಿಗೆ ಹರಾಜಿನಲ್ಲಿ ಟಾಮ್ ಕರನ್ ಅವರನ್ನು ಖರೀದಿಸಿತ್ತು. ಆದರೆ ಅವರು ಪಂದ್ಯಾವಳಿಯ ಆರಂಭಕ್ಕೂ ಮುನ್ನ ಗಾಯಗೊಂಡರು. ಈಗ ಐಪಿಎಲ್ ಪ್ರಾರಂಭವಾಗಲು ದಿನಗಣನೆ ಆರಂಭವಾಗಿದ್ದು, ಆರ್‌ಸಿಬಿ ಮನೆಯಲ್ಲಿ ಆಂತಕ ಮನೆ ಮಾಡಿದೆ. ಕರನ್ ಮೊಣಕಾಲಿನ ಗಾಯದಿಂದ ಬಳಲುತ್ತಿದ್ದು, ಮೈದಾನಕ್ಕೆ ಹಿಂತಿರುಗಲು ಸಮಯ ಹಿಡಿಯುತ್ತದೆ. ಬಿಗ್ ಬ್ಯಾಷ್ ಲೀಗ್ ನಲ್ಲಿ 4 ಪಂದ್ಯಗಳನ್ನು ಆಡಿರುವ ಅವರು ಟೂರ್ನಿಯಿಂದ ಹೊರಗುಳಿದಿದ್ದಾರೆ.
ಟಾಮ್ ಕರ್ರಾನ್ ಬಿಗ್ ಬ್ಯಾಷ್ ಲೀಗ್‌ನಲ್ಲಿ ಆಡುತ್ತಿದ್ದು, ಅಲ್ಲಿ ಅವರು ಸಿಡ್ನಿ ಸಿಕ್ಸರ್ಸ್ ಪರ ಮೈದಾನಕ್ಕೆ ಇಳಿದಿದ್ದರು. ಅವರು ಮೆಲ್ಬೋರ್ನ್ ಸ್ಟಾರ್ಸ್ ಪರ ಆಡುವಾಗ ಗಾಯಗೊಂಡಿದ್ದರು. ಇದದ ಬಳಿಕ ಟಾಮ್ ಕರನ್ ಐಎಲ್‌ಟಿ20 ನಲ್ಲಿ ಡೆಸರ್ಟ್ ವೈಪರ್ಸ್ ಪರ ಆಡಬೇಕಿತ್ತು. ಆದರೆ ಈಗ ಅವರು ಮೈದಾನಕ್ಕೆ ಇಳಿಯುವುದುಕಷ್ಟಕರವಾಗಿದೆ.

ಐಪಿಎಲ್ 2024 ಗಾಗಿ ಟಾಮ್ ಕರ್ರನ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು 1 ಕೋಟಿ 50 ಲಕ್ಷಕ್ಕೆ ಖರೀದಿಸಿತು. ಟಾಮ್ ಈ ಹಿಂದೆ ಐಪಿಎಲ್‌ನಲ್ಲಿ ಕೆಕೆಆರ್, ಆರ್‌ಆರ್ ಮತ್ತು ಡಿಸಿ ಪರ ಆಡಿದ್ದರು. RCB ಮತ್ತು ಈ ಫ್ರಾಂಚೈಸಿಯ ಅಭಿಮಾನಿಗಳಲ್ಲಿ ಸದ್ಯ ಉದ್ಭವಿಸಿರುವ ಒಂದು ಪ್ರಶ್ನೆ ಅಂದರೆ, ಟಾಮ್ ಕರನ್ ಸ್ಥಾನ ತುಂಬ ಬಲ್ಲ ಪ್ಲೇಯರ್ ಯಾರು ಎಂಬ ಪ್ರಶ್ನೆ ಉದ್ಭವಿಸಿದೆ.
ಟಾಮ್ ಕರನ್ ಒಬ್ಬ ಸ್ಟಾರ್ ಆಲ್‌ರೌಂಡರ್ ಇವರ ಸ್ಥಾನವನ್ನು ತುಂಬುವ ಆಟಗಾರನ ಬಗ್ಗೆ ಆರ್‌ಸಿಬಿ ಲೆಕ್ಕಚಾರ ಆರಂಭಿಸಿದೆ. ಈ ನಿಟ್ಟಿನಲ್ಲಿ ಸ್ಟಾರ್ ಆಲ್‌ರೌಂಡರ್‌ಗಳ ಮೇಲೆ ಕಣ್ಣು ನೆಟ್ಟಿದೆ.
ಕೀಮೋ ಪಾಲ್
ಆರ್‌ಸಿಬಿ ತಂಡದ ಕೀಮೋ ಪೌಲ್ ಅವರ ಮೇಲೆ ಸಹ ಆರ್‌ಸಿಬಿ ಕಣ್ಣು ನೆಟ್ಟಿದೆ. ಇವರನ್ನು ಸಹ ಟಾಮ್ ಕರನ್ ಬದಲಿಗೆ ತಂಡದ ಜೆರ್ಸಿ ನೀಡಲು ಪ್ಲ್ಯಾನ್ ಮಾಡಿಕೊಂಡಿದೆ. ಶಿಸ್ತು ಬದ್ಧ ವೇಗದ ದಾಳಿ ಹಾಗೂ ಬ್ಯಾಟಿಂಗ್ ಮಾಡುವ ಕ್ಷಮತೆಯನ್ನು ಹೊಂದಿದ್ದಾರೆ. ಇವರನ್ನು ತಂಡಕ್ಕೆ ಸೇರಿಸಿಕೊಳ್ಳುವುದರಿಂದ ತಂಡದ ಸಮತೋಲನ ಉತ್ತಮವಾಗುತ್ತದೆ ಎಂಬ ನಂಬಿಕೆ ಆರ್‌ಸಿಬಿ ತಂಡದ್ದಾಗಿದೆ.

ಜಿಮಿ ನೀಶಮ್
ವಿಶ್ವದಲ್ಲೇ ಟಿ20 ಕ್ರಿಕೆಟ್‌ನಲ್ಲಿ ಸದ್ದು ಮಾಡಿದ ಆಟಗಾರರ ಪಟ್ಟಿಯಲ್ಲಿ ಜಿಮಿ ನೀಶಮ್ ಒಬ್ಬರು. ವಿಶ್ವದ ಬೇರೆ ಬೇರೆ ಲೀಗ್‌ಗಳಲ್ಲಿ ಆಡಿ ಸೈ ಎನಿಸಿಕೊಂಡಿರುವ ಜಿಮಿ ಅಬ್ಬರಿಸಿದ್ದಾರೆ. ಇವರು 2014ರಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದರು. ಅಲ್ಲದೆ ಡೆಲ್ಲಿ ಡೇವಿಲ್ಸ್ ತಂಡಕ್ಕೆ ಶಕ್ತಿ ತುಂಬಿದ್ದರು. ಜಿಮಿ ಆಡಿದ 12 ಐಪಿಎಲ್ ಪಂದ್ಯಗಳಲ್ಲಿ 61 ರನ್ ಸಿಡಿಸಿದ್ದು, ಎಂಟು ವಿಕೆಟ್ ಪಡೆದಿದ್ದಾರೆ. ಈಗ ಅವರ ಆಟ ಪಕ್ವವಾಗಿದ್ದು ಟಿ20 ಲೀಗ್‌ಗೆ ಹೊಂದುತ್ತದೆ.
ಜೇಸನ್ ಹೋಲ್ಡರ್
ಟಾಮ್ ಕರನ್ ಅವರ ಸ್ಥಾನವನ್ನು ತುಂಬ ಬಲ್ಲ ಪ್ಲೇಯರ್ ಅಂದರೆ ಅದು ವೆಸ್ಟ್ ಇಂಡೀಸ್ ತಂಡದ ಜೆಸನ್ ಹೋಲ್ಡರ್. ತಮ್ಮ ಅನುಭವ ಹಾಗೂ ಕ್ಷಮತೆಯನ್ನು ಆಟದಲ್ಲಿ ತೋರಿರುವ ಇವರ ಮೇಲೆ ಆರ್‌ಸಿಬಿ ಕಣ್ಣು ನೆಟ್ಟಿದ್ದು ಇವರೇ ಮೊದಲ ಆಯ್ಕೆ ಆಟಗಾರ ಎಂದು ಪರಿಗಣಿಸಲಾಗಿದೆ. ಜೇಸನ್ ಹೋಲ್ಡರ್ ಈಗಾಗಗಲೇ ಚೆನ್ನೈ ಸೂಪರ್ ಕಿಂಗ್ಸ್, ಸನ್‌ರೈಸರ್ಸ್ ಹೈದರಾಬಾದ್, ಕೋಲ್ಕತ್ತಾ ನೈಟ್ ರೈಡರ್ಸ್, ಲಖ್ನೋ ಸೂಪರ್ ಜೇಂಟ್ಸ್ ತಂಡದ ಪರ ಆಡಿ ಸೈ ಎನಿಸಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications