Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2024: ಧೋನಿ ಜೆರ್ಸಿ ನಂಬರ್‌ 7 ಧರಿಸಲು ಕಾರಣವೇನು? ಸತ್ಯ ಬಹಿರಂಗ ಪಡಿಸಿದ ಕೂಲ್‌ ಕ್ಯಾಪ್ಟನ್

ಕ್ರಿಕೆಟ್‌ ಆಟಗಾರರಿಗೆ ಸಾಕಷ್ಟು ಅಭಿಮಾನಿಗಳು ಇರುತ್ತಾರೆ. ತಮ್ಮ ನೆಚ್ಚಿನ ಕ್ರಿಕೆಟ್‌ ಆಟಗಾರ ಏನು ಮಾಡುತ್ತಾನೆ?, ಅವರಿಗೆ ಏನು ಇಷ್ಟ?, ಯಾವ ರೀತಿಯ ಜೀವನ ಶೈಲಿಯನ್ನು ಅಳವಡಿಸಿಕೊಂಡಿದ್ದಾನೆ?, ಅವರಂತೆ ನಿಜ ಜೀವನದಲ್ಲಿ ತಮ್ಮನ್ನು ತಾವು ಬಿಂಬಿಸಿಕೊಳ್ಳಲು ಬಯಸುತ್ತಾರೆ.

ಇನ್ನು ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಬಗ್ಗೆ ಅಭಿಮಾನಿಗಳಲ್ಲಿ ಹಲವು ಕುತೂಹಲಗಳು ಇವೆ. ಎಂಎಸ್ ಧೋನಿ ವಿಶ್ವದ ನೆಚ್ಚಿನ ಕ್ರಿಕೆಟಿಗರಲ್ಲಿ ಒಬ್ಬರು. ಅಭಿಮಾನಿಗಳು ಧೋನಿ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳಲು ಬಯಸುತ್ತಾರೆ.

 IPL 2024: Why Dhoni will wear jersey number 7? The cool captain revealed the truth

ಸಾಮಾನ್ಯವಾಗಿ ಜನರು ತಮ್ಮ ನೆಚ್ಚಿನ ಆಟಗಾರನ ವೈಯಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳಲು ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಅದೇ ರೀತಿ ಅಭಿಮಾನಿಗಳು ಕೂಡ ಧೋನಿ ಅವರ ಜೆರ್ಸಿ ನಂಬರ್ 7 ಬಗ್ಗೆ ಸತ್ಯ ತಿಳಿಯಲು ಬಯಸಿದರು.

ಅವರು ಈ ಸಂಖ್ಯೆಯನ್ನು ಏಕೆ ಆಯ್ಕೆ ಮಾಡಿದರು? ಎಂಬ ಬಗ್ಗೆ ಕುತೂಹಲ ವಿತ್ತು. ಈಗ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ಮಹಿಯಂತೆಯೇ ಅವರ ಜರ್ಸಿ ನಂಬರ್ ಕೂಡ ಸಾಕಷ್ಟು ಫೇಮಸ್ ಆಗಿದೆ. ಜನರು ಸಾಮಾನ್ಯವಾಗಿ ಧೋನಿಯ ಜೆರ್ಸಿ ನಂಬರ್ ಬಗ್ಗೆ ಮಾತನಾಡುವುದನ್ನು ಕಾಣಬಹುದು.

ಹಾಗಾದರೆ ನಂಬರ್ 7 ಬಗ್ಗೆ ಧೋನಿ ಹೇಳಿದ್ದೇನು ಗೊತ್ತಾ? ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಧೋನಿ ಜೆರ್ಸಿ ನಂಬರ್ ಏಳರ ಬಗ್ಗೆ ಮಾತನಾಡುತ್ತಿರುವುದು ಕಂಡುಬಂದಿದೆ. ವೀಡಿಯೊದಲ್ಲಿ ಧೋನಿಗೆ "ನಿಮಗೆ 7 ಏಕೆ ಮುಖ್ಯವಾಗಿತ್ತು, ಈ ಹೊತ್ತಿಗೆ ಮನೆಗೆ ಬರಲು ನಿಮ್ಮ ಪೋಷಕರು ಕೇಳಿದ್ದೀರಾ?" ಎಂಬ ಪ್ರಶ್ನೆಯನ್ನು ಕೇಳಲಾಯಿತು.

ಈ ಎಲ್ಲ ಸಂಶಯಗಳಿಗೆ ಕೂಲ್ ಕ್ಯಾಪ್ಟನ್‌ ಧೋನಿ ಉತ್ತರ ನೀಡಿದ್ದಾರೆ. ಇಲ್ಲ, ನಿಜ ಹೇಳಬೇಕೆಂದ್ರೆ ನನ್ನ ಪೋಷಕರು ನಾನು ಜಗತ್ತಿಗೆ ಬರಬೇಕೆಂದು ನಿರ್ಧರಿಸಿದ ಸಮಯವದು" ಎಂದು ಹೇಳಿದರು. ಧೋನಿಯ ಈ ಮಾತುಗಳನ್ನು ಕೇಳಿ ಅಲ್ಲಿದ್ದವರೆಲ್ಲ ನಗುತ್ತಾರೆ.

 IPL 2024: Why Dhoni will wear jersey number 7? The cool captain revealed the truth

ನಂತರ ಧೋನಿ ಮತ್ತಷ್ಟು ಹೇಳುತ್ತಾರೆ, "ನಾನು ಜುಲೈ 7 ರಂದು ಜನಿಸಿದೆ ಮತ್ತು ಜುಲೈ ಏಳನೇ ತಿಂಗಳು. ಅದು 1981 ವರ್ಷ. ನೀವು 8 ರಿಂದ 1 ಅನ್ನು ಕಳೆದರೆ ಅದು ಏಳಾಗುತ್ತದೆ, ಹಾಗಾಗಿ ನಾನು ಅಲ್ಲಿಗೆ ಹೋದಾಗ ನನಗೆ ನನ್ನ ನಂಬರ್ ಆಯ್ಕೆಗೆ ಸುಲಭವಾಯಿತು. ಎಲ್ಲರಿಗೂ ಕೇಳಿದಂತೆ ಅಧಿಕಾರಿಗಳು ನನ್ನನ್ನು ಕೇಳುತ್ತಾರೆ, ನಿಮಗೆ ಯಾವ ಸಂಖ್ಯೆ ಬೇಕು? ಎಂದು ಕೇಳಿದಾಗ ನಾನು ತಿಳಿಸಿದ ಸಂಖ್ಯೆ ಅದು.

ಮಹೇಂದ್ರ ಸಿಂಗ್ ಧೋನಿ ಐಪಿಎಲ್ 2024 ರಲ್ಲಿ ಮಿಂಚಲು ಸಿದ್ಧರಾಗಿದ್ದಾರೆ. ಇದಕ್ಕೂ ಮೊದಲು ಐಪಿಎಲ್ 2023 ರಲ್ಲಿ, ಧೋನಿ ತಮ್ಮ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಚಾಂಪಿಯನ್ ಆಗಿ ಮಾಡಿದ್ದರು. 2023 ರ ನಂತರ, ಧೋನಿ ಮುಂದಿನ ಋತುವಿನಲ್ಲಿ ಆಡುತ್ತಾರೋ ಇಲ್ಲವೋ ಎಂಬ ಬಗ್ಗೆ ಬಲವಾದ ಚರ್ಚೆ ನಡೆದಿತ್ತು. ನಂತರ ಧೋನಿ ಐಪಿಎಲ್ 2024ರಲ್ಲಿ ಆಡುವುದಾಗಿ ತಿಳಿಸಿದರು.

Story first published: Sunday, February 11, 2024, 16:07 [IST]
Other articles published on Feb 11, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+