Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2024: ಮಿನಿ ಹರಾಜಿಗೂ ಮುನ್ನ ಆರ್‌ಸಿಬಿ ತಂಡದ ಕುರಿತು ಆತಂಕ ವ್ಯಕ್ತಪಡಿಸಿದ ಎಬಿ ಡಿವಿಲಿಯರ್ಸ್!

2024ರ ಐಪಿಎಲ್ ಮಿನಿ ಹರಾಜಿನ ಮುನ್ನ ಉಳಿಸಿಕೊಂಡ ಆಟಗಾರರ ಪಟ್ಟಿ ನೀಡುವ ಗಡುವಿನ ದಿನದಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತನ್ನ 11 ಆಟಗಾರರನ್ನು ಬಿಡುಗಡೆ ಮಾಡಿದೆ.

ದುಬೈನಲ್ಲಿ ಡಿಸೆಂಬರ್ 19ರಂದು ನಡೆಯಲಿರುವ ಮಿನಿ ಹರಾಜಿಗೆ ಮುಂಚಿತವಾಗಿ ದಕ್ಷಿಣ ಆಫ್ರಿಕಾ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಅವರು ಆರ್‌ಸಿಬಿ ತಂಡದ ಬೌಲಿಂಗ್ ವಿಭಾಗದ ಬಗ್ಗೆ ತಮ್ಮ ಕಳವಳ ವ್ಯಕ್ತಪಡಿದ್ದಾರೆ.

IPL 2024: Why did AB de Villiers Give Shocking Statement about RCB Ahead of IPL Mini Auction?

ತನ್ನದೇ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಎಬಿ ಡಿವಿಲಿಯರ್ಸ್, ಆರ್‌ಸಿಬಿ ತಮ್ಮ ಬೌಲಿಂಗ್ ದಾಳಿಗೆ ಹೆಚ್ಚಿನ ಫೈರ್‌ಪವರ್ ಸೇರಿಸುವ ಅಗತ್ಯವಿದೆ ಮತ್ತು ಆರ್‌ಸಿಬಿ ಅನೇಕ ಪಂದ್ಯ ವಿಜೇತ ಬೌಲರ್‌ಗಳನ್ನು ಕೈಬಿಟ್ಟಿದೆ ಎಂದು ಭಾವಿಸಿದರು.

"ಬೌಲಿಂಗ್ ನಾನು ಚಿಂತೆ ಮಾಡುವ ವಿಭಾಗವಾಗಿದೆ. ನಿಸ್ಸಂಶಯವಾಗಿ, ಅಲ್ಲಿ ಮೊಹಮ್ಮದ್ ಸಿರಾಜ್, ರೀಸ್ ಟೋಪ್ಲಿ ಮತ್ತು ಕೆಲವು ಅನುಭವಿಗಳಿದ್ದಾರೆ. ಆದರೆ ಆರ್‌ಸಿಬಿ ಬಿಡುಗಡೆ ಮಾಡಿದ ಆಟಗಾರರ ಪಟ್ಟಿಯನ್ನು ನೋಡಿದರೆ, ಅವರು ವನಿಂದು ಹಸರಂಗ, ಹರ್ಷಲ್ ಪಟೇಲ್ ಮತ್ತು ಜೋಶ್ ಹ್ಯಾಜಲ್‌ವುಡ್ ಅವರನ್ನು ಕೈಬಿಟ್ಟಿದ್ದಾರೆ".

IPL 2024: Why did AB de Villiers Give Shocking Statement about RCB Ahead of IPL Mini Auction?

"ಆ ಮೂವರು ಕಳೆದ ಎರಡು ಆವೃತ್ತಿಗಳಲ್ಲಿ, ವಿಶೇಷವಾಗಿ ಹ್ಯಾಜಲ್‌ವುಡ್ ಅವರಿಂದ ಬಹಳಷ್ಟು ಪಂದ್ಯಗಳನ್ನು ಗೆದ್ದಿದ್ದಾರೆ. ಅವರು ಆ ಬೌಲಿಂಗ್ ಲೈನ್ಅಪ್ ಅನ್ನು ನಿಯಂತ್ರಿಸುವ ವಿಧಾನ ಹೊಂದಿದ್ದರು," ಎಂದು ಮಾಜಿ ಸ್ಫೋಟಕ ಬ್ಯಾಟರ್ ಎಬಿ ಡಿವಿಲಿಯರ್ಸ್ ಹೇಳಿದರು.

ಮಿನಿ ಹರಾಜಿಗೂ ಮುನ್ನ ಆರ್‌ಸಿಬಿ ತನ್ನ ಪ್ರಮುಖ ಹಾಗೂ ದುಬಾರಿ ಮೌಲ್ಯದ ಬೌಲರ್‌ಗಳಾದ ಹರ್ಷಲ್ ಪಟೇಲ್, ಜೋಶ್ ಹ್ಯಾಜಲ್‌ವುಡ್, ವನಿಂದು ಹಸರಂಗ ಅವರನ್ನು ಬಿಡುಗಡೆ ಮಾಡಿದೆ.

ಮೊಹಮ್ಮದ್ ಸಿರಾಜ್ ಮತ್ತು ರೀಸ್ ಟೋಪ್ಲೆ ಮಾತ್ರ ಅಂತಾರಾಷ್ಟ್ರೀಯ ಅನುಭವ ಹೊಂದಿರುವ ಬೌಲರ್‌ಗಳಾಗಿದ್ದಾರೆ. ಆರ್‌ಸಿಬಿ ತಮ್ಮ ಪರ್ಸ್‌ನಲ್ಲಿ 23.25 ಕೋಟಿ ರೂಪಾಯಿಯೊಂದಿಗೆ ಹರಾಜಿಗೆ ಪ್ರವೇಶಿಸುವ ಮೂಲಕ ತಮ್ಮ ಬೌಲಿಂಗ್ ಶ್ರೇಣಿಯಲ್ಲಿ ಸಂಪೂರ್ಣ ತಾಜಾ ಪ್ರತಿಭೆಗಳನ್ನು ಹುಡುಕುತ್ತಿದ್ದಾರೆ ಎಂದು ಸೂಚಿಸುತ್ತದೆ.

ಮುಂಬೈ ಇಂಡಿಯನ್ಸ್ ತಂಡದಿಂದ 17.5 ಕೋಟಿ ರೂಪಾಯಿಗೆ ಕ್ಯಾಮೆರಾನ್ ಗ್ರೀನ್ ಅವರನ್ನು ಆರ್‌ಸಿಬಿ ತಮ್ಮ ತಂಡಕ್ಕೆ ವ್ಯಾಪಾರ ಮಾಡಿಕೊಂಡಿತು. ಇದು ಆರ್‌ಸಿಬಿಯ ಪರ್ಸ್ ಮೌಲ್ಯದ ಮೇಲೆ ಗಮನಾರ್ಹ ಪರಿಣಾಮ ಬೀರಿದೆ.

ಮೂರು ಬಾರಿಯ ಫೈನಲಿಸ್ಟ್ ಆರ್‌ಸಿಬಿ ತನ್ನ ಕೋಟಾ ಭರ್ತಿ ಮಾಡಲು ಒಟ್ಟು 6 ಸ್ಲಾಟ್‌ಗಳನ್ನು ಹೊಂದಿದ್ದು, ಅದರಲ್ಲಿ 3 ಸಾಗರೋತ್ತರ ಸ್ಲಾಟ್‌ಗಳಾಗಿವೆ.

ಆರ್‌ಸಿಬಿ ಮಾಜಿ ಆಟಗಾರ ತಮ್ಮ ಬೌಲಿಂಗ್‌ಗೆ ಸಂಬಂಧಿಸಿದಂತೆ ಕೆಲವು ವರ್ಷಗಳಿಂದ ತಂಡದ ದೌರ್ಬಲ್ಯವನ್ನು ಒಪ್ಪಿಕೊಂಡರು. ಈ ಹಿಂದೆ ತಂಡದ ಬೌಲಿಂಗ್ ಪ್ರದರ್ಶನವು ಎಷ್ಟು ಪಂದ್ಯಗಳನ್ನು ಸೋತಿದೆ ಎಂಬುದನ್ನು ಎಬಿಡಿ ಎತ್ತಿ ತೋರಿಸಿದರು.

"ಆರ್‌ಸಿಬಿಯ ಬೌಲಿಂಗ್ ಕೆಲವು ವರ್ಷಗಳಲ್ಲಿ ದೌರ್ಬಲ್ಯದ ಪ್ರದೇಶವಾಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಹೌದು, ಬ್ಯಾಟರ್‌ಗಳು ಸಹ ಕೆಲವೊಮ್ಮೆ ಗೊಂದಲವನ್ನುಂಟು ಮಾಡಿದರು, ಆದರೆ ನೀವು ತಂಡವಾಗಿ ಆಡಬೇಕಾಗಿದೆ".

"ಬ್ಯಾಟರ್‌ಗಳು ಮತ್ತು ಬೌಲರ್‌ಗಳು ಪರಸ್ಪರ ಅರ್ಥಮಾಡಿಕೊಳ್ಳಬೇಕು. ಹೆಚ್ಚಾಗಿ ಸಿಲ್ಲಿ ತಪ್ಪುಗಳನ್ನು ಮಾಡುವ, ಸರಿಯಾಗಿ ಶಿಸ್ತಿನ ಬೌಲಿಂಗ್ ಮಾಡದಿರುವ ಮತ್ತು ಒತ್ತಡದ ಸಂದರ್ಭದಲ್ಲಿ ಮೂಲಭೂತ ವಿಷಯಗಳನ್ನು ಜಾರಿಗೆ ತರದಿರುವ ಭಾವನೆ ಹೆಚ್ಚಾಗಿ ಕಂಡುಬರುತ್ತದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬೌಲಿಂಗ್ ಮಾಡುವುದು ಎಷ್ಟು ಕಷ್ಟ ಎಂಬುದು ನಮಗೆ ಗೊತ್ತಿದೆ," ಎಂದು ಎಬಿ ಡಿವಿಲಿಯರ್ಸ್ ತಿಳಿಸಿದ್ದಾರೆ.

ಐಪಿಎಲ್ ಟೂರ್ನಿಯಲ್ಲಿ ಅತ್ಯಂತ ಜನಪ್ರಿಯ ಫ್ರಾಂಚೈಸಿಗಳಲ್ಲಿ ಒಂದಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಇನ್ನೂ ಐಪಿಎಲ್ ಟ್ರೋಫಿ ಎತ್ತಿ ಹಿಡಿದಿಲ್ಲ. ಭಾರತೀಯ ಹಾಗೂ ಆರ್‌ಸಿಬಿ ಅಭಿಮಾನಿಗಳ ಅತ್ಯಂತ ಪ್ರೀತಿಯ ಸಾಗರೋತ್ತರ ಆಟಗಾರನಾಗಿದ್ದ ಎಬಿ ಡಿವಿಲಿಯರ್ಸ್ 2021ರಲ್ಲಿ ಐಪಿಎಲ್‌ನಿಂದ ನಿವೃತ್ತಿ ಘೋಷಿಸಿದರು.

ಎಬಿಡಿ 2011ರಿಂದ ಆರ್‌ಸಿಬಿ ಫ್ರಾಂಚೈಸಿಯೊಂದಿಗೆ ಸಂಬಂಧ ಹೊಂದಿದ್ದರು ಮತ್ತು 158.63ರ ಸ್ಟ್ರೈಕ್ ರೇಟ್‌ನೊಂದಿಗೆ ಸುಮಾರು 5000 ಐಪಿಎಲ್ ರನ್‌ಗಳನ್ನು ಗಳಿಸಿದ್ದಾರೆ. ಎಬಿ ಡಿವಿಲಿಯರ್ಸ್ ತಂಡದಲ್ಲಿ ಅವರ ನಿರ್ಣಾಯಕ ಕೊಡುಗೆಗಾಗಿ ಆರ್‌ಸಿಬಿಯ ಹಾಲ್ ಆಫ್ ಫೇಮ್ನಲ್ಲಿ ಸೇರ್ಪಡೆಗೊಂಡರು.

Story first published: Thursday, November 30, 2023, 7:30 [IST]
Other articles published on Nov 30, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+