IPL 2024: ಕೇವಲ 20 ಎಸೆತಗಳಲ್ಲಿ ಎರಡು ಬಾರಿ RR vs LSG ಪಂದ್ಯ ಸ್ಥಗಿತವಾಗಿದ್ದು ಏಕೆ?
17ನೇ ಆವೃತ್ತಿಯ ಐಪಿಎಲ್‌ನ ನಾಲ್ಕನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಕಾದಾಟ ನಡೆಸಿದವು. ಈ ಪಂದ್ಯಕ್ಕೆ ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂ ಸಾಕ್ಷಿಯಾಯಿತು. ಆದರೆ ಮೊದಲ 20 ಎಸೆತಗಳಲ್ಲಿ ಎರಡು ಬಾರಿ ಪಂದ್ಯ ಕೆಲ ಕಾಲ ನಿಂತಿತು. ಇದಕ್ಕೆ ಕಾರಣವೇನು ಎಂಬ ಕೂತುಹಲ ನಿಮ್ಮಲ್ಲಿದೆಯಾ ಇಲ್ಲಿದೆ ನೋಡಿ ವರದಿ..
ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಜೋಸ್ ಬಟ್ಲರ್ ಹಾಗೂ ಯಶಸ್ವಿ ಜೈಸ್ವಾಲ್ ಇನಿಂಗ್ಸ್ ಆರಂಭಿಸಲು ಮೈದಾನಕ್ಕೆ ಆಗಮಿಸಿದರು. ಆದರೆ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಜೋಸ್ ಬಟ್ಲರ್ ಒಳಗೆ ಬರುತ್ತಿದ್ದ ಚೆಂಡನ್ನು ಅರಿಯುವಲ್ಲಿ ವಿಫಲರಾದರು. ಪರಿಣಾಮ ರಾಜಸ್ಥಾನ ಒತ್ತಡಕ್ಕೆ ಸಿಲುಕಿತು. ಈ ಇಬ್ಬರೂ ಆಟಗಾರರು ಆಡುವಾಗಲೇ ಪಂದ್ಯ ಒಂದು ಬಾರಿ ಸ್ಥಗಿತಗೊಂಡಿತ್ತು.

ಸ್ಥಗಿತ ಗೊಂಡಿದ್ದು ಏಕೆ?
ಮೊದಲ ಬಾರಿಗೆ ಸ್ಪೈಡರ್ ಕ್ಯಾಮೆರಾದ ತಂತಿ ತುಂಡಾಗಿ ಪಂದ್ಯ ಸ್ಥಗಿತಗೊಂಡಿದ್ದು, ಎರಡನೇ ಬಾರಿ ಸ್ಟಂಪ್‌ನ ಬೇಲ್‌ನಿಂದಾಗಿ ಪಂದ್ಯವನ್ನು ನಿಲ್ಲಿಸಬೇಕಾಯಿತು. ಮೊಹ್ಸಿನ್ ಖಾನ್ ಮೊದಲ ಓವರ್ ಬೌಲ್ ಮಾಡಿದರು. ಆಗಲೇ ಸ್ಪೈಡರ್ ಕ್ಯಾಮೆರಾದ ವೈರ್ ಕಟ್ಟ ಆದ ಕಾರಣ ಮೊಹ್ಸಿನ್ ಓವರ್‌ನ ಎರಡು ಎಸೆತಗಳನ್ನು ಮಾತ್ರ ಬೌಲ್ ಮಾಡಲು ಸಾಧ್ಯವಾಯಿತು. ತಂತಿ ಕಟ್ ಆದ ನಂತರ ಪಂದ್ಯ ಪುನರಾರಂಭವಾಗಲು ಸ್ವಲ್ಪ ಸಮಯ ಹಿಡಿಯಿತು.
ಇದಾದ ಬಳಿಕ ನಾಲ್ಕನೇ ಓವರ್‌ನ ಮೂರನೇ ಎಸೆತದಲ್ಲಿ ಮತ್ತೊಮ್ಮೆ ಪಂದ್ಯ ಸ್ಥಗಿತಗೊಂಡಿತು. ಈ ವೇಳೆ ಸ್ಟಂಪ್ ಮೇಲಿನ ಬೆಲ್ಸ್ ನಿಂದಾಗಿ ಸ್ಥಗಿತಗೊಂಡಿತ್ತು. ಸ್ಟಂಪ್ ಮೇಲೆ ಇಡುವ ಬೆಲ್ಸ್‌ಗಳಲ್ಲಿ ಒಂದರ ದೀಪ ಊರಿಯುತ್ತಿರಲಿಲ್ಲ. ಈ ಕಾರಣದಿಂದಾಗಿ ಅದನ್ನು ಬದಲಾಯಿಸಬೇಕಾಯಿತು. ಈ ಅವಧಿಯಲ್ಲಿಯೂ ಕೆಲ ಕಾಲ ಪಂದ್ಯ ಸ್ಥಗಿತಗೊಂಡಿತ್ತು.

2023ರ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಪ್ಲೇಆಫ್ ತಲುಪಲು ಸಾಧ್ಯವಾಗಿರಲಿಲ್ಲ. ಕಳೆದ ಬಾರಿ ಲಕ್ನೋ ಸೂಪರ್ ಜೈಂಟ್ಸ್ ಪ್ಲೇ ಆಫ್‌ಗೆ ಅರ್ಹತೆ ಪಡೆಯುವಲ್ಲಿ ಸಫಲವಾಗಿತ್ತು.
ಜವಾಬ್ದಾರಿ ಮರೆತ ಜೋಸ್ ಬಟ್ಲರ್
ಈ ಪಂದ್ಯದಲ್ಲಿ ರಾಜಸ್ಥಾನ ಪರ ಯಶಸ್ವಿ ಜೈಸ್ವಾಲ್ ಸೊಗಸಾದ ಬ್ಯಾಟಿಂಗ್ ನಡೆಸಿ, ದೊಡ್ಡ ಇನ್ನಿಂಗ್ಸ್ ಕಟ್ಟುವ ಸೂಚನೆಯನ್ನು ನೀಡಿದರು. ಆದರೆ ಮೋಶಿನ್ ಖಾನ್ ಇವರಿಗೆ ಖೆಡ್ಡಾ ತೋಡಿದರು. ಇದಕ್ಕೂ ಮುನ್ನ ಯಶಸ್ವಿ 12 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಹಾಯದಿಂದ 24 ರನ್ ಸಿಡಿಸಿ ಔಟ್ ಆದರು.
ಜೋಸ್ ಬಟ್ಲರ್ ತಂಡಕ್ಕೆ ವಿಶೇಷವಾದ ಕೊಡುಗೆ ನೀಡಲಿಲ್ಲ. ಕೇವಲ 11 ರನ್ ಬಾರಿಸಿ ಔಟ್ ಆದರು. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದ ರಿಯಾನ್ ಪರಾಗ್ ಸೊಗಸಾದ ಇನ್ನಿಂಗ್ಸ್ ಕಟ್ಟಿದರು. ಇವರು 1 ಬೌಂಡರಿ, 3 ಸಿಕ್ಸರ್ ಸಹಾಯದಿಂದ 43 ರನ್ ಸಿಡಿಸಿ ತಂಡಕ್ಕೆ ನೆರವಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications