For Quick Alerts
ALLOW NOTIFICATIONS  
For Daily Alerts
 

IPL 2024: ಆಡುವ 11ರ ಬಳಗದಲ್ಲಿ ವಿಲ್ ಜ್ಯಾಕ್ಸ್‌ಗೆ ಅವಕಾಶ ನೀಡಿದರೆ ಆರ್‌ಸಿಬಿ ತಡೆಯೋರಿಲ್ಲ; ಎಬಿಡಿ

ಗುರುವಾರ, ಜನವರಿ 18ರಂದು ನಡೆದ 2024ರ SA20 ಲೀಗ್ ಪಂದ್ಯಾವಳಿಯಲ್ಲಿ ಡರ್ಬನ್ ಸೂಪರ್ ಜೈಂಟ್ಸ್ ತಂಡದ ವಿರುದ್ಧ ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡಕ್ಕಾಗಿ ವಿಲ್ ಜ್ಯಾಕ್ಸ್‌ನ ಸ್ಫೋಟಕ ಶತಕದ ಬಳಿಕ ದಕ್ಷಿಣ ಆಫ್ರಿಕಾದ ಲೆಜೆಂಡ್ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಪ್ರಭಾವಿತರಾಗಿದ್ದಾರೆ.

2024ರ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡಕ್ಕೆ ಪಂದ್ಯ ವಿಜೇತನಾಗಲು ಇಂಗ್ಲೆಂಡ್ ಕ್ರಿಕೆಟಿಗ ವಿಲ್ ಜ್ಯಾಕ್ಸ್ ಅಗತ್ಯ ಕೌಶಲ್ಯ ಮತ್ತು ಎಕ್ಸ್-ಫ್ಯಾಕ್ಟರ್ ಅನ್ನು ಹೊಂದಿದ್ದಾರೆ ಎಂದು ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

2022ರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಸದಸ್ಯನಾಗಿದ್ದರೂ, ಸ್ಫೋಟಕ ಬ್ಯಾಟರ್ ವಿಲ್ ಜ್ಯಾಕ್ಸ್ ಇನ್ನೂ ಒಂದು ಪಂದ್ಯದಲ್ಲಿ ಕಾಣಿಸಿಕೊಂಡಿಲ್ಲ ಎಂಬುದು ಗಮನಾರ್ಹ.

IPL 2024: Will Jacks Should in RCBs Playing XI Says AB de Villiers

"ವಿಲ್ ಜ್ಯಾಕ್ಸ್ ಆರ್‌ಸಿಬಿ ತಂಡಕ್ಕಾಗಿ ಒಂದು ಪಂದ್ಯವನ್ನೂ ಆಡಿಲ್ಲ. ಅವನು ಪಡೆದಿರುವ ಎಲ್ಲಾ ಕೌಶಲ್ಯಗಳಿಗೆ ಅದು ಅದ್ಭುತವಾಗಿದೆ. ಈ ಬ್ಯಾಟರ್ ಆರ್‌ಸಿಬಿ ತಂಡದ ಪರ ಪ್ರದರ್ಶನ ನೀಡಲು ಬೆಂಗಳೂರಿನ ಜನರು ಮತ್ತು ಆರ್‌ಸಿಬಿ ಅಭಿಮಾನಿಗಳು ಉತ್ಸುಕರಾಗಿದ್ದಾರೆಂದು ತೋರುತ್ತದೆ".

"ಆದರೆ, ಆರ್‌ಸಿಬಿ ಆಡುವ 11ರ ಬಳಗದಲ್ಲಿ ಆಡುವುದು ಅದು ದೊಡ್ಡ ಪ್ರಶ್ನೆಯಾಗಿದೆ. ಅವರು ದೊಡ್ಡ ಮೊತ್ತ ಗಳಿಸಬಹುದು ಎಂದು ನಮಗೆ ತಿಳಿದಿದೆ. ಇದು ಆಯ್ಕೆಗಾರರಿಗೆ ದುಃಸ್ವಪ್ನವಾಗಿದೆ. ಆರ್‌ಸಿಬಿ ಮ್ಯಾನೇಜ್‌ಮೆಂಟ್ ವಿಲ್ ಜ್ಯಾಕ್ಸ್‌ಗೆ ಸ್ಥಾನ ನೀಡುತ್ತಾರೆ ಎಂದು ನಾನು ಭಾವಿಸುತ್ತೇನೆ. ಜ್ಯಾಕ್ಸ್ ಸಂಪೂರ್ಣ ಪ್ಯಾಕೇಜ್ ಆಗಿದ್ದಾರೆ ಮತ್ತು ಚಿನ್ನಸ್ವಾಮಿ ಅಥವಾ ಆರ್‌ಸಿಬಿ ತಂಡ ಬೇರೆಡೆ ಹೋದರೆ ಪಂದ್ಯಗಳನ್ನು ಗೆಲ್ಲಬಹುದು," ಎಂದು ಆರ್‌ಸಿಬಿ ತಂಡದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ವಿಡಿಯೋದಲ್ಲಿ ತಿಳಿಸಿದ್ದಾರೆ.

ಇತ್ತೀಚಿಗೆ ಡರ್ಬನ್ ಸೂಪರ್ ಜೈಂಟ್ಸ್ ವಿರುದ್ಧ ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡದ 17 ರನ್‌ಗಳ ಗೆಲುವಿನಲ್ಲಿ ವಿಲ್ ಜ್ಯಾಕ್ಸ್ ಅವರ 42 ಎಸೆತಗಳಲ್ಲಿ ಸ್ಫೋಟಕ 101 ರನ್‌ಗಳ ಅತ್ಯುತ್ತಮ ಇನ್ನಿಂಗ್ಸ್ ನಿರ್ಣಾಯಕ ಪಾತ್ರ ವಹಿಸಿತು.

ವಿಲ್ ಜ್ಯಾಕ್ಸ್ ಅವರ ಪ್ರಭಾವಶಾಲಿ ಬ್ಯಾಟಿಂಗ್ ಫಾರ್ಮ್‌ನ ಹೊರತಾಗಿಯೂ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಸವಾಲೆಂದರೆ ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಕ್ಯಾಮೆರಾನ್ ಗ್ರೀನ್‌ ಅವರಂತಹ ವಿದೇಶ ಸ್ಟಾರ್ ಆಟಗಾರರ ಉಪಸ್ಥಿತಿಯಲ್ಲಿ ವಿಲ್ ಜ್ಯಾಕ್‌ಗೆ ಅವಕಾಶ ಕಲ್ಪಿಸುವುದು.

ತಂಡದಲ್ಲಿನ ಸ್ಥಾನಗಳ ಪೈಪೋಟಿಯ ಮಧ್ಯೆಯೂ, ಆರ್‌ಸಿಬಿ ಮ್ಯಾನೇಜ್‌ಮೆಂಟ್ ವಿಲ್ ಜ್ಯಾಕ್ಸ್ ಅವರಿಗೆ ಆಡುವ 11ರ ಬಳಗದಲ್ಲಿ ಹೇಗೆ ಸ್ಥಾನ ನೀಡುತ್ತದೆ ಎಂಬುದನ್ನು ನಿರ್ಧರಿಸಲು ಕಷ್ಟವಾಗುತ್ತದೆ. ವಿಲ್ ಜ್ಯಾಕ್ಸ್ ಕೇವಲ ಮೂರು SA20 ಪಂದ್ಯಗಳಲ್ಲಿ 205ರ ಅಸಾಮಾನ್ಯ ಸ್ಟ್ರೈಕ್ ರೇಟ್‌ನಲ್ಲಿ 164 ರನ್‌ಗಳನ್ನು ಬಾರಿಸಿದ್ದಾರೆ.

Story first published: Sunday, January 21, 2024, 8:23 [IST]
Other articles published on Jan 21, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+