For Quick Alerts
ALLOW NOTIFICATIONS  
For Daily Alerts
 

RCB vs RR ಪಂದ್ಯ ನಡೆಯಲ್ವಾ?; ಜೈಪುರದಲ್ಲಿ ಗುಡುಗು ಸಹಿತ ಮಳೆ; ಶನಿವಾರದ ಹವಾಮಾನ ವರದಿ ಹೇಗಿದೆ?

ಶನಿವಾರ, ಏಪ್ರಿಲ್ 6ರಂದು ಜೈಪುರದ ಸವಾಯಿ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 19ನೇ ಪಂದ್ಯವು ರಾಜಸ್ಥಾನ ರಾಯಲ್ಸ್ (ಆರ್ಆರ್) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮಧ್ಯೆ ನಡೆಯಲಿದೆ.

ಫಾಫ್ ಡು ಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತಲೆಕೆಡಿಸಿಕೊಳ್ಳಬೇಕಾದ ಸಮಸ್ಯೆಯೆಂದರೆ, 10-ತಂಡಗಳ ಐಪಿಎಲ್ 2024ರ ಅಂಕಪಟ್ಟಿಯಲ್ಲಿ ಪ್ರಸ್ತುತ ಎಂಟನೇ ಸ್ಥಾನದಲ್ಲಿದೆ.

IPL 2024 Will Rain Play Spoils RCB vs Rajasthan Royals match What is the Weather Report in Jaipur

ಮತ್ತೊಂದೆಡೆ, ಐಪಿಎಲ್ 2024ರಲ್ಲಿ ಈವರೆಗೆ ಆಡಿದ ಮೂರು ಪಂದ್ಯಗಳಲ್ಲೂ ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ವಿಜಯಶಾಲಿಯಾಗಿ ಹೊರಹೊಮ್ಮಿದೆ. ಆದರೆ, ಜೈಪುರದಲ್ಲಿ ಪಂದ್ಯಕ್ಕೆ ಒಂದು ಮುಂಚಿತವಾಗಿ ಶುಕ್ರವಾರದಂದು ಗುಡುಗು ಸಹಿತ ಮಳೆಯಾಗಿದೆ. ಹೀಗಾಗಿ ಶನಿವಾರದಂದು ಆರ್‌ಸಿಬಿ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯಕ್ಕೂ ಅಡ್ಡಿಯಾಗುವ ಭೀತಿ ಎದುರಾಗಿದೆ.

ಏಪ್ರಿಲ್ 6ರಂದು ರೋಚಕ ಪಂದ್ಯಕ್ಕೆ ಮಳೆಯು ಅಡ್ಡಿಯಾಗುತ್ತದೆಯೇ?

ಆರ್‌ಸಿಬಿ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ತಮ್ಮ ಇತ್ತೀಚಿನ ಪಂದ್ಯಗಳಲ್ಲಿ ವ್ಯತಿರಿಕ್ತ ಫಲಿತಾಂಶಗಳಿಂದ ಚೇತರಿಸಿಕೊಳ್ಳಲು ಎದುರು ನೋಡುತ್ತಿವೆ.

ರಾಜಸ್ಥಾನ್ ರಾಯಲ್ಸ್ ತಂಡ ಐಪಿಎಲ್ 2024ರಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದೆ. ಡೆಲ್ಲಿ ಕ್ಯಾಪಿಟಲ್ಸ್, ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳಂತಹ ಪ್ರಬಲ ಎದುರಾಳಿಗಳ ವಿರುದ್ಧ ತಮ್ಮ ಕೊನೆಯ ಮೂರು ಪಂದ್ಯಗಳನ್ನು ಗೆದ್ದು ಬೀಗಿದೆ.

IPL 2024 Will Rain Play Spoils RCB vs Rajasthan Royals match What is the Weather Report in Jaipur

ಮತ್ತೊಂದೆಡೆ, ಉದ್ಘಾಟನಾ ಪಂದ್ಯದಲ್ಲಿ ಸಿಎಸ್‌ಕೆ ವಿರುದ್ಧ ಸೋಲಿನೊಂದಿಗೆ ಅಭಿಯಾನ ಆರಂಭಿಸಿದ ಆರ್‌ಸಿಬಿ ತಂಡವು ಬಳಿಕ ಪಂಜಾಬ್ ಕಿಂಗ್ಸ್ ವಿರುದ್ಧ ಏಕೈಕ ಗೆಲುವು ಸಾಧಿಸಿತು. ನಂತರ, ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸತತವಾಗಿ ಆರ್‌ಸಿಬಿ ಹಿನ್ನಡೆ ಅನುಭವಿಸಿದೆ.

ಎರಡೂ ತಂಡಗಳು ಈ ಐಪಿಎಲ್ 2024ರ ಪ್ರಮುಖ ಪಂದ್ಯಕ್ಕಾಗಿ ತಯಾರಿ ನಡೆಸುತ್ತಿರುವಾಗ ಎಲ್ಲರ ಕಣ್ಣುಗಳು ಹವಾಮಾನದ ಮೇಲೆ ನೆಟ್ಟಿವೆ. ಏಕೆಂದರೆ ಇದು ಅಂಕಪಟ್ಟಿಯ ಮೇಲೆ ಪರಿಣಾಮ ಬೀರಬಹುದು.

ಶನಿವಾರ ಜೈಪುರದ ಹವಾಮಾನ ವರದಿ

ಜೈಪುರದ ಇತ್ತೀಚಿನ ಅಕ್ಯುವೆದರ್ ಹವಾಮಾನ ವರದಿಯ ಪ್ರಕಾರ, ಆರ್‌ಸಿಬಿ ಮತ್ತು ರಾಜಸ್ಥಾನ್ ರಾಯಲ್ಸ್ ಪಂದ್ಯದ ದಿನದಂದು ಸರಿಸುಮಾರು 23 ಡಿಗ್ರಿ ಸೆಲ್ಸಿಯಸ್ ಇರುತ್ತದೆ ಎಂದು ಸೂಚಿಸಿದೆ.

ಜೈಪುರದಲ್ಲಿ ಸ್ಪಷ್ಟವಾದ ಆಕಾಶದ ಮುನ್ಸೂಚನೆ ಇದ್ದು, ಇದು ದೀಪಗಳ ಅಡಿಯಲ್ಲಿ ಆರ್‌ಸಿಬಿ ಮತ್ತು ರಾಜಸ್ಥಾನ್ ರಾಯಲ್ಸ್ ರೋಮಾಂಚಕ ಪಂದ್ಯಕ್ಕೆ ಪರಿಪೂರ್ಣ ಪರಿಸ್ಥಿತಿಗಳನ್ನು ನೀಡುತ್ತದೆ. ಗಂಟೆಗೆ 24 ಕಿಮೀ ವೇಗದ ಉತ್ತರ ಮಾರುತವು ಆಟಗಾರರಿಗೆ ಸಣ್ಣ ಹೆಚ್ಚುವರಿ ಸವಾಲನ್ನು ಒದಗಿಸಬಹುದು ಮತ್ತು ಚೆಂಡಿನ ಪಥವನ್ನು ಬದಲಾಯಿಸಬಹುದು.

ಪಂದ್ಯದ ದಿನದಂದು ಗುಡುಗು ಸಹಿತ ಮಳೆಯು ಕಡಿಮೆ ಸಾಧ್ಯತೆ ಇರುವುದರಿಂದ ಅಭಿಮಾನಿಗಳು ಪೂರ್ಣ ಪಂದ್ಯವನ್ನು ಕಣ್ತುಂಬಿಕೊಳ್ಳಬಹುದು. ಅಲ್ಲದೆ, ಜೈಪುರದಲ್ಲಿ ಶುಕ್ರವಾರ ಗುಡುಗು ಸಹಿತ ಮಳೆ ಸುರಿದಿದ್ದು, ಆದರೆ ಶನಿವಾರ ಮಳೆಯಾಗುವ ಸಾಧ್ಯತೆ ಇಲ್ಲ ಎನ್ನಲಾಗಿದೆ.

ಎಲ್ಲಿಯವರೆಗೆ ಮಳೆಯಾಗುವುದಿಲ್ಲವೋ ಅಲ್ಲಿಯವರೆಗೆ ಕ್ರಿಕೆಟ್ ಅಭಿಮಾನಿಗಳು ಪೂರ್ಣ ಪಂದ್ಯವನ್ನು ನಿರೀಕ್ಷಿಸಬಹುದು ಅದು ಎರಡೂ ತಂಡಗಳ ಸಾಮರ್ಥ್ಯವನ್ನು ಎತ್ತಿ ತೋರಿಸುತ್ತದೆ.

ಆರ್‌ಸಿಬಿ vs ರಾಜಸ್ಥಾನ್ ರಾಯಲ್ಸ್ ಪಂದ್ಯದ ಟಿವಿ ಮತ್ತು ಲೈವ್ ಸ್ಟ್ರೀಮಿಂಗ್ ಮಾಹಿತಿ

ಐಪಿಎಲ್ 2024ರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯವನ್ನು ಟಿವಿಯಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ ಚಾನೆಲ್‌ನಲ್ಲಿ ನೇರಪ್ರಸಾರ ಮಾಡಲಾಗುತ್ತದೆ.

ಮೊಬೈಲ್‌ನಲ್ಲಿ ಪಂದ್ಯವನ್ನು ವೀಕ್ಷಿಸಲು ಬಯಸುವ ವೀಕ್ಷಕರು JioCinema ಮೊಬೈಲ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಆಗಿ ನೋಡಬಹುದು.

Story first published: Saturday, April 6, 2024, 11:33 [IST]
Other articles published on Apr 6, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+