IPL 2024: ಆರ್‌ಸಿಬಿಯ ದುಬಾರಿ ಆಟಗಾರ ಅಲ್ಜಾರಿ ಜೋಸೆಫ್ ಎಲ್ಲ ಪಂದ್ಯ ಆಡುತ್ತಾರಾ?
ಇಂಡಿಯನ್ ಪ್ರೀಮಿಯರ್ ಲೀಗ್ ಮಿನಿ ಹರಾಜು ದುಬೈನಲ್ಲಿ ನಡೆದಿದೆ. ಮಾಲೀಕರು ಅಳೆದು ತೂಗಿ ಆಟಗಾರರಿಗೆ ಮಣೆ ಹಾಕಿದ್ದಾರೆ. ಹರಾಜಿನಲ್ಲಿ ಆರ್‌ಸಿಬಿ ಸಹ ಆರು ಆಟಗಾರರಿಗೆ ಮಣೆ ಹಾಕಿದೆ. ಅದರಲ್ಲಿ ಎಲ್ಲರ ಚಿತ್ತ ಕದ್ದ ಪ್ಲೇಯರ್ ಅಲ್ಜರಿ ಜೋಸೆಫ್..
ಕಳೆದ ಎರಡು ಆವೃತ್ತಿಯ ಐಪಿಎಲ್‌ನಲ್ಲಿ ಗುಜರಾತ್ ತಂಡದ ಪರ ಆಡಿದ್ದ ಅಲ್ಜಾರಿ ಜೋಸೆಫ್‌ಗೆ ಆರ್‌ಸಿಬಿ ಬರೋಬ್ಬರಿ 11.05 ಕೋಟಿ ನೀಡಿ ತಮ್ಮ ತಂಡಕ್ಕೆ ಬರಮಾಡಿಕೊಂಡಿದೆ. ವಿದೇಶಿ ಪೇಸ್ ಬೌಲರ್‌ನಿಗೆ ಇಷ್ಟು ಹಣ ಹೂಡಿದ್ದು ಸರಿಯೇ ಎಂಬ ಪ್ರಶ್ನೆಗಳು ಕೇಳಿ ಬರುತ್ತಿವೆ. ಇನ್ನು ದುಬಾರಿಗೆ ಬೆಲೆಗೆ ಖರೀದಿಸಿ ಇವರನ್ನು ಆರ್‌ಸಿಬಿ ಬೆಂಚ್ ಮೇಲೆ ಕೂಡಿಸುವ ಸಾಹಸವನ್ನು ಮಾಡುವುದಿಲ್ಲ ಎಂದು ಮೇಲ್ನೋಟಕ್ಕಂತು ಕಾಣುತ್ತದೆ.

ನಾಲ್ಕು ವಿದೇಶಿ ಆಟಗಾರರಿಗೆ ಅವಕಾಶ
ಐಪಿಎಲ್ ನಿಯಮದಂತೆ ಒಂದು ತಂಡ ಅತಿ ಹೆಚ್ಚು ಅಂದರೆ ನಾಲ್ಕು ವಿದೇಶಿ ಆಟಗಾರರನ್ನು ಆಡುವ ಹನ್ನೊದರ ಬಳಗದಲ್ಲಿ ಆಡಲು ಅವಕಾಶ ನೀಡಬೇಕು. ಈ ನಿಯಮವನ್ನು ನೋಡಿದರೆ ಅಲ್ಜಾರಿ ಜೋಸೆಫ್ ಐಪಿಎಲ್‌ನ ಎಲ್ಲ ಪಂದ್ಯಗಳಲ್ಲೂ ಆಡುತ್ತಾರಾ ಎಂಬುದು ದೊಡ್ಡ ಪ್ರಶ್ನೆ.
ಇಬ್ಬರು ವಿದೇಶಿ ಆಟಗಾರರು ಫಿಕ್ಸ್
ನಾಯಕನ ರೂಪದಲ್ಲಿ ಕಾಣಿಸಿಕೊಳ್ಳುವ ಫಾಫ್ ಡುಪ್ಲೇಸಿಸ್ ಹಾಗೂ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಆಲ್‌ರೌಂಡರ್ ಗ್ಲೇನ್ ಮ್ಯಾಕ್ಸ್‌ವೆಲ್ ಎಲ್ಲ ಪಂದ್ಯಗಳಲ್ಲೂ ಆಡುವುದು ಖಚಿತ. ಇವರನ್ನು ಬಿಟ್ಟು ಇನ್ನು ಇಬ್ಬರು ಆಟಗಾರರಿಗೆ ಮಾತ್ರ ಅವಕಾಶ ಲಭಿಸುತ್ತದೆ. ತಂಡದ ಸಮತೋಲನವನ್ನು ನೋಡಿಕೊಂಡು ಉಳಿದವರಿಗೆ ಅವಕಾಶ ನೀಡಲಾಗುತ್ತದೆ.
ವಿದೇಶಿ ಆಟಗಾರರ ಪಟ್ಟಿಯಲ್ಲಿ ಕಾಣುವ ಮತ್ತೊಂದು ಹೆಸರು ವಿಲ್ ಜಾಕ್ಸ್. ಬ್ಯಾಟರ್ ಆಗಿ ಕಾಣಿಸಿಕೊಳ್ಳುವ ಇವರು, ಮೇಲ್ಪಂಕ್ತೀಯ ಆಟಗಾರನಿಗೆ ತೊಂದರೆ ಆದಲ್ಲಿ ಬ್ಯಾಟ್ ಹಿಡಿದು ಅಂಗಳಕ್ಕೆ ಪ್ರವೇಶಿಸಲಿದ್ದಾರೆ.

ಇನ್ನು ಮುಂಬೈ ಇಂಡಿಯನ್ಸ್ ತಂಡದಿಂದ ಮಿನಿ ಹರಾಜಿಗೂ ಮುನ್ನ ಆರ್‌ಸಿಬಿ ಟ್ರೇಡ್ ಮಾಡಿ ಕ್ಯಾಮರುನ್ ಗ್ರೀನ್ ಅವರಿಗೆ ಮಣೆ ಹಾಕಿದೆ. ಇವರು ಒಬ್ಬ ಉತ್ತಮ ಆಲ್ ರೌಂಡರ್ ಇವರು ಫಿಟ್ ಆಗಿದ್ದಲ್ಲಿ ಐಪಿಎಲ್ 2024ರ ಎಲ್ಲ ಪಂದ್ಯಗಳನ್ನು ಆಡಲಿದ್ದಾರೆ.
ಹರಾಜಿನಲ್ಲಿ ಇಂಗ್ಲೆಂಡ್ ತಂಡದ ಆಲ್‌ರೌಂಡರ್ ಟಾಮ್ ಕರನ್ ಅವರಿಗೂ ಆರ್‌ಸಿಬಿ ಬಿಡ್ ಮಾಡಿ ತಂಡಕ್ಕೆ ಸೇರಿಸಿಕೊಂಡಿದೆ. ಅಂದಹಾಗೆ ಇಬ್ಬರು ಆಲ್ ರೌಂಡರ್‌ಗಳಿದ್ದಾಗ ಒಬ್ಬ ಪೇಸರ್‌ಗೆ ಏಕೆ ತಂಡ ಆಡುವ ತಂಡದಲ್ಲಿ ಸ್ಥಾನ ನೀಡುತ್ತದೆ ಎಂಬುದೆ ದೊಡ್ಡ ಪ್ರಶ್ನೆ.
ವೇಗದ ಬೌಲಿಂಗ್ ವಿಭಾಗದಲ್ಲಿ ನ್ಯೂಜಿಲೆಂಡ್ ತಂಡದ ಲಾಕಿ ಫಾರ್ಗೂಸನ್ ಸಹ ತಂಡ ಸೇರಿಕೊಂಡಿದ್ದಾರೆ. ಅಲ್ಜಾರಿ ಜೋಸೆಫ್ ಅವರಿಗೆ ಇವರು ಭರ್ಜರಿ ಪೈಪೋಟಿ ನೀಡಲಿದ್ದಾರೆ. ಯಾವ ಪ್ಲೇಯರ್‌ಗೆ ಅವಕಾಶ ಸಿಗುತ್ತದೋ ಅವರು ವಿಕೆಟ್ ಪಡೆದು ಭರವಸೆ ಮೂಡಿಸಬೇಕಿದೆ.

ಇಲ್ಲವಾದಲ್ಲಿ ಅಲ್ಜಾರಿ ಜೋಸೆಫ್ ಅವರಿಗೆ ನೀಡಿದ ಹಣ, ನೀರಿನಲ್ಲಿ ಹೋಮ ಮಾಡಿದಂತೆ. ಅಲ್ಜಾರಿ ಜೋಸೆಫ್ ಅವರ ಐಪಿಎಲ್ ವೃತ್ತಿ ಜೀವನವನ್ನು ಗಮನಿಸಿದರೆ ಅವರು 19 ಪಂದ್ಯಗಳಲ್ಲಿ 27 ರನ್ ಬಾರಿಸಿದ್ದಾರೆ. ಇದನ್ನು ನೋಡಿದ ಮೇಲೆ ಒಂದಂತೂ ಕನ್ಫರ್ಮ್ ಇವರಲ್ಲಿ ಬ್ಯಾಟಿಂಗ್ ಎಬಿಲಿಟಿ ಇಲ್ಲ ಎಂಬುದು. ಬೌಲಿಂಗ್‌ನಲ್ಲೂ ಇವರು ಅಬ್ಬಾ ಎನ್ನುವ ಪ್ರದರ್ಶನವನ್ನು ಏನು ನೀಡಿಲ್ಲ. ಅಲ್ಜಾರಿ 19 ಪಂದ್ಯಗಳಿಂದ 20 ವಿಕೆಟ್ ಪಡೆದಿದ್ದಾರೆ. ಹೀಗಾಗಿ ಇವರಿಗೆ ತಂಡ ಯಾವ ಜವಾಬ್ದಾರಿ ನೀಡುತ್ತದೆ ಎಂಬುದೇ ಕುತೂಹಲ ಮೂಡಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications