ಐಪಿಎಲ್‌ಗಾಗಿ ಈಗಾಗಲೇ ಎಲ್ಲ ತಂಡಗಳು ಭರದ ತಯಾರಿ ನಡೆಸಿವೆ. ಈ ಹಿನ್ನೆಲೆಯಲ್ಲಿ ಆಟಗಾರರು ಸಹ ಭರ್ಜರಿ ತಾಲೀಮು ನಡೆಸಿದ್ದಾರೆ. ಗಾಯಕ್ಕೆ ತುತ್ತಾಗಿರುವ ಆಟಗಾರರು ಚೇತರಿಕೆಯತ್ತ ಗಮನ ಹರಿಸುತ್ತಿದ್ದಾರೆ. ಟೀಮ್ ಇಂಡಿಯಾದ ಸ್ಟಾರ್ ಆಟಗಾರರ ಚಿತ್ತ ಈಗ ಐಪಿಎಲ್‌ನತ್ತ ನೆಟ್ಟಿದೆ.
ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಸಹ ಗಾಯಕ್ಕೆ ತುತ್ತಾಗಿದ್ದು ಚೇತರಿಕೆ ಕಾಣುತ್ತಿದ್ದಾರೆ. ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್ ವೇಳೆ ಗಾಯಗೊಂಡಿದ್ದ ಹಾರ್ದಿಕ್ ಪಾಂಡ್ಯ ಇದೀಗ ಟೀಂ ಇಂಡಿಯಾದಲ್ಲಿ ಕಮ್ ಬ್ಯಾಕ್ ಮಾಡಲು ಶ್ರಮಿಸುತ್ತಿದ್ದಾರೆ. ಜಿಮ್‌ನಲ್ಲಿ ಬೆವರು ಹರಿಸುತ್ತಿರುವ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಸಕತ್ ವೈರಲ್ ಆಗಿದೆ.
ಪಾದದ ಶಸ್ತ್ರಚಿಕಿತ್ಸೆಯ ನಂತರ, ಅವರು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ರಿಹ್ಯಾಬ್‌ಗೆ ಒಳಗಾಗಿದ್ದರು. ಇದೀಗ ಜೂನ್ 1ರಿಂದ ಆರಂಭವಾಗಲಿರುವ ಟಿ-20 ವಿಶ್ವಕಪ್ ಹಾಗೂ ಐಪಿಎಲ್‌ಗೆ ಮರಳುವ ಕನಸು ಕಾಣುತ್ತಿದ್ದಾರೆ. ಹಾರ್ದಿಕ್ ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ರೀಲ್‌ಗಳನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಹಾರ್ದಿಕ್ ತನ್ನನ್ನು ತಾನು ಫಿಟ್ ಆಗಿ ಕಾಣುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ.
ವಿಶ್ವಕಪ್‌ನ ಮಧ್ಯದಲ್ಲಿ ಹಾರ್ದಿಕ್ ಪಾಂಡ್ಯ ನಿರ್ಗಮಿಸಿದ ನಂತರ, ಮೊಹಮ್ಮದ್ ಶಮಿ ಅವರ ಸ್ಥಾನದಲ್ಲಿ ತಂಡದಲ್ಲಿ ಸ್ಥಾನ ಪಡೆದು ಅಬ್ಬರಿಸಿದ್ದರು. ಶಮಿ ವಿಶ್ವಕಪ್‌ನಲ್ಲಿ 24 ವಿಕೆಟ್‌ಗಳನ್ನು ಪಡೆಯುವ ಮೂಲಕ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು.
ಮಧ್ಯಮ ವೇಗದ ಬೌಲಿಂಗ್‌ನೊಂದಿಗೆ ವಿಕೆಟ್‌ಗಳನ್ನು ಕಬಳಿಸಿದ ಶಿವಂ ತನ್ನನ್ನು ಸಹ ಮುಂದಿನ ಬಾರಿಯ ವಿಶ್ವಕಪ್‌ಗೆ ಪರಿಗಣಿಸುವಂತೆ ಸಾರಿ ಹೇಳಿದರು. ಐಪಿಎಲ್‌ನ ಆರಂಭಿಕ ಸುತ್ತಿನಲ್ಲಿ ಅವರು ಉತ್ತಮ ಪ್ರದರ್ಶನ ನೀಡಿದರೆ ಮತ್ತು ಹಾರ್ದಿಕ್ ಪಾಂಡ್ಯ ಅವರ ಫಿಟ್‌ನೆಸ್ ಬಗ್ಗೆ ಸ್ವಲ್ಪ ಅನುಮಾನವಿದ್ದರೂ, ಅವರು ತಂಡಕ್ಕೆ ಎಂಟ್ರಿ ಪಡೆಯುವುದು ಖಚಿತ ಎಂದು ಪರಿಗಣಿಸಲಾಗಿದೆ.
ಐಪಿಎಲ್‌ನಲ್ಲಿ ಮುಂಬೈ ತಂಡದ ನಾಯಕ
ಐಪಿಎಲ್ 2024 ರ ಹರಾಜಿನ ಮೊದಲು ಮುಂಬೈ ಇಂಡಿಯನ್ಸ್ ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ತೆಗೆದು ಅವರ ಬದಲಿಗೆ, ಗುಜರಾತ್ ತಂಡವನ್ನು ಎರಡು ಬಾರಿ ಫೈನಲ್‌ಗೆ ಕೊಂಡೊಯ್ದಿದ್ದ ಹಾರ್ದಿಕ್ ಪಾಂಡ್ಯ ಅವರಿಗೆ ನಾಯಕತ್ವವನ್ನು ನೀಡಿತು. ಹಾರ್ದಿಕ್ ಪಾಂಡ್ಯ ಅವರನ್ನು ಮುಂಬೈ ಇಂಡಿಯನ್ಸ್ ಟ್ರೇಡ್ ಮಾಡಿ ತಂಡಕ್ಕೆ ಸೇರಿಸಿಕೊಂಡಿತು. ಹಾರ್ದಿಕ್ ಮುಂಬೈ ಸೇರುತ್ತಿದ್ದಂತೆ ಅಸಮಾಧಾನ ಭುಗಿಲೆದ್ದಿತು.
ನಾಯಕತ್ವದ ಮೇಲೆ ಕಣ್ಣು ನೆಟ್ಟಿದ್ದ ಜಸ್ಪ್ರಿತ್ ಬುಮ್ರಾ ಹಾಗೂ ಸೂರ್ಯಕುಮಾರ್ ಯಾದವ್ ಅವರಿಗೆ ನಿರಾಸೆ ಆಯಿತು. ಹಾರ್ದಿಕ್ ಪಾಂಡ್ಯ ಎಷ್ಟು ಫಿಟ್ ಆಗಿದ್ದಾರೆ ಮತ್ತು ಐಪಿಎಲ್‌ನಲ್ಲಿ ಅವರು ಹೇಗೆ ಮುಂಬೈ ಇಂಡಿಯನ್ಸ್ ತಂಡದ ಗೆಲುವಿನಲ್ಲಿ ಮಿಂಚುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಮುಂಬೈ ಇಂಡಿಯನ್ಸ್ ಮತ್ತೊಮ್ಮೆ ಚಾಂಪಿಯನ್ ಪಟ್ಟಕ್ಕೆ ಏರುತ್ತದಾ ಎಂಬ ಪ್ರಶ್ನೆಗಳು ಎದ್ದಿವೆ.