ಇನ್ನೇನು ಕೆಲವೇ ದಿನಗಳಲ್ಲಿ ಐಪಿಎಲ್ ಶುರವಾಗಲಿದೆ. ಈ ಟೂರ್ನಿಗೆ ಭರ್ಜರಿ ಸಿದ್ಧತೆ ಆರಂಭವಾಗಿದೆ. ಟೂರ್ನಿಯಲ್ಲಿ ಅಬ್ಬರದ ಪ್ರದರ್ಶನ ನೀಡಿ ಟ್ರೋಫಿ ಗೆಲ್ಲಲು ಎಲ್ಲ ತಂಡಗಳು ಪ್ಲ್ಯಾನ್ ಮಾಡಿಕೊಂಡಿವೆ. ಈ ನಿಟ್ಟಿನಲ್ಲಿ ಹಲವು ತಂಡಗಳು ಕಪ್ ಗೆಲುವಿನ ಕನಸು ಹೊಂದಿವೆ. ಅದರಂತೆ ರಾಜಸ್ಥಾನ ರಾಯಲ್ಸ್ ಸಹ ಎರಡನೇ ಬಾರಿ ಪ್ರಶಸ್ತಿ ಗೆಲುವಿನ ಕನಸಿನೊಂದಿಗೆ ಈ ಬಾರಿ ಕಣಕ್ಕೆ ಇಳಿಯಲಿದೆ.
ಮಾರ್ಚ್ 22 ರಿಂದ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಸಿ ಎಸ್‌ಕೆ ತಂಡಗಳು ಕಾದಾಟವನ್ನು ನಡೆಸಲಿವೆ. ಈ ಮೂಲಕ 17ನೇ ಆವೃತ್ತಿಗೆ ಚಾಲನೆ ಸಿಗಲಿದೆ. ಈ ಬಾರಿಯ ಐಪಿಎಲ್‌ನಲ್ಲಿ 10 ತಂಡಗಳು ಕಾದಾಟ ನಡೆಸಲಿದ್ದು, ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ. ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತೊಂದು ಪ್ರಶಸ್ತಿಯ ಹುಡುಕಾಟದಲ್ಲಿದೆ. ರಾಜಸ್ಥಾನ ರಾಯಲ್ಸ್ ತನ್ನ ಮೊದಲ ಪಂದ್ಯವನ್ನು ಮಾರ್ಚ್ 24 ರಂದು ಆಡಲಿದ್ದು, ಲಖ್ನೋ ಸೂಪರ್ ಜೇಂಟ್ಸ್ ವಿರುದ್ಧ ಕಾದಾಟ ನಡೆಸಲಿದೆ.

ರಾಜಸ್ಥಾನ ತಂಡಕ್ಕೆ ಯುವ ಆಟಗಾರರೇ ಬಲವನ್ನು ತುಂಬಿದ್ದಾರೆ. ಟಾಪ್ ಆರ್ಡರ್‌ನಲ್ಲಿ ಕಾಣಿಸಿಕೊಳ್ಳುವ ಯಶಸ್ವಿ ಜೈಸ್ವಾಲ್, ಧ್ರುವ ಜುರೇಲ್, ರಿಯಾನ್ ಪರಾಗ್, ಆವೀಶ್ ಖಾನ್, ಕುಲ್‌ದೀಪ್ ಸೇನ್, ನವದೀಪ್ ಸೈನಿ ಸೇರಿದಂತೆ ಯುವ ಆಟಗಾರರು ತಂಡದ ಬಲವನ್ನು ಹೆಚ್ಚಿಸಲು ಶ್ರಮಿಸಲಿದ್ದಾರೆ. ಈ ಯುವ ಆಟಗಾರರ ಮೇಲೆ ಫ್ರಾಂಚೈಸಿ ಅಪಾರವದ ನಂಬಿಕೆಯನ್ನು ಇಟ್ಟುಕೊಂಡಿದೆ.
ರಾಜಸ್ಥಾನ ರಾಯಲ್ಸ್ ತಂಡದ ಬ್ಯಾಟಿಂಗ್ ಆರ್ಡರ್‌ನಲ್ಲಿ ಅಗ್ರ ಪಂಕ್ತಿಯಲ್ಲಿ ಕಾಣಿಸಿಕೊಳ್ಳುವ ಜೋಸ್ಟ್ ಬಟ್ಲರ್ ಹಾಗೂ ಯಶಸ್ವಿ ಜೈಸ್ವಾಲ್ ಅಬ್ಬರದ ಪ್ರದರ್ಶನ ನೀಡಿ ಎದುರಾಳಿಗಳನ್ನು ಕಾಡಲು ತಯಾರಾಗಿದ್ದಾರೆ. ಅದರಲ್ಲೂ ಯಶಸ್ವಿ ಜೈಸ್ವಾಲ್ ಅವರ ಸದ್ಯದ ಪ್ರದರ್ಶನ ನಿಜಕ್ಕೂ ರಾಜಸ್ಥಾನ ರಾಯಲ್ಸ್ ತಂಡದ ಚಿಂತೆಯನ್ನು ದೂರ ಮಾಡಿದೆ. ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಟೆಸ್ಟ್ ಸರಣಿಯಲ್ಲಿ ಯಶಸ್ವಿ ಜೈಸ್ವಾಲ್ ಅತಿ ಹೆಚ್ಚು ರನ್ ದಾಖಲಿಸಿ ಮಿಂಚಿದ್ದರು. ಅಲ್ಲದೆ ಒಂದೇ ಸರಣಿಯಲ್ಲಿ 700ಕ್ಕೂ ಅಧಿಕ ರನ್ ಸೇರಿಸಿ ದಾಖಲೆ ನಿರ್ಮಿಸಿದ್ದರು.

ಮಧ್ಯಮ ಕ್ರಮಾಂಕದಲ್ಲಿ ಸಂಜು ಸ್ಯಾಮ್ಸನ್, ರಿಯಾನ್ ಪರಾಗ್, ಧ್ರುವ್ ಜುರೇಲ್, ಶಿಮ್ರೊನ್ ಹೆಟ್ಮಾಯರ್ ಎದುರಾಳಿಗಳ ತಂತ್ರವನ್ನು ಬುಡಮೇಲು ಮಾಡಿ ರನ್‌ಗಳನ್ನು ಕಲೆ ಹಾಕಿ ಅಬ್ಬರಿಸಬಲ್ಲರು. ಧ್ರುವ್ ಜುರೆಲ್ ಅವರ ಮೇಲೆ ಅಪಾರ ವಿಶ್ವಾಸವನ್ನು ಇಟ್ಟುಕೊಳ್ಳಲಾಗಿದೆ. ಐಪಿಎಲ್‌ನಲ್ಲಿ ಇದುವರೆಗೆ ಆಡಿರುವ ಜುರೆಲ್ 13 ಪಂದ್ಯಗಳಲ್ಲಿ 152 ರನ್ ಗಳಿಸಿದ್ದಾರೆ. ಅವರ ಸರಾಸರಿ 21.71 ಮತ್ತು ಸ್ಟ್ರೈಕ್ ರೇಟ್ 172.73 ಆಗಿದೆ.
ರಿಯಾನ್ ಪರಾಗ್ ಈ ಬಾರಿಯೂ ರಾಜಸ್ಥಾನ್ ರಾಯಲ್ಸ್ ಪರ ಆಡಲಿದ್ದಾರೆ. ತಂಡವು ಅವರ ಮೇಲೆ ಹೆಚ್ಚಿನ ವಿಶ್ವಾಸವನ್ನು ವ್ಯಕ್ತಪಡಿಸುತ್ತಿದೆ. ಕೆಲವು ಪಂದ್ಯಗಳನ್ನು ಹೊರತುಪಡಿಸಿ, ರಿಯಾನ್ ಪರಾಗ್ ಅವರಿಂದ ತಂಡವು ನಿರೀಕ್ಷಿಸಿದ ರೀತಿಯಲ್ಲಿ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ, ಆದರೆ ಇತ್ತೀಚೆಗೆ ಆಡಿದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಅವರು ತಮ್ಮ ತಂಡಕ್ಕಾಗಿ ಹೆಚ್ಚು ರನ್ ಗಳಿಸಿದರು.
ಐಪಿಎಲ್ 2024 ಕ್ಕೆ ರಾಜಸ್ಥಾನ್ ರಾಯಲ್ಸ್ ಪೂರ್ಣ ತಂಡ: ಸಂಜು ಸ್ಯಾಮ್ಸನ್, ಜೋಸ್ ಬಟ್ಲರ್, ಧ್ರುವ ಜುರೆಲ್, ಕೃನಾಲ್ ರಾಥೋರ್, ಡೊನೊವನ್ ಫೆರೇರಾ, ಟಾಮ್ ಕೊಹ್ಲರ್-ಕಾಡ್ಮೋರ್, ಶಿಮ್ರಾನ್ ಹೆಟ್ಮೆಯರ್, ಯಶಸ್ವಿ ಜೈಸ್ವಾಲ್, ರಯಾನ್ ಪರಾಗ್, ರೋವ್ಮನ್ ಪೊವೆಲ್, ಶುಭಂ ಡುಬೆಕ್, ಶುಭಂ ಡುಬೆಕ್, ಅಬ್ಚಂದ್ರನ್ ಡುಬೆಕ್ ಬೌಲ್ಟ್, ಯುಜ್ವೇಂದ್ರ ಚಹಾಲ್, ಸಂದೀಪ್ ಶರ್ಮಾ, ನವದೀಪ್ ಸೈನಿ, ಕುಲದೀಪ್ ಸೇನ್, ಆಡಮ್ ಝಂಪಾ, ನಾಂದ್ರೆ ಬರ್ಗರ್, ಅವೇಶ್ ಖಾನ್.