IPL 2024: ಆರ್‌ಸಿಬಿ ಪಾಳಯದಲ್ಲಿ ಮಂದಹಾಸ ಮೂಡಿಸಿದ ಯುವ ವೇಗಿ: ದೇಶೀಯ ಟೂರ್ನಿಗಳಲ್ಲಿ ಭರ್ಜರಿ ಪ್ರದರ್ಶನ
ಇಂಡಿಯನ್ ಪ್ರೀಮಿಯರ್ ಲೀಗ್‌ನ 17 ನೇ ಸೀಸನ್‌ಗೆ ಎಲ್ಲ ತಂಡಗಳು ಭರದ ತಯಾರಿಯನ್ನು ನಡೆಸಿವೆ. ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ, ಪಂಜಾಬ್ ಕಿಂಗ್ಸ್ ನಾಯಕ ಶಿಖರ್ ಧವನ್ ಈಗಾಗಲೇ ಮೈದಾನದಲ್ಲಿ ಬೆವರು ಹರಿಸುತ್ತಿದ್ದಾರೆ. ಯುವ ಆಟಗಾರರು ಸಹ ತಮಗೆ ಸಿಕ್ಕ ಅವಕಾಶದಲ್ಲಿ ಮಿಂಚಿ ತಮ್ಮ ತಮ್ಮ ತಂಡಗಳಿಗೆ ಶುಭ ಸುದ್ದಿಯನ್ನು ನೀಡುತ್ತಿದ್ದಾರೆ. ಇಂತಹದ್ದೇ ಒಂದು ಶುಭ ಸುದ್ದಿಯನ್ನು ಆರ್‌ಸಿಬಿ ಬಳಗ ಸಹ ಪಡೆದಿದೆ.
ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಟೆಸ್ಟ್ ಸರಣಿಯ ನಂತರ, ಟೀಂ ಇಂಡಿಯಾ ಸೇರಿದಂತೆ ವಿಶ್ವದಾದ್ಯಂತದ ಆಟಗಾರರು ಐಪಿಎಲ್ ಆಡಲ್ಲಿದ್ದಾರೆ. ವಿಶ್ವದ ಅತ್ಯಂತ ದುಬಾರಿ ಮತ್ತು ಜನಪ್ರಿಯ ಟಿ20 ಲೀಗ್‌ನ ಆರಂಭಕ್ಕೂ ಮುಂಚೆಯೇ, ಕೆಲವು ಭಾರತೀಯ ಆಟಗಾರರು ಪ್ರಬಲ ಪ್ರದರ್ಶನ ನೀಡಿ, ತಮ್ಮ ಕ್ಷಮತೆಯನ್ನು ಸಾಬೀತು ಪಡೆಸುತ್ತಿದ್ದಾರೆ. ಮುಂಬರುವ ಋತುವಿಗೆ ಮುಂಚೆಯೆ ತಮ್ಮ ತಂಡಗಳ ಮುಖದಲ್ಲಿ ಮಂದಹಾಸವನ್ನು ಮೂಡಿಸಿದ್ದಾರೆ. ಆರ್‌ಸಿಬಿ ತಂಡದ ಒಬ್ಬ ಬೌಲರ್ ಕೂಡ ಇಂಗ್ಲೆಂಡ್ ಲಯನ್ಸ್ ವಿರುದ್ಧ ಇದೇ ರೀತಿಯ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ.

ಆರ್‌ಸಿಬಿ ಪಾಳಯದಲ್ಲಿ ಮಂದಹಾಸ ಮೂಡಿಸಿದ್ದು ಯಾರು?
ಇಂಗ್ಲೆಂಡ್ ಮತ್ತು ಭಾರತ ನಡುವೆ ನಡೆಯುತ್ತಿರುವ 5 ಟೆಸ್ಟ್‌ಗಳ ಸರಣಿಯ ಜೊತೆಗೆ, ಭಾರತ ಎ ಮತ್ತು ಇಂಗ್ಲೆಂಡ್ ಲಯನ್ಸ್ ನಡುವೆ 3 ನಾಲ್ಕು ದಿನಗಳ ಟೆಸ್ಟ್ ಸರಣಿಯೂ ನಡೆಯುತ್ತಿದೆ. ಈ ಸರಣಿಯ ಮೂರನೇ ಪಂದ್ಯ ಗುಜರಾತ್‌ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಆಕಾಶ್ ದೀಪ್ ಅದ್ಭುತ ಬೌಲಿಂಗ್ ಮಾಡುವ ಮೂಲಕ ಇಂಗ್ಲೆಂಡ್ ಲಯನ್ಸ್ ತಂಡಕ್ಕೆ ಕಾಟ ನೀಡಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ಆಕಾಶ್ ದೀಪ್ 4 ವಿಕೆಟ್ ಪಡೆಯುವ ಮೂಲಕ ಇಂಗ್ಲೆಂಡ್ ಲಯನ್ಸ್ ಅನ್ನು 199 ರನ್‌ಗಳಿಗೆ ಕಟ್ಟಿ ಹಾಕಿದ್ದರು. ಅಲ್ಲದೆ ಐಪಿಎಲ್ 2024 ರ ಮೊದಲು ಅವರು ಫಾರ್ಮ್‌ಗೆ ಮರಳಿರುವುದು ಆರ್‌ಸಿಬಿ ತಂಡಕ್ಕೆ ಉತ್ತಮ ಸಂಕೇತವಾಗಿದೆ.
ಆಕಾಶ್ ದೀಪ್ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಆಡುತ್ತಿದ್ದಾರೆ. ಅವರು ಬೌಲಿಂಗ್ ಆಲ್ ರೌಂಡರ್. ಪ್ರಸ್ತುತ ಆರ್‌ಸಿಬಿ ತಂಡವು ಉತ್ತಮ ಬೌಲಿಂಗ್ ಮಾಡುವ ಮತ್ತು ಕೆಳ ಕ್ರಮಾಂಕದಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡುವ ಆಟಗಾರರ ಕೊರತೆಯನ್ನು ಹೊಂದಿದೆ. ಅಂತಹ ಪರಿಸ್ಥಿತಿಯಲ್ಲಿ, ಐಪಿಎಲ್ 2024 ರ ಮೊದಲು ಆಕಾಶ್ ದೀಪ್ ಅವರ ಫಾರ್ಮ್ ಅನ್ನು ನೋಡಿದ ನಂತರ ಆರ್‌ಸಿಬಿ ಹರ್ಷಿತವಾಗಿದೆ. ಆಕಾಶ್, ಸಿರಾಜ್ ಮತ್ತು ಅಲ್ಜಾರಿ ಜೋಸೆಫ್ ತಂಡದ ವೇಗದ ಬೌಲಿಂಗ್ ನೊಗವನ್ನು ಹೊತ್ತಿದ್ದಾರೆ. 16 ಸೀಸನ್‌ಗಳ ನಂತರವೂ ಬೆಂಗಳೂರು ತಂಡ ಮೊದಲ ಪ್ರಶಸ್ತಿಗಾಗಿ ಹುಡುಕಾಟ ನಡೆಸುತ್ತಿದೆ.
ಹೇಗಿದೆ ಐಪಿಎಲ್‌ನಲ್ಲಿ ಯುವ ಆಟಗಾರನ ಪ್ರದರ್ಶನ
27 ವರ್ಷದ ಆಕಾಶ್ ದೀಪ್ 2022 ರಿಂದ ಆರ್‌ಸಿಬಿ ತಂಡದಲ್ಲಿ ಇದ್ದಾರೆ. ಅವರು 2022 ರಲ್ಲಿ 5 ಪಂದ್ಯಗಳನ್ನು ಆಡುವ ಅವಕಾಶವನ್ನು ಪಡೆದರು. ಆದರೆ 2023 ರಲ್ಲಿ ಕೇವಲ 2 ಪಂದ್ಯಗಳನ್ನು ಆಡುವ ಅವಕಾಶವನ್ನು ಪಡೆದರು. ಈ 7 ಪಂದ್ಯಗಳಲ್ಲಿ 6 ವಿಕೆಟ್ ಪಡೆದಿದ್ದಾರೆ. ಅವರ ಪ್ರಸ್ತುತ ಫಾರ್ಮ್ ಅನ್ನು ನೋಡಿದರೆ, ಬೆಂಗಳೂರು ಅವರಿಗೆ ಐಪಿಎಲ್ 2024 ರಲ್ಲಿ ಗರಿಷ್ಠ ಪಂದ್ಯಗಳನ್ನು ಆಡುವ ಅವಕಾಶವನ್ನು ನೀಡುತ್ತದೆ.

ಅಲ್ಲದೆ ಆಕಾಶ್ ದೀಪ್ ಪವರ್ ಪ್ಲೇ ಹಾಗೂ ಡೆತ್ ಓವರ್‌ಗಳಲ್ಲಿ ಬಿಗುವಿನ ದಾಳಿಯನ್ನು ನಡೆಸಿದ್ದೇ ಆದಲ್ಲಿ, ನಿಜಕ್ಕೂ ಆರ್‌ಸಿಬಿ ಕಪ್ ಗೆಲುವಿನ ಕನಸು ಹತ್ತಿರವಾಗುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications