IPL Auction RCB: ಮುಂಬೈನ 3 ಆಟಗಾರರಿಗೆ ಹರಾಜಿನಲ್ಲಿ ಬಲೆ ಬೀಸಲಿದೆ ಆರ್‌ಸಿಬಿ
ಐಪಿಎಲ್ 2025 ಆರಂಭಕ್ಕೆ ಇನ್ನು ಬಹು ತಿಂಗಳು ಬಾಕಿ ಇವೆ. ಆದರೆ ಈ ಬಾರಿ ಹರಾಜು ಪ್ರಕ್ರಿಯೆ ನಡೆಯಲಿದ್ದು, ಎಲ್ಲರ ಚಿತ್ತ ಬಿಡ್ ಅಂಗಳದತ್ತ ನೆಟ್ಟಿದೆ. ಈಗಾಗಲೇ ಬಿಸಿಸಿಐ ಸೂಚಿಸಿದಂತೆ ಐಪಿಎಲ್ ಮಾಲೀಕರು ರಿಟೇನ್ಷನ್ ಲೀಸ್ಟ್ ನೀಡಿದ್ದಾರೆ. ಅದರಂತೆ ಈಗಾಗಲೇ ಆಟಗಾರರ ವಿಂಗಡಣೆ ಮಾಡಿ, ಮಾಲೀಕರಿಗೆ ಶಾರ್ಟ್ ಲೀಸ್ಟ್ ಮಾಡಲು ಸೂಚಿಸಲಾಗಿದೆ. ಒಟ್ಟು 1500ಕ್ಕೂ ಹೆಚ್ಚು ಆಟಗಾರರು ಐಪಿಎಲ್ ಹರಾಜಿಗೆ ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದಾರೆ. ಇದರಲ್ಲಿ ದೇಶೀಯ ಹಾಗೂ ವಿದೇಶಿ ಆಟಗಾರರು ಸಹ ಸೇರಿದ್ದಾರೆ.
ಈ ಬಾರಿಯ ಹರಾಜಿಗೆ ಆರ್‌ಸಿಬಿ ಸಹ ಭರ್ಜರಿ ತಯಾರಿ ನಡೆಸಿದೆ. ಈ ಹರಾಜಿನಲ್ಲಿ ಆರ್‌ಸಿಬಿ ಸ್ಟಾರ್ ಆಟಗಾರರಿಗೆ ಮಣೆ ಹಾಕುವ ಸಾಧ್ಯತೆ ಇದೆ. ಆರ್‌ಸಿಬಿ ಮೂವರು ಆಟಗಾರರನ್ನು ಉಳಿಸಿಕೊಂಡಿದೆ. ಮೊದಲ ಆಯ್ಕೆಯ ಆಟಗಾರನಾಗಿ ವಿರಾಟ್ ಕೊಹ್ಲಿ ಅವರನ್ನು ಉಳಿಸಿಕೊಂಡಿದೆ. ಮಧ್ಯಮ ಕ್ರಮಾಂಕದ ಆಟಗಾರ ರಜತ್ ಪಟೀದಾರ್, ಭರವಸೆಯ ಬೌಲರ್ ಯಶ್ ದಯಾಳ್ ಅವರಿಗೆ ಆರ್‌ಸಿಬಿ ರೆಡ್ ಕಾರ್ಪೆಟ್ ಹಾಕಿದೆ. ನಿರೀಕ್ಷಿತ ಆಟಗಾರರನ್ನು ಹರಾಜು ಅಂಗಳಕ್ಕೆ ಬಿಟ್ಟಿದೆ.

ಆರ್‌ಸಿಬಿ ಈ ಬಾರಿ ಮುಂಬೈ ತಂಡದ ಮಾಜಿ ಆಟಗಾರರಿಗೆ ಮಣೆ ಹಾಕುವ ಸಾಧ್ಯತೆ ಇದೆ. ಮುಂಬೈ ಕೈ ಬಿಟ್ಟ ಆಟಗಾರರಿಗೆ ಆರ್‌ಸಿಬಿ ಬಾಜಿ ಕಟ್ಟಲಿದೆ. ಹಾಗಿದ್ದರೆ ಮುಂಬೈನ ಯಾವ ಪ್ಲೇಯರ್‌ಗಳಿಗೆ ಬೆಂಗಳೂರು ಬಾಜಿ ಕಟ್ಟಲಿದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಇಶಾನ್ ಕಿಶನ್
ಆರ್‌ಸಿಬಿ ಆರಂಭದಿಂದಲೂ ಟಾಪ್ ಆರ್ಡರ್ ಬ್ಯಾಟರ್‌ಗಳನ್ನು ಬ್ಯಾಕ್ ಮಾಡುತ್ತಲೇ ಬಂದಿದೆ. ಟಾಪ್ ಆರ್ಡರ್‌ನಲ್ಲಿ ಎದುರಾಳಿಗಳನ್ನು ಕಾಡಬಲ್ಲ ಬ್ಯಾಟರ್‌ಗಳಿಗೆ ಆರ್‌ಸಿಬಿ ಮಣೆ ಹಾಕುತ್ತದೆ. ಮುಂಬೈ ತಂಡದ ಆಟಗಾರ ಇಶಾನ್ ಕಿಶನ್ ಸಹ ಬಿಗ್ ಹಿಟ್ಟಿಂಗ್ ಪ್ಲೇಯರ್. ಬೆಂಗಳೂರು ತಂಡ ಫಾಫ್ ಡುಪ್ಲೇಸಿಸ್ ಅವರನ್ನು ಕೈ ಬಿಟ್ಟಿದ್ದು, ವಿರಾಟ್ ಕೊಹ್ಲಿ ಅವರಿಗೆ ಒಳ್ಳೆಯ ಜೊತೆಗಾರನ ಹುಡುಕಾಟ ನಡೆದಿದೆ. ಹೀಗಾಗಿ ಆರ್‌ಸಿಬಿ ಪವರ್ ಪ್ಯಾಕ್ಡ್ ಬ್ಯಾಟರ್ ಹುಡುಕಾಟ ನಡೆಸಿದೆ. ಇಶಾನ್ ಕಿಶನ್ ಸಹ ಪವರ್ ಪ್ಲೇನಲ್ಲಿ ಪವರ್ ಫುಲ್ ಆಟವನ್ನು ಆಡಬಲ್ಲ ಪ್ಲೇಯರ್. ಇವರು ಎದುರಾಳಿ ರಣ ತಂತ್ರವನ್ನು ಮೆಟ್ಟಿ ನಿಂತು ಬ್ಯಾಟ್ ಮಾಡಬಲ್ಲ ಪ್ಲೇಯರ್.
ಇಶಾನ್ ಕಿಶನ್ ಬೇಸ್ ಪ್ರೈಸ್: 2 ಕೋಟಿ

ಟೀಮ್ ಡೇವಿಡ್
ಬೆಂಗಳೂರು ತಂಡ ಬಿಗ್ ಹಿಟ್ ಬ್ಯಾಟರ್‌ಗಳಿಗೆ ಮಣೆ ಹಾಕುತ್ತಲೆ ಬಂದಿದೆ. ಈ ನಿಟ್ಟಿನಲ್ಲಿ ಆರ್‌ಸಿಬಿ ಟಿಮ್ ಡೇವಿಡ್ ಅವರನ್ನು ಟಾರ್ಗೆಟ್ ಮಾಡುವ ಸಾಧ್ಯತೆ ಇದೆ. ಇವರು 170ರ ಸ್ಟ್ರೈಕ್ ರೇಟ್‌ನಲ್ಲಿ ಐಪಿಎಲ್‌ನಲ್ಲಿ ಬ್ಯಾಟ್ ಮಾಡಿದ ಅನುಭವ ಹೊಂದಿದ್ದಾರೆ. ಇವರಿಗೆ ಪವರ್ ಹಿಟಿಂಗ್ ಕ್ಷಮತೆ ಇರುವುದು ಇವರ ಸ್ಟ್ರೈಕ್ ರೇಟ್‌ನಿಂದ ತಿಳಿಯುತ್ತದೆ. ಇವರನ್ನು ಸಹ ಆರ್‌ಸಿಬಿ ಬಕೆಟ್ ಲೀಸ್ಟ್‌ನಲ್ಲಿ ಇರಿಸಿದೆ. ಆರ್‌ಸಿಬಿ ಟಾಪ್ ಆರ್ಡರ್ ಹಾಗೂ ಮಿಡ್ಲ್ ಆರ್ಡರ್‌ನಲ್ಲಿ ಫಿನಿಷರ್ ಹುಡುಕಾಟದಲ್ಲಿದೆ. ಇವರು ಮಿಡ್ಲ್ ಆರ್ಡರ್‌ನಲ್ಲೂ ಬ್ಯಾಟ್ ಮಾಡುವ ಕ್ಷಮತೆಯನ್ನು ಹೊಂದಿದ್ದಾರೆ.
ಟೀಮ್ ಡೇವಿಡ್ ಬೇಸ್ ಪ್ರೈಸ್: 2 ಕೋಟಿ
ಡೆವಾಲ್ಡ್ ಬ್ರೆವಿಸ್
ಆರ್‌ಸಿಬಿಗೆ ದಕ್ಷಿಣ ಆಫ್ರಿಕಾ ಆಟಗಾರರ ಮೇಲೆ ಮೊದಲಿನಿಂದಲೂ ಭರವಸೆ ಇದೆ. ಮೊದಲು ಎಬಿಡಿ ವಿಲಿಯರ್ಸ್ ತಂಡದ ಮಿಡ್ಲ್ ಆರ್ಡರ್‌ಗೆ ಆಧಾರವಾಗಿದ್ದರೆ, ಫಾಫ್ ಇತ್ತೀಚಿನ ದಿನಗಳಲ್ಲಿ ಟಾಪ್ ಆರ್ಡರ್‌ಗೆ ಬಲ ತುಂಬಿದ್ದ ಆಟಗಾರ. ಹೀಗಾಗಿ ಆರ್‌ಸಿಬಿ ದಕ್ಷಿಣ ಆಫ್ರಿಕಾ ಪ್ಲೇಯರ್‌ಗೆ ಮಣೆ ಹಾಕುವ ಪರಂಪರೆಯನ್ನು ಮುಂದುವರೆಸುವ ಸಾಧ್ಯತೆ ಇದೆ. ಈ ಬಾರಿ ಮುಂಬೈ ಕೈ ಬಿಟ್ಟ ಡೆವಾಲ್ಡ್ ಬ್ರೆವಿಸ್ ಅವರಿಗೆ ಆರ್‌ಸಿಬಿ ಹರಾಜಿನಲ್ಲಿ ಹಣದ ಹೊಳೆಯನ್ನು ಹರಿಸಬಹುದು. ಇವರು ಮಿಡ್ಲ್ ಆರ್ಡರ್‌ನಲ್ಲಿ ತಂಡಕ್ಕೆ ನೆರವಾಗಬಲ್ಲ ಆಟಗಾರ.
ಡೆವಾಲ್ಡ್ ಬ್ರೆವಿಸ್ ಬೇಸ್ ಪ್ರೈಸ್: 75 ಲಕ್ಷ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications