For Quick Alerts
ALLOW NOTIFICATIONS  
For Daily Alerts
 

RCB ಏಕೆ ನ್ಯೂಜಿಲೆಂಡ್‌ ಆಲ್‌ರೌಂಡರ್‌ ಟಾರ್ಗೆಟ್‌ ಮಾಡಲಿದೆ? ಇಲ್ಲಿದೆ ಮೂರು ಕಾರಣ

ಐಪಿಎಲ್‌ ರಿಟೆನ್ಷನ್‌ ಲೀಸ್ಟ್‌ ನೀಡಲು ಇಂದು (ಅ.31) ಕೊನೆಯ ದಿನ. ಈ ವೇಳೆ ಮಾಲೀಕರು ಸ್ಟಾರ್ ಆಟಗಾರರನ್ನು ಉಳಿಸಿಕೊಳ್ಳುವ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಅಲ್ಲದೆ ಯುವ ಆಟಗಾರರನ್ನು ತಂಡದಲ್ಲಿ ಇರಿಸಿಕೊಳ್ಳುವ ಸ್ಕೆಚ್‌ ಸಹ ಹಾಕಿಕೊಂಡಿದ್ದಾರೆ. ರಿಟೆನ್ಷನ್‌ ಪಾಲೀಸಿ ಲೀಸ್ಟ್‌ ನೀಡಿದ ಮೇಲೆ ಆರಂಭವಾಗುವುದೇ ಐಪಿಎಲ್‌ ಹರಾಜು ಕಾರ್ಯ.

ಬಿಸಿಸಿಐ ಐಪಿಎಲ್‌ ಮಾಲೀಕರು ನೀಡಿರುವ ಪಟ್ಟಿಯನ್ನು ಕೃಢಿ ಕರಿಸಿ, ತನ್ನ ಕಾರ್ಯವನ್ನು ಆರಂಭಿಸುತ್ತದೆ. ಇತ್ತ ಐಪಿಎಲ್‌ ಮಾಲೀಕರು ಸಹ ತಮ್ಮ ತಂಡದಲ್ಲಿ ಯಾವ ಸ್ಟಾರ್ ಆಟಗಾರನಿಗೆ ಮಣೆ ಹಾಕಬೇಕು ಎಂಬ ಲೆಕ್ಕಾಚಾರವನ್ನು ನಡೆಸಿರುತ್ತಾರೆ. ಆರ್‌ಸಿಬಿ ಈ ನಿಟ್ಟಿನಲ್ಲಿ ಲೆಕ್ಕಚಾರ ಆರಂಭಿಸಿದೆ. ಆರ್‌ಸಿಬಿ ಈ ಬಾರಿ ಐಪಿಎಲ್‌ ಹರಾಜಿನಲ್ಲಿ ಅಳೆದು ತೂಗಿ ಆಟಗಾರರಿಗೆ ಮಣೆ ಹಾಕುವ ಸಂಭವವಿದೆ. ಇದೆ ಹರಾಜಿನಲ್ಲಿ ಯುವ ಆಟಗಾರರನ್ನು ಟಾರ್ಗೆಟ್ ಮಾಡಲಿದೆ.

IPL 2025 3 Reasons RCB May Enter Bidding War for New Zealand s Rachin Ravindra

ಕಿವೀಸ್‌ ಪ್ಲೇಯರ್ ಮೇಲೆ ಕಣ್ಣು

ಬೆಂಗಳೂರು ಮೂಲದ ಕಿವೀಸ್ ಪ್ಲೇಯರ್‌ ಮೇಲೆ ಆರ್‌ಸಿಬಿ ಕಣ್ಣು ನೆಟ್ಟಿದೆ. ಈ ಪ್ಲೇಯರ್‌ ತಂಡಕ್ಕೆ ಬೇಕಾದ ಪ್ಲೇಸ್‌ನಲ್ಲಿ ಬ್ಯಾಟ್ ಮಾಡುವ ಕಲೆಯನ್ನು ಹೊಂದಿದ್ದಾರೆ. ಅದರಲ್ಲೂ ಮಿಡ್ಲ್‌ ಆರ್ಡರ್‌ನಲ್ಲಿ ಇವರು ಜೀವ ತುಂಬ ಬಲ್ಲ ಆಟಗಾರ. ಇತ್ತೀಚಿಗೆ ಭಾರತ ಹಾಗೂ ನ್ಯೂಜಿಲೆಂಡ್‌ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಬೆಂಗಳೂರಿನಲ್ಲಿ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಇವರು ಮಿಡ್ಲ್‌ ಆರ್ಡರ್‌ ಬ್ಯಾಟಿಂಗ್ ಹಾಗೂ ಸ್ಪಿನ್ ಬೌಲಿಂಗ್ ನಡೆಸಬಲ್ಲರು. ಎಸ್‌ ನಿಮ್ಮ ಊಹೆ ಸರಿಯಾಗಿದೆ ಅವರೇ ರಚಿನ್ ರವೀಂದ್ರ.

ಬೆಂಗಳೂರು ಮೂಲದ ಪ್ಲೇಯರ್‌ಗೆ ಗಾಳ?

ಭಾರತದ ಪಿಚ್‌ಗಳಲ್ಲಿ ಹೇಗೆ ಆಡಬೇಕು ಎಂಬ ವಿದ್ಯೆಯನ್ನು ಅರಿತಿರುವ ಆಟಗಾರ. ಬೆಂಗಳೂರು ಮೂಲದ ಈ ಪ್ಲೇಯರ್‌ ನ್ಯೂಜಿಲೆಂಡ್ ನಲ್ಲಿ ನೆಲಿಸಿದ್ದಾರೆ. ಹೀಗಾಗಿ ಆ ದೇಶದ ಪರ ಕಣಕ್ಕೆ ಇಳಿಯುತ್ತಾರೆ. ತಮ್ಮ ಆಕರ್ಷಕ ಬ್ಯಾಟಿಂಗ್ ಶೈಲಿ, ಪರ್ಫೆಕ್ಟ್‌ ಶಾಟ್‌ ಸೆಲೆಕ್ಷನ್‌ನಿಂದ ಇವರು ಐಪಿಎಲ್‌ ಮಾಲೀಕರ ಚಿತ್ತ ಕದ್ದಿದ್ದಾರೆ. ಬೆಂಗಳೂರು ಅಂಗಳದ ಬಗ್ಗೆ ಅರಿವು ಇರುವುದರಿಂದ ಇವರಿಗೆ ಮಣೆ ಹಾಕುವ ಸಾಧ್ಯತೆ ಹೆಚ್ಚಿದೆ.

IPL 2025 3 Reasons RCB May Enter Bidding War for New Zealand s Rachin Ravindra

ಯುವ ಆಲ್‌ರೌಂಡರ್ ಆಗಿರುವುದರಿಂದ ಇವರು ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಂಡಕ್ಕೆ ನೆರವಾಗಬಲ್ಲರು. ಅಲ್ಲದೆ ಇವರು ಪರಿಸ್ಥಿತಿಗೆ ಅನುಗುಣವಾಗಿ ಬ್ಯಾಟ್ ಮಾಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದರಿಂದ ಆರ್‌ಸಿಬಿ ಬ್ಯಾಟಿಂಗ್‌ ವಿಭಾಗಕ್ಕೆ ಇವರು ಬಲ ತುಂಬಬಲ್ಲರು.

ರಚಿನ್‌ ರವೀಂದ್ರ ಚೆನ್ನೈ ಸೂಪರ್‌ ಕಿಂಗ್ಸ್ ತಂಡದಲ್ಲಿದ್ದರು. ಇವರನ್ನು ತಂಡ ಉಳಿಸಿಕೊಳ್ಳುವುದಾ ಅಥವಾ ಕೈ ಬಿಡುವುದಾ ಎಂಬ ಬಗ್ಗೆ ಇನ್ನು ಯಾವುದೇ ಖಚಿತ ಮಾಹಿತಿ ಇಲ್ಲ. ಸಿಎಸ್‌ಕೆ ಇವರನ್ನು ಕೈ ಬಿಟ್ಟಲ್ಲಿ ಹಲವು ತಂಡಗಳು ಇವರಿಗೆ ಬಾಜಿ ಕಟ್ಟಲಿವೆ. ಇದರಲ್ಲಿ ಆರ್‌ಸಿಬಿ ಸಹ ಒಂದು.

ಐಪಿಎಲ್‌ ಸಾಧನೆ

ಚೆನ್ನೈ ಸೂಪರ್‌ ಕಿಂಗ್ಸ್ ತಂಡದ ಪರ 10 ಪಂದ್ಯಗಳಲ್ಲಿ ಬ್ಯಾಟ್ ಮಾಡಿರುವ ಇವರು ಒಂದು ಅರ್ಧಶತಕ ಸೇರಿದಂತೆ 222 ರನ್‌ ಸಿಡಿಸಿದ್ದಾರೆ.

Story first published: Thursday, October 31, 2024, 9:30 [IST]
Other articles published on Oct 31, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+