IPL 2025: ಇತಿಹಾಸ ನಿರ್ಮಿಸಲಿರುವ ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್
ಇನ್ನೇನು ಕೆಲವೇ ದಿನಗಳಲ್ಲಿ ಐಪಿಎಲ್ ಆರಂಭವಾಗಲಿದೆ. ಈ ಮೆಗಾ ಲೀಗ್‌ನಲ್ಲಿ ಭಾಗವಹಿಸಲು ಐಪಿಎಲ್‌ನ 10 ತಂಡಗಳು ಭರ್ಜರಿ ತಯಾರಿ ನಡೆಸಿವೆ. ಈ ಲೀಗ್‌ನಲ್ಲಿ ಈ ಬಾರಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಅನುಭವಿ ಬ್ಯಾಟರ್ ಅಜಿಂಕ್ಯಾ ರಹಾನೆ ಮುನ್ನಡೆಸಲಿದ್ದಾರೆ. ಇವರ ಮುಂದಾಳತ್ವದಲ್ಲಿ ಕೆಕೆಆರ್ ಮತ್ತೊಮ್ಮೆ ಮ್ಯಾಜಿಕ್ ಮಾಡಲು ಕಾತುರದಿಂದ ಕಾಯುತ್ತಿದೆ. ಅಜಿಂಕ್ಯ ರಹಾನೆ ಹಾಗೂ ಶ್ರೇಯಸ್ ಅಯ್ಯರ್ ಮೊದಲ ಪಂದ್ಯವನ್ನು ಆಡಲು ಮೈದಾನಕ್ಕೆ ಇಳಿಯುತ್ತಿದ್ದಂತೆ ದಾಖಲೆ ಬರೆಯಲಿದ್ದಾರೆ.
ಮಾರ್ಚ್ 22 ರಿಂದ ಐಪಿಎಲ್ ಆರಂಭವಾಗಲಿದೆ. ಈ ಲೀಗ್‌ನ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಕೆಕೆಆರ್ ತಂಡಗಳು ಕಾದಾಟ ನಡೆಸಲಿವೆ. ಈ ವೇಳೆ ಅಜಿಂಕ್ಯ ರಹಾನೆ ದೊಡ್ಡ ದಾಖಲೆಯನ್ನು ಬರೆಯಲಿದ್ದಾರೆ. ಇವರು ಮೊದಲ ಪಂದ್ಯವನ್ನು ಆಡಲು ಅಂಗಳಕ್ಕೆ ಇಳಿಯುತ್ತಿದ್ದಂತೆ ದಾಖಲೆಯ ಪುಟಕ್ಕೆ ತಮ್ಮ ಹೆಸರನ್ನು ನಮೂದಿಸಲಿದ್ದಾರೆ. ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಯಲಿದೆ.

ಅಜಿಂಕ್ಯ ರಹಾನೆ ಈ ಪಂದ್ಯದ ಮೂಲಕ ನವ ಇತಿಹಾಸ ನಿರ್ಮಿಸಲಿದ್ದಾರೆ. ಇವರು 1.50 ಕೋಟಿ ರೂ.ಗಳಿಗೆ ಮೆಗಾ ಹರಾಜಿನಲ್ಲಿ ಕೆಕೆಆರ್ ಪಾಲಾದ್ರು. ಇವರ ಅನುಭವಕ್ಕೆ ಮಣೆ ಹಾಕಿದ ಕೆಕೆಆರ್ ಇವರಿಗೆ ಪಟ್ಟವನ್ನು ಕಟ್ಟಿದೆ. ಈ ಮೂಲಕ ಇವರು ಮೂರು ತಂಡಗಳಿಗೆ ನಾಯಕರಾದ ಐಪಿಎಲ್ ಇತಿಹಾಸದ ಮೊದಲ ನಾಯಕ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ. ಈ ಮೊದಲು ಇವರು ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡವನ್ನು 2017ರಲ್ಲಿ, 2018ರಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಮುನ್ನಡೆಸಿದ್ದರು.
ಐಪಿಎಲ್ ಇತಿಹಾಸದಲ್ಲಿ ಈಗಾಗಲೇ ಮೂವರು ಆಟಗಾರರು ಮೂರು ತಂಡಗಳನ್ನು ಮುನ್ನಡೆಸಿದ ಹೆಗ್ಗಳಿಕೆಯನ್ನು ಹೊಂದಿದ್ದರು. ಈಗ ಈ ಸಾಲಿಗೆ ಅಜಿಂಕ್ಯ ರಹಾನೆ ಎಂಟ್ರಿ ಪಡೆಯಲಿದ್ದಾರೆ. ಅಜಿಂಕ್ಯ ರಹಾನೆಗೂ ಮೊದಲು ಶ್ರೀಲಂಕಾದ ಕುಮಾರ್ ಸಂಗಾಕ್ಕರ್, ಮಹೇಲ್ ಜಯವರ್ಧನೆ, ಸ್ಟೀವನ್ ಸ್ಮಿತ್ ಈ ದಾಖಲೆಯನ್ನು ಮಾಡಿದ್ದರು.
3 ತಂಡಗಳ ನಾಯಕರಾದ ಆಟಗಾರರ
ಕುಮಾರ್ ಸಂಗಕ್ಕಾರ, ಪಂಜಾಬ್ ಕಿಂಗ್ಸ್, ಡೆಕ್ಕನ್ ಚಾರ್ಜಸ್, ಸನ್‌ರೈಸರ್ಸ್ ಹೈದರಾಬಾದ್
ಮಹೇಲ್ ಜಯವರ್ಧನೆ, ಪಂಜಾಬ್ ಕಿಂಗ್ಸ್, ಕೊಚ್ಚಿ ಟಸ್ಕರ್ಸ್ ಕೇರಳ, ಸನ್‌ರೈಸರ್ಸ್ ಹೈದರಾಬಾದ್
ಸ್ಟೀವನ್ ಸ್ಮಿತ್, ಪುಣೆ ವಾರಿಯರ್ಸ್ ಇಂಡಿಯಾ, ರೈಸಿಂಗ್ ಪುಣೆ ಸೂಪರ್ ಜೈಂಟ್ಸ್, ರಾಜಸ್ಥಾನ ರಾಯಲ್ಸ್

ಅಯ್ಯರ್ ದಾಖಲೆ
ಇದೇ ಪಟ್ಟಿಗೆ ಸೇರಲು ಶ್ರೇಯಸ್ ಅಯ್ಯರ್ ಮಾರ್ಚ್ 25ರ ವರೆಗೆ ಕಾಯಬೇಕಾಗುತ್ತದೆ. ಇವರು ಸಹ ಐಪಿಎಲ್ ಇತಿಹಾಸದಲ್ಲಿ ಮೂರು ತಂಡಗಳನ್ನು ಮುನ್ನಡೆಸಿದ ಹೆಮ್ಮೆಯನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಮುನ್ನಡೆಸಿದ್ದರು. ಈ ಬಾರಿ ಇವರು ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿದ್ದಾರೆ. ಇವರಿಗೆ ಪಂಜಾಬ್ 26.75 ಕೋಟಿ ರೂ. ನೀಡಿ ತಂಡಕ್ಕೆ ಸೇರಿಸಿಕೊಂಡಿತ್ತು. ಪಂಜಾಬ್ ತಂಡ ತನ್ನ ಮೊದಲ ಪಂದ್ಯವನ್ನು ಅಹಮದಾಬಾದ್‌ನಲ್ಲಿ ಆಡಲಿದ್ದು, ಗುಜರಾತ್ ಟೈಟನ್ಸ್ ವಿರುದ್ಧ ಕಾದಾಟ ನಡೆಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications