IPL 2025: ರಾಹುಲ್, ಅಕ್ಸರ್ ಜೊತೆಗೆ ಮೂರನೇ ಆಟಗಾರ ಡೆಲ್ಲಿ ಕ್ಯಾಪಿಟಲ್ಸ್ ನಾಯಕನ ಪಟ್ಟಕ್ಕೆ ಪೈಪೋಟಿ!
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಟೂರ್ನಿ ಆರಂಭಕ್ಕೂ ಮುನ್ನ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಎಲ್ಲಾ ಫ್ರಾಂಚೈಸಿಗಳು ಮೆಗಾ ಹರಾಜಿನಲ್ಲಿ ಸ್ಟಾರ್ ಆಟಗಾರರನ್ನು ಬಿಡ್ ಮಾಡುವ ಮೂಲಕ ಬಲಿಷ್ಠ ತಂಡಗಳನ್ನು ಕಟ್ಟಿವೆ. ಇದೀಗ ತಂಡಗಳ ನಾಯಕತ್ವದ ಬಗ್ಗೆ ಚರ್ಚೆಗಳು ತೀವ್ರಗೊಂಡಿವೆ. ಈ ಪಟ್ಟಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವೂ ಸೇರಿದೆ. ಡೆಲ್ಲಿ ಕ್ಯಾಪಿಟಲ್ಸ್ ತಮ್ಮ ನಾಯಕ ರಿಷಬ್ ಪಂತ್ ಅವರನ್ನು ಬಿಡುಗಡೆ ಮಾಡಿತ್ತು. ಮೆಗಾ ಹರಾಜಿನಲ್ಲಿ ಪಂತ್ 27 ಕೋಟಿ ರೂ.ಗಳಿಗೆ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ತಂಡದ ಪಾಲಾದರು. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಾಯಕತ್ವ ಪಟ್ಟವನ್ನು ಯಾರಿಗೆ ಕಟ್ಟುವುದು ಎಂದು ಯೋಜಿಸುತ್ತಿದೆ.
ಇದೀಗ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವಕ್ಕೆ 3 ಸ್ಟಾರ್ ಆಟಗಾರರು ಸ್ಪರ್ಧಿಗಳಿದ್ದು, ಸದ್ಯಕ್ಕೆ ನಾಯಕ ಯಾರು ಎಂಬುದು ನಿರ್ಧಾರವಾಗಿಲ್ಲ. ಆದರೆ ತಂಡದ ನಾಯಕನ ಬಗ್ಗೆ ಡೆಲ್ಲಿ ಕ್ಯಾಪಿಟಲ್ಸ್ ಮಾಲೀಕ ಪಾರ್ಥ್ ಜಿಂದಾಲ್ ದೊಡ್ಡ ಸುಳಿವು ನೀಡಿದ್ದಾರೆ. ಮೆಗಾ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸ್ಟಾರ್ ಆಟಗಾರರನ್ನು ಬಿಡ್ ಮಾಡುವಲ್ಲಿ ಯಶಸ್ವಿಯಾಗಿದೆ.

ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ಕೆಎಲ್ ರಾಹುಲ್ ಅವರನ್ನು 14 ಕೋಟಿ ರೂ.ಗೆ ಡೆಲ್ಲಿ ಕ್ಯಾಪಿಟಲ್ಸ್ ಖರೀದಿಸಿದೆ. ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ನಾಯಕರಾಗಿದ್ದ ಅನುಭವಿ ಫಾಫ್ ಡು ಪ್ಲೆಸಿಸ್ ಅವರಿಗೆ 2 ಕೋಟಿ ರೂ. ಮೂಲ ಬೆಲೆಯನ್ನು ಡಿಸಿ ನೀಡಿದೆ. ಮತ್ತೊಂದೆಡೆ ಡೆಲ್ಲಿ ತಂಡವು ಮೊದಲೇ ಆಲ್‌ರೌಂಡರ್ ಅಕ್ಸರ್ ಪಟೇಲ್ ಅವರನ್ನು 16.50 ಕೋಟಿ ರೂ.ಗೆ ಉಳಿಸಿಕೊಂಡಿತ್ತು. ಹೀಗಾಗಿ ಈ ಮೂವರು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವದ ಸ್ಪರ್ಧಿಗಳಾಗಿದ್ದಾರೆ.
ಪಾರ್ಥ್ ಜಿಂದಾಲ್ ಹೇಳಿದ್ದೇನು?
ಸಂದರ್ಶನವೊಂದರಲ್ಲಿ ಐಪಿಎಲ್ 2025ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ನಾಯಕ ಯಾರು ಎಂಬುದರ ಬಗ್ಗೆ ಪಾರ್ಥ್ ಜಿಂದಾಲ್ ಮಾತನಾಡಿದ್ದಾರೆ. 'ನಾಯಕತ್ವದ ಬಗ್ಗೆ ಚರ್ಚಿಸಲು ಇದು ಸ್ವಲ್ಪ ಕಷ್ಟರವಾಗಿದೆ. ಅಕ್ಸರ್ ಪಟೇಲ್ ಅವರು ತಂಡದೊಂದಿಗೆ ಬಹಳ ಹಿಂದಿನಿಂದಲೂ ಸಂಬಂಧ ಹೊಂದಿದ್ದಾರೆ. ಕಳೆದ ಬಾರಿಯೂ ಸಹ ಉಪನಾಯಕರಾಗಿದ್ದರು. ಅವರು ನಾಯಕರಾಗುತ್ತಾರೋ? ಅಥವಾ ಬೇರೆಯವರೋ? ಎಂಬುದು ನಮಗೆ ತಿಳಿದಿಲ್ಲ. ತಂಡದಲ್ಲಿ ಇನ್ನೂ ಬಹಳಷ್ಟು ಆಗಬೇಕಿದೆ. ಕೆಎಲ್ ರಾಹುಲ್ ಜೊತೆ ಮಾತನಾಡಿದ್ದೇನೆ, ಆದರೆ ಭೇಟಿಯಾಗಿಲ್ಲ. ನಾನು ಅವರನ್ನು ಚೆನ್ನಾಗಿ ಬಲ್ಲೆ. ಅವರು ಹೇಗೆ ಯೋಚಿಸುತ್ತಾರೆ ಎಂಬುದನ್ನು ನಾನು ಅರ್ಥಮಾಡಿಕೊಳ್ಳುತ್ತೇನೆ. ನಂತರ ಏನು ಮಾಡಬೇಕೆಂದು ನಾವು ನೋಡುತ್ತೇವೆ ಎಂದು ಹೇಳಿದ್ದಾರೆ. ಅವರು ಮಾತನಾಡುವಾಗ ಅಕ್ಸರ್ ಪಟೇಲ್ ಬಗ್ಗೆ ಗುಣಗಾನ ಮಾಡಿರುವುದನ್ನು ಗಮನಿಸಿದರೆ, ಡೆಲ್ಲಿ ಕ್ಯಾಪಿಟಲ್ಸ್ ಮುಂದಿನ ನಾಯಕ ಅಕ್ಸರ್ ಪಟೇಲ್ ಎಂಬ ಸುಳಿವು ಅಭಿಮಾನಿಗಳಿಗೆ ಸಿಕ್ಕಂತಾಗಿದೆ.
ಫಾಪ್‌ಗೂ ಅವಕಾಶ?
ಕಳೆದ ಮೂರು ಐಪಿಎಲ್ ಆವೃತ್ತಿಗಳಲ್ಲಿ ಆರ್‌ಸಿಬಿ ತಂಡವನ್ನು ಫಾಫ್ ಡು ಪ್ಲೆಸಿಸ್ ಮುನ್ನಡೆಸಿದ್ದಾರೆ. ಐಪಿಎಲ್ 2024ರಲ್ಲಿ ಆರ್‌ಸಿಬಿ ಅನ್ನು ಪ್ಲೇಆಫ್‌ಗೆ ಕರೆದೊಯ್ದಿಯುವಲ್ಲಿ ಯಶಸ್ವಿಯಾಗಿದ್ದರು. ಜೊತೆಗೆ ಅದ್ಭುತ ಬ್ಯಾಟಿಂಗ್ ಮೂಲಕ 438 ರನ್ ಕಲೆ ಹಾಕಿದ್ದರು. ಹೀಗಾಗಿ ನಾಯಕತ್ವದ ಅನುಭವ ಹೊಂದಿರುವ ಫಾಫ್ ಅವರಿಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗುವ ಅವಕಾಶವನ್ನು ಹೊಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications