IPL 2025: ಅಶುತೋಷ್ ಶರ್ಮಾ ಹೆಸರಿನಲ್ಲಿ ವಿಶೇಷ ಸಾಧನೆ
ಐಪಿಎಲ್ 2025 ರ ನಾಲ್ಕನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಟಾರ್ ಬ್ಯಾಟರ್ ಅಶುತೋಷ್ ಶರ್ಮಾ ತಮ್ಮ ಸ್ಫೋಟಕ ಇನ್ನಿಂಗ್ಸ್ ಮೂಲಕ ಸದ್ದು ಮಾಡಿದ್ದಾರೆ. ಲಕ್ನೋ ವಿರುದ್ಧ ಅಶುತೋಷ್ 31 ಎಸೆತಗಳಲ್ಲಿ ಅಜೇಯ 66 ರನ್ ಗಳಿಸಿ ಪಂದ್ಯವನ್ನು ಗೆಲ್ಲಿಸಿದ್ದಾರೆ. ಈ ವೇಳೆ ಅಶುತೋಷ್ ವಿಶಾಖಪಟ್ಟಣದಲ್ಲಿ ಹಲವು ದಾಖಲೆಗಳನ್ನು ಮಾಡಿದ್ದಾರೆ. ಅವರು ಏಳು ಅಥವಾ ಅದಕ್ಕಿಂತ ಕಡಿಮೆ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವಾಗ ಯಶಸ್ವಿ ರನ್ ಚೇಸ್‌ಗಳಲ್ಲಿ ಪ್ರಮುಖ ರನ್ ಸ್ಕೋರರ್ ಎನಿಸಿಕೊಂಡಿದ್ದಾರೆ. ಇದರೊಂದಿಗೆ ಅವರು ಟೀಮ್ ಇಂಡಿಯಾ ಮಾಜಿ ಆಲ್‌ರೌಂಡರ್ ಯೂಸುಫ್ ಪಠಾಣ್ ದಾಖಲೆಯನ್ನು ಮುರಿದಿದ್ದಾರೆ.
ಸೆಂಚುರಿಯನ್‌ನಲ್ಲಿ ನಡೆದ ಐಪಿಎಲ್ 2009 ರ ಸೀಸನ್ ಡೆಲ್ಲಿ ಡೇರ್‌ಡೆವಿಲ್ಸ್ (ಈಗ ಡೆಲ್ಲಿ ಕ್ಯಾಪಿಟಲ್ಸ್) ವಿರುದ್ಧ ರಾಜಸ್ಥಾನ್ ರಾಯಲ್ಸ್ ಪರ ಯೂಸುಫ್ ಪಠಾಣ್ 62 ರನ್‌ಗಳ ಇನ್ನಿಂಗ್ಸ್ ಆಡಿದರು. ಈಗ ಈ ದಾಖಲೆಯನ್ನು ಅಶುತೋಷ್ ಶರ್ಮಾ ತಮ್ಮ ಹೆಸರಿನಲ್ಲಿ ಬರೆದುಕೊಂಡಿದ್ದಾರೆ.

ವಿಶೇಷ ಸಾಧನೆ
ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2018 ರ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಸ್ಟಾರ್ ಆಲ್‌ರೌಂಡರ್ ಡ್ವೇನ್ ಬ್ರಾವೋ 68 ರನ್ ಗಳಿಸಿದ್ದರು. ಈಗ ಅಶುತೋಷ್ ಅವರ ಅಜೇಯ 66 ರನ್‌ಗಳು ಐದು ವಿಕೆಟ್‌ಗಳ ನಂತರ ಬ್ಯಾಟಿಂಗ್ ಮಾಡಿದ ಎರಡನೇ ಅತ್ಯಧಿಕ ಇನ್ನಿಂಗ್ಸ್ ಆಗಿದೆ. ಕಾಕತಾಳೀಯವೆಂಬಂತೆ, ಆ ಪಂದ್ಯದಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ಒಂದು ವಿಕೆಟ್‌ನಿಂದ ಗೆದ್ದಿತ್ತು. ಏಳನೇ ಅಥವಾ ಅದಕ್ಕಿಂತ ಕಡಿಮೆ ಕ್ರಮಾಂಕದಲ್ಲಿ ಯಶಸ್ವಿ ರನ್ ಚೇಸ್‌ನಲ್ಲಿ ಅಜೇಯರಾಗಿ ಉಳಿಯುವ ಮೂಲಕ ಅಶುತೋಷ್ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ.
ಅಶುತೋಷ್ ಶರ್ಮಾ ಕೆಳ ಕ್ರಮಾಂಕದಲ್ಲಿ ಅತಿಹೆಚ್ಚು ರನ್ ಗಳಿಸುವ ಮೂಲಕ ಆಂಡ್ರೆ ರಸೆಲ್, ಯೂಸುಫ್ ಪಠಾಣ್ ಮತ್ತು ಪ್ಯಾಟ್ ಕಮ್ಮಿನ್ಸ್ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಅಶುತೋಷ್ ಶರ್ಮಾ ಅಜೇಯ 66 ರನ್ ಕಲೆ ಹಾಕಿದ್ದಾರೆ.
ಕೆಳ ಕ್ರಮಾಂಕದಲ್ಲಿ ಹೆಚ್ಚು ರನ್ ಗಳಿಸಿದವರು
ಡ್ವೇನ್ ಬ್ರಾವೋ (ಸಿಎಸ್‌ಕೆ) - 68 ರನ್‌ಗಳು vs ಮುಂಬೈ ಇಂಡಿಯನ್ಸ್ - 2018 - ಮುಂಬೈ
ಅಶುತೋಷ್ ಶರ್ಮಾ (ಡಿಸಿ) - 66* ರನ್‌ಗಳು vs ಲಕ್ನೋ ಸೂಪರ್ ಜೈಂಟ್ಸ್ - 2025 - ವಿಶಾಖಪಟ್ಟಣಂ
ಆಂಡ್ರೆ ರಸೆಲ್ (ಕೆಕೆಆರ್) - 66 ರನ್‌ಗಳು vs ಕಿಂಗ್ಸ್ ಇಲೆವೆನ್ ಪಂಜಾಬ್ - 2015 - ಪುಣೆ
ಯೂಸುಫ್ ಪಠಾಣ್ (ಆರ್‍ಆರ್) - 62 ರನ್‌ಗಳು vs ದೆಹಲಿ ಡೇರ್‌ಡೆವಿಲ್ಸ್ - 2009 - ಸೆಂಚುರಿಯನ್
ಪ್ಯಾಟ್ ಕಮ್ಮಿನ್ಸ್ (ಕೆಕೆಆರ್) - 56 ರನ್‌ಗಳು vs ಮುಂಬೈ ಇಂಡಿಯನ್ಸ್ - 2022 - ಪುಣೆ
ಈ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಲಕ್ನೋ ಸೂಪರ್ ಜೈಂಟ್ಸ್ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 209 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಡೆಲ್ಲಿ 19.3 ಓವರ್‌ಗಳಲ್ಲಿ 9 ವಿಕೆಟ್‌ಗೆ 211 ರನ್ ಗಳಿಸಿ ಗೆಲುವಿನ ನಗೆ ಬೀರಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications