For Quick Alerts
ALLOW NOTIFICATIONS  
For Daily Alerts
 

Ashutosh Sharma: ಅಶುತೋಶ್ ಶರ್ಮಾ 8ನೇ ವಯಸ್ಸಿನಲ್ಲಿ ಮನೆ ಬಿಟ್ಟು ಕ್ರಿಕೆಟಿಗನಾಗಿದ್ದೇಗೆ?

ಐಪಿಎಲ್ 2025 ರ ನಾಲ್ಕನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ರೋಚಕ ಗೆಲುವು ಸಾಧಿಸಿತು. ಲಕ್ನೋ ನೀಡಿದ 210 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ಒಂದು ಹಂತದಲ್ಲಿ 113 ರನ್‌ಗಳಿಗೆ 6 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು.
ಇಲ್ಲಿಂದ ವಿಪ್ರಾಜ್ ನಿಗಮ್ ಮತ್ತು ಅಶುತೋಷ್ ಶರ್ಮಾ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಪಂದ್ಯದ ದಿಕ್ಕನ್ನೇ ಬದಲಾಯಿಸಿದರು. ಅಶುತೋಷ್ ಶರ್ಮಾ ಸಿಕ್ಸರ್ ಬಾರಿಸುವ ಮೂಲಕ ಪಂದ್ಯವನ್ನು ಗೆಲ್ಲಿಸಿಕೊಟ್ಟರು. ರೋಚಕತೆ ಹುಟ್ಟಿಸಿದ ಈ ಪಂದ್ಯದಲ್ಲಿ ಡೆಲ್ಲಿ ತಂಡ ಒಂದು ವಿಕೆಟ್ ಅಂತರದಿಂದ ಜಯ ಸಾಧಿಸಿತು.

ಅಶುತೋಷ್ ಶರ್ಮಾ ಕೊನೆ ಓವರ್‍‌ನಲ್ಲಿ ಬಾರಿಸಿದ ಸಿಕ್ಸರ್ ಕ್ರಿಕೆಟ್ ಅಭಿಮಾನಿಗಳ ಚಿತ್ತ ಕದ್ದಿದೆ. ಈ ಮೂಲಕ ಡೆಲ್ಲಿ ತಂಡಕ್ಕೆ ಪಂದ್ಯ ಗೆಲ್ಲಿಸಿ ಕೊಟ್ಟ ಅಶುತೋಷ್ ಶರ್ಮಾ ರಾತ್ರೋರಾತ್ರಿ ಹೀರೋ ಆದರು. ಅವರು ಹೀರೋ ಆಗುವ ಮೊದಲು ಜಿರೋ ಆಗಿದ್ದ ಕಥೆವೊಂದಿದೆ.

IPL 2025 Ashutosh Sharma left home at the age of 8 and became a cricketer

ಅಶುತೋಷ್ ಶರ್ಮಾ ಕಳೆದ ವರ್ಷ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ಪರ ಪಾದಾರ್ಪಣೆ ಮಾಡಿದರು. ಅವರನ್ನು ಪ್ರೀತಿ ಜಿಂಟಾ ತಂಡ 20 ಲಕ್ಷ ರೂ.ಗೆ ಖರೀದಿಸಿದ್ದರು. ಅಶುತೋಷ್ 11 ಪಂದ್ಯಗಳಲ್ಲಿ 189 ರನ್ ಗಳಿಸಿದ್ದರು. ಕಳೆದ ಬಾರಿ ಅವರಿಗೆ ಬಹಳ ಕಡಿಮೆ ಅವಕಾಶಗಳು ಸಿಕ್ಕವು, ಆದರೂ ಅವುಗಳನ್ನು ಸಂಪೂರ್ಣವಾಗಿ ಬಳಸಿಕೊಂಡು ಸದ್ದು ಮಾಡಿದ್ದರು. ಅಶುತೋಷ್ ಅವರ ಬ್ಯಾಟಿಂಗ್‌ನಿಂದ ಪ್ರಭಾವಿತರಾದ ಡೆಲ್ಲಿ ಕ್ಯಾಪಿಟಲ್ಸ್ ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಅವರನ್ನು 3.80 ಕೋಟಿ ರೂ.ಗೆ ಬಿಡ್ ಮಾಡಿತು. ಈಗ ಅವರು ತನ್ನ ಮೊದಲ ಪಂದ್ಯದಲ್ಲೇ ಪ್ರತಿ ಪೈಸೆಗೂ ತಾನು ಯೋಗ್ಯನೆಂದು ಸಾಬೀತುಪಡಿಸಿದ್ದಾರೆ.

26 ವರ್ಷದ ಅಶುತೋಷ್ ಮಧ್ಯಪ್ರದೇಶದ ರತ್ಲಂನಲ್ಲಿ ಜನಿಸಿದರು. ಅವರು 8ನೇ ವಯಸ್ಸಿನಲ್ಲಿ ಮನೆ ಬಿಟ್ಟು ಇಂದೋರ್‌ಗೆ ಬಂದು ಕ್ರಿಕೆಟ್ ಆಡಲು ಪ್ರಾರಂಭಿಸಿದರು. ಆದರೆ ಅವರು ಅಂದುಕೊಂಡಂತೆ ಬದುಕು ಸುಲಭವಾಗಿರಲಿಲ್ಲ. ಕ್ರಿಕೆಟ್ ಆಡುವುದರ ಜೊತೆಗೆ ತಮ್ಮ 10 ನೇ ವಯಸ್ಸಿನಲ್ಲಿ ಅವರು ಸಣ್ಣಪುಟ್ಟ ಕೆಲಸಗಳನ್ನು ಮಾಡಲು ಶುರು ಮಾಡಿದರು. ಹೇಗೋ ತಮ್ಮ ಜೀವನವನ್ನು ನಡೆಸುವಲ್ಲಿ ಯಶಸ್ವಿಯಾದರು. ಈ ಸಮಯದಲ್ಲಿ, ಅಶುತೋಷ್ ಬಟ್ಟೆಗಳನ್ನು ಒಗೆಯುವ ಕೆಲಸವನ್ನು ಮಾಡಿದರು. ಅಲ್ಲದೆ, ಜೀವನೋಪಾಯಕ್ಕಾಗಿ ಅವರು ಅಂಪೈರಿಂಗ್ ಕೂಡ ಮಾಡಿದರು. ಮಾಜಿ ಕ್ರಿಕೆಟಿಗ ಅಮಯ್ ಖುರಾಸಿಯಾ ಅವರ ಜೀವನವನ್ನು ಬದಲಾಯಿಸಿದರು.

ಅಶುತೋಷ್ ಒಬ್ಬ ಉತ್ತಮ ಕ್ರಿಕೆಟಿಗನಾಲು ಅಮಯ್ ಖುರಾಸಿಯಾ ಕೊಡುಗೆ ಸಾಕಷ್ಟಿದೆ. ಅಮಯ್ ಖುರಾಸಿಯಾ ಅವರಿಂದ ತರಬೇತಿ ಪಡೆದ ಅಶುತೋಷ್ ಕ್ರಮೇಣ ಮಧ್ಯಪ್ರದೇಶ ತಂಡವನ್ನು ತಲುಪಿದರು. ಆದರೆ, ಕಾರಣಾಂತರಗಳಿಂದ ಅವರು ಮಧ್ಯಪ್ರದೇಶವನ್ನು ತೊರೆದು ರೈಲ್ವೇಸ್ ತಂಡವನ್ನು ಸೇರಬೇಕಾಯಿತು. ಅವರಿಗೆ ಇಲ್ಲಿ ಆಡಲು ಸಾಕಷ್ಟು ಅವಕಾಶಗಳು ಸಿಕ್ಕವು. ಜೊತೆಗೆ ಅವರಿಗೆ ರೈಲ್ವೆಯಲ್ಲಿ ಕೆಲಸವೂ ಸಿಕ್ಕಿತು.

ಅಶುತೋಷ್ 17 ಅಕ್ಟೋಬರ್ 2023 ರಂದು ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆದರು. ಅರುಣಾಚಲ ಪ್ರದೇಶ ವಿರುದ್ಧದ ಪಂದ್ಯದಲ್ಲಿ ಅವರು ಕೇವಲ 11 ಎಸೆತಗಳಲ್ಲಿ ಅರ್ಧಶತಕ ಗಳಿಸುವ ಮೂಲಕ ಸಂಚಲನ ಮೂಡಿಸಿದರು. ಇದಾದ ನಂತರ ಅವರಿಗೆ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್‌ ಪರ ಆಡುವ ಅವಕಾಶ ಸಿಕ್ಕಿತು. ಈಗ ಅವರು ಸ್ಟಾರ್ ಕ್ರಿಕೆಟಿಗರ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

Story first published: Tuesday, March 25, 2025, 11:41 [IST]
Other articles published on Mar 25, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+