For Quick Alerts
ALLOW NOTIFICATIONS  
For Daily Alerts
 

ವಿದೇಶಿ ಸ್ಪಿನ್ ಬೌಲರ್‌ ಮೇಲೆ ಕಣ್ಣು ನೆಟ್ಟಿರುವ RCB? ಕಾರಣವೇನು?

ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಹರಾಜು ಪ್ರಕ್ರಿಯೆ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಈ ಹರಾಜಿನಲ್ಲಿ ಸ್ಟಾರ್‌ ಆಟಗಾರರನ್ನು ತನ್ನ ಬುಟ್ಟಗೆ ಹಾಕಿಕೊಳ್ಳಲು ತಂಡಗಳು ಪ್ಲ್ಯಾನ್ ಮಾಡಿಕೊಳ್ಳುತ್ತಿವೆ. ಆರ್‌ಸಿಬಿ ( RCB) ಸಹ ಇದಕ್ಕೆ ಹೊರತಾಗಿಲ್ಲ. ಈ ತಂಡ 17 ಆವೃತ್ತಿಗಳಲ್ಲಿ ಟ್ರೋಫಿ ಗೆಲ್ಲುವಲ್ಲಿ ವಿಫಲವಾಗಿದೆ. ಈ ಬಾರಿ ಚಾಂಪಿಯನ್‌ಪಟ್ಟ ಅಲಂಕರಿಸಲು ಬೇಕಾದ ಸಿದ್ಧತೆಗಳನ್ನು RCB ಮಾಡಿಕೊಳ್ಳುತ್ತಿದೆ.

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಅತಿ ಹೆಚ್ಚು ಫ್ಯಾನ್ಸ್‌ಗಳನ್ನು ಹೊಂದಿರುವ ತಂಡ. ಈ ತಂಡ ಅದೆಷ್ಟೋ ಸ್ಟಾರ್ ಆಟಗಾರರಿಗೆ ಆಡಲು ಅವಕಾಶ ನೀಡಿದೆ. ಆದರೆ ತಂಡಕ್ಕೆ ಕಪ್‌ ಗೆಲ್ಲುವ ಅದೃಷ್ಟ ಕೈ ಕೊಟ್ಟಿದೆ. ಈ ಕನಸನ್ನು ಬೆನ್ನತ್ತಿರುವ ಆರ್‌ಸಿಬಿ ಈ ಬಾರಿ ಹರಾಜಿನಲ್ಲಿ ಸ್ಪಿನ್‌ ಬೌಲರ್‌ನ್ನು ಟಾರ್ಗೆಟ್‌ ಮಾಡಲಿದೆ. ಮಿಡ್ಲ್‌ ಓವರ್‌ಗಳಲ್ಲಿ ನುರಿತ ಸ್ಪಿನ್ ಬೌಲರ್‌ ಒಬ್ಬರ ಅವಶ್ಯಕತೆ ತಂಡಕ್ಕೆ ಇದೆ.

IPL 2025 Auction 2 Key Reasons RCB Must Pursue Adil Rashid

ಬಿಗ್ ಪ್ಲೇಯರ್‌ಗೆ ಗಾಳ

ಈ ಬಾರಿಯಾದರೂ ಆರ್‌ಸಿಬಿ ಮ್ಯಾನೇಜ್ಮೆಂಟ್‌ ಅಳೆದು ತೂಗಿ ಆಟಗಾರರಿಗೆ ಮಣೆ ಹಾಕಬೇಕಿದೆ. ಈ ಬಾರಿಯ ಐಪಿಎಲ್‌ ಮೆಗಾ ಹರಾಜಿನಲ್ಲಿ ಆರ್‌ಸಿಬಿ ಸ್ಟಾರ್‌ ಸ್ಪಿನ್ ಬೌಲರ್‌ಗಳನ್ನು ಟಾರ್ಗೆಟ್ ಮಾಡಲಿದೆ. ಈ ಆಟಗಾರರು ಮಿಡ್ಲ್‌ ಓವರ್‌ಗಳಲ್ಲಿ ತಂಡಕ್ಕೆ ನೆರವಾಗಬಲ್ಲ ಪ್ಲೇಯರ್ಸ್‌. ಹೀಗಾಗಿ ಲೆಗ್‌ ಸ್ಪಿನ್ ಬೌಲರ್‌ ಒಬ್ಬರನ್ನು ಆರ್‌ಸಿಬಿ ಟಾರ್ಗೆಟ್‌ ಮಾಡುವ ಸಾಧ್ಯತೆ ಇದೆ.

ಆರ್‌ಸಿಬಿ ಈ ಬಾರಿ ಐಪಿಎಲ್‌ ಮೆಗಾ ಹಾರಜಿನಲ್ಲಿ ವಿದೇಶಿ ಸ್ಪಿನ್ ಬೌಲರ್‌ ಆದಿಲ್ ರಶೀದ್ ಅವರನ್ನು ಕೊಳ್ಳಲು ಹಣದ ಹೊಳೆಯನ್ನು ಹರಿಸುವ ಸಂಭವವಿದೆ. ಈ ಪ್ಲೇಯರ್ ಚುಟುಕು ಮಾದರಿಯ ಕ್ರಿಕೆಟ್‌ನಲ್ಲಿ ತನ್ನದೇ ಆದ ಛಾಫು ಮೂಡಿಸಿರುವ ಆಟಗಾರ. ಇವರನ್ನು ಬಳಸಿಕೊಂಡು ಕಪ್‌ ಗೆಲುವಿನ ತಂತ್ರವನ್ನು ರೂಪಿಸಿಕೊಳ್ಳಲು ಆರ್‌ಸಿಬಿ ಮಾಸ್ಟರ್‌ ಪ್ಲ್ಯಾನ್ ಮಾಡಿಕೊಳ್ಳುತ್ತಿದೆ.

IPL 2025 Auction 2 Key Reasons RCB Must Pursue Adil Rashid

ಸ್ಪಿನ್‌ ಬೌಲರ್‌ಗೆ ಬಿಡ್‌?

ಕಳೆದ ಕೆಲವು ಆವೃತ್ತಿಗಳಲ್ಲಿ ಆರ್‌ಸಿಬಿ ಬೌಲಿಂಗ್‌ ವಿಭಾಗದ ಸಮಸ್ಯೆಯನ್ನು ಎದುರಿಸುತ್ತಿತ್ತು. ಆದರೆ ಕಳೆದ ವರ್ಷ ದೇಶೀಯ ವೇಗಿಗಳು ತಂಡಕ್ಕೆ ಉತ್ತಮ ಕಾಣಿಕೆ ನೀಡಿದ್ದು, ಮ್ಯಾನೇಜ್ಮೆಂಟ್ ಮುಖದಲ್ಲಿ ಮಂದಹಾಸ ಮೂಡಿಸಿದ್ದಾರೆ. ಆದರೆ ಕಳೆದ ಆವೃತ್ತಿಯಲ್ಲಿ ಆರ್‌ಸಿಬಿ ಪರ ಬೌಲ್ ಮಾಡುವ ಒಬ್ಬನೇ ಒಬ್ಬ ನುರಿತ ಸ್ಪಿನ್ ಬೌಲರ್ ಇರಲಿಲ್ಲ ಎಂಬುದು ಬೇಸರದ ಸಂಗತಿ. ಇದನ್ನು ಅರಿತಿರುವ ಆರ್‌ಸಿಬಿ ಮ್ಯಾನೇಜ್ಮೆಂಟ್‌ ಈ ಬಾರಿ ಮಿಡ್ಲ್‌ ಓವರ್‌ಗಳಲ್ಲಿ ಆಧಾರವಾಗಬಲ್ಲ ನುರಿತ ಬೌಲರ್‌ಗೆ ಮಣೆ ಹಾಕಲು ಪ್ಲ್ಯಾನ್ ಮಾಡಿಕೊಂಡಿದೆ.

ಆದೀಲ್‌ ರಶೀದ್ ಅವರ ಸ್ಪಿನ್ ಬೌಲಿಂಗ್‌ ತಂಡಕ್ಕೆ ಹೊಸ ಆಯಾಮ ನೀಡಬಹುದಾಗಿದೆ. ಇವರು ಎರಡೂ ದಿಕ್ಕುಗಳಲ್ಲಿ ಚೆಂಡನ್ನು ತಿರುಗಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಇವರ ಬತ್ತಳಿಕೆಯಲ್ಲಿರುವ ಗೂಗ್ಲಿ ಆರ್‌ಸಿಬಿ ಪಾಲಿಗೆ ಗೇಮ್‌ ಚೆಂಜರ್ ಆಗಬಹುದು. ಈ ಎಸೆತ ಬ್ಯಾಟರ್‌ಗಳಿಗೆ ಕಬ್ಬಿಣದ ಕಡಲೆ ಆಗಲಿದೆ. ಇವರನ್ನು ಬಳಸಿಕೊಂಡು ಮಿಡ್ಲ್‌ ಓವರ್‌ಗಳಲ್ಲಿ ಪ್ರಾಬಲ್ಯ ಸಾಧಿಸಲು ಆರ್‌ಸಿಬಿ ಪ್ಲ್ಯಾನ್ ಮಾಡಿಕೊಂಡಿದೆ.

IPL 2025 Auction 2 Key Reasons RCB Must Pursue Adil Rashid

ರಶೀದ್‌ ಟಾರ್ಗೆಟ್‌ ಮಾಡಲು ಕಾರಣವೇನು?

ರಶೀದ್‌ ಅವರ ಅನುಭವ ಅವರತ್ತ RCB ಟೀಮ್ ಮ್ಯಾನೇಜ್ಮೆಂಟ್‌ ನೋಡುವತ್ತ ಮಾಡುತ್ತದೆ. ಇವರು ಯಾವುದೇ ಪರಿಸ್ಥಿತಿಯಲ್ಲಿ ತಂಡಕ್ಕೆ ನೆರವಾಗಬಲ್ಲ ಬೌಲರ್. ಎಂ ಚಿನ್ನಸ್ವಾಮಿ ಅಂಗಳದಲ್ಲಿ ಬ್ಯಾಟರ್‌ಗಳು ಅಬ್ಬರಿಸುತ್ತಾರೆ. ಇನ್ನು ಈ ಅಂಗಳದಲ್ಲಿ ಎಡಗೈ ಬ್ಯಾಟರ್‌ಗಳು ಆರ್ಭಟ ಜೋರಾಗಿದೆ. ಇವರಿಗೆ ಕಡಿವಾಣ ಹಾಕಲು ಆರ್‌ಸಿಬಿ ಮಾಸ್ಟರ್‌ ಪ್ಲ್ಯಾನ್ ಮಾಡಿಕೊಂಡಿದೆ.

ರಶೀದ್‌ ಅವರು ಬರೀ ಬೌಲಿಂಗ್‌ನಲ್ಲಿ ತಂಡಕ್ಕೆ ನೆರವಾಗಬಲ್ಲ ಪ್ಲೇಯರ್‌ ಅಲ್ಲ. ಇವರು ಕೆಳ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಆಧಾರವಾಗಲ್ಲ ಆಟಗಾರ. ಇವರು ಬೇರೆ ಆಟಗಾರರ ಹಾಗೆ ಬಿಗ್ ಹಿಟ್ಟರ್‌ಗಳಲ್ಲ. ಆದರೆ ಸ್ಟ್ರೈಕ್‌ ರೋಟೆಟ್‌ ಮಾಡಬಲ್ಲರು. ಇವರ ಬ್ಯಾಟಿಂಗ್‌ನಲ್ಲೂ ತಂಡಕ್ಕೆ ಕೊಡುಗೆ ನೀಡಬಲ್ಲರು. ಹೀಗಾಗಿ ಆರ್‌ಸಿಬಿ ಇವರಿಗೆ ಟಾರ್ಗೆಟ್‌ ಮಾಡಬಹುದಾಗಿದೆ.

Story first published: Monday, September 16, 2024, 8:30 [IST]
Other articles published on Sep 16, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+