IPL Auction 2025: ಹರಾಜಿನಲ್ಲಿ ಎಡವಟ್ಟು: ಆರ್‌ಸಿಬಿಗೆ ಲಾಭ
ಸೌದಿ ಅರೆಬಿಯಾದಲ್ಲಿ ಇತ್ತೀಚಿಗೆ ಐಪಿಎಲ್ 2025ರ ಮೆಗಾ ಹರಾಜು ನಡೆಯಿತು. ಈ ವೇಳೆ ಆರ್‌ಸಿಬಿ ಹಲವು ಸ್ಟಾರ್ ಆಟಗರರು ತನ್ನ ತಂಡಕ್ಕೆ ಸೇರಿಸಿಕೊಂಡವು. ಆರ್‌ಸಿಬಿ ಈ ವೇಳೆ ಅಳೆದು ತೂಗಿ ಆಟಗಾರರಿಗೆ ಮಣೆ ಹಾಕಿದ. ಈ ಹರಾಜಿನಲ್ಲಿ ಆರ್‌ಸಿಬಿ ಅನುಭವಿ ಹಾಗೂ ಯುವ ಆಟಗಾರರನ್ನು ಟಾರ್ಗೆಟ್ ಮಾಡಿದೆ. ಈ ಬಾರಿ ಹರಾಜಿನಲ್ಲಿ ಒಂದು ಎಡವಟ್ಟು ನಡೆದಿದ್ದು, ಇದರಿಂದ ಆರ್‌ಸಿಬಿಗೆ ಲಾಭವಾಗಿದೆ. ಹಾಗಿದ್ದರೆ ಆದ ಎಡವಟ್ಟು ಏನು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಈ ಮೆಗಾ ಹರಾಜಿನಲ್ಲಿ 10 ತಂಡಗಳು ಒಟ್ಟು 182 ಆಟಗಾರರನ್ನು 639.15 ಕೋಟಿ ರೂ.ಗೆ ಖರೀದಿಸಿವೆ. ಆದರೆ ಈ ಬಾರಿ ಹರಾಜು ಪ್ರಕ್ರಿಯೆಯಲ್ಲಿ ಮಲ್ಲಿಕಾ ಸಾಗರ್ ದೊಡ್ಡ ತಪ್ಪು ಮಾಡಿದ್ದಾರೆ. ಯುವ ಆಟಗಾರ ಸ್ವಸ್ತಿಕ್ ಚಿಕಾರ ಬಿಡ್ಡಿಂಗ್ ಅಂಗಳ ಪ್ರವೇಶಿಸಿದಾಗ ಈ ಎಡವಟ್ಟು ನಡೆದಿದೆ. ಇದರಿಂದ ಆರ್‌ಸಿಬಿ ದೊಡ್ಡ ಲಾಭವಾಗಿದೆ. ಹಾಗಿದ್ದರೆ ಆರ್‌ಸಿಬಿ ಆದ ಲಾಭ ಏನು?

ಆಗಿದ್ದೇನು?
ಸ್ವಿಸ್ತಿಕ್ ಚಿಕಾರ್ ಅವರನ್ನು ಖರೀದಿಸಲು ಡೆಲ್ಲಿ ಕ್ಯಾಪಿಟಲ್ಸ್ ಮುಖ್ಯ ಕೋಚ್ ಹೇಮಂಗ್ ಬದಾನಿ ಪ್ಯಾಡಲ್ ಎತ್ತಿದ್ದರು ಎಂದು ಬಹಿರಂಗ ಪಡಿಸಿದ್ದಾರೆ. ಆದರೆ ಇದನ್ನು ಹರಾಜು ಮಾಡುತ್ತಾ ಇದ್ದ ಮಲ್ಲಿಕಾ ಸಾಗರ ಗಮನಿಸರಲಿಲ್ಲ. ಅದಗಾಲೇ ಆರ್‌ಸಿಬಿ ಈ ಯುವ ಬ್ಯಾಟರ್ ಪರ ಬಿಡ್ ಮಾಡಿತ್ತು. ಅಲ್ಲದೆ ಹರಾಜುಗಾರ್ತಿ ಇವರನ್ನು ಆರ್‌ಸಿಬಿ ತಂಡಕ್ಕೆ 30 ಲಕ್ಷ ರೂಪಾಯಿಗೆ ಸೇರಿಸಿದ್ದರು. ತಾನು ಮಾಡಿದ ತಪ್ಪಿನ ಅರಿವಾದ ಮೇಲೆ ಮಲ್ಲಿಕಾ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾರೆ.
ಆರ್‌ಸಿಬಿ 19 ವರ್ಷದ ಅನ್‌ಕ್ಯಾಪ್ಡ್ ಬ್ಯಾಟ್ಸ್‌ಮನ್ ಸ್ವಸ್ತಿಕ್ ಚಿಕಾರ ಅವರನ್ನು ಮೂಲ ಬೆಲೆ ಖರೀದಿಸಿ ತಮ್ಮ ತಂಡಕ್ಕೆ ಸೇರಿಸಿಕೊಂಡಿತು. ಇದರಿಂದ ಡೆಲ್ಲಿ ಕ್ಯಾಪಿಟಲ್ಸ್‌ಗೆ ಹಿನ್ನಡೆ ಆಗಿದ್ದು, ವಿರಾಟ್ ಕೊಹ್ಲಿ ಮುಂದಾಳತ್ವದ ಪಡೆಗೆ ಭಾರೀ ಲಾಭವಾಗಿದೆ.
ಸ್ವಸ್ತಿಕ್ ಚಿಕಾರ್ ಒಬ್ಬ ಪ್ರತಿಭಾನ್ವಿತ ಬ್ಯಾಟರ್. ಇವರು ಉತ್ತರ ಪ್ರದೇಶ ಮೂಲದವರು. ಇವರು ಯುಪಿ ಟಿ20 ಲೀಗ್‌ನಲ್ಲಿ ಅತ್ಯತ್ತಮ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದರು. ಈ ಟೂರ್ನಿಯಲ್ಲಿ ಇವರು ಆಡಿದ 12 ಪಂದ್ಯಗಳಲ್ಲಿ 49.9ರ ಸರಾಸರಿಯಲ್ಲಿ 499 ರನ್ ಸಿಡಿಸಿದ್ದರು. ಇವರನ್ನು ಕೊಳ್ಳಲು ಹಲವು ತಂಡಗಳು ಪ್ಲ್ಯಾನ್ ಮಾಡಿದ್ದವು. ಆದರೆ ಕೊನೆಗೆ ಇವರು ಆರ್‌ಸಿಬಿ ಪಾಲಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications