IPL 2025 auction: ಆರ್‌ಸಿಬಿ ಟಾರ್ಗೆಟ್ ಮಾಡಲಿರುವ 5 ವಿದೇಶೀ ಆಟಗಾರರು?
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಮೆಗಾ ಹರಾಜು ಪ್ರಕ್ರಿಯೆಗೆ ಕ್ಷಣಗಣನೆ ಶುರುವಾಗಿದೆ. ಐಪಿಎಲ್‌ನ ಎಲ್ಲಾ ಹತ್ತು ಫ್ರಾಂಚೈಸಿ ತಂಡಗಳು ಸ್ಟಾರ್ ಆಟಗಾರರನ್ನು ಬಿಡ್ ಮಾಡಲು ಸಜ್ಜಾಗಿವೆ. ಅದರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಫ್ರಾಂಚೈಸಿ ಮೇಲೆ ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳು ಕಣ್ಣಿಟ್ಟಿದ್ದಾರೆ. ಈ ಬಾರಿಯ ಮೆಗಾ ಹರಾಜಿನಲ್ಲಿ ಆರ್‌ಸಿಬಿ ಯಾವ ಆಟಗಾರರನ್ನು ಬಿಡ್ ಮಾಡುತ್ತದೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಆರ್‌ಸಿಬಿ ಕೆಲವು ಪ್ರಮುಖ ನಿರ್ಧಾರಗಳೊಂದಿಗೆ ಐದು ಸ್ಟಾರ್ ವಿದೇಶಿ ಆಟಗಾರರಿಗೆ ಮಣೆ ಹಾಕುವ ಸಾಧ್ಯತೆಯಿದೆ. ಮುಂದಿನ ಐಪಿಎಲ್ ಆವೃತ್ತಿಗೆ ಆರ್‌ಸಿಬಿ ಹೊಸ ನಾಯಕ ಮತ್ತು ವಿಕೆಟ್‌ಕೀಪರ್ ಹುಡುಕಾಟದಲ್ಲಿದೆ. ಜೊತೆಗೆ ಆರ್‌ಸಿಬಿ ಬಲಿಷ್ಠ ತಂಡವನ್ನು ಕಟ್ಟಲು ಸ್ಟಾರ್ ವೇಗದ ಬೌಲರ್‌ಗಳ ಮೇಲೂ ಕಣ್ಣಿಟ್ಟಿದೆ. ಇಂತಹ ಪರಿಸ್ಥಿತಿಯಲ್ಲಿ ಆರ್‌ಸಿಬಿ ಟಾರ್ಗೆಟ್ ಮಾಡಲಿರುವ 5 ವಿದೇಶಿ ಆಟಗಾರರು ಯಾರು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ಜೋಸ್ ಬಟ್ಲರ್
ಐಪಿಎಲ್ 2025ರ ಆವೃತ್ತಿಗೆ ನಾಯಕ ಮತ್ತು ವಿಕೆಟ್‌ಕೀಪರ್ ಹುಡುಕಾಟದಲ್ಲಿರುವ ಆರ್‌ಸಿಬಿಗೆ ಮೊದಲ ಆಯ್ಕೆ ಎಂದರೆ ಜೋಸ್ ಬಟ್ಲರ್. ಐಪಿಎಲ್ 2025ರ ಆವೃತ್ತಿ ಮೊದಲು ರಾಜಸ್ಥಾನ ರಾಯಲ್ಸ್ ಜೋಸ್ ಬಟ್ಲರ್ ಅವರನ್ನು ಬಿಡುಗಡೆ ಮಾಡಿದೆ. ಜೋಸ್ ಬಟ್ಲರ್ ಇಂಗ್ಲೆಂಡ್ ವೈಟ್ ಬಾಲ್ ತಂಡದ ನಾಯಕರಾಗಿದ್ದು, ಐಪಿಎಲ್ ಮೆಗಾ ಹರಾಜಿನಲ್ಲಿ ಪ್ರಮುಖ ವಿದೇಶಿ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಜೋಸ್ ಬಟ್ಲರ್ ಅವರನ್ನು ಬಿಡ್ ಮಾಡಲು ಆರ್‌ಸಿಬಿ ಯೋಜನೆ ರೂಪಿಸಿದೆ ಎಂದು ವರದಿಗಳು ಹೇಳಿವೆ. ಟಿ20 ಕ್ರಿಕೆಟ್‌ಗೆ ಜೋಸ್ ಬಟ್ಲರ್ ಹೇಳಿ ಮಾಡಿಸಿದ ಬ್ಯಾಟರ್ ಆಗಿದ್ದಾರೆ. ಜೊತೆಗೆ ತಂಡವನ್ನು ಮುನ್ನಡೆಸುವ ನಾಯಕತ್ವ ಗುಣವನ್ನು ಹೊಂದಿದ್ದಾರೆ. ಹೀಗಾಗಿ ಆರ್‌ಸಿಬಿಗೆ ಮೊದಲ ಆಯ್ಕೆ ವಿದೇಶಿ ಆಟಗಾರ ಜೋಸ್ ಬಟ್ಲರ್.
ಡೇವಿಡ್ ಮಿಲ್ಲರ್
ದಕ್ಷಿಣ ಆಫ್ರಿಕಾದ ಸ್ಪೋಟಕ ಬ್ಯಾಟರ್ ಡೇವಿಡ್ ಮಿಲ್ಲರ್ ಐಪಿಎಲ್‌ನಲ್ಲಿ ಭರವಸೆಯ ವಿದೇಶಿ ಆಟಗಾರ ಎಂಬುದನ್ನು ಸಾಬೀತುಪಡಿಸಿದ್ದಾರೆ. ಫಿನಿಶರ್ ಪಾತ್ರವನ್ನು ನಿರ್ವಹಿಸುವಲ್ಲಿ ಡೇವಿಡ್ ಮಿಲ್ಲರ್ ಯಶಸ್ವಿಯಾಗಿದ್ದಾರೆ. ಕಳೆದ ಎರಡು ಐಪಿಎಲ್ ಆವೃತ್ತಿಗಳಲ್ಲಿ ಗುಜರಾತ್ ಟೈಟನ್ಸ್ ಪರ ಅದ್ಭುತ ಬ್ಯಾಟಿಂಗ್ ನೀಡಿದ್ದಾರೆ. ಆದರೆ ಮುಂಬರುವ ಆವೃತ್ತಿಗೆ ಅವರನ್ನು ಗುಜರಾತ್ ಉಳಿಸಿಕೊಂಡಿಲ್ಲ. ಇತ್ತ ಮಿಡಲ್ ಆರ್ಡರ್ ಮತ್ತು ಫಿನಿಶರ್ ಬ್ಯಾಟರ್ ಹುಡುಕುತ್ತಿರುವ ಆರ್‌ಸಿಬಿಗೆ ಮಿಲ್ಲರ್ ಬೆಸ್ಟ್ ಆಟಗಾರರಾಗಿದ್ದಾರೆ. ಹೀಗಾಗಿ ಮಿಲ್ಲರ್ ಮೇಲು ಬಿಡ್ ಹೋಗಬಹುದು.
ಟ್ರೆಂಟ್ ಬೌಲ್ಟ್
ಆರ್‌ಸಿಬಿ ಪ್ರತಿ ಬಾರಿಯೂ ಐಪಿಎಲ್ ಮೆಗಾ ಹರಾಜಿನಲ್ಲಿ ಒಂದಲ್ಲ ಒಂದು ಎಡವಟ್ಟು ಮಾಡಿದೆ. ಈ ಬಾರಿ ಮೆಗಾ ಹರಾಜಿನಲ್ಲಿ ಆರ್‌ಸಿಬಿ ಬೆಸ್ಟ್ ವೇಗದ ಬೌಲರ್ ಅನ್ನು ಹುಡುಕುತ್ತಿದೆ. ಏಕೆಂದರೆ ಮುಂದಿನ ಐಪಿಎಲ್ ಆವೃತ್ತಿಯಲ್ಲಿ ಯಶ್ ದಯಾಳ್ ಜೊತೆಗೆ ಕಮಾಲ್ ಮಾಡಬಲ್ಲ ಬೌಲರ್
ಅವಶ್ಯಕತೆಯಿದೆ. ಹೀಗಾಗಿ ನ್ಯೂಜಿಲೆಂಡ್ ಎಡಗೈ ವೇಗಿ ಟ್ರೆಂಟ್ ಬೌಲ್ಟ್ ಮೇಲೆ ಆರ್‌ಸಿಬಿ ಕಣ್ಣಿಟ್ಟಿದೆ. ಬೌಲ್ಟ್ ಅವರನ್ನು ಐಪಿಎಲ್ 2025ರ ಆವೃತ್ತಿಗೆ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಉಳಿಸಿಕೊಂಡಿಲ್ಲ.
ಕಗಿಸೋ ರಬಾಡ
ಆರ್‌ಸಿಬಿ ಐಪಿಎಲ್ ಮೆಗಾ ಹರಾಜಿನಲ್ಲಿ ಟಾರ್ಗೆಟ್ ಮಾಡಲಿರುವ ವಿದೇಶಿ ಆಟಗಾರರ ಪಟ್ಟಿಯಲ್ಲಿ ಕಗಿಸೋ ರಬಾಡ ಕೂಡ ಇದ್ದಾರೆ. ಟ್ರೆಂಟ್ ಬೌಲ್ಟ್ ಜೊತೆಗೆ ಆರ್‌ಸಿಬಿ ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಕಗಿಸೋ ರಬಾಡ ಅವರನ್ನು ಬಿಡ್ ಮಾಡಲು ತಂತ್ರ ರೆಡಿ ಮಾಡಿಕೊಂಡಿದೆ. ಟ್ರೆಂಟ್ ಬೌಲ್ಟ್ ಅಥವಾ ಕಗಿಸೋ ರಬಾಡ ಇಬ್ಬರಲ್ಲಿ ಒಬ್ಬರನ್ನು ಆರ್‌ಸಿಬಿ ಬಿಡ್ ಮಾಡುವ ಸಾಧ್ಯತೆಯಿದೆ. ಈ ಇಬ್ಬರು ಕೂಡ ಆರ್‌ಸಿಬಿಗೆ ಉಪಯುಕ್ತ ವೇಗದ ಬೌಲರ್‌ಗಳಾಗಿದ್ದಾರೆ.
ವಿಲ್ ಜ್ಯಾಕ್
ಆರ್‌ಸಿಬಿ ಮುಂದಿನ ಐಪಿಎಲ್ ಆವೃತ್ತಿಗೆ ವಿಲ್ ಜ್ಯಾಕ್ ಅವರನ್ನು ಉಳಿಸಿಕೊಂಡಿಲ್ಲ. ಆದರೂ ಅವರನ್ನು ಆರ್‌ಟಿಎಂ ಮೂಲಕ ಬಿಡ್ ಮಾಡುವ ಲೆಕ್ಕಚಾರದಲ್ಲಿ ಆರ್‌ಸಿಬಿ ಇದೆ. ಕಳೆದ ಐಪಿಎಲ್ ಆವೃತ್ತಿಯಲ್ಲಿ ವಿಲ್ ಜ್ಯಾಕ್ ಆಡಿದ ಕೆಲವೇ ಪಂದ್ಯಗಳಲ್ಲಿ ಆರ್‌ಸಿಬಿಗೆ ಭರವಸೆ ಮೂಡಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಇಂಗ್ಲೆಂಡ್‌ನ ಯುವ ಬ್ಯಾಟರ್ ಅನ್ನು ಆರ್‌ಸಿಬಿ ಮರಳಿ ಪಡೆಯುವ ನಿರೀಕ್ಷೆಯಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications