Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2025: ಈ 6 ಭಾರತೀಯ ಬೌಲರ್‌ಗಳು ಡೆತ್‌ ಓವರ್‌ನಲ್ಲಿ ಮಿಂಚಬಲ್ಲರು

ಇಂಡಿಯನ್ ಪ್ರೀಮಿಯರ್ ಲೀಗ್ ( ಐಪಿಎಲ್) 2025ರ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಹಲವು ಸ್ಟಾರ್ ಆಟಗಾರರು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಇಂದು ಸ್ಟಾರ್ ಆಟಗಾರರ ಭವಿಷ್ಯ ಐಪಿಎಲ್ ಮೆಗಾ ಹರಾಜಿನಲ್ಲಿ ನಿರ್ಧಾರವಾಗಲಿದೆ. ಯಾವೆಲ್ಲಾ ಆಟಗಾರರು ಕೋಟಿ ರೂ. ಗಳಿಸುತ್ತಾರೆ ಎಂಬುದನ್ನು ನೋಡಲು ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಈ ಬಾರಿ ಐಪಿಎಲ್ ಮೆಗಾ ಹರಾಜಿನಲ್ಲಿ ಫ್ರಾಂಚೈಸಿಗಳು ಭಾರತೀಯ ವೇಗದ ಬೌಲರ್‌ಗಳ ಮೇಲೆ ಕಣ್ಣಿಟ್ಟಿವೆ. ಈ ವೇಗದ ಬೌಲರ್‌ಗಳು ಈಗಾಗಲೇ ಐಪಿಎಲ್‌ನಲ್ಲಿ ಮಿಂಚಿದ್ದಾರೆ. ಡೆತ್‌ ಓವರ್‌ಗಳಲ್ಲಿ ಪಂದ್ಯದ ಗತಿಯನ್ನೇ ಈ ವೇಗದ ಬೌಲರ್‌ಗಳು ಬದಲಾಯಿಸಿದ್ದಾರೆ. ಇಂತಹ ಡೆತ್ ಓವರ್ ಸ್ಪೆಷಲಿಸ್ಟ್ ವೇಗದ ಬೌಲರ್‌ಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

2025

ಟಿ ನಟರಾಜನ್

ಐಪಿಎಲ್‌ 2025ರ ಮೆಗಾ ಹರಾಜಿನಲ್ಲಿರುವ ಅತ್ಯುತ್ತಮ ಡೆತ್ ಓವರ್ ಬೌಲರ್ ಎಂದರೆ ಎಡಗೈ ವೇಗಿ ಟಿ ನಟರಾಜನ್. ಪವರ್‌ಪ್ಲೇ ಮತ್ತು ಡೆತ್ ಓವರ್‌ಗಳಲ್ಲಿ ಸತತ ಯಾರ್ಕರ್‌ ಹಾಕಬಲ್ಲ ಸಾಮರ್ಥ್ಯವನ್ನು ಟಿ ನಟರಾಜನ್ ಹೊಂದಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್‌) ಪರ ಸ್ಥಿರ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಈ ಬಾರಿ ಮೆಗಾ ಹರಾಜಿನಲ್ಲಿ ನಟರಾಜನ್ ಐಪಿಎಲ್ ಫ್ರಾಂಚೈಸಿಗಳ ಚಿತ್ತ ಕದ್ದಿದ್ದಾರೆ.

ಹರ್ಷಲ್ ಪಟೇಲ್

ಕಳೆದ ನಾಲ್ಕು ಐಪಿಎಲ್ ಆವೃತ್ತಿಗಳಿಂದ ಹರ್ಷಲ್ ಪಟೇಲ್ ಸಾಕಷ್ಟು ಹೆಸರು ಮಾಡಿದ್ದಾರೆ. ಕಳೆದ ಐಪಿಎಲ್ ಆವೃತ್ತಿಯಲ್ಲಿ ಅವರ ಪ್ರದರ್ಶನ ಹೇಳಿಕೊಳ್ಳುವಂತಿರಲಿಲ್ಲ. ದ್ವಿತೀಯಾರ್ಧದಲ್ಲಿ ಲಯ ಕಂಡುಕೊಂಡ ಅವರು ಪಂಜಾಬ್ ಕಿಂಗ್ಸ್‌ ಪರ ಅಸಾಧಾರಣ ಪ್ರದರ್ಶನ ನೀಡಿದ್ದರು. ಡೆತ್‌ ಓವರ್‌ಗಳಲ್ಲಿ ವಿಕೆಟ್‌ ಪಡೆಯುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ.

ಮೊಹಮ್ಮದ್ ಶಮಿ

ಕಳೆದ ವರ್ಷ ಒಂದು ವರ್ಷದಿಂದ ಕ್ರಿಕೆಟ್‌ನಿಂದ ದೂರ ಉಳಿದಿದ್ದ ಮೊಹಮ್ಮದ್ ಶಮಿ ಅವರನ್ನು ಗುಜರಾತ್ ಟೈಟನ್ಸ್‌ ಫ್ರಾಂಚೈಸಿ ಬಿಡುಗಡೆ ಮಾಡಿದೆ. ಗಾಯದಿಂದ ಚೇತರಿಸಿಕೊಂಡಿರುವ ಶಮಿ ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಶಮಿ ಹೊಸ ಚೆಂಡಿನ ಬೌಲಿಂಗ್‌ ಮಾಡುವುದಕ್ಕೆ ಹೆಸರುವಾಸಿಯಾಗಿರಬಹುದು. ಆದರೆ ಇತರ ಹಂತಗಳಲ್ಲಿ ಪರಿಣಾಮಕಾರಿಯಾಗಿ ಬೌಲಿಂಗ್‌ ನಿರ್ವಹಿಸಲು ಸಾಕಷ್ಟು ಪರಿಣತಿ ಹೊಂದಿದ್ದಾರೆ. ಡೆತ್ ಓವರ್‌ಗಳಲ್ಲಿ ಭಾರತಕ್ಕೆ ಸಾಕಷ್ಟು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ.

ಮೋಹಿತ್ ಶರ್ಮಾ

ಡೆತ್ ಓವರ್‌ನಲ್ಲಿ ಮಿಂಚಬಲ್ಲ ಮತ್ತೊಬ್ಬ ಟೀಮ್ ಇಂಡಿಯಾ ಅನುಭವಿ ಬೌಲರ್‌ ಎಂದರೆ ಮೋಹಿತ್ ಶರ್ಮಾ. ಕಳೆದ ಐಪಿಎಲ್ ಆವೃತ್ತಿಯಲ್ಲಿ ಮೋಹಿತ್ ಶರ್ಮಾ ಅವರಿಂದ ನಿರೀಕ್ಷಿತ ಪ್ರದರ್ಶನನ ಬರಲಿಲ್ಲ. ಆದರೆ ಐಪಿಎಲ್ 2023ರಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಅವರು ವಿವಿಧ ರೀತಿಯ ನಿಧಾನಗತಿಯ ಎಸೆತಗಳ ಕೌಶಲ್ಯವನ್ನು ಹೊಂದಿದ್ದಾರೆ. ಈ ಬಾರಿ ಮೋಹಿತ್ ಶರ್ಮಾ ಅವರ ಭವಿಷ್ಯ ಮೆಗಾ ಹರಾಜಿನಲ್ಲಿ ನಿರ್ಧಾರವಾಗಲಿದೆ.

ಅರ್ಷದೀಪ್ ಸಿಂಗ್

ಪ್ರಸ್ತುತ ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರ ಎಡಗೈ ವೇಗದ ಬೌಲರ್ ಅರ್ಷದೀಪ್ ಸಿಂಗ್ ಸಖತ್ ಸದ್ದು ಮಾಡುತ್ತಿದ್ದಾರೆ. ಪವರ್‌ಪ್ಲೇ ಮತ್ತು ಡೆತ್ ಓವರ್‌ಗಳಲ್ಲಿ ಅರ್ಷದೀಪ್ ಸಿಂಗ್ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ಆದರೆ ಪಂಜಾಬ್ ಕಿಂಗ್ಸ್‌ ಅವರನ್ನು ಮುಂದಿನ ಐಪಿಎಲ್ ಆವೃತ್ತಿಗೆ ಉಳಿಸಿಕೊಂಡಿಲ್ಲ. ಹೀಗಾಗಿ ಮೆಗಾ ಹರಾಜು ಅಖಾಡದಲ್ಲಿ ಅರ್ಷದೀಪ್ ಸಿಂಗ್ ಕಾಣಿಸಿಕೊಳ್ಳಲಿದ್ದಾರೆ.

Story first published: Sunday, November 24, 2024, 9:02 [IST]
Other articles published on Nov 24, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+