IPL 2025 Mega Action: ರಾಹುಲ್ ದ್ರಾವಿಡ್ 13 ವರ್ಷದ ಬ್ಯಾಟರ್‌ಗೆ ಮಣೆ ಹಾಕಲು ಕಾರಣವೇನು?
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಮೆಗಾ ಹರಾಜಿನ ಮೊದಲ ದಿನ ರಿಷಬ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ಕಣ್ಣು ಮಿಟುಕಿಸುವುದರೊಳಗೆ ದಾಖಲೆ ಬೆಲೆ ಬಿಡ್ ಆಗಿ ಹೋದರು. ಆದರೆ ಎರಡನೇ ದಿನ ಮಂಕಾಗಿದ್ದ ಹರಾಜು ಪ್ರಕ್ರಿಯೆಯನ್ನು ಕೇವಲ 13 ವರ್ಷದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ರೋಚಕಗೊಳಿಸಿದರು. ಈ ಆಟಗಾರ 1.10 ಕೋಟಿ ರೂ.ಗೆ ರಾಜಸ್ಥಾನ ರಾಯಲ್ಸ್ ತಂಡ ಸೇರುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡಿದರು.
ಐಪಿಎಲ್ ಇತಿಹಾಸದಲ್ಲಿ ಅತಿ ಕಿರಿಯ ಆಟಗಾರ ಎನಿಸಿಕೊಂಡಿರುವ ವೈಭವ್ ಸೂರ್ಯವಂಶಿ ಕುರಿತು ಚರ್ಚೆಗಳು ನಡೆಯುತ್ತಿವೆ. 13 ವರ್ಷದ ಆಟಗಾರನೊಬ್ಬ ಐಪಿಎಲ್ ಪ್ರವೇಶಿಸಿರುವುದು ಇದೇ ಮೊದಲ. ಇದೀಗ ವೈಭವ್ ಸೂರ್ಯವಂಶಿ ಅವರಿಗಾಗಿ ರಾಜಸ್ಥಾನ ರಾಯಲ್ಸ್ ಏಕೆ ಹೆಚ್ಚು ಹಣವನ್ನು ಖರ್ಚು ಮಾಡಿದೆ ಎಂಬ ರಹಸ್ಯವನ್ನು ತಂಡದ ಹೆಡ್ ಕೋಚ್ ರಾಹುಲ್ ದ್ರಾವಿಡ್ ಬಹಿರಂಗಪಡಿಸಿದ್ದಾರೆ.

ಐಪಿಎಲ್ ಬಿಡುಗಡೆ ಮಾಡಿದ ವಿಡಿಯೋದಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ವೈಭವ್ ಸೂರ್ಯವಂಶಿಯ ಪ್ರತಿಭೆಯನ್ನು ಗಮನಿಸಿರುವ ಬಗ್ಗೆ ರಾಹುಲ್ ದ್ರಾವಿಡ್ ಮಾತನಾಡಿದ್ದಾರೆ. ಇದೇ ವೇಳೆ ವೈಭವ್ ಸೂರ್ಯವಂಶಿಗೆ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ಏಕೆ ಇಷ್ಟೊಂದು ಹಣ ನೀಡಿದೆ ಎಂಬುದರ ಬಗ್ಗೆಯೂ ಮಾಹಿತಿ ನೀಡಿದ್ದಾರೆ. 'ಅವರಲ್ಲಿ ಉತ್ತಮ ಪ್ರತಿಭೆ ಇದೆ. ಹೀಗಾಗಿ ಅವರ ಉತ್ತಮ ಬೆಳವಣಿಗೆಗೆ ನಾವು ಉತ್ತಮ ವಾತಾವರಣವನ್ನು ಒದಗಿಸಬಹುದು ಅಂದುಕೊಂಡಿದ್ದೇನೆ. ಅವನು ರಾಜಸ್ಥಾನ ರಾಯಲ್ಸ್ ನಡೆಸಿದ ಟ್ರಯಲ್ ಪ್ರಕ್ರಿಯೆಗೆ ಬಂದಿದ್ದನು. ಅವನನ್ನು ನೋಡಿ ನಮಗೆ ತುಂಬಾ ಸಂತೋಷವಾಯಿತು ಎಂದು ರಾಹುಲ್ ದ್ರಾವಿಡ್ ತಿಳಿಸಿದ್ದಾರೆ.
ಹಿನ್ನಲೆ
ಬಿಹಾರದ ಸಮಸ್ತಿಪುರ ಮೂಲದ ವೈಭವ್ ಸೂರ್ಯವಂಶಿ ಅವರು ಆಸ್ಟ್ರೇಲಿಯಾ ಎ ಅಂಡರ್-19 ತಂಡದ ವಿರುದ್ಧ ಶತಕ ಸಿಡಿಸಿ ಭಾರೀ ಸದ್ದು ಮಾಡಿದ್ದರು. ಅಲ್ಲಿಂದ ವೈಭವ್ ಸೂರ್ಯವಂಶಿ ಬಗ್ಗೆ ಎಲ್ಲೆಡೆ ಭಾರೀ ಚರ್ಚೆಗಳು ನಡೆಯುತ್ತಿದ್ದವು. 4ನೇ ವಯಸ್ಸಿನಿಂದಲೇ ಕ್ರಿಕೆಟ್ ಆಡಲು ಶುರು ಮಾಡಿದ ವೈಭವ್ ಸೂರ್ಯವಂಶಿ ಇಂದು ಯುವ ಆಟಗಾರರಿಗೆ ಮಾದರಿಯಾಗಿದ್ದಾರೆ. ಇದರ ಫಲವಾಗಿ ಮೆಗಾ ಹರಾಜಿನಲ್ಲಿ ವೈಭವ್ ಅವರನ್ನು ರಾಜಸ್ಥಾನ 1.10 ಕೋಟಿ ರೂ.ಗೆ ಖರೀದಿಸಿದೆ. ರಾಹುಲ್ ದ್ರಾವಿಡ್ ಕೂಡ ಇಂದು ವೈಭವ್ ಸೂರ್ಯವಂಶಿ ಅಭಿಮಾನಿಯಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications